IMG 20230728 WA0015

ಪಾವಗಡ: ವಿದ್ಯಾರ್ಥಿಗಳ ಭವಿಷ್ಯ ರೂಪಿಸುವುದರಲ್ಲಿ ಶಿಕ್ಷಕರ ಪಾತ್ರ ಅತಿ ಮುಖ್ಯವಾದುದು….!

DISTRICT NEWS ತುಮಕೂರು

ವಿದ್ಯಾರ್ಥಿಗಳ ಭವಿಷ್ಯ ರೂಪಿಸುವುದರಲ್ಲಿ ಶಿಕ್ಷಕರ ಪಾತ್ರ ಅತಿ ಮುಖ್ಯವಾದುದು. ಡಿ .ಡಿ .ಪಿ .ಐಎಂ .ಆರ್ ಮಂಜುನಾಥ್.

ಪಾವಗಡ : ವಿದ್ಯಾರ್ಥಿಗಳನ್ನು ಸರಿಯಾದ ರೀತಿಯಲ್ಲಿ ತಿದ್ದಿ ಉತ್ತಮ ಜೀವನ ರೂಪಿಸಿಕೊಡುವುದರಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವವಾದುದು ಎಂದು ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಉಪ ನಿರ್ದೇಶಕರಾದ ಮಂಜುನಾಥ್ ತಿಳಿಸಿದರು.

ಶುಕ್ರವಾರ ಪಟ್ಟಣದ ಎಸ್ ಎಸ್ ಕೆ ಸಮುದಾಯ ಭವನದಲ್ಲಿ ಪಾವಗಡ ತಾಲೂಕು ಖಾಸಗಿ ಆಂಗ್ಲ ಮಾಧ್ಯಮ ಶಾಲಾ ಆಡಳಿತ ಮಂಡಳಿಗಳ ಸಂಘ ಏರ್ಪಡಿಸಿದ್ದ ಶೈಕ್ಷಣಿಕ ಸಮಾವೇಶ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಕರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಜೊತೆಗೆ ಸಂಸ್ಕಾರವನ್ನು ಸಹ ಬೆಳೆಸುವುದು ಅತಿ ಮುಖ್ಯ ಎಂದರು.

ಕಾರ್ಯಕ್ರಮ ಉದ್ದೇಶಿಸಿ ಬಿ.ಕೆ ಮುನಿಸ್ವಾಮಿ ಮಾತನಾಡಿ .
ತಾಲೂಕಿನ ಖಾಸಗಿ ಶಾಲೆಗಳು ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿವೆ.ಸಂಸ್ಥೆಗಳನ್ನು ನಡೆಸುವುದು ಎಷ್ಟು ಕಷ್ಟ ಎಂದು ಕೋವಿಡ್ ಸಮಯದಲ್ಲಿ ಎಲ್ಲಾ ಆಡಳಿತ ಮಂಡಳಿಗಳಿಗೆ ಮನವರಿಕೆಯಾಗಿದೆ ಎಂದರು.

ತಾಲೂಕಿನಲ್ಲಿ 33 ಶಾಲಾ ಆಡಳಿತ ಮಂಡಳಿಗಳಿದ್ದು ಸುಮಾರು 400 ಕಿಂತಲೂ ಹೆಚ್ಚು ಶಿಕ್ಷಕರಿಗೆ ಉದ್ಯೋಗಾವಕಾಶ ಕಲ್ಪಿಸಿದೆ ಎಂದು ತಿಳಿಸಿದರು.

ಪಾವಗಡ ತಾಲೂಕು ಅತ್ಯಂತ ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿಯನ್ನು ಕಟ್ಟಿಕೊಂಡಿದ್ದು, ಶೈಕ್ಷಣಿಕ ಪ್ರಗತಿಯಲ್ಲಿ ಮುಂದೆ ಇದೆ ಎಂದರು.ಕಾರ್ಯಕ್ರಮ ಉದ್ದೇಶಿಸಿ ಎಸ್ ಎಸ್ ಕೆ ಸಂಘದ ನೂತನ ಅಧ್ಯಕ್ಷರಾದ ಆನಂದ್ ರಾವ್ ಮಾತನಾಡಿ.ಶಿ ಕ್ಷಕರ ವ್ಯಕ್ತಿತ್ವ, ನಡೆ-ನುಡಿ ಗಳು ವಿದ್ಯಾರ್ಥಿಗಳ ಮೇಲೆ ಪ್ರಭಾವ ಬೀರುತ್ತವೆ, ಆದ್ದರಿಂದ ಶಿಕ್ಷಕರು ಉತ್ತಮ-ನುಡಿಯನ್ನು ಹೊಂದಿರಬೇಕು ಎಂದರು ಶಾಲೆಗಳಲ್ಲಿ ಮಕ್ಕಳಿಗೆ ಪಠ್ಯ ಜೊತೆಗೆ ಸಂಸ್ಕಾರವನ್ನು ಸಹ ಕಲಿಸಬೇಕು, ಗುರು ಆದವನು ವೃತ್ತಿಯಲ್ಲಿ, ವ್ಯಕ್ತಿತ್ವದಲ್ಲಿ ಆದರ್ಶಗಳನ್ನು ತುಂಬಿಕೊಂಡವನಾಗಿರಬೇಕು’ ಎಂದರು.

