9d34ed7d e104 4b09 8efb 9b6d06026ea5

Bangalore: ಕೊರೊನಾ ಸೋಂಕಿನಿಂದ ಮೃತಪಟ್ಟ ಕುಟುಂಬದವರಿಗೆ ಧನಸಹಾಯ…!

DISTRICT NEWS ಬೆಂಗಳೂರು

ಕೊರೊನಾ ಸೋಂಕಿನಿಂದ ಮೃತಪಟ್ಟ ಕುಟುಂಬದವರಿಗೆ ಸಚಿವರಾದ ಶ್ರೀ ಬೈರತಿ ಬಸವರಾಜ ಅವರಿಂದ ಧನಸಹಾಯ*

ಬೆಂಗಳೂರು: ಜೂನ್ 27:- ಕೃಷ್ಣರಾಜ ಪುರ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟ 115 ಬಡ ಕುಟುಂಬದವರಿಗೆ ತಲಾ ಒಂದು ಲಕ್ಷ ರೂಪಾಯಿಗಳ ಚೆಕ್ ಅನ್ನು ನಗರಾಭಿವೃದ್ಧಿ ಸಚಿವರು ಆದ ಬಿ.ಎ.ಬಸವರಾಜ ಅವರು ಹಲವು ಸಚಿವರುಗಳ ಸಮ್ಮುಖದಲ್ಲಿ ವಿತರಿಸಿದರು.

ಕೆ.ಅರ್. ಪುರ ಸರ್ಕಾರಿ ಕಾಲೇಜು ಮೈದಾನದಲ್ಲಿ ಭಾನುವಾರ ಬೆಳಿಗ್ಗೆ ನಡೆದ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀ ‌ಬಸವರಾಜ ಅವರು ಕ್ಷೇತ್ರದ ಜನರಿಂದ ನಾನು ಶಾಸಕನಾಗಿ ಅಯ್ಕೆ ಅಗಿದ್ದೇನೆ, ಇಂತಹ ಸಂದರ್ಭದಲ್ಲಿ ‌ಅವರ ನೆರವಿಗೆ ಧಾವಿಸುವುದು ನನ್ನ ಕರ್ತವ್ಯ ಎಂದು ಹೇಳಿದರು.

ಕೋವಿಡ್ ಸಂಕಷ್ಟದ ದಿನಗಳಲ್ಲಿ ಕೆಲ ದಿನಗಳ ಹಿಂದೆ ಕ್ಷೇತ್ರದ ಬಡ ಕುಟುಂಬದವರಿಗೆ ಒಂದು ಲಕ್ಷಕ್ಕೂ ಹೆಚ್ಚು ಆಹಾರ ಪದಾರ್ಥಗಳ ಕಿಟ್ ವಿತರಿಸಿದ್ದೆ ಎಂದರು.

ಮುಖ್ಯಮಂತ್ರಿ ಶ್ರೀ ಬಿ.ಎಸ್. ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಈಗಾಗಲೇ ಕೋವಿಡ್ ನಿಂದ ಮೃತಪಟ್ಟ ಬಿ ಪಿ ಎಲ್ ಕುಟುಂಬದವರಿಗೆ ತಲಾ ಒಂದು ಲಕ್ಷ ರೂಪಾಯಿ ನೀಡುವ ಆದೇಶ ಮಾಡಿದೆ. ಈಗಾಗಲೇ ಕೆ. ಅರ್. ಪುರ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮೃತಪಟ್ಟ 435 ಕುಟುಂಬದವರಿಗೆ ಮಾನ್ಯ ಮುಖ್ಯಮಂತ್ರಿಗಳ ಮೂಲಕ ವಿತರಣೆ ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಶ್ರೀ ‌ಬಸವರಾಜ ಅವರು ಹೇಳಿದರು.1189bc47 1b4d 4c49 bbb6 8bf4b3a9d736

ಕೊರೊನಾ ಸೋಂಕಿನಿಂದ ಮೃತಪಟ್ಟ ನಂತರ ಅವರ ಪಾರ್ಥಿವ ಶರೀರವನ್ನು ತೆಗೆದುಕೊಂಡು ಹೋಗಲು ಬಹಳಷ್ಟು ಕುಟುಂಬದ ಸದಸ್ಯರು ಮುಂದೆ ಬರಲಿಲ್ಲ. ಅಂತಹ ಮೃತದೇಹದ ಅಸ್ಥಿ ಗಳನ್ನು ಸರ್ಕಾರದ ವತಿಯಿಂದ ವಿಧಿವಿಧಾನಗಳ ಮೂಲಕ ಕಾವೇರಿ ನದಿ ತೀರದಲ್ಲಿ ವಿಸರ್ಜನೆ ಮಾಡಲಾಯಿತು ಎಂದು ಕಂದಾಯ ಸಚಿವರಾದ ಶ್ರೀ ಅರ್. ಅಶೋಕ ಹೇಳಿದರು.

