ಮುಜರಾಯಿ ದೇವಸ್ಥಾನದ ಜಮೀನನ್ನು ಖಾಸಗಿಯವರು ಮಾರಾಟ ಮಾಡಲು ಅವಕಾಶ ಇಲ್ಲ – ಸಚಿವ ರಾಮಲಿಂಗಾರೆಡ್ಡಿ
ಬೆಂಗಳೂರು, ಮಾರ್ಚ್ 19, (ಕರ್ನಾಟಕ ವಾರ್ತೆ) :ದೇವಾಲಯಕ್ಕೆ ಸೇರಿದ ಜಮೀನನ್ನು / ಮುಜರಾಯಿ ದೇವಸ್ಥಾನದ ಜಮೀನನ್ನು ಖಾಸಗಿಯವರು ಮಾರಾಟ ಮಾಡಲು ಅವಕಾಶ ಇರುವುದಿಲ್ಲ ಎಂದು ಸಾರಿಗೆ ಮತ್ತು ಧಾರ್ಮಿಕ ದತ್ತಿ ಇಲಾಖೆ ಸಚಿವರಾದ ರಾಮಲಿಂಗಾರೆಡ್ಡಿ ಅವರು ತಿಳಿಸಿದರು.
ಇಂದು ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ಪರಿಷತ್ ಸದಸ್ಯ ಟಿ.ಎನ್. ಜವರಾಯಿಗೌಡ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮಂಡ್ಯ ಜಿಲ್ಲೆ, ದೇವಲಾಪುರ ಹೋಬಳಿ, ಕುಡುಗಬಾಳು ಗ್ರಾಮದ ಸರ್ವೆ ನಂ.01 ರಲ್ಲಿನ ಜಮೀನಿನ ಒಟ್ಟು ವಿಸ್ತೀರ್ಣ 13.13-00 ಇದ್ದು, ಇದರಲ್ಲಿ ಅ ಖರಾಬು 3.23-00, ‘ಬ’ ಖರಾಬು 1.34-00 ಉಳಿಕೆ 7.36-00 ವಿಸ್ತೀರ್ಣ ಇರುತ್ತದೆ. ಸದರಿ ಜಮೀನು ಖಾತೆದಾರರಿಗೆ ಸಂಬಂಧಿಸಿದಂತೆ ಲಭ್ಯವಿರುವ ಮ್ಯುಟೇಷನ್ ಪ್ರತಿಯನ್ನು ಒದಗಿಸಿದೆ.
1976 ರಲ್ಲಿ ಶ್ರೀರಾಮೇಶ್ವರ ದೇವಸ್ಥಾನದ ಹೆಸರಿನಲ್ಲಿದ್ದ ಸರ್ವೆ ನಂ.1ರ ಜಮೀನು INA CR 288, 265, 286/81-82ರಂತೆ ನಾರಾಯಣ ದೀಕ್ಷಿತ್, ಗೋಪಾಲ ದೀಕ್ಷಿತ್ ಮತ್ತು ನಂಜಪ್ಪ ದೀಕ್ಷಿತ್ ಅವರುಗಳಿಗೆ 5-27-00, ಹಾಗೂ ಸೀತಾರಾಮ ದೀಕ್ಷಿತ್ ಮತ್ತು ನಾಗಪ್ಪ ದೀಕ್ಷಿತ್ ಅವರುಗಳಿಗೆ 4-14-00 ಮಂಜೂರಾಗಿರುತ್ತದೆ.
