ಸ್ವಾಭಿಮಾನ, ಸಮಾನತೆ ಹಾಗೂ ಜ್ಞಾನ ಗಳಿಸಲು, ಶಿಕ್ಷಣ ಪ್ರಮುಖ ಸಾಧನ: ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ.
ಕೊರಟಗೆರೆ, ಡಿಸೆಂಬರ್ ೦೯
ಸಮಾಜದಲ್ಲಿ ಸ್ವಾಭಿಮಾನ, ಸಮಾನತೆ ಹಾಗೂ ಜ್ಞಾನ ಗಳಿಸಿಕೊಳ್ಳಲು , ಶಿಕ್ಷಣದಂತ ಬೇರೆಯಾದ ಅಸ್ತ್ರ ಇನ್ನೊಂದಿಲ್ಲ, ಎಂದು ಗೃಹ ಸಚಿವರೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ, ಶ್ರೀ ಆರಗ ಜ್ಞಾನೇಂದ್ರ ರವರು ಅಭಿಪ್ರಾಯ ಪಟ್ಟಿದ್ದಾರೆ.
ಸಚಿವರು ಇಂದು, ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಕೊಳಾಲ ಗ್ರಾಮದಲ್ಲಿ, ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ ನೂತನವಾಗಿ ನಿರ್ಮಿಸಲಾಗಿರುವ ಕಟ್ಟಡ ವನ್ನು ಉದ್ಘಾಟಿಸಿ ಮತನಾಡುತ್ತಿದ್ದರು.
ಸರಕಾರವು, ಗ್ರಾಮೀಣ ಭಾಗದಲ್ಲಿ, ವಿಶೇಷವಾಗಿ, ಶಿಕ್ಷಣಕ್ಕೆ ಆದ್ಯತೆ ಮೇರೆಗೆ ಗಮನ ನೀಡಿ, ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಹೆಚ್ಚಿನ ಅನುದಾನ ನೀಡಲಾಗುತ್ತಿದೆ.
ಶೈಕ್ಷಣಿಕ ಚಟುವಟಿಕೆಗಳಿಗೆ ಸರಕಾರವು ಒದಗಿಸುತ್ತಿರುವ ನೆರವು ಹಾಗೂ ಪ್ರೋತ್ಸಾಹ ವನ್ನು ಸದುಪಯೋಗ ಪಡಿಸಿಕೊಂಡು, ಸಮಾಜದ ಮುಖ್ಯ ವಾಹಿನಿಗೆ ಸೇರಬೇಕು, ಎಂದು ಕಿವಿ ಮಾತು ಹೇಳಿದರು.
ಮಾನವೀಯ ಮೌಲ್ಯಗಳನ್ನು ರೂಢಿಸಿಕೊಂಡು, ರಾಷ್ಟ್ರದ ಆಸ್ತಿ ಯಾಗಿ, ರೂಪುಗೊಳ್ಳಬೇಕು ಎಂದೂ ಸಚಿವರು ಕರೆ ನೀಡಿದರು.
ಮಾಜಿ ಉಪಮುಖ್ಯಮಂತ್ರಿ ಗಳು ಹಾಗೂ ಸ್ಥಳೀಯ ಶಾಸಕರೂ ಆದ, ಶ್ರೀ Dr ಜಿ ಪರಮೇಶ್ವರ್ ಅವರೂ ವಿಧ್ಯಾರ್ಥಿ ಗಳನ್ನು ಉದ್ದೇಶಿಸಿ ಮಾತನಾಡಿದರು.
ಶ್ರೀ ಹನುಮಂತ ನಾಥ್ ಸ್ವಾಮೀಜಿ, ಕುಂಚಿಟಿಗ ಮಠ ಎಲೆರಾಮಪುರ, ಅವರೂ ಸಭೆಯಲ್ಲಿ ಭಾಗವಹಿಸಿ, ಆಶೀರ್ವಚನ ನೀಡಿದರು.
ತುಮಕೂರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ವಿದ್ಯಕುಮಾರಿ ಸೇರಿದಂತೆ ಇತರ ಹಿರಿಯ ಅಧಿಕಾರಿಗಳೂ ಉಪಸ್ತಿತರಿದ್ದರು.
ಗೃಹ ಸಚಿವರೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಶ್ರೀ ಆರಗ ಜ್ಞಾನೇಂದ್ರ ರವರು ಇಂದು, ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ, ಕೋಳಾಲ ಗ್ರಾಮದಲ್ಲಿ ಸುಮಾರು 34 ಕೋಟಿ ರೂಪಾಯಿಗಳ ವೆಚ್ಚದಲ್ಲಿ, ನಿರ್ಮಿಸಲಾದ, ನೂತನ Dr ಬಿ ಆರ್ ಅಂಬೇಡ್ಕರ್ ವಸತಿ ಶಾಲೆಯ ( ಪರಿಶಿಷ್ಟ ಪಂಗಡ) ಕಟ್ಟಡ ವನ್ನು ಉದ್ಘಾಟಿಸಿ, ಮಾತನಾಡಿದರು.
ಮಾಜಿ ಉಪಮುಖ್ಯಮಂತ್ರಿ ಗಳು, ಹಾಗೂ ಸ್ಥಳೀಯ ಶಾಸಕರಾದ ಶ್ರೀ Dr ಜಿ ಪರಮೇಶ್ವರ್, ಹಾಗೂ ಇನ್ನಿತರ ಗಣ್ಯರೂ ಉಪಸ್ಥಿತರಿದ್ದರು.