IMG 20250823 WA0013

Karnataka :ಬೆಸ್ಟ್ ಆಫ್ ಎಎಸ್ ಸಿಒ 2025 ಬೆಂಗಳೂರು ಗೆ ಚಾಲನೆ…!

BUSINESS Genaral STATE

ಬೆಸ್ಟ್ ಆಫ್ ಎಎಸ್ ಸಿಒ 2025 ಬೆಂಗಳೂರು ಗೆ ಚಾಲನೆ

  • ಕ್ಯಾನ್ಸರ್ ಕುರಿತು ಅರಿವು, ತಡೆಗಟ್ಟುವಿಕೆ ಮತ್ತು ಆರಂಭಿಕ ಪತ್ತೆ ಬಗ್ಗೆ ಜಾಗೃತಿ ಮೂಡಿಸುವುದು ಸಮ್ಮೇಳನದ ಉದ್ದೇಶ500 ಕ್ಕೂ ಹೆಚ್ಚು ಕ್ಯಾನ್ಸರ್ ರೋಗ ತಜ್ಞ ವೈದ್ಯರು ಭಾಗಿಕ್ಯಾನ್ಸರ್ ಕಾಯುವುದಿಲ್ಲ ಎಂಬ ಸಂದೇಶ

ಬೆಂಗಳೂರು, ಆಗಸ್ಟ್ 23, 2025: ಕ್ಯಾನ್ಸರ್ ಸಂಶೋಧನೆಯಲ್ಲಿ ಆಗಿರುವ ಜಾಗತಿಕ ಮಟ್ಟದ ಸಂಶೋಧನೆಗಳು ಭಾರತೀಯ ರೋಗಿಗಳು ಮತ್ತು ಅವರ ಕುಟುಂಬಗಳನ್ನು ತಲುಪುವ ಕ್ಷಣಗಳು ಸನಿಹವಾಗಿವೆ. ಈ ಜಾಗತಿಕ ಸಂಶೋಧನೆಗಳನ್ನು ಭಾರತೀಯ ಜಗತ್ತಿಗೆ ತಿಳಿಸುವ ಉದ್ದೇಶದಿಂದ ಆಯೋಜಿಸಲಾಗಿರುವ ಬೆಸ್ಟ್ ಆಫ್ ಎಎಸ್ ಸಿಒ 2025 ವಾರ್ಷಿಕ ಸಮ್ಮೇಳನಕ್ಕೆ ಬೆಂಗಳೂರಿನಲ್ಲಿ ಇಂದು ಚಾಲನೆ ನೀಡಲಾಯಿತು. ಈ ಎರಡು ದಿನಗಳ ಸಮ್ಮೇಳನಕ್ಕೆ ಅಮೇರಿಕನ್ ಸೊಸೈಟಿ ಆಫ್ ಕ್ಲಿನಿಕಲ್ ಆಂಕೋಲಾಜಿ (ASCO) ಅಧಿಕೃತ ಮನ್ನಣೆ ನೀಡಿದೆ ಮತ್ತು ಇದನ್ನು ಗ್ಲೋಬಲ್ ಹೆಲ್ತ್ ಕೇರ್ ಅಕಾಡೆಮಿ (GHA) ಆಯೋಜನೆ ಮಾಡಿದೆ. ಈ ಸಮ್ಮೇಳನದಲ್ಲಿ 500 ಕ್ಕೂ ಹೆಚ್ಚು ಆಂಕೋಲಾಜಿಸ್ಟ್ ಗಳು, ಸಂಶೋಧಕರು ಮತ್ತು ಆರೋಗ್ಯ ರಕ್ಷಣೆ ವೃತ್ತಿಪರರು ಕ್ಯಾನ್ಸರ್ ತಡೆಗಟ್ಟುವುದು, ಪತ್ತೆ ಮಾಡುವುದು ಮತ್ತು ಚಿಕಿತ್ಸಾ ಕ್ಷೇತ್ರದಲ್ಲಿ ಆಗಿರುವ ಇತ್ತೀಚಿನ ಆಧುನಿಕ ಸಂಶೋಧನೆಗಳು ಮತ್ತು ವಿದ್ಯಮಾನಗಳ ಬಗ್ಗೆ ವಿಸ್ತೃತ ಚರ್ಚೆ ನಡೆಸಲಿದ್ದಾರೆ.
ನಿರಂತರ ವೈದ್ಯಕೀಯ ಶಿಕ್ಷಣ (CME)ಕ್ಕೆ ಮೀಸಲಾಗಿರುವ ಭಾರತದ ಮೊದಲ ಮೆಡ್ ಎಡ್-ಟೆಕ್ ಪ್ಲಾಟ್ ಫಾರ್ಮ್ ಎನಿಸಿರುವ ಗ್ಲೋಬಲ್ ಹೆಲ್ತ್ ಕೇರ್ ಅಕಾಡೆಮಿ ವೈದ್ಯಕೀಯ ವೃತ್ತಿಪರರಿಗೆ ವಿಶೇಷ ಕಾರ್ಯಕ್ರಮಗಳು ಮತ್ತು ಕೌಶಲ್ಯ ನಿರ್ಮಾಣದ ಅವಕಾಶಗಳನ್ನು ಒದಗಿಸುತ್ತದೆ. ಬೆಸ್ಟ್ ಆಫ್ ಎಎಸ್ ಸಿಒದಂತಹ ಸಮ್ಮೇಳನಗಳನ್ನು ಆಯೋಜನೆ ಮಾಡುವ ಮೂಲಕ ಜಿಎಚ್ಎ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಗಿರುವ ಪ್ರಗತಿಯನ್ನು ಭಾರತೀಯ ಆರೋಗ್ಯ ರಕ್ಷಣಾ ಅಗತ್ಯತೆಗಳೊಂದಿಗೆ ಸಂಪರ್ಕಿಸುವ ಗುರಿಯನ್ನು ಹೊಂದಿದೆ. ಈ ಮೂಲಕ ಭಾರತೀಯ ವೈದ್ಯರು, ಸಂಶೋಧಕರು ಮತ್ತು ವಿದ್ಯಾರ್ಥಿಗಳು ರೋಗಿಗಳ ಆರೈಕೆಯನ್ನು ಸುಧಾರಣೆ ಮಾಡುವ ನಿಟ್ಟಿನಲ್ಲಿ ಇತ್ತೀಚಿನ ಜ್ಞಾನವನ್ನು ಪಡೆದುಕೊಳ್ಳಬಹುದಾಗಿದೆ ಎಂಬುದನ್ನು ಖಚಿತಪಡಿಸುತ್ತದೆ.

