IMG 20211225 WA0020

ಪಾವಗಡ: ಕ್ರಿಸ್ ಮಸ್ ಹಬ್ಬ ಅಚರಣೆ

DISTRICT NEWS ತುಮಕೂರು

ಪಾವಗಡ  ತಾಲ್ಲೂಕಿನ  ವಿವಿಧ ಚರ್ಚ್ ಗಳಲ್ಲಿ ಕ್ರಿಸ್ ಮಸ್ ಪ್ರಯುಕ್ತ ಶುಕ್ರವಾರ, ಶನಿವಾರ ವಿಶೇಷ ಪ್ರಾರ್ಥನೆ ನಡೆಸಲಾಯಿತು.
ಚರ್ಚ್ ಗಳನ್ನು ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು,   ಯೇಸು ಜನನ ಸಂದೇಶವನ್ನು ಗೊಂಬೆಗಳ ಮೂಲಕ ಪ್ರದರ್ಶಿಸಲಾಗಿತ್ತು, ಮತ್ತು ಕ್ರಿಸ್ಮಸ್ ಟ್ರೀ’ಗಳು ಹಾಗೂ ಆಗಸವನ್ನು ಚುಂಬಿಸಲು ಹೊರಟ ನಕ್ಷತ್ರಾಕಾರದ ಆಕಾಶ ಬುಟ್ಟಿಗಳ ಸಾಲು ಪಟ್ಟಣದ ಚರ್ಚ್ ಗಳ ಮುಂಭಾಗ ಕಣ್ಮನ ಸೆಳೆದವು.
ಶಿರಾ ರಸ್ತೆಯಲ್ಲಿರುವ ಬೇಥೇಲ್ ಬ್ರದರನ್ ಚರ್ಚ್ ಸೇರಿದಂತೆ ಪಟ್ಟಣದ ಚರ್ಚ್ ಗಳಲ್ಲಿ ಶುಕ್ರವಾರ ರಾತ್ರಿ ವಿಶೇಷ ಪ್ರಾರ್ಥನೆಗಳು ನಡೆದವು. ಶನಿವಾರ ಬೆಳಿಗ್ಗೆ ಕ್ರಿಸ್ಮಸ್ ಪ್ರಯುಕ್ತ ವಿಶೇಷ ಪ್ರಾರ್ಥನೆ, ಧರ್ಮ ಬೋಧನೆಗಳು ನಡೆದವು. ಕ್ರೈಸ್ತ ಸಮುದಾಯದವರು   ಚರ್ಚ್ ಗಳಲ್ಲಿ ಪ್ರಾರ್ಥನೆ ಮಾಡಿದರು.
ಮಾರುಕಟ್ಟೆಗಳಲ್ಲಿ ಕ್ರಿಸ್ಮಸ್ ಗಾಗಿ ಅಲಂಕಾರಿಕ ವಸ್ತುಗಳು, ಉಡುಗೊರೆಗಳ ಖರೀದಿಯೂ ಭರದಿಂದ ನಡೆಯಿತು. ಬೇಕರಿಗಳಲ್ಲಿ ವಿಶೇಷ ಕೇಕ್ ಪ್ರದರ್ಶನ ಹಾಗೂ ಮಾರಾಟ ನಡೆಯಿತು.

ವರದಿ: ಶ್ರೀನಿವಾಸುಲು ಎ