ರೋಗಗಳಿಂದ ಮುಕ್ತರಾಗಲು ವಾರ್ಷಿಕ ಆರೋಗ್ಯ ತಪಾಸಣೆ ನಿರ್ಣಯ ಮಾಡಿ: ನ್ಯೂರಾ ವೈದ್ಯರ ಸಲಹೆ
ಬೆಂಗಳೂರು, ಡಿಸೆಂಬರ್ 24, 2021: ಪ್ರತಿ ವರ್ಷ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದರಿಂದ ಒಬ್ಬರ ಜೀವನಕ್ಕೆ ಹೆಚ್ಚುವರಿ ವರ್ಷಗಳನ್ನು ಸೇರಿಸುವ ಕಡಿಮೆ-ವೆಚ್ಚದ ಮಾರ್ಗವಾಗಿದೆ. ಏಕೆಂದರೆ, ಇದು ಆರಂಭಿಕ ಹಂತಗಳಲ್ಲಿ ಅನೇಕ ಮಾರಣಾಂತಿಕ ಕಾಯಿಲೆಗಳನ್ನು ಪತ್ತೆ ಮಾಡಲು ನೆರವಾಗುತ್ತದೆ ಮತ್ತು ಧನಾತ್ಮಕವಾದ ಫಲಿತಾಂಶದ ಸಾಧ್ಯತೆಗಳ ಅವಕಾಶಗಳೊಂದಿಗೆ ವ್ಯಕ್ತಿಗೆ ತ್ವರಿತ ಚಿಕಿತ್ಸೆಯನ್ನು ಪಡೆಯುವಲ್ಲಿ ಮಾರ್ಗವನ್ನು ಹುಡುಕಿಕೊಡುತ್ತದೆ. ರೋಗವು ಮಧ್ಯಮ ಅಥವಾ ಕೊನೆಯ ಹಂತಗಳಿಗೆ ಮುಂದುವರಿದಾಗ ಆರಂಭಿಕ ರೋಗನಿರ್ಣಯವು ಆರೋಗ್ಯದ ವೆಚ್ಚದಲ್ಲಿ ಹೆಚ್ಚಿನ ಹಣವನ್ನು ಉಳಿಸುತ್ತದೆ. ಪ್ರತಿ ವರ್ಷವೂ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ತಪಾಸಣೆಗೆ ಒಳಗಾಗಲು ಸ್ವಯಂ ಭರವಸೆ ನೀಡುವುದು ಈ ಹೊಸ ವರ್ಷದ ಅತ್ಯುತ್ತಮ ನಿರ್ಣಯವಾಗಬೇಕಾಗಿದೆ. ಇದಕ್ಕೆ ನೆರವಾಗಲು ಮತ್ತು ಮಾರ್ಗದರ್ಶಿಯಾಗಿ ಫ್ಯುಜಿಫಿಲ್ಮ್ ಹೆಲ್ತ್‍ಕೇರ್ ಮತ್ತು ಡಾ.ಕುಟ್ಟೀಸ್ ಹೆಲ್ತ್‍ಕೇರ್ ಸಹಯೋಗದ ಬೆಂಗಳೂರು ಮೂಲದ ನ್ಯೂರಾ(ಓUಖಂ) ಡಯೋಗ್ನಾಸ್ಟಿಕ್ ಸೆಂಟರ್‍ನ ತಜ್ಞ ವೈದ್ಯರು ಈ ಸಲಹೆಯನ್ನು ನೀಡಿದ್ದಾರೆ.
