ತುಂಗಭದ್ರಾ ಕುಡಿಯುವ ನೀರಿನ ಯೋಜನೆ ಪರಿಶೀಲನೆ.
ಪಾವಗಡ : ತುಮಕೂರು ಜಿಲ್ಲಾ ಪಂಚಾಯತಿ, ಪಾವಗಡ ಉಪ ವಿಭಾಗ, ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ವತಿಯಿಂದ ತಾಲ್ಲೂಕಿನ ಕೋಟಗುಡ್ಡ ಗ್ರಾಮ ಮತ್ತು ಶೈಲಾಪುರ ಗ್ರಾಮದಲ್ಲಿ ತುಂಗಭದ್ರಾ ಕುಡಿಯುವ ನೀರಿನ ಯೋಜನೆಯ ಪರಿವೀಕ್ಷಣೆ ನಡೆಸಲಾಯಿತು.
ಈ ವೇಳೆ ಕುಡಿಯುವ ನೀರನ್ನು ಪರಿಶೀಲಿಸಿದ ಅಧಿಕಾರಿಗಳು ನೀರು ಕುಡಿಯಲು ಯೋಗ್ಯವಾಗಿದೆ ಎಂದು ತಿಳಿಸಿದರು.
ತಾಲ್ಲೂಕಿನ ಎಲ್ಲಾ ಗ್ರಾಮಗಳಿಗೆ ತುಂಗಭದ್ರಾ ಕುಡಿಯುವ ನೀರು ಶೀಘ್ರವೇ ಹರಿಯಲಿದೆ ಎಂದರು.
ಈ ಸಂದರ್ಭದಲ್ಲಿ AEE ಕಾವ್ಯ ರವರು, JE ಬಸಲಿಂಗ ಪಾಟೀಲ್ ರವರು,ತುಂಗಭದ್ರಾ ಪ್ರಾಜೆಕ್ಟ್ ನ ಮೆಗಾ ಕಂಪನಿಯ ಅಧಿಕಾರಿ ಅಶೋಕ್ ರವರು, ನವೀನ್ ರವರು ಹಾಗೂ ಗ್ರಾಮಸ್ಥರು ಮತ್ತು ಸ್ಥಳೀಯ ವಾಟರ್ ಮ್ಯಾನ್ ಗಳು ಹಾಜರಿದ್ದರು.
ವರದಿ: ಶ್ರೀನಿವಾಸಲು ಎ