IMG 20240108 WA0058

ಮಧುಗಿರಿ: ವಿದ್ಯುತ್ ದುರಸ್ತಿ ಕೇಂದ್ರದ ಉದ್ಘಾಟನೆ….!

DISTRICT NEWS ತುಮಕೂರು

ಮಧುಗಿರಿ : ಆಂಜನೇಸ್ವಾಮಿ ದೇವಾಲಯದಲ್ಲಿನ ಪ್ರಾರ್ಥನ ಮಂದಿರದ ಅಭಿವೃದ್ಧಿ ಕಾಮಗಾರಿಗೆ 4 ಲಕ್ಷ ರೂ ಮಂಜೂರು ಮಾಡಿಸಿ ಕೊಡಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ತಿಳಿಸಿದರು.

ಅವರು ಪಟ್ಟಣದ ಶಿರಾಗೇಟ್ ಬಳಿಯಿರುವ ಬೆಸ್ಕಾಂ ಇಲಾಖೆಯ ಆವರಣದಲ್ಲಿನ ವಿದ್ಯುತ್ ಪರಿವರ್ತಕ ಸಾಧನಗಳ ದುರಸ್ತಿ ಕೇಂದ್ರಕ್ಕೆ ಚಾಲನೆ ಮಾಡಿ.ಮಾತನಾಡಿದರು.

ಇತ್ತೀಚೆಗೆ ತಾಲೂಕಿನ ಕೆಲ ಭಾಗಗಳಲ್ಲಿ ಪರಿವರ್ತಕ ಗಳು ಕೆಲವೊಂದು ಕಾರಣಗಳಿಂದಾಗಿ ಸುಟ್ಟು ಹೋಗುತ್ತಿದ್ದು ಸಕಾಲಕ್ಕೆ ದುರಸ್ತಿ ಮಾಡಿಕೊಡಲು ಬೆಸ್ಕಾಂ ನವರಿಗೆ ಕಷ್ಟಕರವಾಗಿತ್ತು.

ವಿದ್ಯುತ್ ಪರಿರ್ತಕಗಳನ್ನು ದುರಸ್ತಿ ಮಾಡುವ ಆನ್ ಲೈನ್ ಟೆಂಡರ್ ಕಾಮಗಾರಿಯು ಸ್ಥಳೀಯರಾದ ಆನಂದ್ ರವರಿಗೆ ದೊರೆತಿರುವುದು ಸಂತೋಷದ ವಿಷಯವಾಗಿದ್ದು ಆದಷ್ಟೂ ಬೇಗ ಪರಿವರ್ತಕಗಳನ್ನು ದುರಸ್ತಿಗೊಳಿಸಿ ರೈತರಿಗೆ ಸಕಾಲಕ್ಕೆ ಒದಗಿಸಿಕೊಡಬೇಕು .
ಎಂದರ.

ಬೆಸ್ಕಾಂ ವಸತಿ ಗೃಹಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಅದಷ್ಟೂ ಬೇಗ ದೇವಾಲಯದ ಪ್ರಾರ್ಥನ ಮಂದಿರ ಕಾಮಗಾರಿಯು ಅರ್ಧಕ್ಕೆ ನಿಂತಿದ್ದು ಪೂರ್ಣಗೊಳಿಸಲು 4 ಲಕ್ಷ ರೂ ಅನುದಾನ ಮಂಜೂರು ಮಾಡಿಸಿ ಕೊಡಲಾಗವುದು ಹಾಗೂ ಬೆಸ್ಕಾಂ ವಸತಿ ಗೃಹಗಳು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿವೆ. ಸಮೀಪದ ಓವರ್ ಹೆಡ್ ಟ್ಯಾಂಕ್ ಮೇಲೆ ಮರ ಬಿದ್ದು ಹಾನಿಯಾಗಿದೆ. ಟ್ಯಾಂಕ್ ಸುತ್ತ ಪಾಚಿ ಆವರಿಸಿ ನೀರು ಪೊಲಾಗುತ್ತಿದೆ ಅದಷ್ಟೂ ಬೇಗ ಸಂಬಂಧಪಟ್ಟ ಅಧಿಕಾರಗಳ ಬಳಿ ಚರ್ಚಿಸಿ ಸಮಸ್ಯೆ ಬಗೆಹರಿಸಲಾಗುವುದು ಎಂದು ತಿಳಿಸಿದರು.
ಇನ್ನೊಂದು ವಾರದಲ್ಲಿ ಮತ್ತೆ ಸ್ಥಳಕ್ಕೆ ಭೇಟಿ ನೀಡಲಿದ್ದು ಅದಷ್ಟೂ ಬೇಗ ಟ್ಯಾಂಕ್ ಸ್ವಚ್ಚಗೊಳಿಸುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು.

ಶ್ರೀ ಮಾರುತಿ ಎಲೆಕ್ಟ್ರಿಕಲ್ ಮಾಲೀಕ ಆನಂದ್ ಕುಮಾರ್ ಎ.ಹೆಚ್ ಮಾತನಾಡಿ ಬರಗಾಲದ ಸಮಯದಲ್ಲಿ ಇಲಾಖೆಯ ವತಿಯಿಂದ ದುರಸ್ತಿ ಗಾಗಿ ನೀಡಲಾಗುವ ವಿದ್ಯುತ್ ಪರಿವರ್ತಕ ಗಳನ್ನು ಇಲಾಖೆಯ ಮಾನದಂಡಗಳಂತೆ ದುರಸ್ತಿ ಗೊಳಿಸಿ ಸಕಾಲಕ್ಕೆ ವಾಪಸ್ ನೀಡಲಾಗುವುದೆಂದರು.

ಈ ಸಂದರ್ಭದಲ್ಲಿ.ಬೆಸ್ಕಾಂ ಇಇ ಜಗದೀಶ್ , ಎಇಇ ಶ್ರೀನಿವಾಸ್ , ಸ್ಟೋರ್ ರಾಮಣ್ಣ , ನೌಕರ ಸಂಘದ ಅಧ್ಯಕ್ಷ ಪ್ರಸನ್ನ ಕುಮಾರ್ , ರವೀಂದ್ರ , ಮಾಜಿ ಪುರಸಭಾಧ್ಯಕ್ಷ ಎಂ.ಕೆ.ನಂಜುಂಡಯ್ಯ , ಎಂ.ಎಸ್ ಶಂಕರನಾರಾಯಣ , ಬೆಸ್ಕಾಂ ನೌಕರ ಸಂಘದ ಪದಾಧಿಕಾರಿಗಳು , ನೌಕರರು ಮತ್ತಿತರರು ಇದ್ದರು..

ವರದಿ ಲಕ್ಷ್ಮಿಪತಿ ದೊಡ್ಡಯ ಲ್ಕೂರು