IMG 20211020 WA0023

ಪಾವಗಡ:ಮಹರ್ಷಿ ವಾಲ್ಮೀಕಿ ರಾಮಾಯಣದ ಪರಿಕಲ್ಪನೆ ಸಮಬಾಳು ಸಮಪಾಲು…!

DISTRICT NEWS ತುಮಕೂರು

*ಮಹರ್ಷಿ ವಾಲ್ಮೀಕಿ ರಾಮಾಯಣದ ಪರಿಕಲ್ಪನೆ ಸಮಬಾಳು ಸಮಪಾಲು*:
*ಹೆಲ್ಪ್ ಸೊಸೈಟಿ ಸಹಯೋಗದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಲೋಕೇಶ ಪಾಳೇಗಾರ ಅಭಿಮತ* :
ಪಾವಗಡ ಅ 20. ಮಹರ್ಷಿ ವಾಲ್ಮೀಕಿ ರಾಮಾಯಣದ ಪರಿಕಲ್ಪನೆ ಸಮಬಾಳು, ಸಮಪಾಲು,ಸಮಾನತೆ ಹಾಗೂ ರಾಮರಾಜ್ಯದ ಕನುಸು ಕಂಡಿದ್ದ ಗಾಂಧೀಜಿ ಯವರ ಪರಿಕಲ್ಪನೆಯ ಅಶೋತ್ತರವನ್ನು ನನಸು ಮಾಡಲು ಹೊರಟಿರುವ ಮಾನಂ ಶಶಿಕಿರಣ್ ರವರ ಅದ್ಯಕ್ಷತೆಯ ಹೆಲ್ಪ್ ಸೊಸೈಟಿ ತಂಡ ರಾಷ್ಟ್ರೀಯ ಹಬ್ಬಗಳನ್ನು ಆಚರಿಸುವುದರ ಮೂಲಕ ಸಮಾನತೆಯ ಸಂದೇಶವನ್ನು ಸಾರುತ್ತಿರುವುದು ಶುಭ ಸಂಕೇತ ಎಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹೆಲ್ಪ್ ಸೊಸೈಟಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಅಭಿಪ್ರಾಯಪಟ್ಟರು.
ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪರ್ಚನೆ ಮಾಡಿ ಮಾತನಾಡಿದ ಮದಕರಿ ನಾಯಕ ಸಂಘದ ಅಧ್ಯಕ್ಷರಾದ ಡಾಕ್ಟರ್ ಓಂಕಾರ್ ನಾಯಕ ಮಾತನಾಡುತ್ತ ಕೇವಲ ವಾಲ್ಮೀಕಿ ಅಲ್ಲದೆ ಎಲ್ಲಾ ಸಮುದಾಯದ ಜಯಂತಿಗಳನ್ನು ಹಾಗೂ ರಾಷ್ಟ್ರೀಯ ಹಬ್ಬಗಳನ್ನು ಆಚರಿಸುತ್ತಿರುವ ಜೊತೆಗೆ ಸದಾ ಸಮಾಜ ಸೇವೆಗೆ ಒತ್ತು ನೀಡುತ್ತಿರುವ ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ ಶಶಿಕಿರಣ್ ಹಾಗೂ ತಂಡಕ್ಕೆ ವಾಲ್ಮೀಕಿ ಜಯಂತಿ ಅಂಗವಾಗಿ ಶುಭ ಕೋರಿದರು.
ಕಾರ್ಯಕ್ರಮದಲ್ಲಿ ಹೆಲ್ಪ್ ಸೊಸೈಟಿ ಮಾರ್ಗದರ್ಶಕರಾದ ಡಾಕ್ಟರ್ ಶ್ರೀಕಾಂತ್ ಪುವ್ವಡಿ,, ಮುಖಂಡರಾದ ನರಸಿಂಹಮೂರ್ತಿ,ಸಮಾಜ ಸೇವಕ ರಾಮಾಂಜಿನಪ್ಪ, ರೈತ ಸಂಘದ ಅಧ್ಯಕ್ಷರು ಗಂಗಾಧರ ನಾಯ್ಡು ,ಜ್ಞಾಣೇಶ್ ಬಾಬು, ನಾಗರಾಜಪ್ಪ, ನಲಿಗಾನಹಳ್ಳಿಮಂಜುನಾಥ್, ಅಂಬಿಕಾ ರಮೇಶ್,ಸುರೇಂದ್ರ ಗೇಟ್ ಕುಮಾರ, ಪ್ರೆಸ್ ಹನುಮಂತರಯಪ್ಪ, ಮಲ್ಲಿಕಾರ್ಜುನ, ಪ್ರಕಾಶ್, ಅನಿಲ್, ಮಂಜುನಾಥ,ಬ್ಲಡ್ ಶಶಿಕಲಾ, ಹರೀಶ್, ಲೋಕೇಶ್, ರಮೇಶ್, ಎರ್ರಿಸ್ವಾಮಿ ,ಓಂಕಾರ್ ನಾಯಕ ಹಾಗೂ ಆಟೋ ಚಾಲಕರ ಸಂಘದ ಅಧ್ಯಕ್ಷ ಬೇಕರಿ ನಾಗರಾಜ ಹಾಗೂ ಹೆಲ್ಪ್ ಸೊಸೈಟಿ ಪದಾಧಿಕಾರಿಗಳು, ವಾಲ್ಮೀಕಿ ಸಮುದಾಯದ ಬಂದುಗಳು ಹಾಜರಿದ್ದರು.

ವರದಿ: ಎ ಶ್ರೀನಿವಾಸುಲು.