ಕಲಿದೇವಪುರ ಗ್ರಾಮದ ಬಳಿ ಗುಂಡಗಲ್ಲು ಕೆರೆಗೆ ಹರಿದುಬರುವ ನೀರಿನ ಕಾಲುವೆ ,,ಹೊಡೆದು,, ನೀರು ಪೋಲು
ಮಧುಗಿರಿ ತಾಲೂಕು ಕೊಡಿಗೇನ ಹಳ್ಳಿ ಹೋಬಳಿ ಕಲಿದೇವಪುರ ಗ್ರಾಮದ ಗುಂಡಗಲ್ಲುಕೆರೆಗೆ ನೀರು ಹರಿಯಬೇಕಾಗಿದ್ದ ಕಾಲುವೆ ಹೊಡೆದು ಹೋಗಿ ಕುಮದ್ವತಿ ನದಿಗೆ ಸೇರಿ ಆಂಧ್ರಕ್ಕೆ ಹೋಗುತ್ತಿದ್ದರೂ ಕೂಡ. ಸಂಬಂಧ ಪಟ್ಟ ಇಲಾಖಾಧಿಕಾರಿಗಳುಹಾಗೂ ಜನಪ್ರತಿನಿಧಿಗಳು. ತಮಗೆ ಸಂಬಂಧವೇ ಇಲ್ಲವೆಂಬಂತೆ ತುಂಬಾ ನಿರ್ಲಕ್ಷತನ ಬೇಜವಾಬ್ದಾರಿತನ ಉದಾಸೀನ ತೋರಿರುವುದರಿಂದ ಗುಂಡಗಲ್ಲು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಹೋಬಳಿಯ ಕಲಿದೇವಪುರ ಗ್ರಾಮದ ಕುಮದ್ವತಿ ನದಿಯಿಂದ ಗುಂಡಗಲ್ಲು ಕೆರೆಗೆ ಹಾದುಹೋಗುವ ಕಾಲುವೆ ಕಲಿದೇವಪುರ ಬಳಿಹೊಡೆದು, ಕೆರೆಗೆ ಹೋಗಬೇಕಾದ ಅಪಾರ ಪ್ರಮಾಣದ ನೀರು ಕುಮದ್ವತಿ ನದಿಗೆ ಹೋಗಿ ಆಂಧ್ರ ದತ್ತ ಸಾಗುತ್ತಿವೆ ಹಲವು ವರ್ಷಗಳಿಂದ ಈ ಭಾಗದ ಜನರು ಕೃಷಿ ಜೊತೆಗೆ ಕುಡಿಯುವ ನೀರಿಗೆ ಹಲವಾರು ಕಷ್ಟ ಕಾರ್ಪಣ್ಯಗಳನ್ನು ಅನುಭವಿಸಿದ್ದಾರೆ. ಆ ಸಮಯದಲ್ಲಿ ಜನಪ್ರತಿನಿಧಿಗಳು ಅಥವಾ ಅಧಿಕಾರಿಗಳು ಚುನಾವಣೆ ಅಥವಾ ಹಲವು ಕಾರ್ಯಕ್ರಮಗಳಲ್ಲಿ ಆಗದಿರುವ ಕಾರ್ಯಗಳಾದ .ಎತ್ತಿನಹೊಳೆ ಭದ್ರಾ ಮೇಲ್ದಂಡೆ ಹಾಗೂ ಇನ್ನಿತರೆ ನೀರಾವರಿ ಯೋಜನೆಗಳ ಬಗ್ಗೆ ಗಂಟೆಗಟ್ಟಲೆ ಭಾಷಣ ಬೀಗುವುದರ ಜೊತೆಗೆ ನೀಡಿರುವ ಸುಳ್ಳು ಭರವಸೆಗಳನ್ನು ಕೇಳಿ ಕೇಳಿ ಜನರಿಗೆ ಸಾಕಾಗಿದೆ. ಇಂತಹ ಸಂದರ್ಭದಲ್ಲಿ ಈ ಬಾರಿ ನಮ್ಮ ಭಾಗದಲ್ಲಿ ಅಪರೂಪಕ್ಕೆ ಎಂಬಂತೆ ಪ್ರಕೃತಿ ಕೃಪೆ ತೀರಿದ ಪರಿಣಾಮ. ಉತ್ತಮ ಮಳೆಯಾಗಿ ಹಳ್ಳಕೊಳ್ಳಗಳು ಕೆರೆಕಟ್ಟೆಗಳು ಜೊತೆಗೆ. ಬರುಡಾಗಿದ್ದ ನದಿಗಳು ಜೀವನದಿಗಳೆಂದೇ ಭೋರ್ಗರೆಯುತ್ತಿವೆ ಇಂತಹ ಸಂದರ್ಭದಲ್ಲಿ ತುಂಬಿರುವ ಕೆರೆಗಳ ಕಾಲುವೆಗಳನ್ನು ಸರಿಪಡಿಸಿ ನೀರನ್ನು ಹರಿಯಲು ಸಂರಕ್ಷಿಸದೆ ಇರುವುದು ಅತ್ಯಂತ ನೋವಿನ ಸಂಗತಿ ಯಾಗಿದೆ ಎಂದು ಗುಂಡಗಲ್ಲು ಗ್ರಾಮದ ಆನಂದ್ ಕುಮಾರ್ ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ತುಂಬಾ ಬೇಸರ ವ್ಯಕ್ತಪಡಿಸಿದರು.