ಕಟ್ಟಿಂಗ್ ಎಡ್ಜ್ ಥೆರಪಿಗಳಾದ ಇಮ್ಯುನೋಥೆರಪಿ, ಉದ್ದೇಶಿತ ಚಿಕಿತ್ಸೆಗಳು ಮತ್ತು CAR-T ಸೆಲ್ (ಕೋಶ) ಚಿಕಿತ್ಸೆಯಂತಹ ಅತ್ಯಾಧುನಿಕ ಚಿಕಿತ್ಸೆಗಳ ಮೇಲೆ ಗಮನ ಕೇಂದ್ರೀಕೃತವಾಗಿದ್ದರೂ ಮೂಲ ಸಂದೇಶವು ಸ್ಪಷ್ಟವಾಗಿದೆ; ಅಂದರೆ, “ಕ್ಯಾನ್ಸರ್ ಕಾಯುವುದಿಲ್ಲ ಮತ್ತು ನೀವು ಸಹ ಕಾಯುವಂತಿಲ್ಲ’’. ಕ್ಯಾನ್ಸರ್ ರೋಗದ ಬಗ್ಗೆ ಅರಿವು, ತಡೆಗಟ್ಟುವ ವಿಧಾನ ಮತ್ತು ಜೀವನಶೈಲಿಗಳ ಆಯ್ಕೆಗಳು ಹಾಗೂ ಆರಂಭಿಕ ಪತ್ತೆಯು ಯಾವುದೇ ಚಿಕಿತ್ಸೆಯಷ್ಟೇ ಪರಿಣಾಮಕಾರಿ ಮತ್ತು ಶಕ್ತಿಶಾಲಿಯಾಗಿರುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟರು.

