IMG 20250830 WA0003

ಪಾವಗಡ : ವಿಜ್ಞಾನ ವಿಚಾರಗೋಷ್ಠಿ. ರಾಜ್ಯಮಟ್ಟಕ್ಕೆ ಆಯ್ಕೆ…!

DISTRICT NEWS ತುಮಕೂರು

ವಿಜ್ಞಾನ ವಿಚಾರಗೋಷ್ಠಿ. ರಾಜ್ಯಮಟ್ಟಕ್ಕೆ ಆಯ್ಕೆ.

ಪಾವಗಡ: 2025 26 ನೇ ಸಾಲಿನ ಜಿಲ್ಲಾ ಹಂತದ ವಿಜ್ಞಾನ ವಿಚಾರಗೋಷ್ಠಿ ವಿಜ್ಞಾನ ನಾಟಕ ಸ್ಪರ್ಧೆಯನ್ನು ಮಧುಗಿರಿ ಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ,ಯ ಆವರಣದಲ್ಲಿ ಶುಕ್ರವಾರ ಏರ್ಪಡಿಸಿದ್ದು.

ಪಾವಗಡ ಪಟ್ಟಣದ ವಿ ಎಸ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳಾದ ಸಾಯಿ ವೆಂಕಟ್ ಮತ್ತು ಚೇತನ್ ಎಂಬ ವಿದ್ಯಾರ್ಥಿಗಳು ಮಧುಗಿರಿಯ ಡಯಟ್ ನಲ್ಲಿ ಏರ್ಪಡಿಸಿದ್ದ ಜಿಲ್ಲಾ ವಿಜ್ಞಾನ ವಿಚಾರಗೋಷ್ಠಿಯಲ್ಲಿ ಕ್ವಾಂಟಮ್ ಯುಗವು ಸಂಭಾವ್ಯತೆಗಳು ಮತ್ತು ಪ್ರಯೋಜನಗಳ ಶೀರ್ಷಿಕೆಯಿಂದ ಪ್ರಾರಂಭವಾಗುತ್ತದೆ ಎಂಬ
ವಿಜ್ಞಾನ ವಿಚಾರಗೋಷ್ಠಿ ವಿಷಯದಲ್ಲಿ
ಪಾಲ್ಗೊಂಡು ವಿಜೇತರಾಗಿದ್ದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಈ ಸಂದರ್ಭದಲ್ಲಿ ಉಪ ನಿರ್ದೇಶಕರಾದ ಮಾಧವ ರೆಡ್ಡಿ, ಜಿಲ್ಲಾ ನೋಡಲ್ ಅಧಿಕಾರಿ ನವೀನ್ ಕುಮಾರ್, ಡಯಟ್ ಉಪನ್ಯಾಸಕರದ ಗೋವಿಂದರಾಜು, ಮಾರುತಿ, ತಾಲೂಕು ನೋಡಲು ಅಧಿಕಾರಿ ದೇವರಾಜ್ ಮುಂತಾದವರು ಹಾಜರಿದ್ದರು.

ರಾಜ್ಯಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ವಿ ಎಸ್ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಅಶ್ವಥ್ ನಾರಾಯಣ್, ಖಜಾಂಚಿ ದೀಪಿಕಾ, ಕಿರಣ್ ಕುಮಾರ್ ಎಂ ಮತ್ತು ಶಿಕ್ಷಕ ವರ್ಗ ವಿಜೇತರಾದ ವಿದ್ಯಾರ್ಥಿಗಳನ್ನು ಮತ್ತು ವಿಜ್ಞಾನ ಶಿಕ್ಷಕ ತಿಪ್ಪೇಸ್ವಾಮಿಯನ್ನು ಅಭಿನಂದಿಸಿದರು.

ವರದಿ : ಶ್ರೀನಿವಾಸಲು ಎ