ಆನೇಕಲ್ ಪುರಸಭೆಯ ಮೂರು ವಾರ್ಡುಗಳ ಚುನಾವಣೆಗೆ ಇಂದು ನಾಮಪತ್ರ ಸಲ್ಲಿಕೆ ಕೊನೆಯಾಯಿತು.
ಆನೇಕಲ್,ಜೂ,07: 19 ನೇ ಭಾನುವಾರ ನಡೆಯಲಿರುವ ಆನೇಕಲ್ ಪುರಸಭೆಯ ಮೂರು ವಾರ್ಡುಗಳ ಉಪಚುನಾವಣೆಗೆ ಇಂದು ಹದಿನೇಳು ನಾಮಪತ್ರ ಸಲ್ಲಿಸಿದ್ದಾರೆ. ರಾಜ್ಯ ಚುನಾವಣಾ ಆಯೋಗಕ್ಕೆ ಚುನಾವಣಾ ವೆಚ್ಚದ ವಿವರ ಸಲ್ಲಿಸದ ಮೂರು ವಾರ್ಡುಗಳ ಸಧಸ್ಯತ್ವ ರದ್ದಾದ ಬೆನ್ನಲ್ಲೇ ಉಪ ಚುನಾವಣೆಗೆ ಚುನಾವಣಾ ಆಯೋಗ ಸಿದ್ದತೆ ನಡೆಸಿತ್ತು. ಈ ಚುನಾವಣೆಯ ಮೇಲೆ ಹೈಕೋರ್ಟಿಗೆ ಸಧಸ್ಯರು ಮೊರೆಹೋದ ಹಿನ್ನಲೆ ಉಪ ಚುನಾವಣೆಗೆ ತಡೆಯೊಡ್ಡಿತ್ತು, ಇದೀಗ ಹೈಕೋರ್ಟ್ ಮೂರೂ ಸಧಸ್ಯರ ಅರ್ಹತೆಯನ್ನು ವಜಾಗೊಳಿಸಿ ಉಪಚುನಾವಣೆಗೆ ಆದೇಶ ಹೊರಡಿಸಿದ್ದರಿಂದ ಆನೇಕಲ್ ಪಟ್ಟಣದ ಹೊಸ ವಾರ್ಡುಗಳ ಸಂಖ್ಯೆ 14,16 ಮತ್ತು 17ಕ್ಕೆ ನಾಮಪತ್ರ ಆಹ್ವಾನಿಸಿದ್ದು ನಾಮಪತ್ರ ಸಲ್ಲಿಕೆ ಇಂದು ಕೊನೆಗೊಂಡಿದೆ.
ನಾಳೆ ನಾಮಪತ್ರಗಳ ಪರಿಶೀಲನೆ ನಡೆಸಿ ನಾಡಿದ್ದು ನಾಮ ಪತ್ರ ಹಿಂದಕ್ಕೆ ಪಡೆಯಲು ಅವಕಾಶವಿದೆ ಎಂದು ತಹಶೀಲ್ದಾರ್ ಪಿ ದಿನೇಶ್ ತಿಳಿಸಿದ್ದಾರೆ.
ಈಗಾಗಲೇ 14 ನೇ ವಾರ್ಡಿಗೆ ಸಾಮಾನ್ಯ ಮಹಿಳೆ ಸ್ಥಾನಕ್ಕೆ ಐವರು ನಾಮಪತ್ರ ಸಲ್ಲಿಸಿದ್ದು. ಕಾಂಗ್ರೆಸ್ 1, ಬಿಜೆಪಿ 3 ಹಾಗು 1 ಪಕ್ಷೇತರ ನಾಮಪತ್ರ ಸಲ್ಲಿಸಿದ್ದಾರೆ. ಪ್ರಮುಖವಾಗಿ ಈಗಾಗಲೇ 8ನೇ ವಾರ್ಡಿನ ಸಧಸ್ಯ ಬಿ ನಾಗರಾಜುರ ಪತ್ನಿ ಸಿ ಆರ್ ಶ್ಯಾಮಲ ಹಾಗು ಎಸ್ ಎಂ ಮಧು ಆರ್ಟ್ಸ್ ಪತ್ನಿ ಬಿಕೆ ರೇಖಾ ನಾಮಪತ್ರ ಸಲ್ಲಿಸಿದ್ದಾರೆ.
ಕಾಂಗ್ರೆಸ್ ವತಿಯಿಂದ ನೇತ್ರಾವತಿ ಕುಮಾರ್ ಹಾಗು ಪಕ್ಷೇತರರಾಗಿ ನಾಜಿಯಾರವರು ನಾಮಪತ್ರ ಸಲ್ಲಿಸಿದ್ದಾರೆ.
16ನೇ ವಾರ್ಡ್ ಹಿಂದುಳಿದ ವರ್ಗ ಎ ಮಹಿಳೆ ಸ್ಥಾನಕ್ಕೆ ಬಿಜೆಪಿಯಿಂದ ಶೋಬಾರಾಣಿ ಮತ್ತು ಸುಜಾತ ವಿ ನಿಂತರೆ ಕಾಂಗ್ರೆಸ್ ನಿಂದ ಒ .ಆಶಾ, 1 ಪಕ್ಷೇತರರಾಗಿ ನಾಮ ಪತ್ರ ಸಲ್ಲಿಸಿದ್ದಾರೆ.
17ನೇ ವಾರ್ಡ್ ಸಾಮಾನ್ಯ ಸ್ಥಾನಕ್ಕೆ ಬಿಜೆಪಿಯಿಂದ ಮಾಜಿ ಪುರಸಭಾ ಉಪಾಧ್ಯಕ್ಷ ಶ್ರೀನಿವಾಸ್, ಹಾಗು ಮಂಜುನಾಥ ರೆಡ್ಡಿ ನಿಂತರೆ ಕಾಂಗ್ರೆಸ್ ನಿಂದ ರಾಜೇಂದ್ರ ಪ್ರಸಾಧ್ ಬಾಬು, ಶ್ರೀದರ್ ಬಾಬು ನಾಮಪತ್ರ ಸಲ್ಲಿಸಿದ್ದಾರೆ.
ವರದಿ: ಹರೀಶ್