IMG 20220820 WA0044

ಮಧುಗಿರಿ:ಪೊಲೀಸ್ ಜನಸಂಪರ್ಕ ಸಭೆ..!

DISTRICT NEWS ತುಮಕೂರು

**ಸಮಾಜದಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟಲು ನಾಗರೀಕರು ಜಾಗೃತರಾ ಗಿತಕ್ಷಣವೇ ದೂರುಗಳನ್ನು ನೀಡುವ ಮೂಲಕ ಪೊಲೀಸರೊಂದಿಗೆ ಸಹಕರಿಸಬೇಕಾಗಿದೆ ಎಂದು ಡಿವೈಎಸ್ಪಿ ಕೆ. ಎಸ್. ವೆಂಕಟೇಶ್ ನಾಯ್ಡು* …..

ಮಧುಗಿರಿ : ಪಟ್ಟಣದ ಒಕ್ಕಲಿಗರ ಸಮುದಾಯ ಭವನದಲ್ಲಿ ಗುರುವಾರದಂದು ನಡೆದಪೊಲೀಸ್ ಜನಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜನಸಂಪರ್ಕ ಸಭೆಯಲ್ಲಿ ನಾಗರೀಕರು ಸಭೆಯಲ್ಲಿ ಬರಿ ದೂರುಗಳನ್ನು ಹೇಳುತ್ತಾ ಇದ್ದರೆ ಸಾಲದು ಘಟನೆ ನಡೆದ ತಕ್ಷಣವೇ ಸಂಬಂಧಪಟ್ಟ ಪೊಲೀಸ್ ಠಾಣೆಗಳಲ್ಲಿ ಲಿಖಿತ ವಾಗಿ ಅಥವಾ ದೂರವಾಣಿ ಮೂಲಕ ವಾಗಲಿ.ದೂರು ಸಲ್ಲಿಸಿದರೆ ಅಕ್ರಮ ವಾಗಿ ನಡೆಯುವ ಚಟುವಟಿಕೆಗಳನ್ನು ತಡೆಗಟ್ಟಲು ಸಾಧ್ಯ ಎಂದರು.

ಐ ಡಿ ಹಳ್ಳಿ ಹೋಬಳಿಯ ವಿಠಲಾಪುರ ಐ.ಡಿ.ಹಳ್ಳಿ ಗ್ರಾಮದಲ್ಲಿರುವ ಮದ್ಯದ ಅಂಗಡಿಗಳನ್ನು ಸ್ಥಳಾಂತರಿಸುವಂತೆ ಅಲ್ಲಿನ ನಾಗರಿಕರು ಜನಸಂಪರ್ಕ ಸಭೆಯಲ್ಲಿ ಪೊಲೀಸರ ಗಮನಕ್ಕೆ ತಂದರು ಶಾಲಾ ಕಾಲೇಜು ಆವರಣಗಳಲ್ಲಿ ಕುಡಿದು ಗಲಾಟೆ ಮಾಡುವುದು ಐ.ಡಿ. ಹಳ್ಳಿ ಆಸ್ಪತ್ರೆಯಲ್ಲಿ ಪ್ರತಿ ದಿನ ಮಹಿಳಾ ಸಿಬ್ಬಂದಿಯ ಕಾರ್ಯ ನಿರ್ವಹಿ ಸಲು ಕುಡುಕರ ಹಾವಳಿ ಯಿಂದಾಗಿ ತುಂಬಾ ತೊಂದರೆಗಳಾಗುತ್ತಿದೆ . ಎಂದರು
ಇತ್ತೀಚೆಗೆ ವಿಠಲಾಪುರ ಗ್ರಾಮದಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು ಕುಡುಕರ ಹಾವಳಿ ಹೆಚ್ಚಾಗಿ ಅಲ್ಲಿನ ಶಿಕ್ಷಕಿಯರನ್ನು ಮತ್ತು ವಿದ್ಯಾರ್ಥಿಗಳನ್ನುನೃತ್ಯ ಮಾಡಲು ಬಿಡದೆಗಲಾಟೆ ಮಾಡಿದಂತಹ ಸನ್ನಿವೇಶ ನಿರ್ಮಾಣವಾಗಿತ್ತು. ಹರಳಾಪುರ ಮತ್ತು ಕೊಂಡವಾಡಿ ರಸ್ತೆಗಳಲ್ಲಿ ಕುಡುಕರ ಹಾವಳಿ ಇತ್ತೀಚೆಗೆ ಹೆಚ್ಚಾಗಿದ್ದು ರಾತ್ರಿ ವೇಳೆಯಲ್ಲಿ ಕಿರುಚಾಟ ಹೆಚ್ಚಾಗಿ ಗ್ರಾಮಸ್ಥರ ಶಾಂತಿಯುತವಾಗಿ ನೆಮ್ಮದಿಯಿಂದ ಜೀವನ ಮಾಡಲುಭಂಗವಾಗುತ್ತಿದೆ ಎಂದು. ಸಭೆಯಲ್ಲಿ ವಿವರಿಸಲಾಯಿತು.
ಆಂಧ್ರದ ಗಡಿ ಭಾಗಗಳಲ್ಲಿ ಅಕ್ರಮ ಮದ್ಯ ಮಾರಾಟ ಹೆಚ್ಚಾಗುತ್ತಿದ್ದು ಇದನ್ನು ತಡೆಗಟ್ಟಬೇಕು ಎಂದು ಬಹುತೇಕ ನಾಗರಿಕರ ಆಗ್ರಹಿಸಿದರು ಆಗ ಮಾತನಾಡಿದ ಪೋಲಿಸರು ಈ ವಿಚಾರವಾಗಿ ಕ್ರಮ ಕೈಗೊಳ್ಳಲು ಅಬಕಾರಿ ಇಲಾಖೆಯವರಿಗೆ ಸೂಚಿಸಲಾಗುವುದು ಎಂದರು ತಿಳಿಸಿದರು.

