IMG 20231217 WA0001

ಮಧುಗಿರಿ: ಎರಡನೇ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ…,

DISTRICT NEWS ಚಿಕ್ಕಬಳ್ಳಾಪುರ

ತಾಲೂಕಿನಲ್ಲಿ ಸಾರ್ವಜನಿಕರಿಗೆ ಹಾಗೂ ಧನ ಕರುಗಳಿಗೆ ಮೇವಿನ ಕೊರತೆ ಹಾಗೂ ಕೊಡುವ ನೀರಿನ ಸಮಸ್ಯೆ ಆಗದಂತೆ ಎಚ್ಚರ ವಹಿಸಬೇಕೆಂದು ಖಡಕ್ ಎಚ್ಚರಿಕೆ ಕೊಟ್ಟಸಚಿವ ಕೆ .ಎನ್. ರಾಜಣ್ಣನವರು.

ಮಧುಗಿರಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ 2023 24ನೇ ಸಾಲಿನ ಸೆಪ್ಟೆಂಬರ್ ಮಾಹೆ ಅಂತ್ಯಕ್ಕೆ ಇದ್ದಂತೆ ಒಂದು ಮತ್ತು ಎರಡನೇ ತ್ರೈಮಾಸಿಕ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನ ಸಭೆಯಲ್ಲಿ ಭಾಗವಹಿಸಿ ಅನೇಕ ವಿಷಯಗಳ ಬಗ್ಗೆ ಚರ್ಚಿಸಲಾಯಿತು.

ತಾಲೂಕಿನಲ್ಲಿ ಈಗಾಗಲೇ ಪಶುಪಾಲನ ಮತ್ತು ಪಶುಸೇವಾ ವೈದ್ಯಕೀಯ ಇಲಾಖೆಯಿಂದ ವಿತರಿಸಲಾಗಿರುವಪೀಡ ರ್ ಕಿಟ್ಟುಗಳು ಸಮರ್ಪಕವಾಗಿ ಬಳಕೆಯಾಗುತ್ತಿವೆಯೇ ಇದರ ಬಗ್ಗೆ ಗಮನ ಹರಿಸಬೇಕು ತಾಲ್ಲೂಕಿನಲ್ಲಿ ಎಲ್ಲಿಯೂ ಕೂಡ ಮೇವಿನ ಕೊರತೆಯಾಗದಂತೆ ಎಚ್ಚರ ವಹಿಸಬೇಕು ಎಂದು ಪಶುಸಂಗೋಪನ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಹಾಗೂ ಕೃಷಿ ಇಲಾಖೆ ನಿರ್ದೇಶಕರಿಗೆ ತೋಟಗಾರಿಕೆ ಇಲಾಖೆ ನಿರ್ದೇಶಕ ರವರಿಗೆ ನಿರ್ದೇಶನ ನೀಡಲಾಯಿತು.

ಕ್ಷೇತ್ರದಲ್ಲಿ ಎಲ್ಲೆಲ್ಲಿ ಕುಡಿಯುವ ನೀರಿನ ಶುದ್ಧಘಟಕಗಳು ರಿಪೇರಿ ಆಗಬೇಕಾಗಿದೆ ಅವುಗಳನ್ನು ಆದಷ್ಟು ಬೇಗನೆ ರಿಪೇರಿ ಮಾಡಿಸಿ ಶುದ್ಧ ನೀರು ಕೊಡುವಂತೆ ಹಾಗೂ ಇನ್ನು ಎಲ್ಲಿ ಶುದ್ದ ನೀರಿನ ಘಟಕಗಳ ಅವಶ್ಯಕತೆ ಇದೆ ಅವುಗಳ ಪಟ್ಟಿ ಮಾಡಿಕೊಡಿ ಎಂದು ಗ್ರಾಮೀಣ ಕುಡಿಯುವ ನೀರಿನ ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಅವರಿಗೆ ಸೂಚಿಸಿದರು.

