IMG 20251007 WA0016 scaled

ಪಾವಗಡ : ವಾಲ್ಮೀಕಿ ಜಯಂತಿ ಆಚರಣೆ….!

DISTRICT NEWS ತುಮಕೂರು

ಆದರ್ಶ ವ್ಯಕ್ತಿ ವಾಲ್ಮೀಕಿ. ತಹಶೀಲ್ದಾರ್ ವೈ.ರವಿ.

ಪಾವಗಡ: ಆದಿ ಕವಿ ಮಹರ್ಷಿ ವಾಲ್ಮೀಕಿ ಸೂಚಿಸಿದ ಆದರ್ಶಗಳನ್ನು ನಾವೆಲ್ಲರೂ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳ ಬೇಕೆಂದು ತಹಶೀಲ್ದಾರ್ ವೈ ರವಿ ತಿಳಿಸಿದರು.

ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ತಾಲೂಕು ಆಡಳಿತ ಮತ್ತು ವಾಲ್ಮೀಕಿ ಸಂಘಟನೆಯ ವತಿಯಿಂದ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಯ ಕಾರ್ಯಕ್ರಮದಲ್ಲಿ ಭಾಗವಹಿಸಿ ವಾಲ್ಮೀಕಿಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

ವಾಲ್ಮೀಕಿ ಬರೆದ ಮಹಾ ಗ್ರಂಥ ರಾಮಾಯಣವು
ಮಾನವನ ಜೀವನದ ಮಾರ್ಗದರ್ಶಕ ಗ್ರಂಥವೆಂದರು. ವಾಲ್ಮೀಕಿಯವರ ತತ್ವ, ಆದರ್ಶಗಳು ಮತ್ತು ಧರ್ಮನಿಷ್ಠ ಜೀವನದ ಬೋಧನೆಗಳು ಇಂದಿಗೂ ಪ್ರಸ್ತುತವಾಗಿವೆ ಎಂದು.
ನಾವೆಲ್ಲಾ ಒಂದೇ, ನಾವೆಲ್ಲರೂ ಸಮಾನರು ನಮ್ಮಂತೆ ಪಕ್ಕದವರೂ ಸಹ ಬಾಳಿ ಬದುಕಬೇಕು ಎಂಬ ವಾಲ್ಮೀಕಿಯ ಆದರ್ಶ ತತ್ವಗಳನ್ನು ಮೈಗೂಡಿಸಿಕೊಳ್ಳಬೇಕೆಂದು ತಿಳಿಸಿದರು.

ಕಾರ್ಯಕ್ರಮ ಉದ್ದೇಶಿಸಿ ಈ. ಓ ಉತ್ತಮ್ ಮಾತನಾಡಿ. ರಾಮರಾಜ್ಯ ಕಲ್ಪನೆ ಪ್ರಾರಂಭ ಆಗಿದ್ದೆ ರಾಮಾಯಣದಿಂದ ವೆಂದು.
ಮಹರ್ಷಿ ವಾಲ್ಮೀಕಿ ಒಬ್ಬ ದಾರ್ಶಿನಿಕ ವ್ಯಕ್ತಿ ಎಂದು ಮನಸ್ಸು ಮನಸ್ಸುಗಳ ಮಧ್ಯ ಇರುವ ಗೋಡೆ ತೆಗೆಯಬೇಕೆಂದರು.
ರಾಮಾಯಣ ವನ್ನು ಒಂದು ಪುಸ್ತಕ ವನ್ನಾಗಿ, ವಾಲ್ಮೀಕಿ ಯನ್ನು ಒಬ್ಬ ದರ್ಶನಿ ಕ ನನ್ನಾ ಗಿ ನೋಡಬೇಕೆಂದರು.

