ಬೆಸ್ಕಾಂ ಇಲಾಖೆಯ ಅಧಿಕಾರಿಗಳ ನಿರ್ಲಕ್ಷತನಕ್ಕೆ ಬಡ ಕುಟುಂಬದ ಮಹಿಳೆ ಹಾಗೂ ಸೀಮೆ ಹಸುಸಾವು…
ಮಧುಗಿರಿ ತಾಲೂಕು ಮಿಡಿಗೇಶಿ ಹೋಬಳಿ ಲಕ್ಲಹಟ್ಟಿಗ್ರಾಮದ ವಾಸಿಯಾದ ಸುಮಾರು 45 ವರ್ಷ ವಯಸ್ಸುಳ್ಳ ರತ್ನಮ್ಮ ಕೋಂ ಸಿದ್ದಣ್ಣ ಎಂಬ ಮಹಿಳೆಯು ಪ್ರತಿನಿತ್ಯದಂತೆ ಹಸುಗಳನ್ನು ಮೇಯಿಸಲು ಹೋಗುತ್ತಿದ್ದಳು. ಅದರಂತೆ ಇಂದು ಹಸುವು ಉಗರಡ್ಡಿ ಎಂಬುವವರಜಮೀನಿನಲ್ಲಿ ಮೇಯುತಿದ್ದಾಗ ಹಸುವಿನ ವಿದ್ಯುತ್ ಸರಬರಾಜು ತಂತಿಯೋ ಕೆಳಗಡೆ ಬಿದ್ದು ಸೀಮೆ ಹಸುವಿನ ಕಾಲಿಗೆ ಸಿಕ್ಕಿಕೊಂಡು ಜೋರಾಗಿ ಹಸು ಚೀರಾಟಗೊಂಡಾಗ. ರತ್ನಮ್ಮ ಎಂಬವರುಓಡಿ ಹೋಗಿ ಹಸುವಿನ ಕಾಲಿಗೆ ಸಿಕ್ಕಿಕೊಂಡಿರುವ ವಿದ್ಯುತ್ ಸರಬರಾಜು ತಂತಿಯನ್ನು ತೆಗೆಯಲು ಹೋದಾಗ ಅವರ ಮೇಲೆ ತಂತಿ ಬಿದ್ದು ಆ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ. ಘಟನಾ ಸ್ಥಳಕ್ಕೆ ಮಿಡಿಗೇಶಿ ಬೆಸ್ಕಾಂ ಇಲಾಖೆಯ ಸೆಕ್ಷನ್ ಆಫೀಸರ್ ಅಕ್ರಮ್ ಪಾಷಾ ರವರು ಭೇಟಿ ನೀಡಿದ್ದಾರೆ. ರತ್ನಮ್ಮ ರನ್ನು ಮರಣೋತ್ತರ ಪರೀಕ್ಷೆಗಾಗಿ ಮಧುಗಿರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಇರಿಸಲಾಗಿದೆ ಎಂದು ತಿಳಿಸಿದರು.
ಈ ಘಟನೆಗೆ ಸಂಬಂಧಿಸಿದಂತೆ ಪತ್ರಿಕೆಯವರು ಸಂಬಂಧ ಪಟ್ಟ ಬೆಸ್ಕಾಂ ಇಲಾಖೆಯ ಸೆಕ್ಷನ್ ಆಫೀಸರ್ ಅವರನ್ನು ಫೋನ್ ಮುಖಾಂತರ ಸಂಪರ್ಕಿಸಿದಾಗ ಈ ಘಟನೆಯ ಬಗ್ಗೆ ತಮ್ಮ ಅಭಿಪ್ರಾಯವೇನು ಎಂದು ಕೇಳಿದಾಗ ನಾವು ಯಾವುದೇ ತಪ್ಪು ಮಾಡಿರುವುದಿಲ್ಲ ನಾವು ದಕ್ಷ ಪ್ರಮಾಣಿಕವಾಗಿ ಕೆಲಸ ಮಾಡುತ್ತಿರುತ್ತೇವೆ ನಾವು ಸಹ ಈ ಭಾಗದವರೇ ಆಗಿರುತ್ತೇವೆ ತಮ್ಮ ಗಮನಕ್ಕೆ ಬಂದಿರುವುದಿಲ್ಲ ಎಂದು ಹೇಳಿರುತ್ತಾರೆ ಮತ್ತೆ ಇಲಾಖೆಯ ಲೈನ್ ಮ್ಯಾನ್ ಗಳು ಕೆಲಸ ಮಾಡುತ್ತಿಲ್ಲವೇ ಇದರ ಬಗ್ಗೆ ಗಮನ ಹರಿಸಿದಾಗ ಕೆರೆಯಲ್ಲಿ ನೀರಿರುವುದಿಲ್ಲ ಅತಿ ಹೆಚ್ಚಿನದಾಗಿ ಹುಲ್ಲು ಬೆಳೆದಿರುವುದರಿಂದ ವಿದ್ಯುತ್ ಸರಬರಾಜು ತಂತಿಯಾಗು ಹೋಗಿ ಬಿದ್ದಿರುವುದು ಕಾಣಿಸುವುದಿಲ್ಲ ಎಂದು ಹೇಳಿರುತ್ತಾರೆ. ಈಗಾಗಲೇ ಸಾವಿಗೀಡಾಗಿರುವ ಕುಟುಂಬಕ್ಕೆ ತಮ್ಮ ಇಲಾಖೆ ವತಿಯಿಂದ ಪರಿಹಾರ ಏನಾದರೂ ಕಲ್ಪಿಸಿ ಕೊಡುವವರೇ ಎಂದು ಕೇಳಿದಾಗ ನಮ್ಮ ಇಲಾಖೆಯಿಂದ ಸುಮಾರು 6 ಲಕ್ಷ ರೂಪಾಯಿಗಳನ್ನು ಕೊಡಿಸುವುದಾಗಿ ತಿಳಿಸುತ್ತಾರೆ ಮತ್ತು ಇದರ ಜೊತೆಯಲ್ಲಿ ಸೀಮೆಹಸು ಸಹ ಸಾವನ್ನಪ್ಪಿ ಆ ಕುಟುಂಬಕ್ಕೆ ತುಂಬಾ ನಷ್ಟವಾಗಿರುತ್ತದೆ ಮತ್ತು ರತ್ನಮ್ಮ ಎಂಬವರಿಗೆ ಒಂದು ಹೆಣ್ಣು ಮಗಳು ಸಹ ಇರುತ್ತಾಳೆ. ಇಷ್ಟೆಲ್ಲಾ ಅನಾಹುತಕ್ಕೆ ಕಾರಣಕರ್ತರು ಬೆಸ್ಕಾಂ ಇಲಾಖೆಯ ಅಧಿಕಾರಿಗಳ ಬೇ ಜವಾಬ್ದಾರಿತನ ಹಾಗೂ ಉದಾಸಿನವೇ ಪ್ರಮುಖ ಕಾರಣವೆಂದು ಊರಿನ ಗ್ರಾಮಸ್ಥರ ಆಕ್ರೋಶ
ಆದ್ದರಿಂದ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಈ ಬಡ ಕುಟುಂಬಕ್ಕೆ ಸರ್ಕಾರದಿಂದ ಆದಷ್ಟು ಬೇಗನೆ ಪರಿಹಾರ ಕೊಡಿಸುವವರೇ ಕಾದು ನೋಡಬೇಕಾಗಿದೆ.
ವರದಿ. ಲಕ್ಷ್ಮಿಪತಿ ದೊಡ್ಡ ಯಲ್ಕೂರು