ನ್ಯೂರಾದ ವೈದ್ಯಕೀಯ ನಿರ್ದೇಶಕರಾದ ಡಾ.ತೌಸಿಫ್ ಅಹ್ಮದ್ ತಂಗಲ್ವಾಡಿ ಅವರು
ಈ ಬಗ್ಗೆ ಮಾತನಾಡಿ,ಕಾರ್ಡಿಯೋವಾಸ್ಕುಲರ್ ರೋಗಗಳು, ಶ್ವಾಸಕೋಶ ರೋಗಗಳು, ಪಾಶ್ರ್ವವಾಯು ಮತ್ತು ಕ್ಯಾನ್ಸರ್ ಭಾರತದಲ್ಲಿ ಸಾವಿಗೆ ಕಾರಣವಾಗಿರುವ ನಾಲ್ಕು ಪ್ರಮುಖ ರೋಗಗಳಾಗಿವೆ. ಸಾವಿನ ಹೊರೆಯ ವಿಷಯದಲ್ಲಿ ದೇಶದಲ್ಲಿ ಸಾಂಕ್ರಾಮಿಕ ರೋಗಗಳಿಂದ ಜೀವನಶೈಲಿಯ ಕಾಯಿಲೆಗಳಿಗೆ ಗಮನಾರ್ಹವಾದ ಬದಲಾವಣೆಯನ್ನು ಕಾಣುತ್ತಿದೆ. ಕ್ಯಾನ್ಸರ್ ಅಥವಾ ಹೃದಯರಕ್ತನಾಳದ ಕಾಯಿಲೆಗಳಂತಹ ನಂತರದ ಸ್ಥಾನದಲ್ಲಿವೆ. ಆದರೆ, ಇವುಗಳನ್ನು ಯಾವುದೇ ಚಿಕಿತ್ಸೆಯಿಂದ ಬದಲಾಯಿಸಲು ಸಾಧ್ಯವಿಲ್ಲ. ಇದನ್ನು ನಿಯಂತ್ರಿಸಲು ಪ್ರಮುಖ ಪರಿಹಾರವೆಂದರೆ ತ್ವರಿತ ಮತ್ತು ಆರಂಭಿಕ ಚಿಕಿತ್ಸೆಯನ್ನು ಪಡೆಯುವುದಾಗಿದೆ. ಈ ಕಾರಣದಿಂದಾಗಿಯೇ ಆರಂಭಿಕ ಪತ್ತೆ ಹಚ್ಚುವಿಕೆಯು ನಿರ್ಣಾಯಕವಾಗಿರುತ್ತದೆ.
ಈ ನಾಲ್ಕು ವಿಧದ ಕಾಯಿಲೆಗಳನ್ನು ವಾರ್ಷಿಕ ತಡೆಗಟ್ಟುವ ಆರೋಗ್ಯ ತಪಾಸಣೆಯನ್ನು ಮಾಡಿಸಬೇಕು. ಸಮಾಜದಲ್ಲಿ ಆರೋಗ್ಯ ರಕ್ಷಣೆಯ ಹೊರೆಯನ್ನು ಕಡಿಮೆ ಮಾಡಲು ಸರ್ಕಾರಿ ಮತ್ತು ಖಾಸಗಿ ವಲಯವು ತಮ್ಮ ಎಲ್ಲಾ ಉದ್ಯೋಗಿಗಳಿಗೆ ವಾರ್ಷಿಕ ಆರೋಗ್ಯ ತಪಾಸಣಾ ಶಿಬಿರಗಳನ್ನು ನಡೆಸುವುದು ಅಗತ್ಯವಾಗಿದೆ’’ ಎಂದು ಹೇಳಿದರು.
“ಭಾರತದಲ್ಲಿ ಬಹುತೇಕ ಕ್ಯಾನ್ಸರ್ ಪ್ರಕರಣಗಳು ತಡವಾಗಿ ಪತ್ತೆಯಾಗುತ್ತವೆ. ಇದು ರೋಗಿಯ ಸಾವಿಗೆ ಕಾರಣವಾಗುತ್ತದೆ. ಆರಂಭಿಕ ಹಂತದಲ್ಲಿಯೇ ತಪಾಸಣೆ ಮಾಡಿಕೊಂಡು ಸೂಕ್ತ ಚಿಕಿತ್ಸೆ ಪಡೆದರೆ ಕ್ಯಾನ್ಸರ್ ರೋಗದಿಂದ ಆಮೂಲಾಗ್ರವಾದ ಸುಧಾರಣೆ ಕಂಡುಬರುತ್ತದೆ. ಇದರ ಜೊತೆಗೆ ದೈಹಿಕ, ಭಾವನಾತ್ಮಕ ಮತ್ತು ಆರ್ಥಿಕ ಹೊರೆಯನ್ನು ತಪ್ಪಿಸಬಹುದಾಗಿದೆ. ಆದರೆ, ಭಾರತದಲ್ಲಿ ಕ್ಯಾನ್ಸರ್ ಆರಂಭಿಕ ಹಂತದಲ್ಲಿ ತಪಾಸಣೆ ಮಾಡಿಸಿಕೊಳ್ಳುವುದು ಅತ್ಯಂತ ವಿರಳವಾಗಿದೆ. ಇದೇ ಪ್ರವೃತ್ತಿ ಬದಲಾದರೆ ಕ್ಯಾನ್ಸರ್‍ನಿಂದ ಸಂಭವಿಸುವ ಸಾವಿನ ಪ್ರಮಾಣ ಕಡಿಮೆಯಾಗುತ್ತದೆ. ಸಾಮಾನ್ಯವಾಗಿ ಪುರುಷರಲ್ಲಿ ಬಾಯಿ, ಶ್ವಾಸಕೋಶ, ಕೊಲೊನ್ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್‍ಗಳು ಕಂಡುಬಂದರೆ, ಮಹಿಳೆಯರಲ್ಲಿ ಸ್ತನ, ಗರ್ಭಕಂಠ, ಬಾಯಿ, ಶ್ವಾಸಕೋಶ ಮತ್ತು ಕೊಲೊನ್ ಕ್ಯಾನ್ಸರ್‍ಗಳು ಕಾಣಿಸಿಕೊಳ್ಳುತ್ತವೆ’’ ಎಂದು ಅವರು ಹೇಳಿದರು.