ಕುಡುಗಬಾಳು ಶ್ರೀರಾಮಲಿಂಗೇಶ್ವರ ದೇವಾಲಯದ ಕುಡುಗಬಾಳು ಸರ್ವೆ ನಂ. 7 ರಲ್ಲಿ 30 ಗುಂಟೆ, ಸರ್ವೇ ನಂ 5 ರಲ್ಲಿ 11 ಗುಂಟೆ ಮತ್ತು ಸರ್ವೆ ನಂ 64 ರಲ್ಲಿ 7 ಎಕರೆ 39 ಗುಂಟೆ ಇದ್ದು, ದೇವಾಲಯದ ಹೆಸರಿನಲ್ಲಿದೆ. ದೇವಾಲಯದ ಕಟ್ಟ ಕಣ್ಣಳತೆಯಂತೆ ಅಂದಾಜು 60 ಅಡಿ ಉದ್ದ 30 ಅಡಿ ಅಗಲ ಇರುತ್ತದೆ. ಈ ದೇವಾಲಯಕ್ಕೆ ಸೇರಿದ ಜಮೀನನ್ನು / ಮುಜರಾಯಿ ದೇವಸ್ಥಾನದ ಜಮೀನನ್ನು ಖಾಸಗಿಯವರು ಮಾರಾಟ ಮಾಡಲು ಅವಕಾಶ ಇರುವುದಿಲ್ಲ ಹಾಗೂ ಇಂತಹ ಪ್ರಕರಣಗಳು ವರದಿಯಾಗಿರುವುದಿಲ್ಲ. ಆದಾಗಿಯೂ ಪರಭಾರೆಯಾಗಿರುವ ಬಗ್ಗೆ ಮತ್ತೊಮ್ಮೆ ಪರಿಶೀಲನೆ ಮಾಡಿ ವರದಿ ನೀಡಲು ಜಿಲ್ಲಾಧಿಕಾರಿಗಳು, ಮಂಡ್ಯ ಜಿಲ್ಲೆರವರಿಗೆ ನಿರ್ದೇಶನ ನೀಡಲಾಗಿರುತ್ತದೆ.
ಧಾರ್ಮಿಕ ದತ್ತಿ ಇಲಾಖೆಯ ದೇವಸ್ಥಾನಗಳು ಹೊಂದಿರುವ ಸ್ಥಿರಾಸ್ತಿಯನ್ನು ಸಂಬಂಧಿಸಿದ ದೇವರ ಹೆಸರಿಗೆ ಪಹಣಿ ಮಾಡಲು ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಲಾದ ಅಧಿಸೂಚಿತ ದೇವಾಲಯಗಳ ಪಟ್ಟಿಯಲ್ಲಿರುವ ದೇವಾಲಯ/ಸಂಸ್ಥೆಯ ಹೆಸರನ್ನು ಮ್ಯೂಟೇಷನ್ ಮತ್ತು ಆರ್.ಟಿ.ಸಿ.ಯಲ್ಲಿ ನಮೂದಿಸುವಾಗ ‘ದೇವಸ್ಥಾನ ಹೆಸರು” ಮತ್ತು “ಧಾರ್ಮಿಕ ದತ್ತಿ ಇಲಾಖೆ” ಮತ್ತು “ಕರ್ನಾಟಕ ಸರ್ಕಾರ” ಎಂದು ನಮೂದಿಸಲು ಈಗಾಗಲೇ ಸರ್ಕಾರದ ಪತ್ರ ಸಂಖ್ಯೆ:ಕಂಇ 49 ಮುಆಬಿ 2021, ದಿನಾಂಕ:11.11.2021ರ ಸೂಚನೆಯಂತೆ ದೇವಾಲಯದ ಆಸ್ತಿಗಳ ಸರ್ವೆ ಕಾರ್ಯ ಕೈಗೊಂಡು ದೇವಾಲಯಕ್ಕೆ ಸೇರಿದ ಜಮೀನುಗಳ ಮ್ಯೂಟೇಷನ್ ಮತ್ತು ಆರ್.ಟಿ.ಸಿ.ಯಲ್ಲಿ ನಮೂದಿಸುವಾಗ ” ದೇವಸ್ಥಾನ ಹೆಸರು ಮತ್ತು ‘ಧಾರ್ಮಿಕ ದತ್ತಿ ಇಲಾಖೆ” ಮತ್ತು “ಕರ್ನಾಟಕ ಸರ್ಕಾರ” ಎಂದು ನಮೂದಿಸುವ ಪ್ರಕ್ರಿಯೆ ಜಾರಿಯಲ್ಲಿರುತ್ತದೆ. ಒಂದು ಬಾರಿ ದೇವಸ್ಥಾನದ ಭೂಮಿ ಎಂದು ಪರಿಗಣಿಸಿದ ಬಳಿಕ ಅದು ಯಾವುದೇ ಕಾಲದಲ್ಲೂ, ದೇವಸ್ಥಾನದ ಭೂಮಿಯೇ ಆಗಿರುವಂತೆ ಕ್ರಮ ಕೈಗೊಳ್ಳಲಾಗಿರುತ್ತದೆ. ಎಲ್ಲಾ ಅಧಿಸೂಚಿತ ದೇವಾಲಯಗಳ ಜಮೀನುಗಳನ್ನು ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ 1997, ಸೆಕ್ಷನ್ 31(7)ರಂತೆ ಅಧಿಸೂಚನೆ ಹೊರಡಿಸಲು
