IMG 20220108 WA0027

ಪಾವಗಡ: ನಾಗಲಮಡಿಕೆ ಸುಬ್ರಹ್ಮಣ್ಯೇಶ್ವರ ಸ್ವಾಮಿ ರಥೋತ್ಸವ…!

DISTRICT NEWS ತುಮಕೂರು

ಪಾವಗಡ: ಕೋವಿಡ್- 19 ರ ಪ್ರಯುಕ್ತ ನಾಗಲಮಡಿಕೆ ಸುಬ್ರಹ್ಮಣ್ಯೇಶ್ವರ ಸ್ವಾಮಿ ರಥೋತ್ಸವದ ಸರಳ ರೀತಿಯಲ್ಲಿ ಆಚರಣೆ ಮಾಡಲಾಯಿತು.

ಪಾವಗಡ: ಅಂತ್ಯ ಸುಬ್ರಹ್ಮಣ್ಯ ಎಂದೆ ಪ್ರಚಲಿತವಾಗಿರುವ ನಾಗಲಮಡಿಕೆ ಸುಬ್ರಹ್ಮಣ್ಯೇಶ್ವರ ಸ್ವಾಮಿ ರಥೋತ್ಸವದ ಪ್ರಯುಕ್ತ ಶನಿವಾರ ದೇಗುಲದಲ್ಲಿ ಸರಳವಾಗಿ ರೀತಿಯಲ್ಲಿ ಪೂಜಾ ಕಾರ್ಯಕ್ರಮಗಳನ್ನು ನಡೆಸಲಾಯಿತು.

ಲಕ್ಷಾಂತರ ಭಕ್ತಾದಿಗಳ ಸಮ್ಮುಖದಲ್ಲಿ ನಡೆಯಬೇಕಿದ್ದ ರಥೋತ್ಸವ ಕೋವಿಡ್ ನಿಯಮಾವಳಿಗಳ ಕಾರಣ  ಸರಳವಾದ ರೀತಿಯಲ್ಲಿ ನಡೆಯಿತು.

ಹೂವಿನಿಂದ ಅಲಂಕಾರಗೊಂಡ ರಥದಲ್ಲಿ ಮೆರವಣಿಗೆ ಮೂಲಕ ಉತ್ಸವ ಮೂರ್ತಿಯನ್ನು ಕರೆತಂದು ಪ್ರಧಾನ ಅರ್ಚಕರಾದ ಪಿ.ಬದರಿನಥ್ ಪ್ರತಿಷ್ಠಾಪಿಸಿದರು. ತಹಶೀಲ್ದಾರ್ ಕೆ.ಆರ್.ನಾಗರಾಜು, ಗ್ರೇಡ್ 2 ತಹಶೀಲ್ದಾರ್ ಎನ್.ಮೂರ್ತಿ ರಥದ ಚಕ್ರಕ್ಕೆ ತೆಂಗಿನ ಕಾಯಿ ಸಮರ್ಪಿಸಿ ಮೂರು ಹೆಜ್ಜೆಗಳಷ್ಟು ಮಾತ್ರ  ರಥವನ್ನು ಮುಂದಕ್ಕೆ ಎಳೆದು ಶಾಸ್ತ್ರ ಪೂರೈಸಿದರು.

ಎಂದಿನಂತೆ ದೇವಸ್ಥಾನದಲ್ಲಿ ಅಭಿಷೇಕ, ಕುಂಕುಮಾರ್ಚನೆ, ರಥಾಂಗ, ಗಣಪತಿ,  ಹೋಮ  ನಡೆಯಿತು. ಅನ್ನದ ರಾಶಿಯ ಮೇಲೆ ಉತ್ಸವ ಮೂರ್ತಿಯನ್ನು ಸ್ಥಾಪಿಸಿ ಸಂಪ್ರದಾಯದಂತೆ ನೈವೇದ್ಯ ಮಾಡಲಾಯಿತು.ಭಕ್ತಾದಿಗಳು ದೇಗುಲದೊಳಗೆ ಪ್ರವೇಶಿಸದಂತೆ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. 

ವಾರಾಂತ್ಯದ ಕರ್ಫ್ಯೂ ನಡುವೆಯೂ ನೂರಾರು ಭಕ್ತಾದಿಗಳು ಆಗಮಿಸಿ ದೂರದಿಂದಲೆ ದೇಗುಲಕ್ಕೆ ನಮಿಸಿದರು. ಪಾವಗಡ ಪಟ್ಟಣದ ಶನೈಶ್ಚರ  ದೇಗುಲಕ್ಕೆ ಆಂಧ್ರಪ್ರದೇಶದ ಹಲವಾರು ಜಿಲ್ಲೆಗಳಿಂದ ಭಕ್ತಾದಿಗಳು  ಕರ್ಫ್ಯೂ ಮಾಹಿತಿ ಇಲ್ಲದೆ ದೇವಸ್ಥಾನಕ್ಕೆ ಆಗಮಿಸಿದ್ದರು. ಆದರೆ ದೇವಸ್ಥಾನಕ್ಕೆ ಭಕ್ತಾದಿಗಳ ಪ್ರವೇಶ ನಿಷೇಧಿಸಿದ್ದರಿಂದ ಭಕ್ತಾದಿಗಳು ದೇಗುಲದ ಮುಖ್ಯ ದ್ವಾರಕ್ಕೆ ಪೂಜೆ ಸಲ್ಲಿಸಿದರು.

ವರದಿ:ಶ್ರೀನಿವಾಸುಲು ಎ