“ಪರಿಧಮನಿಯ ಅಪಧಮನಿಗಳ ಗೋಡೆಗಳ ಉದ್ದಕ್ಕೂ ಕೊಲೆಸ್ಟ್ರಾಲ್ ಮತ್ತು ಪ್ಲೇಕ್ ಅನ್ನು ನಿಧಾನವಾಗಿ ನಿರ್ಮಾಣ ಮಾಡುವುದರಿಂದ ಹೃದಯ ರಕ್ತನಾಳದ ಕಾಯಿಲೆಗಳು ಸಂಭವಿಸಸುತ್ತವೆ. ಇದು ರಕ್ತನಾಳಗಳ ಕಿರಿದಾಗುವಿಕೆಗೆ ಕಾರಣವಾಗುತ್ತದೆ ಮತ್ತು ಹೃದಯ ಸ್ನಾಯುಗಳಿಗೆ ರಕ್ತ ಪೂರೈಕೆಯನ್ನು ಕಡಿಮೆ ಮಾಡುತ್ತದೆ ಮತ್ತು ಹೃದಯಾಘಾತದ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ. ಹೃದಯದಲ್ಲಿನ ಕ್ಯಾಲ್ಸಿಯಂ ಸ್ಕ್ಯಾನ್‍ನಂತಹ ಪ್ರಿವೆಂಟಿವ್ ಸ್ಕ್ರೀನಿಂಗ್ ಪರೀಕ್ಷೆಗಳು ಬಿಲ್ಡ್-ಅಪ್ ಪ್ರಾರಂಭವಾದಾಗ ಈ ಪ್ಲೇಕ್‍ಗಳನ್ನು ಮೊದಲೇ ಕಂಡುಹಿಡಿಯಬಹುದು. ಮುನ್ನೆಚ್ಚರಿಕೆಯಾಗಿ, ರೋಗಿಯ ಜೀವನಶೈಲಿಯ ಮಾರ್ಪಾಡುಗಳ ಮೂಲಕ ಸ್ಥಿತಿಯನ್ನು ಹಿಮ್ಮೆಟ್ಟಿಸಲು ಕ್ರಮಗಳನ್ನು ತೆಗೆದುಕೊಳ್ಳಬಹುದಾಗಿದೆ’’ ಎಂದು ಅವರು ವಿವರಿಸಿದರು.
“ಕಡಿಮೆ ಡೋಸ್ ಸಿಟಿ ಸ್ಕ್ಯಾನ್ ಕೇವಲ 10-20 % ರಷ್ಟು ಕಡಿಮೆ ಮಟ್ಟದಲ್ಲಿ ಹೃದಯದ ಅಪಧಮನಿಗಳಲ್ಲಿ ಕ್ಯಾಲ್ಸಿಯಂ ನಿಕ್ಷೇಪಗಳ ಉಪಸ್ಥಿತಿಯನ್ನು ಆಕ್ರಮಣಶೀಲವಲ್ಲದ ರೀತಿಯಲ್ಲಿ ಪತ್ತೆ ಮಾಡುತ್ತದೆ’’ ಎಂದು ತಿಳಿಸಿದರು.