ದೇವಸ್ಥಾನಗಳ ಜಮೀನುಗಳನ್ನು ದೇವಸ್ಥಾನಗಳಿಗೇ ಇಂಡೀಕರಣ ಮಾಡಲಾಗುವುದು – ಸಚಿವ ರಾಮಲಿಂಗಾರೆಡ್ಡಿ
ದೇವಸ್ಥಾನಗಳ ಜಮೀನುಗಳನ್ನು ದೇವಸ್ಥಾನಗಳಿಗೇ ಇಂಡೀಕರಣ ಮಾಡಲಾಗುವುದು. ಚಿಕ್ಕಮಗಳೂರಿನ ಜಾಗರ ಹೋಬಳಿ ಇನಾಂ ದತ್ತಾತ್ರೇಯ ಪೀಠದ ಜಮೀನಿಗೆ ಸಂಬಂಧಿಸಿದಂತೆ, ಈಗಾಗಲೇ ಪ್ರಧಾನ ಕಾರ್ಯದರ್ಶಿಗಳಿಗೆ ತಿಳಿಸಲಾಗಿದ್ದು, ಅವರು ಪರಿಶೀಲಿಸಿ ವರದಿ ನೀಡಿದ ನಂತರ ಅಗತ್ಯ ಕ್ರಮ ವಹಿಸಲಾಗುವುದು ಎಂದು ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವರಾದ ರಾಮಲಿಂಗಾರೆಡ್ಡಿ ಅವರು ತಿಳಿಸಿರು.
ಜನನ
ಇಂದು ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ಪರಿಷತ್ ಸದಸ್ಯ ಸಿ.ಟಿ. ರವಿ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ಚಿಕ್ಕಮಗಳೂರಿನ ಜಾಗರ ಹೋಬಳಿ ಇನಾಂ ದತ್ತಾತ್ರೇಯ ಪೀಠ ಗ್ರಾಮದ ಆಕಾರ ಬಂದಿನಂತೆ ಒಟ್ಟು 6213.25 ಎಕರೆ-ಗುಂಟೆ ಆಸ್ತಿ ಇರುತ್ತದೆ. ಸದರಿ ಆಸ್ತಿಯಲ್ಲಿ ಪ್ಲಾಂಟೇಶನ್ 2453.16 ಎಕರೆ-ಗುಂಟೆ ಬಾಗಾಯ್ತು 8.16 ಎಕರೆ-ಗುಂಟೆ ಸರ್ಕಾರಿ ಖರಾಬು 3751.33 ಎಕರೆ-ಗುಂಟೆ ಇರುತ್ತದೆ.
ಇನಾಂ ದತ್ತಾತ್ರೇಯಪೀಠ ಗ್ರಾಮದ ಸರ್ಕಾರಿ ಸರ್ವೆ ನಂಬರ್‌ನಲ್ಲಿ ಖಾಸಗಿ ವ್ಯಕ್ತಿಗಳಿಗೆ ದರ್ಖಾಸ್ತು ಹಾಗೂ ನಮೂನೆ 50 ಮತ್ತು 53ರಲ್ಲಿ ಒಟ್ಟು 104.39 ಎಕರೆ-ಗುಂಟೆ ಜಮೀನು ಮಂಜೂರಾಗಿರುತ್ತದೆ. ಆರ್.ಆರ್.ಇಂಡೆಕ್ಸ್ ನಂತೆ ಶ್ರೀ ಇನಾಂ ದತ್ತಾತ್ರೇಯ ಪೀಠಕ್ಕೆ ಒಟ್ಟು 1861.31 ಎಕರೆ-ಗುಂಟೆ ಜಮೀನು ಇರುವುದು ಕಂಡು ಬಂದಿರುತ್ತದೆ.
