IMG 20220126 WA0185

ಪಾವಗಡ:50 ಕೋಟಿ ರೂ ವೆಚ್ಚದಲ್ಲಿ ತಾಲೂಕಿನಾದ್ಯಂತ ಜನರಿಗೆ ಕುಡಿಯುವ ನೀರು ಪೂರೈಕೆ….!

DISTRICT NEWS ತುಮಕೂರು

50 ಕೋಟಿ ರೂ ವೆಚ್ಚದಲ್ಲಿ ತಾಲೂಕಿನಾದ್ಯಂತ ಜನರಿಗೆ ಕುಡಿಯುವ ನೀರು ಪೂರೈಸುವುದಾಗಿ ಶಾಸಕ ವೆಂಕಟರಮಣಪ್ಪ ಭರವಸೆ.                        ಪಾವಗಡ. ಜ.26 :- ಪಟ್ಟಣದ ಸರ್ಕಾರಿ ಮೈದಾನದಲ್ಲಿ 73ನೇ ಗಣರಾಜ್ಯೋತ್ಸವನ್ನು ಬಹಳ ಸರಳವಾದ ರೀತಿಯಲ್ಲಿ ಆಚರಿಸಲಾಯಿತು.                              ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ವೆಂಕಟರಮಣಪ್ಪ ಮಾತನಾಡುತ್ತಾ,. ಪಾವಗಡ ದಾದ್ಯಂತ ಕರೋನಾ ಸ್ಫೋಟಗೊಂಡಿದ್ದು, ಎಲ್ಲರೂ ಬಹಳ ಎಚ್ಚರಿಕೆಯಿಂದ ಇರಬೇಕೆಂದು, ಎಲ್ಲರೂ ಕಡ್ಡಾಯವಾಗಿ ಸಾಮಾಜಿಕ ದೂರ ಪಾಲಿಸಬೇಕೆಂದು, ಕಡ್ಡಾಯವಾಗಿ ಮಾಸ್ಕ್ ಹಾಕಬೇಕೆಂದು, ತಿಳಿಸಿದರು.                                   ಪಾವಗಡ ಅತ್ಯಂತ ಹಿಂದುಳಿದ ಪ್ರದೇಶವಾಗಿದ್ದು, ಕುಡಿಯುವ ನೀರಿನ ಅಭಾವ ಹೆಚ್ಚಿದ್ದು, ತಾಲೂಕಿನಾದ್ಯಂತ ಕುಡಿನೀರು ಸರಬರಾಜು ಮಾಡಲು ಶೇಕಡಾ 90ರಷ್ಟು ಕೆಲಸ ಮುಗಿದಿದೆ ಎಂದು, ಭದ್ರಾ, ಎತ್ತಿನಹೊಳೆ ಯೋಜನೆ ಕಾಮಗಾರಿಗಳು ಅತಿಶೀಘ್ರದಲ್ಲೇ ಮುಗಿಯುವುದು, ಇದರಿಂದ ತಾಲೂಕಿನ ಜನರ ಬಹಳ ದಿನದ ಕನಸು ನನಸಾಗುವುದು ಎಂದರು, ಈಗಾಗಲೇ 34 ಗ್ರಾಮಪಂಚಾಯಿತಿಗಳ ಸರ್ವೆ ಮುಗಿದಿದ್ದು, ಶೀಘ್ರವೇ ಟೆಂಡರ್ ಕರೆದು ಮನೆಮನೆಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು ಎಂದರು.                                 

ಕಾರ್ಯಕ್ರಮ ಉದ್ದೇಶಿಸಿ ತಹಸಿಲ್ದಾರ್ ನಾಗರಾಜ್ ಮಾತನಾಡುತ್ತಾ ಜಗತ್ತಿನಲ್ಲಿ ಉತ್ತಮವಾದ ಪ್ರಜಾಪ್ರಭುತ್ವ ಹೊಂದಿದ ದೇಶ ಭಾರತ ವಾಗಿದೆ,.      ಭಾರತವು ಹಲವಾರು ಸಂಸ್ಕೃತಿಗಳ ಪ್ರತೀಕವಾಗಿದೆ, ಇಂದು ಭಾರತದ ಸಂವಿಧಾನವನ್ನು ಅಂಗೀಕರಿಸಿದ ದಿನವಾಗಿದೆ, ಸಂವಿಧಾನದ ರಚನೆಯಲ್ಲಿ ಅಂಬೇಡ್ಕರ್ ಅವರ ಪಾತ್ರ ಬಹುಮುಖ್ಯವಾಗಿತ್ತು ಎಂದರು,.                            ಇದೇ ವೇಳೆ ಬಾಪೂಜಿ ಪ್ರೌಢಶಾಲೆಯಲ್ಲಿ ನಿವೃತ್ತಿ ಯಾಗುತ್ತಿರುವ  ದೈಹಿಕ ಶಿಕ್ಷಕರಾದ ಪೋತ ರೆಡ್ಡಿ ಅವರಿಗೆ  ಶಿಕ್ಷಣಾಧಿಕಾರಿಗಳ ಇಲಾಖೆ ಹಾಗೂ ತಾಲೂಕು ಆಡಳಿತ ಸನ್ಮಾನಿಸಲಾಯಿತು.            ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷೆ ಗಂಗಮ್ಮ, ಉಪಾಧ್ಯಕ್ಷೆ ಜಾನ್ಹವಿ, ತಾಸಿಲ್ದಾರ್ ನಾಗರಾಜ್, ಕಾರ್ಯನಿರ್ವಹಣಾಧಿಕಾರಿ ಶಿವರಾಜಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಅಶ್ವಥ್ ನಾರಾಯಣ, ಪೊಲೀಸ್ ಇನ್ಸ್ಪೆಕ್ಟರ್ ಎಸ್, ಲಕ್ಷ್ಮಿಕಾಂತ್, ಆರ್.ಐ ರಾಜಗೋಪಾಲ್ , ಪುರಸಭೆ ಮುಖ್ಯಾಧಿಕಾರಿ ಅರ್ಚನ, ಸೆಕ್ರೆಟರಿ ರಮೇಶ್, ವಿವಿಧ ಇಲಾಖೆಗಳ ಅಧಿಕಾರಿಗಳು ಸಿಬ್ಬಂದಿ  ವರ್ಗದವರು ಶಿಕ್ಷಕ ವರ್ಗದವರು ಹಾಜರಿದ್ದರು          

ವರದಿ: ಶ್ರೀನಿವಾಸುಲು ಎ