ಈಗಾಗಲೇ ಸರ್ಕಾರದ ವತಿಯಿಂದ ಜಾರಿಯಾಗಿರುವ ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳು ಯಾರಿದ್ದಾರೆ ಯಾರು ಅರ್ಜಿ ಯಾಕಿಲ್ಲ ಯಾರಿಗೆ ಗೃಹಲಕ್ಷ್ಮಿ ಹಣ ಬರುತ್ತಿಲ್ಲ ಅಂತಹವರನ್ನು ಬೇಗನೆ ಗುರ್ತಿಸಿ ಆದಷ್ಟು ಬೇಗನೆ ಅವರಿಗೆ ಗೃಹಲಕ್ಷ್ಮಿ ಹಣ ಬರುವಂತೆ ಇಲಾಖಾ ಅಧಿಕಾರಿಗಳನ್ನು ಬಳಸಿಕೊಂಡು ಹಾಗೆಯೇ ಗ್ರಾಮಪಂಚಾಯಿತಿಗೆ ಒಬ್ಬ ನೋಡಲ್ ಅಧಿಕಾರಿಗಳನ್ನು ನೇಮಿಸಿಕೊಂಡು ಕೆಲಸ ಮಾಡಬೇಕೆಂದು ಶಿಶುಅಭಿವೃದ್ಧಿ
ಯೋಜನಾಧಿಕಾರಿಗಳಿಗೆ ತಿಳಿಸಿದರು.

IMG 20231217 WA0000

ತಾಲೂಕಿನಲ್ಲಿ ಇನ್ನೂ ಕೂಡ ಗೃಹಜೋತಿಗೆ ಅರ್ಜಿ ಸಲ್ಲಿಸಿಲ್ಲ ಅಂತವರನ್ನು ಗುರುತಿಸಿ ಆದಷ್ಟು ಬೇಗನೆ ಅವರಿಗೂ ಸಹ ಗೃಹ ಜ್ಯೋತಿ ಯೋಜನೆಯ ಸುದುಪಯೋಗಪಡಿಸಿಕೊಳ್ಳುವಂತೆ ತಿಳಿಸಬೇಕು ಎಂದು ಹೇಳಿದರು.

ಕಾರ್ಮಿಕ ಇಲಾಖೆಯಿಂದ ಈಗಾಗಲೇ ಏನೇನು ಸೌಲಭ್ಯಗಳು ಕಾರ್ಮಿಕ ಕುಟುಂಬದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ. ಮತ್ತು ಚಿಕ್ಕವಯಸ್ಸಿನಲ್ಲಿ ಶಾಲೆ ಬಿಟ್ಟು ಬೇರೆ ಎಲ್ಲೇ ಕೆಲಸ ಮಾಡುತ್ತಿದ್ದರು ಕೂಡ ಶಿಕ್ಷಣಾಧಿಕಾರಿಗಳು ಅವರನ್ನು ಗುರುತಿಸಿ ಪೋಷಕರನ್ನು ಮನವೊಲಿಸಿ ವಿದ್ಯಾಭ್ಯಾಸ ಮಾಡುವಂತೆ ಅವರಿಗೆ ತಿಳಿ ಹೇಳಬೇಕು. ಕೇಳದೇ ಇದ್ದಲ್ಲಿ ಪೋಷಕರನ್ನು ಸಹ ನಿಮ್ಮ ಮೇಲೆ ಕೇಸು ದಾಖಲು ಮಾಡುತ್ತೇವೆ ಎಂದು ಅವರಿಗೆ ಎಚ್ಚರಿಕೆ ನೀಡಬೇಕು. ಯಾರೂ ಕೂಡ ಶಿಕ್ಷಣದಿಂದ ವಂಚಿತರಾಗಬಾರದು ನೂರಕ್ಕೆ ನೂರರಷ್ಟು ವಿದ್ಯಾರ್ಥಿಗಳ ಹಾಜರಾತಿ ಮತ್ತು ವಿದ್ಯಾಭ್ಯಾಸ ಕಡ್ಡಾಯವಾಗಿ ಇರಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಹಾಗೂ ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಸಚಿವ ಕೆ. ಎನ್. ರಾಜಣ್ಣನವರುಆದೇಶಿಸಿದರು.

