ಸಹಾಯ ಹಸ್ತ…… ಪಾವಗಡ. ಜ.26 ಇಂದು ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆ(ದೇವಸ್ಥಾನ ಹಿಂಭಾಗ) 73ನೇ ಗಣರಾಜ್ಯೋತ್ಸವವನ್ನು ಬಹಳ ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮ ಉದ್ದೇಶಿಸಿ ನೆರಳೆಗುಂಟೆ ನಾಗೇಂದ್ರ ರವರು ಮಾತನಾಡುತ್ತಾ, ಮಾನವ ಸೇವೆಯೇ ಮಾಧವ ಸೇವೆ ಎಂಬ ನಾಣ್ಣುಡಿಯಂತೆ ಸಮಾಜದಲ್ಲಿ ಮನುಷ್ಯನಿಗೆ ಕಷ್ಟಗಳು ಸಹಜ,ಒಬ್ಬರಿಗೆ ಕಷ್ಟ ಬಂದಾಗ ಮತ್ತೊಬ್ಬರು ಸಹಾಯಮಾಡುವ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು, ಮಕ್ಕಳಾದ ತಾವು ಮುಂದಿನ ಪ್ರಜೆಗಳಾಗಿ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದರು. ನಂತರ ಕಾರ್ಯಕ್ರಮ ಉದ್ದೇಶಿಸಿ ಶಿಕ್ಷಕ ಮಾರುತೇಶ್ ಮಾತನಾಡುತ್ತಾ, ಇಂದು ಸಹಾಯ ಪಡೆದಿರುವ ಮಕ್ಕಳು ಮುಂದೆ ಉತ್ತಮ ಸ್ಥಾನಕ್ಕೆ ಹೋದಮೇಲೆ ಅವರು ಇತರರಿಗೆ ಸಹಾಯ ಮಾಡುವ ಸೇವಾ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ಅದೇ ಶಾಲೆಯ ವಿಕಲಚೇತನ ಮಗು ಹೇಮಂತ್ ಕುಮಾರ್ ಶಸ್ತ್ರ ಚಿಕಿತ್ಸೆ ವೈಧ್ಯಕೀಯ ವೆಚ್ಚಕ್ಕಾಗಿ ಅವರ ಪೋಷಕರಿಗೆ ನಾಗೇಂದ್ರ ಅವರು ಧನ ಸಹಾಯ ಮಾಡಿದರು. ಕಾರ್ಯಕ್ರಮದಲ್ಲಿ ಬಿ ಆರ್ ಸಿ ಪವನ್ ಕುಮಾರ್ ರೆಡ್ಡಿ, ಮುಖ್ಯಶಿಕ್ಷಕಿ ಶೋಭಾ, ಶಿಕ್ಷಕ ಮಾರುತೇಶ್, ಸಿ ಆರ್ ಪಿ ಶ್ರೀನಿವಾಸ್, ಚಿಕ್ಕ ಓಬಳಪ್ಪ, ವಿಶಾಲಾಕ್ಷಿ, ಎಸ್.ಡಿ.ಎಮ್.ಸಿ.ಯವರು, ನಾಗೇಂದ್ರಕುಮಾರ್ ಅಭಿಮಾನ ಬಳಗದವರು, ಪೋಷಕರು ಮಕ್ಕಳು ಹಾಜರಾಗಿದ್ದರು