ದಲಿತ ಮುಖಂಡ ದೊಡ್ಡೇರಿ ಕಣಿಮಯ್ಯ ಮಾತನಾಡಿ, ವಸತಿ ನಿಲಯಗಳಲ್ಲಿ ಆಹಾರದ ವ್ಯವಸ್ಥೆ ಸರಿಯಾಗಿ ನಡೆಯುತ್ತಿಲ್ಲ. ಈ ಬಗ್ಗೆ ಸಂಬಂಧಪಟ್ಟ ಇಲಾಖಾಧಿಕಾರಿಗಳು ಪೋಲಿಸ್ ಜನಸಂಪರ್ಕಸಭೆಯಲ್ಲಿ ಉತ್ತರ ನೀಡಬೇಕೆಂದು ಒತ್ತಾಯಿಸಿದಾಗ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಈ ಬಗ್ಗೆ ಪ್ರತಿನಿತ್ಯವೂ ಆಹಾರದ ಬಗ್ಗೆ ಮೊಬೈಲ್ ಮೂಲಕ ಅಪ್ ಲೋಡ್ ಆಗುತ್ತಿದೆ. ನಮಗೆ ಇಲ್ಲಿಯವರೆಗೆ ಸರಿಯಾದ ದೂರು ಬಂದಿಲ್ಲ. ವಸತಿ ನಿಲಯದಲ್ಲಿ ಆಹಾರ ವ್ಯತ್ಯಯವಾಗುತ್ತಿದೆಂದು ನಿರ್ಧಿಷ್ಟ ದೂರು ನೀಡಿದರೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಮಧುಗಿರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಸ್ವಚ್ಛತೆ ಕಾಣದೆ ರೋಗಿಗಳು ದಾಖಲಾದರೆ ಸರಿಯಾದ ರೀತಿಯಲ್ಲಿ ಚಿಕಿತ್ಸೆ ದೊರೆಯುತ್ತಿಲ್ಲ ಜೊತೆಗೆ ಮತ್ತೊಂದು ರೋಗ ಹರಡುವ ಸಾಧ್ಯತೆ ಹೆಚ್ಚಾಗಿದೆ, ವೈದ್ಯರನ್ನು ಭೇಟಿ ಮಾಡಲು ಚೀಟಿ ಪಡೆಯಬೇಕಾದರೆ ಸುಮಾರು ಗಂಟೆ ಗಟ್ಟಲೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ, ಮತ್ತುವಿಕಲಚೇತನರಿಗೆ ಸರಿಯಾದ ರೀತಿಯಲ್ಲಿ ಸ್ಪಂದನೆ ಮಾಡದೆ ಅವಮಾನ ಮಾಡಲಾಗುತ್ತಿದೆ ಎಂದು ಸಭೆಯಲ್ಲಿ ಆರೋಪಗಳ ಸುರಿಮಳೆ ಕೇಳಿ ಬಂದವು..

ಇತ್ತೀಚೆಗೆ ಜಯಮಂಗಲಿ ನದಿಯ ಪ್ರದೇಶಗಳಲ್ಲಿ ರಾತ್ರಿ ವೇಳೆ ಅಕ್ರಮ ಮರಳು ಸಾಗಾಣಿಕೆ ನಡೆಯುತ್ತಿದೆ ಇದನ್ನು ತಡೆಗಟ್ಟುವಂತೆ ಆ ಭಾಗದರೈತರು ಸಭೆಯ ಗಮನಕ್ಕೆ ತಂದರು ಕೆಎಸ್ಆರ್ ಟಿಸಿ ಬಸ್ಸುಗಳು ಖಾಸಗಿ ಬಸ್ ನಿಲ್ದಾಣದಲ್ಲಿ ನಿಲ್ಲಿಸದ ಕಾರಣ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೂ ಹಾಗೂರೋಗಿಗಳಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಇದಕ್ಕೆ ಪೋಲಿಸರು ಅಡ್ಡಪಡಿಸುತ್ತಿದ್ದಾರೆ ಎಂದು ಕೆಎಸ್ ಆರ್ ಟಿಸಿ ಬಸ್ ಚಾಲಕರು ಹೇಳುತ್ತಿರುವುದರಿಂದ ಕೋರಿಕೆ ಮೇರೆಗೆನಿಲುಗಡೆ ಮಾಡಲು ಅನುಮತಿ ನೀಡಬೇಕೆಂದು ಸಾರ್ವಜನಿಕರು ಸಭೆಯಲ್ಲಿ ಒತ್ತಾಯಿಸಿದರುಒತ್ತಾಯಿಸಿದರು.

