ಪಾವಗಡ ತಾಲ್ಲೂಕಿನ ಕೊಡಮಡಗು ಗ್ರಾಮದಲ್ಲಿ ಅರಿವು ಮತ್ತು ಜಾಗೃತಿ ಕಾರ್ಯಕ್ರಮ ಮಾಡಲಾಯಿತು ಈ ಸಂದರ್ಭದಲ್ಲಿ ವಾಲ್ಮೀಕಿ ಸ್ವಾಭಿಮಾನಿ ಸಂಘ ದ ರಾಜ್ಯಧ್ಯಕ್ಷ ಚಳುವಳಿ ರಾಜಣ್ಣ ಮಾತನಾಡಿ ಸರ್ಕಾರದ ಸೌಲಭ್ಯ ಪಡೆಯಲು ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಅವಕಾಶ ಸಿಗಲು ಇಂತಹ ಸರ್ಕಾರದ ಕಾರ್ಯಕ್ರಮ ಗಳು ಅವಶ್ಯಕತೆ ಇದೆ ಎಂದರು. ಸರ್ಕಾರ ದಿಂದ ಸಿಗುವ ಸೌಲಭ್ಯ ಗಳ ಬಗ್ಗೆ ಪ್ರತ್ಯೇಕವಾಗಿ ಸಮುದಾಯಕ್ಕೆ ಇರುವ ಕಾನೂನು ಕಾಯಿದೆಗಳ ಬಗ್ಗೆ ಚಳುವಳಿ ರಾಜಣ್ಣ ಮಾಹಿತಿ ನೀಡಿದರು. ಶಿವಪ್ಪ ಮಾತನಾಡಿ ಸರ್ಕಾರದ ಅಡಿಯಲ್ಲಿ ಸರ್ಕಾರೇತರ ಸಂಸ್ಥೆಗಳು ಜೊತೆಗೂಡಿ ಪರಿಶಿಷ್ಟ ಜಾತಿ ಮತ್ತು ಪಂಗಡ ಸಮುದಾಯ ಕ್ಕೆ ಗ್ರಾಮೀಣ ಪ್ರದೇಶದಕ್ಕೆ ಬಂದಾಗ ಎಲ್ಲರೂ ಸೇರಿ ಉಚಿತ ಅರಿವು ಮತ್ತು ಸಲಹೆ ಸೂಚನೆಗಳನ್ನು ಪಡೆಯಲು ಅವಕಾಶ ಇದೆ ಆದರೆ ಪ್ರತಿ ಗ್ರಾಮದಲ್ಲಿ ಇವತು ರಾಜ್ಯಕೀಯವಾಗಿ ಯೋಚನೆ ಮಾಡಿ ಸಮುದಾಯ ಮುಂದೆ ಬರುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಕಲಾವಿದರ ಜೊತೆಗೆ ಚಳುವಳಿ ರಾಜಣ್ಣ ಎಲ್ಲಾ ಮಾಯ ನಾಳೆ ನಾವು ಮಾಯ ಎಂಬ ಗೀತೆಗೆ ಸಾತ್ ಕೊಟ್ಟರು. ಈ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಲಕ್ಷೀ ಪತಿ ಸಾಹೇಬರೆಡ್ಡಿ , ವೆಂಕಟ್ ಹಾಗೂ ರೈತ ಮುಖಂಡ ಕೊಂಡನ್ನ ಮುಖ್ಯ ಶಿಕ್ಷಕ ಪಾಂಡುರಂಗನಾಥ, ಹಾಗೂ ದಿವ್ಯ, ಮತ್ತು ಅರ್ಚನಾ ,ವಾಟರ್ ಮೆನ್ ಹನುಮಂತ ಹಾಗೂ ಮಂಜುನಾಥ್ ಗ್ರಾಮಸ್ಥರು ಭಾಗವಹಿಸಿದ್ದರು
ವರದಿ: ಶ್ರೀನಿವಾಸುಲು ಎ