ಸರ್ಕಾರಿ ಜಮೀನುಗಳನ್ನು ಖಾಸಗಿಯವರು ಅತಿಕ್ರಮ ಮಾಡಿಕೊಳ್ಳುವುದನ್ನು ತಡೆಯಲು ಅಗತ್ಯ ಕ್ರಮ ವಹಿಸಲಾಗುವುದು – ಕಂದಾಯ ಸಚಿವ ಕೃಷ್ಣಬೈರೇಗೌಡ
ಬೆಂಗಳೂರು, ಮಾರ್ಚ್ 19, (ಕರ್ನಾಟಕ ವಾರ್ತೆ) :ಸರ್ಕಾರಿ ಜಮೀನುಗಳನ್ನು ಖಾಸಗಿಯವರು ಅತಿಕ್ರಮ ಮಾಡಿಕೊಳ್ಳುವುದನ್ನು ತಡೆಯಲು ಅಗತ್ಯ ಕ್ರಮ ವಹಿಸಲಾಗುವುದು ಎಂದು ಕಂದಾಯ ಇಲಾಖೆ ಸಚಿವ ಕೃಷ್ಣಬೈರೇಗೌಡ ಅವರು ತಿಳಿಸಿದರು.
ಇಂದು ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ಪರಿಷತ್ ಸದಸ್ಯ ಶರವಣ ಟಿ.ಎ ಅವರ ಚುಕ್ಕೆ ಗುರುತಿನ ಪ್ರಶ್ನಗೆ ಉತ್ತರಿಸ ಸಚಿವರು, ಕಳೆದ ಮೂರು ವರ್ಷಗಳಲ್ಲಿ ಬೆಂಗಳೂರು ನಗರ ಜಿಲ್ಲೆಯಲ್ಲಿ – ಸರ್ಕಾರಿ ಭೂಮಿ ಒತ್ತುವರಿ ಬಗ್ಗೆ ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳುರು ಪೂರ್ವ, ಯಲಹಂಕ ಮತ್ತು ಆನೇಕಲ್ ತಾಲ್ಲೂಕುಗಳಿಂದ ಒಟ್ಟು 272 ದೂರುಗಳ ದಾಖಲಾಗಿರುತ್ತವೆ. ಮಾರ್ಗಸೂಚಿ ಮತ್ತು ಮಾರುಕಟ್ಟೆ ಬೆಲೆಯಂತೆ ಬೆಂಗಳೂರು 2 ನಗರ ಜಿಲ್ಲೆಯಲ್ಲಿ ವಿವಿಧ ಗ್ರಾಮಗಳ ಸರ್ಕಾರಿ ಜಮೀನಿಗೆ ಒಂದೊಂದು ಮೌಲ್ಯವನ್ನು ನಿಗಧಿಪಡಿಸಲಾಗಿರುತ್ತದೆ.
ಸದರಿ ಸರ್ಕಾರಿ ಜಮೀನುಗಳನ್ನು ಒತ್ತುವರಿ ಮಾಡಿಕೊಂಡಿರುವವರಿಗೆ ನೊಟೀಸ್ ನೀಡಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆಯನ್ನು ನಡೆಸಿ ಪ್ರತಿ ವಾರಾಂತ್ಯದಲ್ಲಿ ಕ್ರಿಯಾಯೋಜನೆಯನ್ನು ರೂಪಿಸಿಕೊಂಡು ಹಂತ ಹಂತವಾಗಿ ಒತ್ತುವರಿ ತೆರವುಗೊಳಿಸಲಾಗಿರುತ್ತದೆ. ಒತ್ತುವರಿದಾರರ ವಿರುದ್ಧ ತಹಶಿಲ್ದಾರ್ ರವರ ಹಂತದಲ್ಲಿ ಕರ್ನಾಟಕ ಭೂಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದಲ್ಲಿ ಪ್ರಕರಣವನ್ನು ದಾಖಲಿಸಲು ಕ್ರಮವಹಿಸಲಾಗಿರುತ್ತದೆ. ಒತ್ತುವರಿದಾರರ ವಿರುದ್ಧ ಭೂ ಕಂದಾಯ ಕಾಯ್ದೆ ಕಲಂ 192 (ಎ) ರಡಿ ಸಂಬಂಧಪಟ್ಟ ಪೋಲೀಸ್ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಸಹ ಕ್ರಮವಹಿಸಲಾಗಿರುತ್ತದೆ
ಈಗಾಗಲೇ ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳುರು ಪೂರ್ವ, ಯಲಹಂಕ ಮತ್ತು ಆನೇಕಲ್ ತಾಲ್ಲೂಕುಗಳಿಂದ ಒಟ್ಟಾರೆ 136.01 ರಷ್ಟು ಸರ್ಕಾರಿ ಭೂಮಿಯನ್ನು ಮರುವಶಪಡಿಸಿಕೊಳ್ಳಲಾಗಿದೆ. ಒತ್ತುವರಿ ಸಾರ್ವಜನಿಕ ತೆರವುಗೊಳಿಸಿರುವ ಉದ್ದೇಶಗಳಿಗೆ ಜಮೀನುಗಳನ್ನು ವಿಲೇಗೊಳಿಸಲು ಕ್ರಮವಹಿಸಲಾಗಿರುತ್ತದೆ ಹಾಗೂ ಕರೆ, ಕಾಲುವೆ, ಸ್ಮಶಾನ, ರಾಜಕಾಲುವೆ ಇತರೆ ಗಳಲ್ಲಿ ಆಗಿರುವ ಒತ್ತುವರಿಯನ್ನು ತೆರವುಗೊಳಿಸಿ ಯಥಾಸ್ಥಿತಿಯಂತೆ ಕಾಯ್ದಿರಿಸಲಾಗಿರುತ್ತದೆ.
