ಪೊಲೀಸ್ ಕ್ಯಾಂಪ್ ಮೇಲೆ ದಾಳಿ ನಡೆಸಿದ ಐವರು ನಕ್ಸಲರಿಗೆ ನ್ಯಾಯಾಂಗ ಬಂಧನ..…
ಪಾವಗಡ: ತಾಲ್ಲೂಕಿನ ಗಡಿ ಪ್ರದೇಶವಾದ ವೆಂಕಟಮ್ಮನಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಪೊಲೀಸ್ ಕ್ಯಾಂಪ್ ಮೇಲೆ ನಕ್ಸಲರು ದಾಳಿ ನಡೆಸಿ ಏಳು ಮಂದಿ ಪೊಲೀಸರು ಹಾಗೂ ಓರ್ವ ನಾಗರಿಕರನ್ನು ಹತ್ಯೆ ಮಾಡಿರುವ ಘಟನೆ 2005 ಫೆಬ್ರವರಿ 10 ರಂದು ನಡೆದಿದ್ದು ಈ ಘಟನೆಯಿಂದಾಗಿ ಇಡೀ ದೇಶ ವೇ ಬೆಚ್ಚಿ ಬಿದ್ದಿತ್ತು.
ಸುಮಾರು 19 ವರ್ಷಗಳ ನಂತರ ಪಾವಗಡ ಠಾಣೆಯ ಪೊಲೀಸರು ಭಾನುವಾರ ಬೆಳಗಿನ ಜಾವ ಮತ್ತೆ ಐದು ಜನ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಈ ಘಟನೆಯಲ್ಲಿ ಈಗಾಗಲೇ 17 ಮಂದಿ ಬಿಡುಗಡೆಯಾಗಿದ್ದು, ಇಬ್ಬರು ವಿಚಾರಣೆ ಎದುರಿಸುತ್ತಿದ್ದು.
ಈ ಕೇಸಿಗೆ ಸಂಬಂಧಿಸಿದ ಐದು ಜನ ನಕ್ಸಲರನ್ನು ಪಾವಗಡ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಬಂದಿತ ವ್ಯಕ್ತಿಗಳು ಆಂಧ್ರಪ್ರದೇಶದ ಸತ್ಯ ಸಾಯಿ ಜಿಲ್ಲೆಯ ಗoತಿ ಮರ್ರಿ ಗ್ರಾಮದ ಗೊಲ್ಲ ನಾಗರಾಜು,
ತಲ್ಲಿ ಮಡುಗು ಗ್ರಾಮದ ರಾಮ್ ಮೋಹನ್, ಬೋಯ ಒಬಳೇಶ್, ಕೊನಿಟಿ ಪಲ್ಲಿ ಗ್ರಾಮದ ಬೋಯ ಅಂಜಿನಪ್ಪ, ಕೋನಾಪುರಂ ಗ್ರಾಮದ ಬೋಯಾಪದ್ಮ ಎಂದು ತಿಳಿದು ಬಂದಿದೆ. ಈ ಎಲ್ಲಾ ಆರೋಪಿಗಳು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಆರೋಪಿಗಳಿಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ.
ವರದಿ : ಶ್ರೀನಿವಾಸಲು ಎ