ತಾಲೂಕಿನ ಬಹುತೇಕ ಕೆರೆಗಳ ಜೊತೆಗೆ ನಮ್ಮ ಸುತ್ತಮುತ್ತಲಿನ ಕೆರೆಗಳು ತುಂಬಿ ಕೋಡಿ ಹರಿಯುತ್ತಿವೆ. ಆದರೆ ನಮ್ಮ ಕೆರೆಗೆ ಕಾಲುವೆ ಇದ್ದರೂ ಕೂಡ ತುಂಬಿರುವುದರಿಂದ ನಮ್ಮ ಪಾಪವೇನು ಗೊತ್ತಿಲ್ಲ. ಕೆರೆಯ ಬಳಿ ಕೆಲವು ಪ್ರಭಾವಿ ಮುಖಂಡರು ಜಮೀನು ಇರುವುದರಿಂದ ಕೆರೆ ತುಂಬಿದರೆ ತಮ್ಮ ಜಮೀನು ನೀರಿನಲ್ಲಿ ಮುಳುಗಡೆಯಾಗುತ್ತದೆ ಎಂಬ ದುರುದ್ದೇಶದಿಂದ ಈ ರೀತಿ ಮಾಡುತ್ತಿದ್ದಾರೆಯೋ ತಿಳಿಯುತ್ತಿಲ್ಲ.
ಸರ್ಕಾರ ಎತ್ತಿನಹೊಳೆ ಯಂತಹ ಮತ್ತು ಹಣ ಹೊಡೆಯುವಂತಹ ಇತರೆ ಕಾಮಗಾರಿಗಳಿಗೆ ಕೋಟ್ಯಂತರ ಹಣ ಖರ್ಚು ಮಾಡಿ. ಫೋಲು
ಮಾಡುವ. ಬದಲು ಕಾಲುವೆ ಸರಿಪಡಿಸಲು ಕೇವಲ ಸಾವಿರಾರು ರೂಪಾಯಿಗಳು ಖರ್ಚು ಮಾಡಿದರೆ ಸಾಕು ಈ ಭಾಗದ ಸಾಕಷ್ಟು ರೈತರಿಗೆ ಮತ್ತು ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳು ಕೂಡಲೇ ಕೆರೆ ಕಾಲುವೆ ಸರಿಪಡಿಸಿದ ಇದ್ದರೆ ಮುಂದಿನ ದಿನಗಳಲ್ಲಿ ಉಪ ವಿಭಾಗಾಧಿಕಾರಿಗಳ ಕಚೇರಿಯ ಮುಂದೆ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ. ಎಂದು ಗುಂಡಗಲ್ಲು ಗ್ರಾಮದ ಸತ್ಯನಾರಾಯಣ ರೆಡ್ಡಿ ಎಚ್ಚರಿಕೆ ನೀಡಿದ್ದಾರೆ.
ಕೆರೆ ಕಾಲುವೆ ಹೊಡೆದಿರುವ ಹತ್ತಿರ ಕೆ. ಶ್ರೀಕಾಂತ್, ಶ್ರೀರಾಮಪ್ಪ. ಅಶ್ವತ್ ನಾರಾಯಣಪ್ಪ. ಕೆ ಅಶ್ವತ್ ಪ್ಪ. ಮಂಜುನಾಥ್. ನಾಗರಾಜು ನರಸಿಂಹಮೂರ್ತಿ ಇದ್ದರು.
ವರದಿ. ಲಕ್ಷ್ಮಿಪತಿ ದೊಡ್ಡ ಯಲ್ಕೂರು.