ಬಿಜೆಪಿ: ಮಂಡಲದ ಎಸ್.ಸಿ. ಮೋರ್ಚಾದ ಕಾರ್ಯಕಾರಿಣಿ ಸಭೆ.
ಪಾವಗಡ:- ಬಿಜೆಪಿ ಕಛೇರಿಯಲ್ಲಿ ಎಸ್.ಸಿ. ಮೋರ್ಚಾದ ಕಾರ್ಯಕಾರಿಣಿ ಸಭೆ ನಡೆಯಿತು
ಜಿಲ್ಲಾ ಎಸ್.ಸಿ. ಮೋರ್ಚಾದ ಅಧ್ಯಕ್ಷರಾದ ಹುಚ್ಚಯ್ಯ ಅವರು ಸಭೆಯನ್ನು ಉದ್ಘಾಟಿಸಿದರು, ನಂತರ ಮಾತಾನಾಡಿ ಅವರು ಇಡೀ ಪ್ರಪಂಚದಲ್ಲಿ ಹೆಚ್ಚು ಕಾರ್ಯಕರ್ತರು ಹೊಂದಿರುವ ಪಕ್ಷ ಬಿಜೆಪಿ.
ರಾಜಕೀಯ ಪಕ್ಷಗಳು ಇಲ್ಲದೆ ಅಭಿವೃದ್ಧಿ ಇಲ್ಲ. ರಾಜಕೀಯ ಬಿಟ್ಟು ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ ರಾಜಕೀಯಕ್ಕೆ ಮಹತ್ವ ಸ್ಥಾನ ಇದೆ ಎಂದರು
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬಡವರಿಗೆ ಹಾಗೂ ರೈತರಿಗೆ ಯೋಜನೆಗಳ ಮಹಾಪೂರವನ್ನು ಕೊಟ್ಟಿದ್ದಾರೆ ಆರ್ಥಿಕವಾಗಿ ಹಿಂದುಳಿದವರಿಗೆ ಜನಧನ್, ಗರೀಬ್ ಕಲ್ಯಾಣ್ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ, ಬಡವರಿಗೆ ಉಜ್ವಲ, ಅಯುಷ್ಮಾನ್ ಭಾರತ್, ರೈತರಿಗಾಗಿ ಕಿಸಾನ್ ಸಮ್ಮಾನ್ ಯೋಜನೆಯನ್ನು ರೂಪಿಸಿದ್ದಾರೆ. ಹಲವು ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡನ್ನು ನೀಡಲಾಗಿದೆ
ಕಾಂಗ್ರೆಸ್ 70 ವರ್ಷಗಳಿಂದ ದೇಶದಲ್ಲಿ ಆಡಳಿತ ನಡೆಸಿತ್ತು ಬಡವರ ಹಾಗೂ ರೈತ ಪರ ಕೊಡುಗೆ ಏನು ಎಂಬುವುದರ ಬಗ್ಗೆ ಯೋಚಿಸಿ ಎಂದು ಹೇಳಿದರು
ತಾಲೂಕು ಅಧ್ಯಕ್ಷ ರವಿ ಶಂಕರ್ ನಾಯ್ಕ ಮಾತನಾಡಿ ತಾಲ್ಲೂಕಿನಲ್ಲಿ ಇತ್ತೀಚಿಗೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ 43 ಸದಸ್ಯರು ಆಯ್ಕೆ ಯಾಗಿದ್ದಾರೆ ಅದರಲ್ಲಿ 20 ಜನ ಎಸ್ ಸಿ ಸಮುದಾಯದವರು ಎಂದರು
ಮುಂಬರುವ ತಾಲ್ಲೂಕು ಮತ್ತು ಜಿಲ್ಲಾ ಚುನಾವಣೆಗಳಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಜಿಲ್ಲಾ ಅಧ್ಯಕ್ಷ ಹುಚ್ಚಯ್ಯ ಅವರಿಗೆ ಹೆಸರು ತರಬೇಕು ಎಂದು ಹೇಳಿದರು
ಈ ಸಭೆಯಲ್ಲಿ ಮಂಡಲ ಅಧ್ಯಕ್ಷರು ರವಿ ಶಂಕರ್ ನಾಯ್ಕ ಜಿಲ್ಲಾ ಉಪಾಧ್ಯಕ್ಷರು ರವಿ .ಮಂಡಲ ಪ್ರಧಾನ ಕಾರ್ಯದರ್ಶಿ ದೊಡ್ಡ ಹಳ್ಳಿ. ಅಶೋಕ್ , ಜಿಲ್ಲಾ ಎಸ್.ಸಿ. ಮೋರ್ಚಾದ ಪ್ರಧಾನ ಕಾರ್ಯದರ್ಶಿಗಳಾದ ರಮೇಶ್ , ಕಾರ್ಯದರ್ಶಿಗಳಾದ ರಘು . ಮಂಡಲ ಎಸ್.ಸಿ.ಮೋರ್ಚಾ ಅಧ್ಯಕ್ಷರಾದ ರಾಜೇಂದ್ರ , ಪ್ರಧಾನ ಕಾರ್ಯದರ್ಶಿಗಳಾದ ಪ್ರಸಾದ್ ಬಾಬು , ಎಸ್ ಸಿ ಮೋರ್ಚಾ ಉಪಾಧ್ಯಕ್ಷ ವೆಂಕಟೇಶ್. ಶಂಕರ್ ನಾಯ್ಕ. ಕಾರ್ಯದರ್ಶಿ ಮಂಜುನಾಥ ಸುಬ್ಬನಾಯ್ಕ. ಓ.ಬಿ.ಸಿ ಮೋರ್ಚಾ ಅಧ್ಯಕ್ಷರಾದ ಅಲ್ಕುಂದರಾಜ್ ಮಹಿಳಾ ಬಿಜೆಪಿ ಅಧ್ಯಕ್ಷೆ ಸಿದ್ದಗಂಗಮ್ಮ. ರೈತ ಮೋರ್ಚಾ ಅಧ್ಯಕ್ಷರಾದ ಕೋಟೇಶ್ವರ ರೆಡ್ಡಿ. ಎಸ್ ಸಿ ಮೋರ್ಚಾ ಖಜಾಂಚಿ. ಚಂಚಪ್ಪ. ಹಾಗೂ ಎಸ್ ಸಿ ಮೋರ್ಚಾದ ಕಾರ್ಯಕಾರಣಿ ಸದಸ್ಯರು ಪಾಲ್ಗೊಂಡಿದ್ದರು ಇನ್ನೂ ಮುಂತಾದವರು ಉಪಸ್ಥಿತರಿದ್ದರು
ವರದಿ: ಬುಲೆಟ್ ವೀರಸೇನ ಯಾದವ್