ಭಾರತದಲ್ಲಿ ಕ್ಯಾನ್ಸರ್ ಪತ್ತೆ ವಿಳಂಬವಾಗುತ್ತಿರುವ ಪ್ರಕ್ರಿಯೆ ಮುಂದುವರಿದಿದೆ. ಹೀಗಾಗಿ ಇದಕ್ಕೆ ಚಿಕಿತ್ಸೆಗಳು ಸಾಕಷ್ಟು ಸವಾಲಿನಿಂದ ಕೂಡಿರುತ್ತವೆ. ಮಾಲಿನ್ಯ, ಕೀಟನಾಶಕಗಳಿಗೆ ಒಡ್ಡಿಕೊಳ್ಳುವುದು, ತಂಬಾಕು ಬಳಕೆ ಮತ್ತು ಕೌಟುಂಬಿಕ ಇತಿಹಾಸದ ಬಗ್ಗೆ ಅರಿವಿನ ಕೊರತೆ ಸೇರಿದಂತೆ ಇನ್ನೂ ಅನೇಕ ಕಾರಣಗಳಿಂದ ಭಾರತೀಯ ಸಮಾಜಕ್ಕೆ ದಿನಂಪ್ರತಿ ಅಪಾಯಕಾರಿ ಅಂಶಗಳು ಎದುರಾಗುತ್ತಿವೆ ಎಂಬುದನ್ನು ಭಾಷಣಕಾರರು ಮತ್ತು ತಜ್ಞರು ಸೋದಾಹರಣವಾಗಿ ವಿವರಿಸಿದರು. ಇಂತಹ ಪರಿಸ್ಥಿತಿಯು ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗಲು ಕಾರಣವಾಗಿದೆ ಎಂದೂ ಅವರು ಎಚ್ಚರಿಕೆ ನೀಡಿದರು.

ಹೆಲ್ತ್ ಕೇರ್ ಗ್ಲೋಬಲ್ ಎಂಟರ್ ಪ್ರೈಸಸ್ (HCG) ಅಧ್ಯಕ್ಷ ಡಾ.ಬಿ.ಎಸ್.ಅಜಯ್ ಕುಮಾರ್ ಅವರು ಮಾತನಾಡಿ, “ಕ್ಯಾನ್ಸರ್ ಬಗೆಗಿನ ಅರಿವು, ತಪಾಸಣೆ, ತಡೆಗಟ್ಟುವಿಕೆ ಮತ್ತು ಸಕಾಲಿಕ ಚಿಕಿತ್ಸೆಯಂತಹ ವಿಧಾನಗಳತ್ತ ಭಾರತೀಯ ಕ್ಯಾನ್ಸರ್ ಆರೈಕೆಯು ಹೆಜ್ಜೆ ಇಡಬೇಕಾಗಿದೆ. ಆರಂಭಿಕ ಹಂತದಲ್ಲಿಯೇ ರೋಗವನ್ನು ಪತ್ತೆ ಮಾಡಿಕೊಂಡರೆ ಜೀವವನ್ನು ಉಳಿಸುವುದಲ್ಲದೇ, ಚಿಕಿತ್ಸೆಯನ್ನು ಹೆಚ್ಚು ಪರಿಣಾಮಕಾರಿಯನ್ನಾಗಿ ಮಾಡುತ್ತದೆ ಮತ್ತು ರೋಗಿಗಳಿಗೆ ಆ ಚಿಕಿತ್ಸೆ ಕೈಗೆಟುಕುವಂತಿರುತ್ತದೆ ಎಂಬುದನ್ನು ASCO 2025 ಬಕಪಡಿಸುತ್ತದೆ’’ ಎಂದು ತಿಳಿಸಿದರು.
ಈ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ವೈದ್ಯರು ಜೆನೆಟಿಕ್(ಆನುವಂಶಿಕ) ಕೌನ್ಸೆಲಿಂಗ್ ಮತ್ತು ಪರೀಕ್ಷೆಯ ಮಹತ್ವದ ಬಗ್ಗೆ ಪ್ರಾಮುಖ್ಯತೆ ಕೊಡುವ ಅಗತ್ಯತೆಯನ್ನು ಒತ್ತಿ ಹೇಳಿದರು. ಕ್ಯಾನ್ಸರ್ ನಿಂದ ಬಳಲುತ್ತಿರುವ ಬಹು ಸದಸ್ಯರನ್ನು ಹೊಂದಿರುವ ಕುಟುಂಬಗಳು, ಚಿಕ್ಕ ವಯಸ್ಸಿನಲ್ಲಿ ರೋಗ ನಿರ್ಣಯ ಮಾಡಿದ ಸಂಬಂಧಿಕರು ಅಥವಾ ಅಪರೂಪದ ಕ್ಯಾನ್ಸರ್ ಗಳ ಇತಿಹಾಸ ಹೊಂದಿರುವವರು ಜೆನೆಟಿಕ್ ಪರೀಕ್ಷೆಯ ಕುರಿತು ವೈದ್ಯಕೀಯ ಸಲಹೆಯನ್ನು ಪಡೆಯಬೇಕೆಂದು ಸಲಹೆ ಮಾಡಿದರು.

