IMG 20220126 WA0126

ಪಾವಗಡ:ಗ್ರಾಮ್ ಒನ್ ಕಾರ್ಯಕ್ರಮಕ್ಕೆ ಚಾಲನೆ…!  

DISTRICT NEWS ತುಮಕೂರು

ಗ್ರಾಮ್ ಒನ್ ಕಾರ್ಯಕ್ರಮಕ್ಕೆ ಚಾಲನೆ.                    ಪಾವಗಡ…. ಜ.26    73 ನೇ ಗಣರಾಜ್ಯೋತ್ಸವದ ಅಂಗವಾಗಿ ಸರ್ಕಾರದ  ಮಹತ್ವಾಕಾಂಕ್ಷೆ ಯೋಜನೆಯಾದ  ಗ್ರಾಮ್ ಒನ್  ಯೋಜನೆಯ ಉದ್ಘಾಟನಾ ಸಮಾರಂಭ ರಾಜವಂತಿ ಗ್ರಾಮಪಂಚಾಯತಿಯ ವ್ಯಾಪ್ತಿಗೆ ಸೇರಿದ ಕಣಿವೇನಹಳ್ಳಿ ಯಲ್ಲಿ ನಡೆಯಿತು. ಕಾರ್ಯಕ್ರಮ ಉದ್ದೇಶಿಸಿ ಗ್ರಾಮ್ ಒನ್ ಸಂಚಾಲಕ ರವಿಕಮಾರ್ ಮಾತನಾಡುತ್ತಾ, ಗ್ರಾಮ-ಒನ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಸೇವಾಸಿಂಧು ಯೋಜನೆಯಡಿಯಲ್ಲಿ ದೇಶದಲ್ಲಿಯೇ ಅತಿ ಹೆಚ್ಚು ಅಂದರೆ ಸುಮಾರು 750 ಕ್ಕೂ ಹೆಚ್ಚು ನಾಗರೀಕ ಸೇವೆಗಳನ್ನು ಪಡೆಯಲು ಅರ್ಜಿಗಳನ್ನು ಸ್ವೀಕರಿಸಲಾಗುವುದು.                     

ಸಕಾಲ, ಮಾಹಿತಿ ಹಕ್ಕು ಅಧಿನಿಯಮ , ಬ್ಯಾಂಕಿಂಗ್ ಸೇವೆಗಳು ಹಾಗೂ ಸಾರ್ವಜನಿಕರ ಕುಂದು-ಕೊರತೆ ನಿವಾರಣೆ ಕೋರಿ ಅರ್ಜಿಗಳನ್ನು ಸಹ ಸ್ವೀಕರಿಸಲಾಗುವುದು ಎಂದರು.             

ಪಿಡಿಒ ತಿಪ್ಪಣ್ಣ ಮಾತನಾಡುತ್ತಾ,  ಗ್ರಾಮ-ಒನ್ ಅನ್ನು ಕರ್ನಾಟಕದ ಮಾನ್ಯ ಮುಖ್ಯಮಂತ್ರಿಯವರು ಎಫ್‌ವೈ 20-21ರ ಬಜೆಟ್‌ನಲ್ಲಿ ಘೋಷಿಸಿದ್ದಾರೆ.             

ವಾರದ ಎಲ್ಲಾ ಏಳು ದಿನಗಳಲ್ಲಿ ಗ್ರಾಮ ಒನ್ ಕೇಂದ್ರಗಳು ಬೆಳಿಗ್ಗೆ 8 ರಿಂದ ಸಂಜೆ 8 ರವರೆಗೆ ಕಾರ್ಯನಿರ್ವಹಿಸಲಿವೆ.      ಸರ್ಕಾರಿ ಸೇವೆಗಳನ್ನು ಪಡೆಯಲು ನಾಗರಿಕರು ಜಿಲ್ಲೆ,ತಾಲ್ಲೂಕು ಮತ್ತು ಹೋಬಳಿ ಕಚೇರಿಗಳಿಗೆ ಭೇಟಿ ನೀಡುವ ಅಗತ್ಯವಿಲ್ಲ.ವಿವಿಧ ಇಲಾಖೆಗಳ ಸೇವೆಗಳನ್ನು ಒಂದೇ ಕೇಂದ್ರದಲ್ಲಿ ಪಡೆಯಬಹುದಾಗಿದೆ .ಗ್ರಾಮ ಒನ್ ಕೇಂದ್ರಗಳ ಮೂಲಕ ಸೇವೆಗಳನ್ನು ಪಡೆಯುವ ಮೂಲಕ ನಾಗರಿಕರು ಸಮಯ ಮತ್ತು ಹಣವನ್ನು ಉಳಿಸಬಹುದು.ಮಧ್ಯವರ್ತಿಗಳಿಂದ ಯಾವುದೇ ಅಪಾಯವಿಲ್ಲ ಎಂದರು.                                                      ಕಾರ್ಯಕ್ರಮದಲ್ಲಿ ಪಿಡಿಓ ತಿಪ್ಪಣ್ಣ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭವ್ಯಶ್ರೀ ರಾಮಕೃಷ್ಣ, ಉಪಾಧ್ಯಕ್ಷ ಶ್ರೀ ರಾಮಪ್ಪ, ಸಂಚಾಲಕ ಕೆ ಆರ್ ರವಿಕುಮಾರ್, ಮಂಜುನಾಥ್, ಸುಬ್ಬರಾಯಪ್ಪ, ಹನುಮಂತಪ್ಪ, ಮಹೇಶ್ ,ರಾಜೇಶ್, ಪಾರ್ವತಮ್ಮ ನಿಂಗಪ್ಪ, ಇತರರು ಭಾಗವಹಿಸಿದ್ದರು  

ವರದಿ:ಶ್ರೀನಿವಾಸುಲು ಎ