IMG 20240610 WA0015

ಮೋದಿ : ಹೊಸ ಸರ್ಕಾರದ ಮೊದಲ ನಿರ್ಧಾರ, ಕೃಷಿಕರ ಕಲ್ಯಾಣ…..!

Genaral NATIONAL National - ಕನ್ನಡ STATE

ಪಿ ಎಂ ಕಿಸಾನ್ ನಿಧಿ ಬಿಡುಗಡೆಗೆ ಸಂಬಂಧಿಸಿದ ಮೊದಲ ಕಡತ ಸಹಿ ಮಾಡಿದ ಪ್ರಧಾನಮಂತ್ರಿ

ಹೊಸ ಸರ್ಕಾರದ ಮೊದಲ ನಿರ್ಧಾರ, ಕೃಷಿಕರ ಕಲ್ಯಾಣಕ್ಕೆ ಸರ್ಕಾರದ ಬದ್ಧತೆಯ ಪ್ರತೀಕ

ರೈತರ ಕಲ್ಯಾಣಕ್ಕೆ ತಮ್ಮ ಸರ್ಕಾರ ಸಂಪೂರ್ಣವಾಗಿ ಬದ್ಧವಾಗಿರುವ ಕಾರಣ, ಅಧಿಕಾರ‌ ವಹಿಸಿಕೊಂಡ ಬಳಿಕ ಮೊದಲು ಕೃಷಿ ಸಂಬಂಧಿತ ಕಡತಕ್ಕೆ ಸಹಿ – ಪ್ರಧಾನ ಮಂತ್ರಿ

ಭವಿಷ್ಯದಲ್ಲಿ ರೈತರು ಮತ್ತು ಕೃಷಿ ವಲಯ ಸಂಬಂಧಿತವಾಗಿ ಇನ್ನೂ ಹೆಚ್ಚು ಕಾರ್ಯೋನ್ಮುಖ – ಪ್ರಧಾನಿ ನರೇಂದ್ರ ಮೋದಿ

ನವದೆಹಲಿ : – ಮೂರನೇ ಬಾರಿಗೆ ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ, ಪ್ರಧಾನಿ ನರೇಂದ್ರ ಮೋದಿ ಅವರು ಪಿ ಎಂ ಕಿಸಾನ್ ನಿಧಿಯಡಿ 17 ನೇ ಕಂತು ಬಿಡುಗಡೆ ಮಾಡುವ ಆದೇಶದ ಕಡತಕ್ಕೆ ಮೊದಲು ಸಹಿ ಮಾಡಿದರು. ಇದರಿಂದ ಸುಮಾರು ರೂ. 20,000 ಕೋಟಿ ಹಂಚಿಕಯಾಗಿ 9.3 ಕೋಟಿ ರೈತರಿಗೆ ಅನುಕೂಲವಾಗಲಿದೆ.

ಕಡತಕ್ಕೆ ಸಹಿ ಮಾಡಿದ ಬಳಿಕ ಮಾತನಾಡಿದ ಪ್ರಧಾನಿ ಮೋದಿ, “ತಮ್ಮ ಸರ್ಕಾರ ರೈತರ ಕಲ್ಯಾಣಕ್ಕೆ ಸಂಪೂರ್ಣ ಬದ್ಧವಾಗಿದೆ. ಹೀಗಾಗಿ, ಅಧಿಕಾರ ವಹಿಸಿಕೊಂಡ ಬಳಿಕ ಕೃಷಿಕರ ಕಲ್ಯಾಣಕ್ಕೆ ಸಂಬಂಧಿತ ಕಡತವನ್ನು ಮೊದಲು ಸಹಿ ಮಾಡಿದ್ದು. ಮುಂದಿನ ದಿನಗಳಲ್ಲಿ ರೈತರ ಹಿತಕ್ಕಾಗಿ ಮತ್ತು ಕೃಷಿ ವಲಯಕ್ಕಾಗಿ ಇನ್ನಷ್ಟು ಕೆಲಸ ಮಾಡಲು ನಾವು ಬಯಸುತ್ತೇವೆ” ಎಂದು ಹೇಳಿದರು.