ಚೆನ್ನೈನ ಅಪೊಲೊ ಪ್ರೋಟೋನ್ ಕ್ಯಾನ್ಸರ್ ಸೆಂಟರ್ ನ ಮೆಡಿಕಲ್ ಡೈರೆಕ್ಟರ್ ಡಾ.ರಾಕೇಶ್ ಜಳಲಿ ಅವರು ಮಾತನಾಡಿ, “ಪ್ರೋಟೋನ್ ಚಿಕಿತ್ಸೆಯಿಂದ ಜೆನೆಟಿಕ್ ಪರೀಕ್ಷೆವರೆಗಿನ ಇಂದಿನ ವೈಜ್ಞಾನಿಕ ಪ್ರಗತಿಯೊಂದಿಗೆ ಕ್ಯಾನ್ಸರ್ ಆರೈಕೆಯನ್ನು ಪರಿವರ್ತಿಸುವ ಸಾಧನಗಳು ನಮ್ಮಲ್ಲಿವೆ. ಆದರೆ, ಈ ನಾವೀನ್ಯತೆಗಳು ಆರಂಭಿಕ ರೋಗನಿರ್ಣಯ ಮತ್ತು ರೋಗಿಗಳು ಹಾಗೂ ಕುಟುಂಬಗಳಲ್ಲಿ ಪೂರ್ವಭಾವಿ ಮನಸ್ಥಿತಿಯೊಂದಿಗೆ ಸಂಯೋಜನೆ ಆದಾಗ ಮಾತ್ರ ಅರ್ಥಪೂರ್ಣವಾಗಿರುತ್ತವೆ. ಈ ಹಿನ್ನೆಲೆಯಲ್ಲಿ ರೋಗದ ಬಗ್ಗೆ ಜಾಗೃತಿ ಮೊದಲ ಮತ್ತು ಅತ್ಯಂತ ಶಕ್ತಿಶಾಲಿ ಚಿಕಿತ್ಸೆಯಾಗಿದೆ’’ ಎಂದು ಅಭಿಪ್ರಾಯಪಟ್ಟರು.

ನಿಮ್ಮ ಆನುವಂಶಿಕದ ಹಿನ್ನೆಲೆ ಮತ್ತು ಅಪಾಯವನ್ನು ತಿಳಿದುಕೊಳ್ಳುವುದು ನಿಮಗೆ ಭಯ ಹುಟ್ಟಿಸುವುದಕ್ಕಲ್ಲ; ಇದು ನಿಮಗೆ ಶಕ್ತಿಯನ್ನು ತುಂಬಲು ಮಾಡುವ ಪ್ರಕ್ರಿಯೆಯಾಗಿದೆ ಎಂದು ತಜ್ಞರು ಧೈರ್ಯ ಹೇಳಿದರು. ಜೆನೆಟಿಕ್ ಕೌನ್ಸಿಲಿಂಗ್ ವಿಧಾನವು ಕುಟುಂಬಗಳು ಅಪಾಯಗಳನ್ನು ಮೊದಲೇ ಪತ್ತೆ ಹಚ್ಚಲು ಮತ್ತು ಕೊನೆಯ ಹಂತದ ಕ್ಯಾನ್ಸರ್ ಪ್ರಕರಣಗಳನ್ನು ತಡೆಯಲು ಸಹಾಯ ಮಾಡುತ್ತವೆ ಎಂಬುದನ್ನು ಎಲ್ಲರೂ ಅರಿತಿರಬೇಕು ಎಂದು ತಿಳಿಸಿದರು.

