IMG 20211021 WA0003

ಪಾವಗಡ: ಭಾರತೀಯ ಸಂಸ್ಕೃತಿಯ ಪ್ರತೀಕ ರಾಮಾಯಣ

DISTRICT NEWS ತುಮಕೂರು

ಭಾರತೀಯ ಸಂಸ್ಕೃತಿಯ ಪ್ರತೀಕ ರಾಮಾಯಣ

ವೈ.ಎನ್.ಹೊಸಕೋಟೆ : ಭಾರತೀಯ ಸಂಸ್ಕೃತಿಯ ಪ್ರತೀಕ ರಾಮಾಯಣ ಮಹಾಕಾವ್ಯ ಎಂದು ನಿಡಗಲ್ ವಾಲ್ಮೀಕಿ ಆಶ್ರಮದ ಶ್ರೀ ಸಂಜಯಕುಮಾರ ಸ್ವಾಮಿಗಳು ತಿಳಿಸಿದರು.

ಮಹರ್ಷಿ ವಾಲ್ಮೀಕಿ ಜಯಂತಿಯ ಅಂಗವಾಗಿ ಗ್ರಾಮದ ಬಸ್ ನಿಲ್ದಾಣದ ಕೇಂದ್ರ ಸ್ಥಳದಲ್ಲಿ ಮಹರ್ಷಿಯ ಪುತ್ಥಳಿ ನಿರ್ಮಾಣ ಕಾರ್ಯಕ್ಕೆ ಬುಧವಾರದಂದು ಸಂಸ್ಥಾನದ ದೊರೆ ರಾಜಾ ಜಯಚಂದ್ರರಾಜು ರವರೊಂದಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ರಾಮಾಯಣ ಮಹಾಕಾವ್ಯ ಭಾರತೀಯ ಸಂಸ್ಕೃತಿಯ ಜೀವಾಳವಾಗಿದ್ದು, ಆದರ್ಶ ಮತ್ತು ಮೌಲ್ಯಗಳ ಆಗರವಾಗಿದೆ. ಪ್ರತಿಯೊಬ್ಬರ ಮನೆಯಲ್ಲಿ ರಾಮಾಯಣ ಕಾವ್ಯವನ್ನು ಇರಿಸಿಕೊಂಡು ಅದರಲ್ಲಿನ ಕತೆ ಮತ್ತು ಪಾತ್ರಗಳನ್ನು ಮಕ್ಕಳಿಗೆ ಪರಿಚಯಿಸಿದರೆ ಅವರು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು.

ಗ್ರಾಮದಲ್ಲಿ ಮಹಾಮುನಿ ವಾಲ್ಮೀಕಿಯ ಪುತ್ಥಳಿ ನಿರ್ಮಾಣಕ್ಕೆ ಸ್ಥಳಾವಕಾಶ ಮಾಡಿಕೊಟ್ಟ ಗ್ರಾಮಪಂಚಾಯಿತಿ 32 ಸದಸ್ಯರನ್ನು ಅಭಿನಂದಿಸಿದ ದೊರೆ ರಾಜಾ ಜಯಚಂದ್ರರಾಜು ಪ್ರತಿಯೊಬ್ಬರನ್ನು ನಾಯಕ ಸಮುದಾಯದ ಪರವಾಗಿ ಸನ್ಮಾನಿಸುವ ಮೂಲಕ ಕೃತಜ್ಞತೆ ತಿಳಿಸಿದರು.

ಭೂಮಿ ಪೂಜೆಯ ನಂತರ ಮಹರ್ಷಿ ವಾಲ್ಮೀಕಿಯವರ ಉತ್ಸವ ಮೂರ್ತಿಯನ್ನು ಪುರಬೀದಿಗಳಲ್ಲಿ ಮೆರವಣಿಗೆ ನಡೆಸಿದರು.

ಈ ಸಂದರ್ಭದಲ್ಲಿ ಗ್ರಾಮಪಂಚಾಯಿತಿ ಅಧ್ಯಕ್ಷೆ ಪಪದ್ಮಕ್ಕಓಬಳೇಶ ಮತ್ತು ಸಮುದಾಯದ ಮುಖಂಡರು ಭಾಗವಹಿಸಿದ್ದರು.

ವರದಿ: ಸತೀಶ್