ಕೋವಿಡ್ – ಸರ್ಕಾರದ ಸಮರ್ಪಕ ನಿರ್ವಹಣೆ : ಡಿ.ವಿ.ಸದಾನಂದಗೌಡ

ಬೆಂಗಳೂರು : ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕೊರೊನಾ ಸಾಂಕ್ರಾಮಿಕದ ನಿರ್ವಹಣೆಯನ್ನು ಸರ್ಮಪಕವಾಗಿದ್ದು, ಎಲ್ಲರಿಗೂ ಲಸಿಕೆ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸುತ್ತಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವರಾದ ಶ್ರೀ ಡಿ.ವಿ ಸದಾನಂದ ಗೌಡ ಹೇಳಿದರು.

ಕೆ.ಆರ್.ಪುರ ಕ್ಷೇತ್ರದಲ್ಲಿ ಕೋವಿಡ್‌ನಿಂದ ಮೃತಪಟ್ಟ 115 ಕುಟುಂಬಗಳಿಗೆ ನಗರಾಭಿವೃದ್ಧಿ ಸಚಿವರಾದ ಶ್ರೀ ಬೈರತಿ ಬಸವರಾಜ ಅವರು ವೈಯಕ್ತಿಕವಾಗಿ ಪ್ರತಿ ಕುಟುಂಬಕ್ಕೆ ಒಂದು ಲಕ್ಷ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಬೈರತಿ ಬಸವರಾಜ ಅವರು ಕೋವಿಡ್ ನಿಂದ ಮೃತಪಟ್ಟ ಕುಟುಂಬಗಳಿಗೆ ಆರ್ಥಿಕ ನೆರವು ನೀಡುವ ಮೂಲಕ ಸಾಂತ್ವನ ಹೇಳುತ್ತಿರುವುದು ಶ್ಲಾಘನೀಯ ಎಂದರು.

ವರ್ಷಾಂತ್ಯದ ವೇಳೆಗೆ ದೇಶದ ಎಲ್ಲ ಅರ್ಹರಿಗೂ ಕೊರೊನಾ ಸೋಂಕು ನಿರೋಧಕ ಚುಚ್ಚುಮದ್ದು ನೀಡುವ ಗುರಿ ಇದ್ದು, ಪ್ರತಿಯೊಬ್ಬರು ಸರ್ಕಾರದ ನಿಯಮಗಳನ್ನು ಪಾಲಿಸಬೇಕು ಎಂದು ಹೇಳಿದರು.
ದುಡಿಯುವ ಕೈಗಳಿಗೆ ಕೇಲಸವಿಲ್ಲದ ಸಂದರ್ಭದಲ್ಲಿ ಒಂದು ಲಕ್ಷ ಕಿಟ್ ವಿತರಣೆ ಮಾಡುವ ಮೂಲಕ ಸಾಮಾಜಿಕ ಕಳಕಳಿ ಮಾಡಿದ ಬೈರತಿ ಬಸವರಾಜ್ ಅವರು ಪ್ರತಿ ಹಂತದಲ್ಲಿ ಸಾರ್ವಜನಿಕ ಸೇವೆ ನಿಂತಿರುವವುದು ಸಂತಸ ತಂದಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕೆ.ಆರ್.ಪುರದಲ್ಲಿ ಕೆಂಪೇಗೌಡರ ಪ್ರತಿಮೆಗೆ ಮಾರ್ಲಾಪಣೆ ಮಾಡುವ ಮೂಲಕ ೫೧೨ ಜಯಂತಿ ಆಚರಣೆ ಮಾಡಲಾಯಿತು.

ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರಾದ ಶ್ರೀ ಲಕ್ಷ್ಮಣ ಸವದಿ, ಗೃಹ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಶ್ರೀ ಬಸವರಾಜ ಬೊಮ್ಮಾಯಿ, ಸಹಕಾರ ಸಚಿವರಾದ ಶ್ರೀ ಎಸ್.ಟಿ. ಸೋಮಶೇಖರ್, ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶ್ರೀ ಅರವಿಂದ ಲಿಂಬಾವಳಿ, ಬಿಬಿಎಂಪಿ ಮಾಜಿ ಸದಸ್ಯರಾದ ಜಯಪ್ರಕಾಶ್, ಅಂತೋಣಿಸ್ವಾಮಿ, ಶ್ರೀಕಾಂತ್, ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.