IMG 20250416 WA0002

Karnataka : ಅತಿಥಿ ಶಿಕ್ಷಕರಿಗೆ ಇಲ್ಲ ಮೌಲ್ಯಮಾಪನದ ಭಾಗ್ಯ…..!

DISTRICT NEWS ತುಮಕೂರು

 ಮಧುಗಿರಿ: ಅತಿಥಿ ಶಿಕ್ಷಕರಿಗೆ ಇಲ್ಲ ಮೌಲ್ಯಮಾಪನದ ಭಾಗ್ಯ.

ಮಧುಗಿರಿ : ರಾಜ್ಯದಾದ್ಯಂತ ಏಪ್ರಿಲ್ 15ರಂದು ಎಸ್ ಎಸ್ ಎಲ್ ಸಿ ಯ ಮೌಲ್ಯಮಾಪನ ಕಾರ್ಯ ಪ್ರಾರಂಭವಾಗಿದೆ.

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ವತಿಯಿಂದ ಏಪ್ರಿಲ್ 15ರಂದು ಮೌಲ್ಯಮಾಪನ ಕಾರ್ಯಕ್ಕೆ ಹಾಜರಾಗುವಂತೆ ಆದೇಶ ಬಂದಿತ್ತು..

ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕರಾದ ಗಿರಿಜಾ ರವರು ಮಂಗಳವಾರ ಅತಿಥಿ ಶಿಕ್ಷಕರನ್ನು ಎಲ್ಲಾ ಮೌಲ್ಯಮಾಪನ ಕೇಂದ್ರಗಳಲ್ಲಿ ಮೌಲ್ಯಮಾಪನ ಕಾರ್ಯದಿಂದ ಬಿಡುಗಡೆ ಮಾಡಿರು ಘಟನೆ ನಡೆದಿದೆ.  

ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕರಾದ ಗಿರಿಜಾ ಅವರು ಸಪ್ತಸ್ವರ ಮಾದ್ಯಮ ಕ್ಕೆ  ದೂರವಾಣಿಯಲ್ಲಿ  ಪ್ರತಿಕ್ರಿಯೆ ನೀಡಿದರು.

ಅತಿಥಿ ಶಿಕ್ಷಕರ ಸೇವಾ ಅವಧಿ ಮಾರ್ಚ್ ತಿಂಗಳಿನಲ್ಲಿ ಕೊನೆಗೊಂಡಿದೆ. ಅವರನ್ನು ಶಿಕ್ಷಕ ವೃತ್ತಿಯಿಂದ ಬಿಡುಗಡೆ ಗಿಳಿಸಲಾಗಿದೆ,  ಪ್ರಸ್ತುತ ಅವರು ಶಿಕ್ಷಕರ ಹುದ್ದೆಯಲ್ಲಿ ಇರುವುದಿಲ್ಲ ಆದ್ದರಿಂದ   ಎಸ್. ಎಸ್ ಎಲ್ ಸಿ ಪರೀಕ್ಷಾ ಮಂಡಳಿಯ ಮಾರ್ಗಸೂಚಿಯಂತೆ ಅವರು ಮೌಲ್ಯಮಾಪನ ಕಾರ್ಯಕ್ಕೆ ಬಳಸಿಕೊಳ್ಳಲು ಸಾಧ್ಯವಿಲ್ಲವಿಲ್ಲದ್ದರಿಂದ  ಅಥಿತಿ ಶಿಕ್ಷಕರನ್ನು ಮೌಲ್ಯ ಮಾಪನ ಕಾರ್ಯದಿಂದ ಬಿಡುಗಡೆ ಗೊಳಿಸಲಾಗಿದೆ ಎಂದು ತಿಳಿಸಿದರು.

ಈ ಬಗ್ಗೆ ಅತಿಥಿ ಶಿಕ್ಷಕ ಗಂಗಾಧರ್ ಮಾತನಾಡಿ,
ಸರ್ಕಾರಿ ಮತ್ತು ಮುರಾರ್ಜಿ ಶಾಲೆಗಳಲ್ಲಿ ವರ್ಷಪೂರ್ತಿ ಕೆಲಸ ಮಾಡಲು ಅತಿಥಿ ಶಿಕ್ಷಕರನ್ನು ಬಳಸಿಕೊಂಡು, ಮೌಲ್ಯಮಾಪನ ಕಾರ್ಯಕ್ಕೆ ಮಾತ್ರ ತಮಗೆ ಅವಕಾಶ ನೀಡದಿರುವುದು ಎಷ್ಟರ ಮಟ್ಟಿಗೆ ಸರಿ ಎನ್ನುತ್ತಾರೆ. ಇತರೆ ಶಿಕ್ಷಕರಂತೆ ಅತಿಥಿ ಶಿಕ್ಷಕರು ಸಹ ಅವಶ್ಯವಿದ್ಯಾರ್ಹತೆಯನ್ನು ಹೊಂದಿದ್ದರು ಶಿಕ್ಷಕರಲ್ಲಿ ಈ ರೀತಿಯ ತಾರತಮ್ಯ ಸಲ್ಲದು ಎಂಬ ಅಳಲನ್ನು ತೋಡಿಕೊಂಡರು.

ಇತರೆ ಜಿಲ್ಲೆಗಳಲ್ಲಿ ಮೌಲ್ಯಮಾಪನ ಕಾರ್ಯಕ್ಕೆ ಅತಿಥಿ ಶಿಕ್ಷಕರನ್ನು ಬಳಸಿಕೊಂಡು ಮೌಲ್ಯಮಾಪನ ಕಾರ್ಯ ನಿರ್ವಹಿಸುತ್ತಿದ್ದಾರೆ, ಇತರೆ ಜಿಲ್ಲೆಗಳಿಗೆ ಇಲ್ಲದ ಕಾನೂನು  ಮಧುಗಿರಿ ಶೈಕ್ಷಣಿಕ ಜಿಲ್ಲೆಗೆ ಏಕೆ ಎಂದು ಪ್ರಶ್ನಿಸಿದರು.

ಸಂಬಂಧಪಟ್ಟ ಅಧಿಕಾರಿಗಳು ಅತಿಥಿ ಶಿಕ್ಷಕರ ಸಮಸ್ಯೆಯನ್ನು ಅರಿತು, ಅತಿಥಿ ಶಿಕ್ಷಕರಿಗೂ ಮೌಲ್ಯಮಾಪನದ ಕಾರ್ಯದಲ್ಲಿ ಭಾಗವಹಿಸುವಂತೆ ಕ್ರಮ ವಹಿಸಬೇಕು ಎನ್ನುತ್ತಾರೆ.

 

Leave a Reply

Your email address will not be published. Required fields are marked *