ತಾಲೂಕಿನಲ್ಲಿ ಹೊಸ ಯೋಜನೆಗಳಿಗೆ ಶೀಘ್ರವೇ ಚಾಲನೆ. ಶಾಸಕ ಹೆಚ್ ವಿ ವೆಂಕಟೇಶ್
ಪಾವಗಡ : ತಾಲೂಕಿನಲ್ಲಿ ಹಲವು ಅಭಿವೃದ್ಧಿ ಯೋಜನೆಗಳನ್ನು ಹಮ್ಮಿಕೊಂಡಿದ್ದು ಸ್ವತಹ: ಮುಖ್ಯಮಂತ್ರಿಗಳಿಂದ ಉದ್ಘಾಟನೆ ಮಾಡಿಸುವೆ ಎಂದು ಶಾಸಕ ಹೆಚ್ ವಿ ವೆಂಕಟೇಶ್ ತಿಳಿಸಿರು.
ತಾಲ್ಲೂಕಿನ ದೊಡ್ಡಹಳ್ಳಿ ಗ್ರಾಮದ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ತಾಲ್ಲೂಕಿಗೆ ಈಗಾಗಲೇ ಐಟಿಐ ಕಾಲೇಜು ಮಂಜೂರು ಆಗಿದೆ, ರೈಲ್ವೆ ಕಾಮಗಾರಿ ನಡೆಯುತ್ತಿದೆ, ಬೈಪಾಸ್ ರಸ್ತೆ ಅನುಮೋದನೆಗೊಂಡಿದ್ದು, ಡಿಪ್ಲೋಮೋ ಕಾಲೇಜಿಗೆ ಪ್ರಸ್ತಾವನೆ ಸಲ್ಲಿಸಿದ್ದು, ಹಳೆಯ ನಾಗಲ ಮಡಿಕೆ ಸುಬ್ರಮಣ್ಯೇಶ್ವರ ದೇವಸ್ಥಾನ ಕೆಡವಿ ಹೊಸ ದೇವಾಲಯ ನಿರ್ಮಾಣ ಮಾಡಲು ಯೋಜನೆ ಹಮ್ಮಿಕೊಂಡಿರುವುದಾಗಿ ಇಂತಹ ಅಭಿವೃದ್ಧಿ ಕಾರ್ಯಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನವರನ್ನು ಕರೆಸಿ ಅವರ ಮೂಲಕ ಉದ್ಘಾಟಿಸಲಾಗುವುದು ಎಂದರು.
ಈಗಾಗಲೇ ಪಾವಗಡ ಕ್ಷೇತ್ರಕ್ಕೆ ಹೆಚ್ಚಿನ ಅನುದಾನವನ್ನು ಮುಖ್ಯಮಂತ್ರಿಗಳ ಬಳಿ ಕೇಳಿದ್ದು ಪತ್ರವನ್ನು ಕೊಡುವಂತೆ ತಿಳಿಸಿದ್ದಾರೆ ಎಂದರು.ವಿದ್ಯಾರ್ಥಿಗಳು ಜೀವನದಲ್ಲಿ ಉತ್ತಮ ಸಾಧನೆ ಮಾಡಬೇಕು, ಇಲ್ಲವಾದರೆ ಜೀವನಕ್ಕೆ ಬೆಲೆಯೇ ಇರುವುದಿಲ್ಲ ಎಂದರು.
ಉತ್ತಮ ವಿದ್ಯಾಭ್ಯಾಸ ಮಾಡಿ ಒಳ್ಳೆಯ ಅಧಿಕಾರಿಯ ಆದರೆ ಕುಟುಂಬಕ್ಕೆ ಮತ್ತು ಸಮಾಜಕ್ಕೆ ಉತ್ತಮ ಕೊಡುಗೆ ನೀಡಬಹುದು ಎಂದರು.
ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರಾದ ಕೃಷ್ಣಪ್ಪ, ಮುರಾರ್ಜಿ ದೇಸಾಯಿ ವಸತಿ ಶಾಲೆಗಳ ಪ್ರಾoಶುಪಾಲರಾದ ಕಸ್ತೂರಿ ಕುಮಾರ್ ,ಸಂತೋಷ್ ,ಶ್ರೀನಿವಾಸ್ ,ತಿಪ್ಪೇಸ್ವಾಮಿ, ಮಾರುತಿ ಮತ್ತು ಶಿಕ್ಷಕರು,ಸಿಬ್ಬಂದಿ ವರ್ಗದವರು ಇದ್ದರು.
ವರದಿ : ಶ್ರೀನಿವಾಸಲು ಎ