IMG 20210128 WA0041

ಪಾವಗಡ: ಸರ್ಕಾರಿ ಹಾಸ್ಟಲ್ ನೌಕರರ ಮುಷ್ಕರ….!

DISTRICT NEWS ತುಮಕೂರು

ಪಾವಗಡ: –  ಸರ್ಕಾರಿ ಹಾಸ್ಟೆಲ್ ಹಾಗೂ ಸರ್ಕಾರಿ ವಸತಿ ಶಾಲೆಗಳ ಡಿ.ವರ್ಗದ ಹೊರಗುತ್ತಿಗೆ ನೌಕರರಿಗೆ ಬಾಕಿ ಇರುವ ವೇತನ ವನ್ನು   ಬಿಡುಗಡೆ ಮಾಡಬೇಕು‌ ಎಂದು ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ಸದಸ್ಯರು  ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು

ಗ್ರೇಟ್ 2 ತಹಶೀಲ್ದಾರ್ ಎನ್.ಮೂರ್ತಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಲಾಕ್‌ಡೌನ್‌ ಅವಧಿಯಲ್ಲಿ ಸೇವೆ ಸಲ್ಲಿಸಿರುವ ವೇತನಗಳನ್ನು ಇಲಾಖೆಯು ಪಾವತಿ ಮಾಡಿಲ್ಲ’ ಎಂದು ಆರೋಪಿಸಿದರು.

ಆರ್ಥಿಕ ಸಂಕಷ್ಟದಲ್ಲಿ ಇರುವ ನೌಕರರು ಮಹಿಳೆಯರೇ ಇದ್ದಾರೆ. ಹಲವಾರು ವಿಧವೆಯರು ಸಣ್ಣ ಸಣ್ಣ ಮಕ್ಕಳನ್ನು ಸಾಕುವ ಜವಾಬ್ದಾರಿ ಉಳ್ಳವರು ನಾವು ಈಗ ಕೆಲಸವಿಲ್ಲದೆ ಸಂಬಳವು ಇಲ್ಲದೆ ಒದ್ದಾಡುತ್ತಿದ್ದೇವೆ ಯಾವುದೇ ಆದಾಯಗಳ ಮೂಲವೇ ಇಲ್ಲ. ಇದರಿಂದ ಕುಟುಂಬಗಳನ್ನು ಪೋಷಣೆ ಮಾಡುವುದು ತೊಂದರೆ ಆಗಿದೆ. ಕೂಡಲೇ ನೌಕರರಿಗೆ ಬಾಕಿ ಇರುವ ವೇತನಗಳನ್ನು ವಿತರಿಸಬೇಕು’ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಎಸ್. ನಾಗರಾಜು. ರತ್ನಮ್ಮ ಯಶೋದಮ್ಮ ಜಯಮ್ಮ ಲಲಿತಮ್ಮ ಅಚ್ಚಮ್ಮ ಮಹಾಲಕ್ಷ್ಮಿ ಬುಡ್ಡಮ್ಮ ಕವಿತಾ ಸುನಂದಮ್ಮ ವೆಂಕಟಲಕ್ಷ್ಮಮ್ಮ ಲಕ್ಷ್ಮೀದೇವಿ ಅನುಸೂಯಮ್ಮ ಮೂರ್ತಿ ಸುಧಮ್ಮ ಅರುಣ ಸರಸ್ವತಿ ಕುಮಾರಿ ಬಾಯಿ. ಹಾಗೂ ಇನ್ನೂ ಮುಂತಾದವರು ಉಪಸ್ಥಿತರಿದ್ದರು