ಪ್ರಾಂಶುಪಾಲ ಮಾರಪ್ಪ ಮಾತನಾಡಿ.
ವಾಲ್ಮೀಕಿ ವಿಶ್ವ ಕಂಡಂತಹ ಜ್ಞಾನಿ, ಸಂತ ನೆಂದು.
ಮಾನವನ ಜೀವನ ಪ್ರಾರಂಭವಾಗುವುದೆ ಬೇಟೆಯಿಂದ ವೆಂದರು.
ಜಾತಿಯಿoದ ಜ್ಞಾನ ಬರೋಲ್ಲ ಕಲಿಕೆ ಯಿಂದ ಜ್ಞಾನ ಬರುತ್ತದೆ ಎಂದರು.ರಾಮಾಯಣ ಆಧುನಿಕ ಮಾನವನ ಜೀವನಕ್ಕೆ ಮಾರ್ಗಸೂಚಿಯಾಗಿದೆ ಎಂದರು.
ಎಲ್ಲಾ ಶೋಷಿತ ಸಮುದಾಯದ ಗಳು ಒಂದಾಗಬೇಕು, ರಾಮಾಯಣ ದಲ್ಲಿ ಬರುವ ಅಂಶಗಳು ಆಧುನಿಕ ಮಾನವ ಅಳವಡಿಸಿಕೊಳ್ಳಬೇಕು ಎಂದರು.
ಸಮುದಾಯದ ಜನಾಂಗದ ಉತ್ತಮವಾಗಿ ಓದಿ ಮುಂದೆ ಬರಬೇಕು, ಪಾಂಡಿತ್ಯ ಹೆಚ್ಚಿಸಿಕೊಳ್ಳ ಬೇಕೆಂದರು.

ಕಾರ್ಯಕ್ರಮದಲ್ಲಿ ವೃತ್ತ ನಿರೀಕ್ಷಕ ಸುರೇಶ್. ಕ್ಷೇತ್ರ ಶಿಕ್ಷಣಾಧಿಕಾರಿ ರೇಣುಕಮ್ಮ, ಪರಿಶಿಷ್ಟ ಪಂಗಡದ ಇಲಾಖೆ ಅಧಿಕಾರಿ ಯತೀಶ್ ಕುಮಾರ್.ಪುರಸಭೆ ಮುಖ್ಯ ಅಧಿಕಾರಿ ಜಾಫರ್ ಷರೀಫ್, ಪುರಸಭೆ ಅಧ್ಯಕ್ಷ ಸುದೇಶ್ ಬಾಬು,
ಹಸಿರು ಸೇನಾ ಜಿಲ್ಲಾ ಅಧ್ಯಕ್ಷ ಪೂಜಾರಪ್ಪ. ವಾಲ್ಮೀಕಿ ಸಂಘದ ತಾಲ್ಲೂಕು ಅಧ್ಯಕ್ಷ ಪಾಲೆಗಾರ್ ಲೋಕೇಶ್, ಡಿಎಸ್ಎಸ್ ತಾಲ್ಲೂಕು ಅಧ್ಯಕ್ಷ ಪೆದ್ದಣ್ಣ. ಆದರ್ಶ ಎಸ್ ಡಿ ಎಂ ಸಿ ಅಧ್ಯಕ್ಷ ಪ್ರಕಾಶ್,
ಗುಟ್ಟಳ್ಳಿ ಅಂಜಿನಪ್ಪ, ಆರ್. ಐ ರಾಜಗೋಪಾಲ್, ನರಸಿಂಹ, ಗಂಗಮ್ಮ, ರಾಮಾಂಜಿನಪ್ಪ, ಅಂಬಿಕಾ, ಸೆಕ್ರೆಟರಿ ರಾಜೇಶ್, ವಕೀಲ ನರಸಿಂಹ ಕೃಷ್ಣ, ಬ್ಯಾಡನೂರು ಶಿವು, ಮಣಿ ಮುಂತಾದ ಸಮುದಾಯದ ನಾಯಕರು ಹಾಜರಿದ್ದರು..

ವರದಿ : ಶ್ರೀನಿವಾಸಲು ಎ