ಚಿಕ್ಕಮಗಳೂರು ತಾಲ್ಲೂಕು ಕಛೇರಿಯಲ್ಲಿ ಇರುವ ದಾಖಲೆಗಳನ್ನು ವರಿಶೀಲಿಸಲಾಗಿದ್ದು, ಎಲ್.ಆರ್.ಎಫ್ ನಲ್ಲಿ ಮಂಜೂರಾಗಿರುವುದು ಬರುತ್ತದೆ ಪರಿಶೀಲಿಸುವುದು ಅದಾಗ್ಯೂ ಸಮಗ್ರ ದಾಖಲೆಗಳನ್ನು ಅಗತ್ಯವಿರುವುದಾಗಿ ಜಿಲ್ಲಾಧಿಕಾರಿಗಳು ಚಿಕ್ಕಮಗಳೂರು ಜಿಲ್ಲೆ ಇವರು ಮಾಹಿತಿ ನೀಡಿರುತ್ತಾರೆ. ಚಿಕ್ಕಮಗಳೂರು ತಾಲ್ಲೂಕು ಕಚೇರಿಯಲ್ಲಿ ಇರುವ ದಾಖಲೆಗಳನ್ನು ಪರಿಶೀಲಿಸಲಾಗಿ, ಅರ್ಜಿ ಇಲ್ಲದ ಮಂಜೂರು ಮಾಡಿರುವ ಪ್ರಕರಣಗಳು ಇದುವರೆವಿಗೂ ಕಂಡು ಬಂದಿರುವುದಿಲ್ಲ.
ಇನಾಂ ದತ್ತಾತ್ರೇಯ ದೇವರು ಇವರಿಂದ ಖಾಸಗಿ ವ್ಯಕ್ತಿಗಳಿಗೆ ಎಲ್.ಆರ್‌ಎಫ್ 190/1990-91 ದಿನಾಂಕ:14-02-1994 ರಂತೆ ಶ್ರೀಮತಿ ಫಾತೀಮ ಬಿ. ಕೊಂ ಸಿ.ಆರ್. ಸಗೀರ್ ಅಹಮದ್ ಅವರಿಗೆ ಸರ್ವೆ ನಂ 53 ರಲ್ಲಿ 5.00 ಎಕರೆ, ಸರ್ವೆ ನಂ 53 ಪಿ ರಲ್ಲಿ 2.00 ಎಕರೆ, ಸರ್ವೆ ನಂ 169ರಲ್ಲಿ 18.00 ಎಕರೆ, ಸರ್ವೆ ನಂ 170 ರಲ್ಲಿ 2.31 ಎಕರೆ, ಸರ್ವೆ ನಂ 171 ರಲ್ಲಿ 0.30 ಎಕರೆ, ಸರ್ವೆ ನಂ 192 ರಲ್ಲಿ 4.00ಎಕರೆ, ಸರ್ವೆ ನಂ 8/3 ರಲ್ಲಿ 0.9 ಗುಂಟೆ ಹೀಗೆ ಒಟ್ಟು 32.30 ಎಕರೆ ಮಂಜೂರಾಗಿರುತ್ತದೆ.
