IMG 20221120 WA0024

ಆನೇಕಲ್ : ಭಾರತಿ ಶಾಲೆ 2001-02ನೇ ಸಾಲಿನ ವಿದ್ಯಾರ್ಥಿಗಳಿಂದ ಗುರುವಂದನ ಕಾರ್ಯಕ್ರಮ…!

DISTRICT NEWS ಬೆಂಗಳೂರು

ಆನೇಕಲ್ : ಕತ್ತಲನ್ನು ಓಡಿಸುವ ಶಕ್ತಿಯೇ ಗುರು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಆದೂರು ಪ್ರಕಾಶ್ ಹೇಳಿದರು – ಭಾರತಿ ಶಾಲೆಯ 2001 2002ನೇ ಸಾಲಿನ ವಿದ್ಯಾರ್ಥಿಗಳು ಏರ್ಪಡಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಭೌತಿಕ ಶರೀರ ಸಂಪತ್ತು ನಶ್ವರ ಆದರೆ ಗುರು ಕಲಿಸಿದ ವಿದ್ಯೆಯು ಅಮರತ್ವದೆಡೆಗೆ ಕೊಂಡೊಯ್ಯುತ್ತದೆ ವ್ಯಕ್ತಿಯ ಜೀವನದಲ್ಲಿ ಗುರು ಪ್ರವೇಶವಾಗದಿದ್ದರೆ ಅವನ ಬದುಕು ಅಪೂರ್ಣವಾಗುತ್ತದೆ ಎಂದು ತಿಳಿಸಿದೆ.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದ್ದ ರಾಜಾಪುರದ ಡಾ. ರಾಜೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಗುರು ತೋರಿಸಿದ ಮಾರ್ಗದಿಂದ ಬೆಳಕನ್ನು ಕಾಣಬಹುದು ಗುರುವಿಗೆ ಜಗತ್ತನ್ನ ಮಾರ್ಪಡಿಸುವ ಶಕ್ತಿ ಇದೆ ವಿದ್ಯಾರ್ಥಿಗಳು ಇದನ್ನ ಅರಿತು ಬಾಳಬೇಕು ಎಂದು ತಿಳಿಸಿದರು.

IMG 20221120 WA0023


ಶಾಲೆಯ ಹಳೆ ವಿದ್ಯಾರ್ಥಿ ಹಾಗೂ ಪಂಚಾಯತಿ ಸದಸ್ಯರಾದ ಮುತ್ತುಗಟ್ಟೆ ಅಂಬರೀಶ್ ಮಾತನಾಡಿ ಗುರುಗಳು ನೀಡಿದ ಶಿಕ್ಷಣ ಸನ್ಮಾರ್ಗ ಕಡೆಯವರೆಗೂ ಜೊತೆಯಲ್ಲಿ ಇರುತ್ತದೆ ಯಾರು ಅದನ್ನ ಕದಿಯಲು ಸಾಧ್ಯವಿಲ್ಲ ಇಂತಹ ಸಂದರ್ಭದಲ್ಲಿ ಅವರ ಋಣವನ್ನು ತೀರಿಸಲು ಗುರುವಂದನಾ ಕಾರ್ಯಕ್ರಮವನ್ನು ಮಾಡಿ ಗುರುಗಳನ್ನು ಸತ್ಕಾರ ಮಾಡಿದ್ದೇವೆ ಇದರಿಂದ ನಮಗೆ ಸಾರ್ಥಕ ಭಾವನೆ ಉಂಟಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಮಂಜುಳಾ ಉಮಾಪತಿ ಕುಮಾರ್ ರವೀಂದ್ರ ರೆಡ್ಡಿ ಬಿ ನಾಗರಾಜು ಆರ್ ಗೋವಿಂದರಾಜು ಮುನೇಗೌಡ ಸಂಪತ್ ಕುಮಾರ್ ಮುನಿರಾಜು ಭಾರತಿ ಎಂ ವೆಂಕಟಲಕ್ಷ್ಮಿ ವಿದ್ಯಾರ್ಥಿಗಳಾದ ಬಹದ್ದೂರ್ ಪುರ ರವಿ ಪೂರ್ಣಿಮಾ ರಾಮು ಪ್ರತಿಮಾ ಯುವರಾಜ್ ಮೋಹನ್ ಮುನಾವರ್ ಪಾಷ ಮುನಿರಾಜು ಕರ್ಪೂರ ಮಂಜು ಭಾಸ್ಕರ್ ಸೋಮಶೇಖರ್ ಬಾಲು ನಾಗೇಶ್ ಶಿಲ್ಪಾ ಅರುಣ ಗೀತಾ ರಶ್ಮಿ ಆದೂರು ಮೋಹನ್ ಭಾಗ್ಯ ಎಸ್ ಎನ್ ಹರೀಶ್ ಮುತ್ತುಕಟ್ಟಿ ಭಾಗ್ಯ ಡಿ ನಾರಾಯಣ್ ಅಂಬರೀಶ್ ಇತರರಿದ್ದರು