ಆನೇಕಲ್ :- ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನಲ್ಲಿ ಕೊರೊನಾ ವ್ಯಾಕ್ಸಿನ್ ಲಭ್ಯತೆ ಹೇಗಿದೆ ಎಷ್ಡು ಜನರು ವ್ಯಾಕ್ಸಿನ್ ಪಡೆದಿದ್ದಾರೆ. ಇಲ್ಲಿ ಸಮಸ್ಯೆಗಳು ಏನಾದರು ಇದೆಯೆ …? ಗ್ರಾಮ ಪಂಚಾಯತಿ ಹಾಗೂ ಆರೋಗ್ಯ ಇಲಾಖೆ ಗಳ ಮಧ್ಯೆ ಹೊಂದಾಣಿಕೆ ಇದೆಯಾ…? ಪಂಚಾಯತಿ ಅಧ್ಯಕ್ಷರಿಗೆ – ಆಭಿವೃದ್ಧಿ ಅಧಿಕಾರಿಗೆ ವ್ಯಾಕ್ಸಿನ್ ನ ಪ್ರಸ್ತುತ ಪರಿಸ್ಥಿತಿ ತಿಳಿದಿದೆಯೆ……ಇಲ್ಲವೆ…? ಅವರುಗಳು ತಮ್ಮ – ತಮ್ಮ ಬೇರೆ -ಬೇರೆ ವ್ಯವಹಾರಗಳಲ್ಲಿ ಮಗ್ನರಾಗಿದ್ದಾರಾ…? ಜನರ ಪಾಡೇನು…..
ಸಪ್ತಸ್ವರ ತಂಡ ದಿಂದ ಪಂಚಾಯತಿ ವಾರು ರಿಯಾಲಿಟಿ ಚೆಕ್ ಆರಂಭ ಮಾಡಿದ್ದು ಅದರ ಭಾಗ ವಾಗಿ ಶಾಂತಿಪುರ ಗ್ರಾಮ ಪಂಚಾಯತಿ ಯ ವಸ್ತು ಸ್ಥಿತಿಯ ವಿವರ ಹೀಗಿದೆ…..
ಶಾಂತಿಪುರ ಗ್ರಾಮ ಪಂಚಾಯತಿ ಅದ್ಯಕ್ಷರಾದ ಶ್ರೀಮತಿ ಎಲ್ ಪದ್ಮ ದೊಡ್ಡಯ್ಯ ಅವರನ್ನು ಸಪ್ತಸ್ವರ ತಂಡದಿಂದ ಮಾತನಾಡಿಸಿದಾಗ ಅವರು ಹೇಳಿದ್ದು ಹೀಗೆ……
ಶಾಂತಿಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮೂವತೈದು ಸಾವಿರ ಜನಸಂಖ್ಯೆ ಇದೆ, ಇಲ್ಲಿಯವರೆಗೆ ಅಂದಾಜು ಒಂದು ಸಾವಿರ ದ ಐದನೂರು ಜನರಿಗೆ ಲಸಿಕೆ ನೀಡಿದ್ದೇವೆ ಒಂದು ತಿಂಗಳಿನಿಂದ ನಮ್ಮ ಪಂಚಾಯತಿಗೆ ಸರಿಯಾಗಿ ವ್ಯಾಕ್ಸಿನ್ ಸಿಗುತ್ತಿಲ್ಲ, ಆರೋಗ್ಯ ಇಲಾಖೆ ಸಿಬ್ಬಂದಿಯವರು ಪ್ರತಿಕ್ರಿಯೆ ನೀಡುತ್ತಿಲ್ಲ, ಪಂಚಾಯತಿಯವರು ಏನು ಮಾಡುವುದು,,,?
ವ್ಯಾಕ್ಸಿನ್ ಕೊರತೆಯ ಬಗೆ ಜಿಲ್ಲಾದಿಕಾರಿಗಳು ಸೇರಿದಂತೆ ತಾಲ್ಲೂಕಿನ ಎಲ್ಲಾ ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ. ನಮ್ಮ ಶಾಂತಿಪುರ ಗ್ರಾಮ ಪಂಚಾಯತಿಯನ್ನು ಹೆಬ್ಬಗೋಡಿ ಪ್ರಾರ್ಥಮಿಕ ಆರೋಗ್ಯ ಕೇಂದ್ರಕ್ಕೆ ಸೇರಿಸಲಾಗಿದೆ ಅಲ್ಲಿನ ವೈದ್ಯಾಧಿಕಾರಿಗಳು ನಮಗೆ ಲಸಿಕೆ ನೀಡದೆ ತಾರತಮ್ಯ ಮಾಡುತ್ತಿದ್ದಾರೆ. ನಮ್ಮ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಐದು ಗ್ರಾಮಗಳು ಬರಲಿದ್ದು ಮೂವತೈದು ಸಾವಿರದಷ್ಟು ಜನಸಂಖ್ಯೆ ಇದೆ, ವ್ಯಾಕ್ಸಿನ್ ಪಡೆದವರ ಸಂಖ್ಯ ಕೇವಲ 1400 ಮಾತ್ರ ಸರ್ಕಾರದಿಂದ ಬಂದ ಲಸಿಕೆಗಳನ್ನೆಲ್ಲಾ ಹಬ್ಬಗೋಡಿ ಸಿಎಂಸಿ ವ್ಯಾಪ್ತಿಯ ಜನರಿಗೆ ಹೆಚ್ಚು ನೀಡುತ್ತಿದ್ದಾರೆ ನಮಗೆ ತಾರತಮ್ಯವಾಗಿದೆ, ,ಜನರಿಗೆ-ಸದಸ್ಯರಿಗೆ ಉತ್ತರಿಸಲು ಆಗುತ್ತಿಲ್ಲಾ ಎನ್ನುತ್ತಾರೆ ಅಧ್ಯಕ್ಷರು…….