ಭಾರತದಲ್ಲಿ, ಮೊದಲೇ ಪತ್ತೆಹಚ್ಚಬಹುದಾದ ಮುಂದುವರಿದ ಕ್ಯಾನ್ಸರ್ ಗಳೊಂದಿಗೆ ಹಲವಾರು ರೋಗಿಗಳು ಚಿಕಿತ್ಸೆಗೆಂದು ಬರುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಕುಟುಂಬದ ಇತಿಹಾಸ, ಜೆನೆಟಿಕ್ ಕೌನ್ಸೆಲಿಂಗ್ ಮತ್ತು ತಡೆಗಟ್ಟುವ ಜೀವನಶೈಲಿಯ ಜ್ಞಾನವು ಶಸ್ತ್ರಚಿಕಿತ್ಸೆ ಅಥವಾ ಕಿಮೊಥೆರಪಿಯಷ್ಟೇ ಮುಖ್ಯವಾಗಿದೆ. ಬೆಸ್ಟ್ ಆಫ್ ಎಎಸ್ ಸಿಒ 2025 ಕ್ಯಾನ್ಸರ್ ವಿರುದ್ಧ ಹೋರಾಡುವುದು ಆಪರೇಷನ್ ಥಿಯೇಟರ್ ಗೆ ಬಹಳ ಹಿಂದೆಯೇ ಪ್ರಾರಂಭವಾಗುತ್ತದೆ ಎಂಬುದನ್ನು ನೆನಪಿಸುತ್ತದೆ’’

ಸಮತೋಲಿತ ಆಹಾರ ಸೇವನೆ, ನಿಯಮಿತವಾಗಿ ವ್ಯಾಯಾಮ ಮಾಡುವುದು, ಸಂಸ್ಕರಿಸಿದ ಆಹಾರಗಳ ಸೇವನೆಯನ್ನು ಕಡಿಮೆ ಮಾಡುವುದು ಮತ್ತು ದೀರ್ಘಕಾಲದ ರಾಸಾಯನಿಕಗಳಿಗೆ ಒಡ್ಡಿಕೊಳ್ಳುವುದರಿಂದ ದೂರವಿರುವುದು ಸೇರಿದಂತೆ ಇನ್ನಿತರೆ ಸರಳ ದೈನಂದಿನ ಪ್ರಕ್ರಿಯೆಗಳನ್ನು ಅನುಸರಿಸುವುದರಿಂದ ದೀರ್ಘಕಾಲೀನ ಕ್ಯಾನ್ಸರ್ ಅಪಾಯದ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡಬಹುದಾಗಿದೆ ಎಂಬುದನ್ನು ತಿಳಿಹೇಳಿದೆ.

ಕ್ಯಾನ್ಸರ್ ಕೇವಲ ವೈದ್ಯಕೀಯ ರೋಗವಲ್ಲ, ಇದು ಒಂದು ಸಾಮಾಜಿಕ ಸವಾಲಾಗಿದೆ. ಗ್ರಾಮೀಣ ಸಮುದಾಯಗಳಿಂದ ಹಿಡಿದು ನಗರ ಕುಟುಂಬಗಳವರೆಗೆ ಇದರ ಸಂದೇಶ ಒಂದೇ ಆಗಿದೆ: ಹೀಗಾಗಿ, ರೋಗ ಪತ್ತೆ ಹಚ್ಚುವ ವಿಚಾರದಲ್ಲಿ ಆರಂಭದಲ್ಲಿಯೇ ಸಕ್ರಿಯರಾಗಿ, ತಪಾಸಣೆ ಮಾಡಿಸಿ ಮತ್ತು ಗುಣಲಕ್ಷಣಗಳನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬೇಡಿ. ಬೆಸ್ಟ್ ಆಫ್ ಎಎಸ್ ಸಿಒ 2025 ಮಾಡಿದ ರೀತಿಯಲ್ಲಿ ಸರಿಯಾದ ಮಾಹಿತಿಯೊಂದಿಗೆ ಜನರನ್ನು ಸಬಲೀಕರಣಗೊಳಿಸುವುದು ಜೀವಗಳನ್ನು ಉಳಿಸುವ ಅಡಿಪಾಯವಾಗಿದೆ

