IMG 20220116 WA0020

ಪಾವಗಡ: ಶೀಘ್ರವೇ ಅಗರಸ ಕುಂಟೆ ಅಭಿವೃದ್ಧಿ – ಬೋಟಿಂಗ್ ವ್ಯವಸ್ಥೆ….!

DISTRICT NEWS ತುಮಕೂರು

ಶೀಘ್ರವೇ ಅಗಸರ ಕುಂಟೆ ಕಾಮಗಾರಿ ನಡೆಸುವುದಾಗಿ ಶಾಸಕ ವೆಂಕಟರಮಣಪ್ಪ ಭರವಸೆ ಪಾವಗಡ : ತಾಲೂಕು ಬ್ರಾಹ್ಮಣ ಸಂಘ ದ ವತಿಯಿಂದ ಇಂದು ಶಾಸಕ ವೆಂಕಟರವಣಪ್ಪ ಅವರಿಗೆ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.                           

ಅಭಿನಂದನೆ ಸ್ವೀಕರಿಸಿದ ನಂತರ ಮಾತನಾಡಿದ ಶಾಸಕ ವೆಂಕಟರಮಣಪ್ಪ ನವರು ಅಗಸರ ಕುಂಟೆ ತುಂಬಿ ಕೋಡಿ ಬಿದ್ದಿದ್ದು ಶೀಘ್ರವೇ ಕಾಮಗಾರಿ ಆರಂಭಿಸಿ ನೀರು ಪೋಲಾಗುವುದನ್ನು ತಡೆಯುವುದಾಗಿ ಮತ್ತು ಅಗಸರ ಕುಂಟೆ ಸುತ್ತಲೂ ತಡೆಗೋಡೆ ನಿರ್ಮಿಸಿ ಪಕ್ಕದಲ್ಲಿ ಉದ್ಯಾನವನ, ಬೋಟಿಂಗ್ ವ್ಯವಸ್ಥೆ ಮಾಡಿಸುವ ಭರವಸೆ ನೀಡಿದರು.ಬೋಟಿಂಗ್ ವ್ಯವಸ್ಥೆಯಿಂದ ವಾರಾಂತ್ಯದ ದಿನಗಳಲ್ಲಿ ಮಕ್ಕಳಿಗೆ ಮತ್ತು ಪಟ್ಟಣದ ಜನತೆಗೆ ಮನರಂಜನೆ ಸಿಗಲಿದೆ ಎಂದರು ಈ ನಿಟ್ಟಿನಲ್ಲಿ ಕಾರ್ಯಯೋಜನೆ ಸಿದ್ಧಪಡಿಸಲಾಗುವುದು ಎಂದರು.                           

ನಾಗಲಮಡಿಕೆಯಲ್ಲಿ ಚೆಕ್ ಡ್ಯಾಮ್  ನಿರ್ಮಿಸುವಾಗ ಅನೇಕರು ಅಡ್ಡಿಪಡಿಸಿದರು ಆದರೂ ಅದನ್ನು ಪೂರ್ಣಗೊಳಿಸಿದೆ ಎಂದರು. ಚೆಕ್ ಡ್ಯಾಮ್ ನಿಂದ ನೀರನ್ನು ಅಗಸರ ಕುಂಟೆಗೆ ಹರಿಸಿದ್ದರಿಂದ ಸುತ್ತಲೂ ಅಂತರ್ಜಲದ ಮಟ್ಟ ಹೆಚ್ಚಾಗಿ ಪಟ್ಟಣದ ನೀರಿನ ಸಮಸ್ಯೆ ಬಗೆಹರಿದಿದೆ ಎಂದರು.                                                       

ತುಂಗಭದ್ರಾ ಕುಡಿವ ನೀರಿನ ಯೋಜನೆ ಕಾಮಗಾರಿ ವೇಗವಾಗಿ ನಡೆಯುತ್ತಿದೆ, ಭದ್ರಮೇಲ್ದಂಡೆ, ಎತ್ತಿನಹೊಳೆ ಯೋಜನೆಗಳು ಪೂರ್ಣಗೊಂಡರೆ ತಾಲ್ಲೂಕಿನ ನೀರಿನ ಸಮಸ್ಯೆ ಬಗೆಹರಿದು ಜನರು ನೆಮ್ಮದಿ ಜೀವನ ನಡೆಸಬಹುದು ಎಂದರು.               

ತಾಲೂಕು ಬ್ರಾಹ್ಮಣ ಸಭಾ ಮತ್ತು ಪಟ್ಟಣದ ಬ್ರಾಹ್ಮಣ ಸಭಾ ಪದಾಧಿಕಾರಿಗಳು ಶಾಸಕ ವೆಂಕಟರಮಣಪ್ಪ ಮತ್ತು ಮಾಜಿ ಶಾಸಕ ಸೊಮ್ಲನಾಯಕ್ ರವರನ್ನು ಸಹ ಅಭಿನಂದಿಸಿದರು.       

ಈ ಸಂದರ್ಭದಲ್ಲಿ ತಾಲೂಕು ಬ್ರಾಹ್ಮಣ ಸಭಾ ಅಧ್ಯಕ್ಷ ಎಂಎಸ್ ವಿಶ್ವನಾಥ್, ಕಾರ್ಯದರ್ಶಿ ಆರ್.ಎಸ್ ಅನಿಲ್ ಕುಮಾರ್, ಅನಂತರಾಮ ಭಟ್, ಚೆಲುವರಾಜನ್, ಎಸ್ ಎಸ್ ಕೆ ಸಂಘದ ಕಾರ್ಯದರ್ಶಿ ಪಿ.ವಿ ಸುಬ್ಬ ನರಸಿಂಹ, ನಗರ ಘಟಕದ ಅಧ್ಯಕ್ಷ ರಘುನಾಥ ಶರ್ಮ, ನಿರ್ದೇಶಕರಾದ ವಕೀಲ ಆದಿನಾರಾಯಣ, ಎಸ್ಎನ್ ನಾಗರಾಜು , ಫಣಿಂದ್ರ, ರಾಮನಾಥ, ಸತ್ಯ ಭೀಮ ನಾಥ್, ಚರಣ್ ಉಪಸ್ಥಿತರಿದ್ದರು

ವರದಿ: ಶ್ರೀನಿವಾಸುಲು ಎ