ವಿದ್ಯಾರ್ಥಿಗಳನ್ನು ಪರಿವರ್ತನೆ ಮಾಡುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು ಎಂದರು.ಕಾರ್ಯಕ್ರಮ ಉದ್ದೇಶಿಸಿ ಪ್ರಭಾರಿ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿಯಾದಜಿ ವೆಂಕಟೇಶ್ ಮಾತನಾಡಿ.ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆಯ ಕೇಂದ್ರಗಳಾಗಬೇಕು, ಉತ್ತಮ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಉನ್ನತ ಜೀವನವನ್ನು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು, ಇದಕ್ಕೆ ಪೂರಕವಾದ ವಾತಾವರಣವನ್ನು ತಾಲೂಕಿನ ಖಾಸಗಿ ಸಂಸ್ಥೆಗಳು ಮಾಡಿವೆ ಎಂದು ತಿಳಿಸಿದರು..

2022 -23ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ , ದ್ವಿತೀಯ ಸ್ಥಾನ, ತಾಲೂಕಿಗೆ ಪ್ರಥಮ ಸ್ಥಾನ, ದ್ವಿತೀಯ ಸ್ಥಾನ, ಶಾಲೆಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ನಡೆಸಲಾಯಿತು.

ಶಿಕ್ಷಕರ ಗುಣಮಟ್ಟವನ್ನು ಹೆಚ್ಚಿಸಲು ಖಾಸಗಿ ಶಾಲಾ ಶಿಕ್ಷಕರಿಗೆ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಪಾವಗಡ ತಾಲೂಕು ಖಾಸಗಿ ಆಂಗ್ಲ ಮಾಧ್ಯಮ ಶಾಲಾ ಆಡಳಿತ ಮಂಡಳಿಗಳ ಸಂಘದ ಅಧ್ಯಕ್ಷರಾದ ಶಾ. ನಾ ಪ್ರಸನ್ನ ಮೂರ್ತಿ, ಉಪಾಧ್ಯಕ್ಷರಾದ ಡಿ ಸೂರ್ಯ ಪ್ರಕಾಶ್, ಮೆಡುಮಾ ಸಂಸ್ಥಾಪಕ ಅಧ್ಯಕ್ಷರಾದ ಬಿ.ಕೆ ಮುನಿಸ್ವಾಮಿ, ಮೆಡುಮಾ ಜಿಲ್ಲಾ ಅಧ್ಯಕ್ಷರಾದ ದೊಡ್ಡ ಸಿದ್ದಪ್ಪ, ಮೆಡುಮಾ ಗೌರವಾಧ್ಯಕ್ಷರಾದ ನರಸಿಂಹಲು ಬಾಬು, ಎಸ್ ಎಸ್ ಕೆ ಸಂಘದ ಅಧ್ಯಕ್ಷರಾದ ಆನಂದ್ ರಾವ್, ಕಾರ್ಯದರ್ಶಿಯಾದ ಸುಬ್ಬನರಸಿಂಹ,

ಕಾರ್ಯಕ್ರಮದಲ್ಲಿ ಸಹನಾ ಶ್ರೀನಿವಾಸ್, ಎಸ್ಎಂ ಶಾಲೆಯ ಮಧುಸೂಧನ್ , ಗುರುಕುಲ ಎನ್.ಸಿ ನಾಗಭೂಷಣ್ ಶಾರದ ಶಾಲೆಯ ಸೂರ್ಯನಾರಾಯಣ, , ಪ್ರಾರ್ಥನಾ ಪಾಂಡುರಂಗ ಕೆ.ಓ ಜೈ ಗುರುದೇವ ಶಾಲೆಯ ಪರಂದಾಮ ರೆಡ್ಡಿ,
ವಿಜಯ ಶ್ರೀ ಯ ಅಂಜನ ಶೆಟ್ಟಿ, ಜೆ.ಬಿ.ಎಸ್.ನ ಅನಿಲ್ ಕುಮಾರ್, ವಾಸವಿ ಶಾಲೆ ಶ್ರೀನಿವಾಸ್, ಶೃಂಗೇರಿಯ ಶ್ರೀ ರಾಮ್ ಇನ್ನು ಮುಂತಾದ ಖಾಸಗಿ ಶಾಲೆಯ ಆಡಳಿತ ಮಂಡಳಿಯವರು ಉಪಸ್ಥಿತರಿದ್ದರು.

ವರದಿ: ಶ್ರೀನಿವಾಸಲು.