ಕ್ಯಾನ್ಸರ್ ಜೀನ್ ಗಳು, ಪರಿಸರ ಮತ್ತು ಜೀವನಶೈಲಿಯಿಂದ ಪ್ರಭಾವಿತವಾಗಿರುತ್ತದೆ ಎಂಬುದನ್ನು ಆಂಕೋಲಾಜಿಸ್ಟ್ ಗಳು ಪುನರುಚ್ಚರಿಸಿದ್ದಾರೆ. ಆದರೆ, ರೋಗದ ಬಗೆಗಿನ ಅರಿವು, ತಪಾಸಣೆ ಮತ್ತು ಪ್ರಜ್ಞಾಪೂರ್ವಕವಾದ ಆಯ್ಕೆಗಳು ರೋಗ ತಡೆಗಟ್ಟುವಲ್ಲಿನ ಫಲಿತಾಂಶಗಳನ್ನು ಬದಲಾಯಿಸಬಹುದು. “ತಡೆಗಟ್ಟುವಿಕೆ ಚಿಕಿತ್ಸೆಯಷ್ಟೇ ಶಕ್ತಿಶಾಲಿಯಾಗಿದೆ’’ ಎಂಬುದನ್ನು ಸಮ್ಮೇಳನದಲ್ಲಿ ಒತ್ತೆ ಹೇಳಲಾಯಿತು.