ಮತ್ತು ಎಲ್ಲೇ ಬಾಲ ಕಾರ್ಮಿಕರು ಕಂಡುಬಂದರೂ ಸಹ ಅವರನ್ನು ಕರೆತಂದು ಶಾಲೆಗೆ ಸೇರಿಸಿ ಶಿಕ್ಷಣ ಕೊಡಿಸುವಂತೆ ಸೂಚನೆ ನೀಡಿದರು.

ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ವಿದ್ಯಾರ್ಥಿ ನಿಲಯಗಳಾಗಲಿ ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯಗಳಾಗಲಿ ಅಲ್ಪಸಂಖ್ಯಾತರ ವಿದ್ಯಾರ್ಥಿ ನಿಲಯಗಳಾಗಲಿ. ಈ ನಿಲಯಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ತಿಂಡಿ ಮತ್ತು ಗುಣಮಟ್ಟದ ಊಟ ನೀಡಬೇಕು. ಮತ್ತು ಶುದ್ಧ ನೀರು ಶೌಚಾಲಯ ಇವುಗಳು ಸ್ವಚ್ಛತೆಯಿಂದ ಇರಬೇಕು ಯಾವುದೇ ವಿದ್ಯಾರ್ಥಿ ನಿಲಯದಲ್ಲಿ ತೊಂದರೆಯಾಗದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕೆಂದು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಿಗೆ ಹಾಗೂ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಅಧಿಕಾರಿಗಳಿಗೆ ಸೂಚನೆ ಕೊಟ್ಟರು.

ತಾಲೂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಇಲಾಖೆ ಅಧಿಕಾರಿಗಳು ತಾವುಗಳು ಬರೆದಂತಹ ಪತ್ರದ ಕೆಲಸ ಕಾರ್ಯಗಳು ಹಾಗೂ ಕೆಲವೇ ಇಲ್ಲವೆಂಬುದನ್ನು ತಾವುಗಳು ಒಂದು ಸಭೆಯನ್ನು ಮಾಡಿ ಆ ಸಭೆಯ ಮುಖಾಂತರ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳನ್ನು ಭೇಟಿ ಮಾಡಿ ತಾಲೂಕಿನಲ್ಲಿರುವ ಸಮಸ್ಯೆಗಳ ಉದ್ಭವ ಆಗದಂತೆ ಹಾಗೂ ಆದಷ್ಟು ಬೇಗನೆ ಸಾರ್ವಜನಿಕರ ಕೆಲಸಗಳು ಆಗಬೇಕೆಂದು ಸೂಚನೆ ಕೊಟ್ಟರು.

ಪ್ರಗತಿ ಪರಿಶೀಲನಾ ಸಭೆಯಲ್ಲಿ. ಸಹಕಾರಿ ಸಚಿವರಾದ ಕೆ .ಎನ್ .ರಾಜಣ್ಣನವರು. ವಿಧಾನ ಪರಿಷತ್ ಸದಸ್ಯರಾದ ಆರ್. ರಾಜೇಂದ್ರ ರಾಜಣ್ಣನವರು. ಉಪವಿಭಾಗಾಧಿಕಾರಿಗಳಾದ ಕೃಷಿ ಆನಂದ್. ತಹಶೀಲ್ದಾರ್ ಸಿಗಬತ್ ಫುಲ್ಲಾ. ಕಾರ್ಯನಿರ್ವಹಣಾಧಿಕಾರಿ ಬಿ ಎಸ್ ಲಕ್ಷ್ಮಣ್ ಆಡಳಿತ ಅಧಿಕಾರಿ ಗಂಗಪ್ಪ. ಎಂ.ಎಸ್. ಮಲ್ಲಿಕಾರ್ಜುನಯ್ಯ ತುಂಗೋಟಿ ರಾಮಣ್ಣ ನಾಗೇಶ್ ಬಾಬು. ತಾಲೂಕಿನ ಎಲ್ಲ ಇಲಾಖಾ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ವರದಿ ಲಕ್ಷ್ಮಿಪತಿ ದೊಡ್ಡ ಯ ಲ್ಕೂರ್.