ಮಾನ್ಯ ಉಚ್ಚ ನ್ಯಾಯಾಲಯದ ರಿಟ್ ಅರ್ಜಿ ಸಂಖ್ಯೆ 11227/2023 ದಿನಾಂಕ: 23-08-2023 ನಿರ್ದೇಶನದಂತೆ ಶ್ರೀಮತಿ ಫಾತೀಮ ಬಿ ಕೋಂ ಸಿ.ಆರ್ ಸಗೀರ ಅಹಮದ್ ಇವರ ಕೋರಿಕೆಯನ್ನು ಜಿಲ್ಲಾಧಿಕಾರಿಗಳು, ಚಿಕ್ಕಮಗಳೂರು ಜಿಲ್ಲೆ ರವರು ವಿಚಾರಣೆಯನ್ನು ನಡೆಸಿ ಸದರಿ ಮಂಜೂರಾತಿಯನ್ನು ತಿರಸ್ಕರಿಸಿ, ಸದರಿ ಸರ್ವೆ ನಂಬರ್ ಗಳ ಜಮೀನುಗಳು ಸರ್ಕಾರಕ್ಕೆ ನಿಹಿತಗೊಂಡ ಜಮೀನುಗಳಾಗಿರುವುದರಿಂದ ಮಾಲೀಕತ್ವದ ಬಗ್ಗೆ ಆರ್ ಟಿ ಸಿ ಕಾಲಂ 9 ರಲ್ಲಿ “ಸರ್ಕಾರ ಎಂದು ದಾಖಲಿಸಲು ದಿನಾಂಕ 05:03-09-2024 ರಂದು ಆದೇಶವನ್ನು ಮಾಡಿರುತ್ತಾರೆ.
ಅದರೆ ಸದರಿ ಆದೇಶದ ವಿರುದ್ಧ ಶ್ರೀಮತಿ ಫಾತೀಮಾ ಬಿ. ಕೋಂ ಸಿ.ಆರ್. ಸಗೀರ್ ಅಹಮ್ಮದ್ ರವರು ಮತ್ತೊಮ್ಮೆ ಮಾನ್ಯ ನ್ಯಾಯಾಲಯದಲ್ಲಿ ರಿಟ್ ಪಿಟಿಷನ್ ಸಂ 31412/2024 ನ್ನು ದಾಖಲಿಸಿರುತ್ತಾರೆ. ಸದರಿ ಪ್ರಕರಣದ ಮುಂದಿನ ವಿಚಾರಣೆಯು ದಿನಾಂಕ: 25-03-2025 ಕ್ಕೆ ಇರುತ್ತದೆ. ಮುಂದುವರೆದು ಅರ್ಜಿಯ ಇಲ್ಲದೆ ಮಂಜೂರು ಮಾಡಿರುವ ಪ್ರಕರಣಗಳ ಬಗ್ಗೆ ಸಮಗ್ರ ದಾಖಲೆಗಳನ್ನು ಪರಿಶೀಲಿಸುವುದು ಅಗತ್ಯವಿರುವುದಾಗಿ ಜಿಲ್ಲಾಧಿಕಾರಿ ಚಿಕ್ಕಮಗಳೂರು ಜಿಲ್ಲೆ ರವರು ಮಾಹಿತಿ ನೀಡಿರುತ್ತಾರೆ
ದಿನಾಂಕ: 26.09.2022 ರಂದು ಜಿಲ್ಲಾಧಿಕಾರಿ ಚಿಕ್ಕಮಗಳೂರು ಅಧ್ಯಕ್ಷತೆಯಲ್ಲಿ ಇವರ ನಡೆದ ಜಿಲ್ಲಾಮಟ್ಟದ ಭೂ ಮಂಜೂರಿ ಪ್ರಕರಣಗಳ ಗೈರು ವಿಲೇ ಕಡತಗಳ ಪುನರ್ ನಿರ್ಮಾಣ ಸಮಿತಿಯ ಸಭೆ ನಡವಳಿಯಂತ ಸರ್ಕಾರದ ಸುತ್ತೋಲೆ ಸಂಖ್ಯೆ:ಆರ್ ಆರ್ 74 ಎಲ್.ಜಿ.ಪಿ .2009, ದಿನಾಂಕ 17.09.2009 ಹಾಗೂ ಕಂಇ 8 ಎಲ್.ಜಿ.ಪಿ 2016, ದಿನಾಂಕ 25.06.2016 ರನ್ವಯ ಗೈರು ವಿಲೇ ಸಭೆಯಲ್ಲಿ ಮಂಡಿಸಲು ತಿಳಿಸಿರುವ ಮಾನದಂಡದಂತೆ ಇಲ್ಲದಿರುವುದರಿಂದ ಪ್ರಕರಣವನ್ನು ತಿರಸ್ಕರಿಸುವ ಪ್ರಕರಣವಾಗಿದ್ದರೂ ಸಹ ಈ ಕ್ರಮ ಕೈಗೊಳ್ಳುವ ಮೊದಲು ಅರ್ಜಿದಾರರಿಗೆ ಈ ಸಂಬಂಧ ದಾಖಲೆಗಳು ಯಾವುದಾದರೂ ಇದ್ದಲ್ಲಿ ಒದಗಿಸಲು ಮತ್ತೊಂದು ಅವಕಾಶ ನೀಡಿ ಅವರ ಹೇಳಿಕೆ ಪಡೆದು ನಂತರ ಮುಂದಿನ ತೀರ್ಮಾನ ತೆಗೆದು ಕೊಳ್ಳಲು ತೀರ್ಮಾನಿಸಲಾಗಿರುತ್ತದೆ.
