ಸಸಿಗಳಿಗೆ ನೀರು ಹಾಕುವ ಮೂಲಕ
ಲೋಕ್ ಅದಾಲಕ್ಕೆ ಚಾಲನೆ ನೀಡಿದ ನ್ಯಾಯಾಧೀಶರು.
ಪಾವಗಡ : ಪಟ್ಟಣದ ನ್ಯಾಯಾಲಯದ ಆವರಣ ಲೋಕ್ ಅದಾಲತ್ ಅಂಗವಾಗಿ ಶನಿವಾರ ಬೆಳಗಿನಿಂದಲೇ ಜನರಿಂದ ತುಂಬಿತ್ತು.
ಸಸಿಗಳಿಗೆ ನೀರನ್ನು ಹಾಕುವ ಮೂಲಕ ನ್ಯಾಯಾದೀಶರು ಲೋಕ್ ಅದಾಲತ್ ಗೆ ಚಾಲನೆ ನೀಡಿದರು.ಲೋಕ್ ಅದಾಲತ್ ನಲ್ಲಿ 665 ಪ್ರಕರಣಗಳು ಇತ್ಯರ್ಥವಾದವು. 74.29 ಲಕ್ಷ ರೂ ಮೊತ್ತ ಇತ್ಯರ್ಥವಾಯಿತು.
ಹಿರಿಯ ಸಿವಿಲ್ ನ್ಯಾಯಾದೀಶ ವಿ ಮಾದೇಶ ಅವರು 30 ಪ್ರಕರಣಗಳನ್ನು ಇತ್ಯರ್ಥಪಡಿಸಿದರು.ಅಧಿಕ ಸಿವಿಲ್ ನ್ಯಾಯಾದೀಶರಾದ ಬಿ. ಪ್ರಿಯಾಂಕ, 635 ಪ್ರಕರಣಗಳನ್ನು ಬಗೆಹರಿಸಿದರು 35.29 ಲಕ್ಷ ಮೌಲ್ಯದ ದಾವೆಗಳನ್ನು ಇತ್ಯರ್ಥಪಡಿಸಿದರು.
38.99 ಲಕ್ಷ ಮೊತ್ತದ ಸಾಲ, ಕರಾರು ಸೇರಿದಂತೆ ವಿವಿಧ ಪ್ರಕರಣಗಳು ಇತ್ಯರ್ಥವಾದವು.ಲೋಕ ಅದಾಲತ್ ನಲ್ಲಿ ಸುಮಾರು 9 ವರ್ಷಗಳ ಕಾಲ ಗಂಡ ಹೆಂಡತಿ ದೂರವಾಗಿ ಪರಿಹಾರಕ್ಕಾಗಿ ದಾವೆ ಹೂಡಿದ್ದರು.
ದಂಪತಿಗೆ ಬುದ್ದಿವಾದ ಹೇಳಿ. ಅದಾಲತ್ ನಲ್ಲಿ ಮತ್ತೆ ಒಂದಾಗುವಂತೆ ಮಾಡಿದರು ಅರ್ಜಿದಾರ, ಪ್ರತಿವಾದಿಗಳ ಪರ ವಕೀಲರಾದ ವಿ ಮಲ್ಲಿಕಾರ್ಜುನ್ ಭಗವಂತಪ್ಪ, ಎಲ್ ಮಾರುತಿ ಸಹ ದಂಪತಿಗಳು ಮತ್ತೆ ಒಂದಾಗುವಂತೆ ತಿಳಿಸಿ ದಂಪತಿಗಳಿಗೆ ಹಾರ ಹಾಕಿಸಿ, ಸಿಹಿ ಹಂಚಿದರು. ವಕೀಲರು, ಸಿಬ್ಬಂದಿ ಸಂತಸ ವ್ಯಕ್ತಪಡಿಸಿದರು
ಲೋಕ ಅದಾಲತ್ ನಲ್ಲಿ ಬ್ಯಾಂಕ್ ಗಳ ವ್ಯವಸ್ಥಾಪಕರುಗಳು ನ್ಯಾಯಾಲಯದಲ್ಲಿ ಒ ಟಿ ಎಸ್ ಮೂಲಕ ಸಾಲ ಇತ್ಯರ್ಥಪಡಿಸಿದರು.
ತಾಲ್ಲೂಕಿನ ಎಸ್ ಬಿ ಐ, ಬ್ಯಾಂಕ್ ಆಫ್ ಬರೋಡ, ಕೆನರಾ ಬ್ಯಾಂಕ್ ಗಳ ಸಿಬ್ಬಂದಿ ಅದಾಲತ್ ಗೆ ಆಗಮಿಸಿ ಸಾಲಗಾರರಿಗೆ ಸಾಲ, ಬಡ್ಡಿ ಮೊತ್ತ ಕಡಿತಗೊಳಿಸಿ ಒ ಟಿ ಎಸ್ ಗೆ ಅವಕಾಶ ನೀಡಿದರು.
ಈ ಸಂದರ್ಭದಲ್ಲಿ ಸರ್ಕಾರಿ ವಕೀಲ ಸಣ್ಣೀರಪ್ಪ, ನ್ಯಾಯಾಲಯದ ಸಿಬ್ಬಂದಿ ಜಾವೀದ್ ಅಹಮದ್ ಪತ್ತೇಪುರ್, ರೇವಣಸಿದ್ದಯ್ಯ, ಹಿರಿಯ ಶಿರಸ್ತೇದಾರ್ ಪರಮೇಶ್ವರ, ದೇವಾನಂದ, ನರಸಿಂಹಮೂರ್ತಿ, ಜಿ ಎಸ್ ವೆಂಕಟೇಶ್, ಪ್ರವೀಣ್, ಮಹಂತೇಶ್, ಶ್ರೀನಿವಾಸರೆಡ್ಡಿ, ವಿಜಯಕುಮಾರ್, ಜಗನ್ನಾಥ್, ವರದರಾಜು, ವಕೀಲರು ಉಪಸ್ಥಿತರಿದ್ದರು.
ವರದಿ : ಶ್ರೀನಿವಾಸಲು ಎ