ವೈದ್ಯಕೀಯ ಶಿಕ್ಷಣಕ್ಕೆ GHAದ ಬದ್ಧತೆ
ಗ್ಲೋಬಲ್ ಹೆಲ್ತ್ ಕೇರ್ ಅಕಾಡೆಮಿಯ ವ್ಯವಸ್ಥಾಪಕ ನಿರ್ದೇಶಕಿ ಅನಿತಾ ನಿರಂಜನ್ ಅವರು, ಈ ಜಾಗತಿಕ ಸಮ್ಮೇಳನದ ಮೂಲಕ GHA ಯ ಬಲವಾದ ಬ್ರ್ಯಾಂಡಿಂಗ್ ಮತ್ತು ಸ್ಥಾನೀಕರಣದ ಬಗ್ಗೆ ಬೆಳಕು ಚೆಲ್ಲಿದರು.
“ಜ್ಞಾನ ಮತ್ತು ಪ್ರಸ್ತುತ ವೈದ್ಯಕೀಯ ಪ್ರವೃತ್ತಿಗಳ ನಡುವಿನ ಅಂತರವನ್ನು ಕಡಿಮೆ ಮಾಡುವ ಧ್ಯೇಯದೊಂದಿಗೆ GHA ಬೆಸ್ಟ್ ಆಫ್ ಎಎಸ್ ಸಿಒ 2025 ಅನ್ನು ಆಯೋಜಿಸಲು ಹೆಮ್ಮೆಪಡುತ್ತದೆ. ಕ್ಯಾನ್ಸರ್ ಆರೈಕೆಯ ಭವಿಷ್ಯವನ್ನು ರೂಪಿಸುವ ಹೊಸ ಚಿಕಿತ್ಸೆಗಳು ಮತ್ತು ಅನುಸರಣೆಗಳಿಗೆ ಹೊಂದಿಕೊಳ್ಳುವ ಸಂದರ್ಭದಲ್ಲಿ ಆರೋಗ್ಯ ವೃತ್ತಿಪರರಿಗೆ ನಿರಂತರ ವೈದ್ಯಕೀಯ ಶಿಕ್ಷಣವನ್ನು ಖಚಿತಪಡಿಸುವುದು ನಮ್ಮ ಪ್ರಮುಖ ಆದ್ಯತೆಯಾಗಿದೆ’’ ಎಂದರು.
ಗ್ಲೋಬಲ್ ಹೆಲ್ತ್ ಕೇರ್ ಅಕಾಡೆಮಿಯಲ್ಲಿ ಜ್ಞಾನ ಹಂಚಿಕೆ ಕೇವಲ ಮೊದಲ ಹೆಜ್ಜೆಯಾಗಿದೆ. ವೇಗವಾಗಿ ವಿಕಸನಗೊಳ್ಳುತ್ತಿರುವ ಆಂಕೋಲಾಜಿ ಕ್ಷೇತ್ರದೊಂದಿಗೆ ವೇಗವನ್ನು ಕಾಯ್ದುಕೊಳ್ಳಲು, ಜಿಎಚ್ಎ ಜೆನೆಟಿಕ್ ಪರೀಕ್ಷೆ, ಇಮ್ಯುನೋಥೆರಪಿ ಮತ್ತು ನಿಖರವಾದ ಆಂಕೋಲಾಜಿಯಂತಹ ಕ್ಷೇತ್ರಗಳಲ್ಲಿ ಸುಧಾರಿತ CME ಕೋರ್ಸ್ ಗಳನ್ನು ಪರಿಚಯಿಸಲು ಬದ್ಧವಾಗಿದ್ದು, ಇದು ವೈದ್ಯಕೀಯ ವೃತ್ತಿಪರರು ತಮ್ಮ ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳಲು ಮತ್ತು ಉತ್ತಮ ಆರೈಕೆಯನ್ನು ನೀಡಲು ಅನುವು ಮಾಡಿಕೊಡುತ್ತದೆ.
ಬೆಸ್ಟ್ ಆಫ್ ಎಎಸ್ ಸಿಒ 2025 ಬೆಂಗಳೂರುನ ಪ್ರಮುಖಾಂಶಗಳು
ಗ್ಲೋಬಲ್ ಹೆಲ್ತ್ ಕೇರ್ ಅಕಾಡೆಮಿ (GHA) ಜ್ಞಾನ ಹಂಚಿಕೆ ಕೇವಲ ಮೊದಲ ಹೆಜ್ಜೆ ಎಂದು ನಾವು ಗುರುತಿಸುತ್ತೇವೆ. ವೇಗವಾಗಿ ವೇಗವಾಗಿ ವಿಕಸನಗೊಳ್ಳುತ್ತಿರುವ ಆಂಕೋಲಾಜಿ ಕ್ಷೇತ್ರಕ್ಕೆ ಅನುಗುಣವಾಗಿ ಜೆನೆಟಿಕ್ ಪರೀಕ್ಷೆ, ಕ್ಯಾನ್ಸರ್ ಇಮ್ಯುನೊಥೆರಪಿ ಮತ್ತು ನಿಖರವಾದ ಆಂಕೋಲಾಜಿಯಂತಹ ಕ್ಷೇತ್ರಗಳಲ್ಲಿ ವೈದ್ಯಕೀಯ ವೃತ್ತಿಪರರಿಗೆ ಕೌಶಲ್ಯವನ್ನು ಹೆಚ್ಚಿಸಲು ಸಹಾಯ ಮಾಡುವ ಸುಧಾರಿತ CME ಕೋರ್ಸ್ ಗಳನ್ನು ವಿಕಸಿಸಲು ಮತ್ತು ಪರಿಚಯಿಸಲು ನಾವು ಕೆಲಸ ಮಾಡುತ್ತಿದ್ದೇವೆ. ನಿರಂತರ ಕಲಿಕೆ ಮತ್ತು ವೃತ್ತಿಪರ ಬೆಳವಣಿಗೆಯ ಈ ಪ್ರಯಾಣದಲ್ಲಿ ನಮ್ಮೊಂದಿಗೆ ಸೇರಲು ನಾವು ಆರೋಗ್ಯ ವೃತ್ತಿಪರರನ್ನು ಆಹ್ವಾನಿಸುತ್ತೇವೆ.
ಬದುಕುಳಿಯುವಿಕೆಯ ಪ್ರಮಾಣವನ್ನು ಸುಧಾರಿಸುವ ಜೆನೆಟಿಕ್ ಪರೀಕ್ಷೆ ಮತ್ತು ಕ್ಯಾನ್ಸರ್ ತಪಾಸಣೆಯಲ್ಲಿನ ಪ್ರಗತಿಗಳು
ಮುಂದುವರಿದ ಕ್ಯಾನ್ಸರ್ ಗಳಲ್ಲಿ ಭರವಸೆ ನೀಡುವ ಇಮ್ಯುನೊಥೆರಪಿ ಮತ್ತು CAR-T ಚಿಕಿತ್ಸೆಗಳು ಸೇರಿದಂತೆ ಪ್ರಗತಿಶೀಲ ಚಿಕಿತ್ಸೆಗಳು.

ಗ್ರಾಮೀಣ ಪ್ರದೇಶಗಳಲ್ಲಿ ತಡವಾಗಿ ಪತ್ತೆ ಮತ್ತು ಸೀಮಿತ ಪ್ರವೇಶದಂತಹ ಭಾರತ- ನಿರ್ದಿಷ್ಟ ಸವಾಲುಗಳನ್ನು ಪರಿಹರಿಸುವುದು.
ಚಿಕಿತ್ಸೆಯಿಂದ ತಡೆಗಟ್ಟುವಿಕೆ ಮತ್ತು ಸಾರ್ವಜನಿಕ ಜಾಗೃತಿಗೆ ಗಮನದಲ್ಲಿ ಬದಲಾವಣೆ.