ಮಟ್ಕಾ, ಜೂಜಾಟ ತಡೆಗೆ ಕಟ್ಟು ನಿಟ್ಟಿನ ಕ್ರಮ, ಸಿ ಐ ಅಜಯ್ ಸಾರಥಿ
ಪಾವಗಡ.. ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿ ಹೊಂದಿರುವ ಪಾವಗಡ ತಾಲೂಕಿನಲ್ಲಿ ಹಲವು ಜನರು ಕಾನೂನು ಬಾಹಿರ ಚಟುವಟಿಕೆಗಳಾದ ಮಟ್ಕಾ ಮತ್ತು ಜೂಜಾಟ ವನ್ನು ತಮ್ಮ ವೃತ್ತಿಯನ್ನಾಗಿಸಿಕೊಂಡಿದ್ದು, ಇದರಿಂದ ಎಷ್ಟೋ ಕುಟುಂಬಗಳು ಬೀದಿಗೆ ಬಿದ್ದಿವೆ, ಅಂತಹವರು ತಪ್ಪನ್ನು ತಿದ್ದಿಕೊಂಡು , ಸನ್ಮಾರ್ಗದಲ್ಲಿ ನಡೆಯಬೇಕು, ಇಲ್ಲವಾದರೆ ಅವರ ವಿರುದ್ಧ ಕಠಿಣವಾದ ಕಾನೂನು ಕ್ರಮ ನಡೆಸಲಾಗುವುದು ಎಂದು ಸಿ ಐ ಅಜಯ್ ಸಾರಥಿ ಶುಕ್ರವಾರ ಮಟ್ಕಾ ಜೂಜು ತಡೆಗೆ ಹಮ್ಮಿಕೊಂಡಿದ್ದ ನಮ್ಮ ಪಾವಗಡ ನಮ್ಮ ಹೆಮ್ಮೆ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಎಸ್ .ಎಸ್. ಕೆ , ಸ್ವಾಮಿ ವಿವೇಕಾನಂದ , ವೈ ಇ ರಂಗಯ್ಯ ಶೆಟ್ಟಿ ಕಾಲೇಜಿನ ವಿದ್ಯಾರ್ಥಿಗಳು ಪಾವಗಡದ ಪ್ರಮುಖ ಬೀದಿಗಳಲ್ಲಿ ಜೂಜು ಮತ್ತು ಮಟ್ಕಾದ ಬಗ್ಗೆ ಅರಿವು ಮೂಡಿಸುವ ಜಾಥಾ ಕಾರ್ಯಕ್ರಮದಲ್ಲಿ ಪೊಲೀಸ್ ಇಲಾಖೆಯೊಂದಿಗೆ ಜೊತೆಗೂಡಿದರು.
ಒಬ್ಬೊಬ್ಬ ವಿದ್ಯಾರ್ಥಿ ಕನಿಷ್ಠ ಪಕ್ಷ ಐದು ಜನರಿಗೆ ಅರಿವು ಮೂಡಿಸಿ, ನೀವೆಲ್ಲಾ ಸುಮಾರು ಸಾವಿರ ವಿದ್ಯಾರ್ಥಿಗಳಿದ್ದೀರ, ಕನಿಷ್ಠಪಕ್ಷ ನೀವು ಐದು ಸಾವಿರ ಜನರಿಗೆ ಜೂಜು ಮತ್ತು ಮಟ್ಕಾದ ವಿರುದ್ಧ ಅರಿವು ಮೂಡಿಸುವಂತಾಗಬೇಕು ಎಂದು ಕಿವಿ ಮಾತು ಹೇಳಿದರು . ತಾಲೂಕಿನಲ್ಲಿರುವ ಅಕ್ರಮ ಚಟುವಟಿಕೆ ಗಳಲ್ಲಿ ಒಂದಾಗಿರುವ ಮಟ್ಕಾ ಮತ್ತು ಜೂಜನ್ನು ಬೇರು ಸಮೇತ ಕಿತ್ತು ಹಾಕಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಹಿಂದಿನಿಂದಲೂ ಇಲಾಖೆಯಿಂದ ಈ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಿವೆ ಎಂದರು.
ವರದಿ; ಶ್ರೀನಿವಾಸಲು ಎ