IMG 20220607 WA0024

ಪಾವಗಡ: ವಿಶ್ವ ಪರಿಸರ ದಿನಾಚರಣೆ…!

DISTRICT NEWS ತುಮಕೂರು

ವಿಶ್ವ ಗ್ರಾಮೋದಯ ಟ್ರಸ್ಟ್ ಪಾವಗಡ ಮತ್ತು ಎಂ ಜಿ ಎಂ ಪ್ರೌಢಶಾಲೆ ಗುಂಡಾರ್ಲಹಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು

ಶಾಲಾ ಮಕ್ಕಳಿಂದ ಮದ್ದಿಬಂಡೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಹಾಗೂ ಜನ ಜಾಗೃತಿ ಜಾಥಾ ನಡೆಸಿ ಅದ್ದೂರಿಯಾಗಿ ಆಚರಿಸಲಾಯಿತು ಈ ಸಂದರ್ಭದಲ್ಲಿ ವಿಶ್ವ ಗ್ರಾಮೋದಯ ಸಂಸ್ಥೆಯ ವಿ. ದಾಸಣ್ಣ ರವರು ಪರಿಸರದ ಮಹತ್ವ ಹಾಗೂ ಇಂದಿನ ಸಮಸ್ಯೆಗಳ, ಅವುಗಳ ಪರಿಹಾರಗಳ ಬಗ್ಗೆ ವಿಸ್ತೃತ ಮಾಹಿತಿ ನೀಡಿದರು.

ಪರಿಸರ ನಾಶ ಹಾಗೂ ಹವಾಮಾನ ವೈಪರಿತ್ಯದಿಂದ ಜನರು ಜೀವನೋಪಾಯಕ್ಕಾಗಿ ಗುಳೆ ಹೋಗುತ್ತಿದ್ದಾರೆ ಇದರಿಂದ ದೇಶದಾದ್ಯಂತ ಸಾವಿರಾರು ಕುಟುಂಬಗಳ ಜನರ ತನ್ನ ಕುಟುಂಬಗಳಿಂದ ಬಿಟ್ಟು ಹೋಗಿದ್ದರಿಂದ ಮಾನವ ಸಂಬಂಧಗಳ ಕಡಿತಗೊಳ್ಳುತ್ತಿವೆ. ಇದಕ್ಕೆ ನೀರಿನ ಅಭಾವದ ವ್ಯವಸ್ಥೆ ಹಾಗೂ ಬಿಸಿ ತಾಪಮಾನ ಏರಿಕೆ ಕಾರಣ ಬೆಳೆಗಳು ಕೈಗೆಟುಕದ ಪರಿಸ್ಥಿತಿ ನಿರ್ಮಾಣವಾಗಿದೆ ಆದ್ದರಿಂದ ಸಾವಯವ ಗೊಬ್ಬರ ಬಳಸಿ ಮಣ್ಣಿನ ಫಲವತ್ತತೆ ಹೆಚ್ಚಿಸಲು ಸರಳ ವಿಧಾನಗಳಿಂದ ಸಹಜ ಅಂತರ್ಜಲ ವೃದ್ಧಿಯಾಗಿ ಪುನಃ ಮಾನವ ಸಂಬಂಧಗಳ ಬೆಸೆಯುವಂತಾಗಲಿ ಎಂದು ತಿಳಿಸಿದರು.

IMG 20220607 WA0025

ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ಶಿವಣ್ಣ ಅವರು ಅಧ್ಯಕ್ಷತೆ ವಹಿಸಿದ್ದರು, ಬ್ಯಾಡನೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀ ತ್ರಿವೇಣಿ ಗೋವಿಂದರಾಜು, ಗ್ರಾಮ ಪಂಚಾಯಿತಿ ಸದಸ್ಯರಾದ ಶ್ರೀ ಗಂಗಾಧರ ಶ್ರೀ ಎಂ ಜೆ ಕೃಷ್ಣಮೂರ್ತಿ ಅವರು ಭಾಗವಹಿಸಿ ಮಕ್ಕಳಲ್ಲಿ ಪರಿಸರದ ಬಗ್ಗೆ ಅರಿವನ್ನು ಮೂಡಿಸಲಾಯಿತು.

ಗಣಿತ ಶಿಕ್ಷಕರಾದ ಶ್ರೀ ಚಂದ್ರಶೇಖರಯ್ಯನವರು ಸ್ವಾಗತಿಸಿದರು ಹಾಗೂ ಸಮಾಜ ವಿಜ್ಞಾನ ಶಿಕ್ಷಕರಾದ ಶ್ರೀ ದತ್ತಾತ್ರೇಯ ಸರ್ ಅವರು ಕಾರ್ಯಕ್ರಮದ ನಿರೂಪಣೆ ಮಾಡಿದರು ಹಿಂದಿ ಶಿಕ್ಷಕರಾದ ಶ್ರೀ ಕಾಳೆ ನಾಯಕ್ ಸರ್ ಅವರು ವಂದನಾರ್ಪಣೆಯನ್ನು ನೆರವೇರಿಸಿಕೊಟ್ಟರು,

ಶಾಲೆಯ ಶಿಕ್ಷಕ ಈರಣ್ಣ ಹಾಗೂ ಗುಂಡಾರ್ಲಹಳ್ಳಿ ಪ್ರಮುಖ ಗ್ರಾಮಸ್ಥರು ಹಾಗೂ ಮದ್ದಿ ಬಂಡೆ ಗ್ರಾಮಸ್ಥರು ಭಾಗವಹಿಸಿದ್ದರು.