ಭೂಮಿ ತಂತ್ರಾಂಶದಲ್ಲಿ ಯಾವುದೇ ಆರ್.ಟಿ.ಸಿ ಯನ್ನು ಸರ್ಕಾರದ ಹೆಸರಿನಿಂದ ಖಾಸಗಿ ವ್ಯಕ್ತಿಯ ಹೆಸರಿಗೆ ಬದಲಾವಣೆ ಮಾಡುವ ಮೊದಲು ತಹಶೀಲ್ದಾರರ ಅನುಮೋದನೆ ಕಡ್ಡಾಯವಾಗಿರುತ್ತದೆ. ಯಾವುದೇ ಹೊಸ ಸರ್ವೆ ನಂಬರ್ ಸೃಜಿಸಲು ಅಥವಾ ಸರ್ವೆ ನಂಬರ್ ಹಾಕಲು(ಡಿಲೀಷನ್) ಮಾಡಲು ತಂತ್ರಾಂಶದಲ್ಲಿ ಜಿಲ್ಲಾಧಿಕಾರಿಗಳು ತೆಗೆದು ಭೂಮಿ ಅಥವಾ ಉಪವಿಭಾಗಾಧಿಕಾರಿಯವರ ಆದೇಶದೊಂದಿಗೆ ಕ್ರಮವಹಿಸಲು ಅವಕಾಶವನ್ನು ನೀಡಲಾಗಿದೆ. ಯಾವುದೇ ಭೂ ಮಂಜೂರಾತಿ ಸಂದರ್ಭದಲ್ಲಿ ನಮೂನೆ 1 ರಿಂದ 5 ತುಂಬಲು ಇದ್ದ ಮ್ಯಾನುಯಲ್ ಪದ್ಧತಿಯನ್ನು ತೆಗೆದುಹಾಕಿದ್ದು ತಂತ್ರಾಂಶದ ಮೂಲಕ ಭರ್ತಿ ಮಾಡಲು ಅವಕಾಶ ಮಾಡಲಾಗಿದೆ.
ಕಾವೇರಿ ಹಾಗೂ ಭೂಮಿ ಜೋಡಣೆಯಾಗಿರುವುದರಿಂದ ಯಾವುದೇ ಸರ್ಕಾರಿ ಭೂಮಿಯನ್ನು ಅನಧಿಕೃತವಾಗಿ . ಮಾರಾಟ ಮಾಡಲು ಹಾಗೂ ಖರೀದಿಸಲು ಅವಕಾಶವಿರುವುದಿಲ್ಲ ಯಾವುದೇ ಸರ್ಕಾರಿ ಭೂಮಿ ಮೇಲೆ ಅನಧಿಕೃತವಾಗಿ ಮಾಡಿರುವ ಖಾತೆ ಬದಲಾವಣೆಯ ಸಂಬಂಧ ಕರ್ನಾಟಕ ಭೂಕಂದಾಯ ಕಾಯ್ದೆ 1964ರನ್ವಯ ಜಿಲ್ಲಾಧಿಕಾರಿಗಳು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ವಿಚಾರಣೆಗೆ ಅವಕಾಶವಿರುತ್ತದೆ.
ಸರ್ಕಾರಿ ಜಮೀನುಗಳಿಗೆ ಸಂಬಂಧಿಸಿದಂತೆ ಎಲ್ಲ್ಲಾ ದಾಖಲೆಗಳನ್ನು ಇಂಡೆಕ್ಸಿಂಗ್ ಅಂಡ್ ಕ್ಯಾಟಲಾಗಿಂಗ್ ಮಾಡಲಾಗುತ್ತಿದೆ. ಭೂಮಿ ತಂತ್ರಾಂಶದಲ್ಲಿ ಎಲ್ಲಾ ಸರ್ಕಾರಿ ಜಮೀನುಗಳನ್ನು ಫ್ಲಾಗ್ ಮಾಡಲಾಗುತ್ತಿದೆ. ಇದರಿಂದ ಸರ್ಕಾರಿ ಜಮೀನುಗಳು ಅನಧಿಕೃತ ವಹಿವಾಟು ಮಾಡಲು ಹಾಗೂ ಅನಧಿಕೃತ ಋಣಭಾರಗಳನ್ನು ಅವಕಾಶವಿರುವುದಿಲ್ಲ ಎಂದು ಸಚಿವರು ತಿಳಿಸಿದರು.