ಶಾಂತಿಪುರ ಅಧ್ಯಕ್ಷರಾದ ಎಲ್ ಪದ್ಮಾ ದೊಡ್ಡಯ್ಯ ಅವರ ಮಾತುಗಳು ಇಲ್ಲಿದೆ ಕೇಳಿ……..
ಸಪ್ತಸ್ವರಕ್ಕೆ ಹೆಬ್ಬಗೋಡಿ ವೈದ್ಯಾಧಿಕಾರಿಗಳ ಪ್ರತಿಕ್ರಿಯೆ……
ಹೆಬ್ಬಗೋಡಿ ಪ್ರಾಥಮಿಕ ಆರೋಗ್ಯಕೇಂದ್ರ ಕ್ಕೆ ಶಾಂತಿಪುರ,ಹುಸ್ಕೂರು ಹೆಬ್ಬಗೋಡಿ ಸಿ ಎಂಸಿ, ವೀರಸಂದ್ರ ಬರಲಿದೆ ಇಲ್ಲಿಯವರೆಗು ಸುಮಾರು 18 ಸಾವಿರ ಜನರಿಗೆ ಲಸಿಕೆ ನೀಡಲಾಗಿದೆ ಎಂದು ಡಾ.ಸೈಯದ್ ಜುನಾಯದ್ ತಿಳಿಸಿದರು.
ಶಾಂತಿಪುರಕ್ಕೆ ಏಕೆ ಕಡಿಮೆ ಲಸಿಕೆ ನೀಡಲಾಗಿದೆ ಎಂದು ಕೇಳಿದಕ್ಕೆ ಅವರು ಹೇಳಿದ್ದು ಹೀಗೆ….
ಜನಸಂಖ್ಯೆ ಆಧಾರದಲ್ಲಿ ನೀಡಲಾಗುತ್ತಿದೆ, ಹೆಬ್ಬಗೋಡಿ ಯಲ್ಲಿ ಜನಸಂಖ್ಯೆ ಹೆಚ್ಚಿರುವುದರಿಂದ ಅಲ್ಲಿ ಹೆಚ್ಚು ಲಸಿಕೆನೀಡಲಾಗಿದೆ. ಶಾಂತಿಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ೧೪ ಸಾವಿರ ಜನಸಂಖ್ಯೆ ಯಿದೆ ಎಂದು ಗ್ರಾಮಪಂಚಾಯತಿಯವರು ವಿವರ ನೀಡಿರುವುದರಿಂದ ಅದರ ಆಧಾರದ ಮೇಲಿ ಲಸಿಕೆ ನೀಡಲಾಗುತ್ತಿದೆ ಈಗೆ ವಾರದಲ್ಲಿ ನಾಲ್ಕುದಿನ ಸಿಎಂಸಿ ಗಳಿಗೆ ನೀಡಿ ಹುಳಿದ ಎರಡು ದಿನ ಗ್ರಾಮ ಪಂಚಾಯತಿಗಳಿಗೆ ನೀಡುತ್ತೇವೆ ಎನ್ನುತ್ತಾರೆ.
ಹೆಬ್ಬಗೋಡಿ ಸಿಎಂಸಿ ವ್ಯಾಪ್ತಿಯಲ್ಲಿ ಶೇಕಡ 5೦ ಕ್ಕೂ ಹೆಚ್ಚು ಲಸಿಕೆ ನೀಡಿ,ಶಾಂತಿಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಇಲ್ಲಿಯವರೆಗು ಶೇಕಡ 1೦ ರಷ್ಟು ಲಸಿಕೆ ನೀಡಿರುವುದು ವೈದ್ಯಾಧಿಕಾರಿಗಳ ಮಾಹಿತಿಯಿಂದ ತಿಳಿಯಲಿದೆ. ಮುಂದೆಯಾದರು ಈ ತಾರತಮ್ಯ ನಿವಾರಣೆಮಾಡಬೇಕಿದೆ ಹೆಬ್ಬಗೋಡಿ ಪ್ರಾಥಮಿಕ ಆರೋಗ್ಯಕೇಂದ್ರ