ಜಿಲ್ಲಾಧಿಕಾರಿಯವರ ನ್ಯಾಯಾಲಯ. ಚಿಕ್ಕಮಗಳೂರು ಜಿಲ್ಲೆ ರವರ ಪ್ರಕರಣ ಸಂಖ್ಯೆ:ಎಂ 2 ಎಲ್.ಎಲ್.ಆರ್.ಎಫ್ /ಸಿ.ಆರ್/20/2022-23. ದಿನಾಂಕ 03.09.2024ರ ಆದೇಶದಲ್ಲಿ ಚಿಕ್ಕಮಗಳೂರು ತಾಲ್ಲೂಕು, ಇನಾಂ ದತ್ತಾತ್ರೇಯ ಪೀಠ ಗ್ರಾಮದ ಸರ್ವೆ ನಂ. .8/30, ರಲ್ಲಿ 09 ಗುಂಟೆ ಸರ್ವೆ ನಂ 53ಪಿ (ಹೊಸ ಸರ್ವೆ ನಂ.306),ರಲ್ಲಿ 07.00 ಎಕರೆ, ಸರ್ವೆ ನಂ. 169 ( ಹೊಸ ಸರ್ವೆ ನಂ 307) ರಲ್ಲಿ 18-00 ಎಕರೆ, ಸರ್ವೆ ನಂ .170 ರಲ್ಲಿ 02-31 ಎಕರೆ, ಸರ್ವೆ ನಂ 171 ರಲ್ಲಿ .30 ಗುಂಟೆ, ಸರ್ವೆ ನಂ.192 ರಲ್ಲಿ 04.00 ಎಕರೆ ಸರ್ಕಾರಕ್ಕೆ ನಿಹಿತಗೊಂಡ ಸರ್ಕಾರಿ ಜಮೀನು ಗಳಾಗಿ ರುವುದರಿಂದ ಈ ಜಮೀನುಗಳ ಮಾಲೀಕತ್ವದ ಬಗ್ಗೆ ಆರ್.ಟಿ.ಸಿಯ ಕಾಲಂ-9 ರಲ್ಲಿ ಸರ್ಕಾರ’ ಎಂದು ದಾಖಲಿಸಲು ತಹಶೀಲ್ದಾರ್, ಚಿಕ್ಕಮಗಳೂರು ತಾಲ್ಲೂಕು ಇವರಿಗೆ ನಿರ್ದೇಶಿಸಿದ ಹಾಗೂ ವಿವಾದಿತ ಜಮೀನುಗಳಲಿರುವ ಕಾಲುದಾರಿ, ಬಂಡಿದಾರಿ ಮತ್ತು. ರಸ್ತೆಯ ಮೇಲೆ ಅರ್ಜಿದಾರರಿಗೆ ಯಾವುದೇ ಹಕ್ಕುಸ್ವಾಮ್ಯ ಇರುವುದಿಲ್ಲ ವೆಂದು ಘೋಷಿಸಿರುವುದು ಕಂಡು ಬರುತ್ತದೆ ಎಂದು ತಿಳಿಸಿದರು.