ಕಾಟಗನಹಟ್ಟಿ, ಹುಣಸೆ ಮರದಹಟ್ಟಿ ಭಾಗದಲ್ಲಿ ಸುಮಾರು 70 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರತಿನಿತ್ಯ ಸಂಚರಿಸುತ್ತಿದ್ದು ಯಾವುದೇ ಬಸ್ಸುಗಳ ನಿಲುಗಡೆ ಮಾಡದ ಕಾರಣ ಖಾಸಗಿ ಆಟೋಗಳನ್ನು ಅವಲಂಬಿಸಿವಿದ್ಯಾರ್ಥಿಗಳು ಬರುವಂತಾಗಿದೆ. ಈ ಸಂದರ್ಭದಲ್ಲಿ ಮಾರ್ಗಮದ್ಯೆ ಆಟೋಗಳನ್ನು ತಡೆದುಪೊಲೀಸರು ದಂಡ ವಿಧಿಸುತ್ತಿರುವುದರಿಂದ ಅವರೂ ಸಹ ವಿದ್ಯಾರ್ಥಿಗಳನ್ನು ಹತ್ತಿಸಿಕೊಳ್ಳದ ಕಾರಣ ನಡೆದುಕೊಂಡು ಹೋಗುವ ಬರುವ ಪರಿಸ್ಥಿತಿ ನಿರ್ಮಾಣವಾಗಿದೆ ಆದ್ದರಿಂದ ಖಾಸಗಿ ಬಸ್ಸು ಮತ್ತು ಕೆಎಸ್ ಆರ್ ಟಿ ಸಿ ಬಸ್ಸುಗಳನ್ನು ಶಾಲಾ ಸಮಯದಲ್ಲಿ ನಿಲ್ಲಿಸುವಂತೆ ಸೂಚಿಸಬೇಕೆಂದು ಗ್ರಾಪಂ ಮಾಜಿ ಸದಸ್ಯ ಗೌಡಮುದ್ದಯ್ಯ ಸಭೆಯಲ್ಲಿ ಮನವಿ ಮಾಡಿದರು.

ಪಟ್ಟಣದ ಎಸ್ ಎಂ ಕೃಷ್ಣ ಬಡಾವಣೆ ಮತ್ತು ಬೆಂಕಿಪುರ ಬಡಾವಣೆಗಳಲ್ಲಿಸಮಾಜ ಘಾತುಕರ ಸಂಖ್ಯೆ ದಿನೇದಿನೇ ಹೆಚ್ಚಾಗುತ್ತಿದೆ, ಇದರಿಂದ ಅಶಾಂತಿ ಮೂಡುತ್ತಿದ್ದು, ಈ ಬಗ್ಗೆ ಪೊಲೀಸರು ನಿರಂತರವಾಗಿ ಬಿಟ್ ಮಾಡಿ ಅಂಥವರನ್ನು ಮಟ್ಟ ಹಾಕಬೇಕೆಂದು ರಾಜ್ಯ ದಲಿತ ಸಂಘರ್ಷ ಸಮಿತಿಯ ಅಧ್ಯಕ್ಷ ರೊಬ್ಬರು ಸಭೆಯಲ್ಲಿ ಮನವಿ ಮಾಡಿಕೊಂಡರು.

ಇತ್ತೀಚೆಗೆ ವಿದ್ಯಾರ್ಥಿನಿಯರು ಹಾಸ್ಟೆಲ್ ಗೂ ಬಾರದೇ ಶಾಲೆಗೂ ಹೋಗದೇ ಎಲ್ಲೆಂದರಲ್ಲಿ ತಿರುಗಾಡುತ್ತಿರುವುದರಿಂದ ಅಪರಾಧ ಪತ್ತೆ ಹಚ್ಚುವುದು ಕಷ್ಟವಾಗುತ್ತಿದೆ ಎಂದು ಸಿಡಿಪಿಒ ಅನಿತಾ ಸಭೆಯಲ್ಲಿ ತಿಳಿಸಿದರು. ಈ ವಿಚಾರವಾಗಿಮನೆಯಲ್ಲಿ ಪೋಷಕರು ತಮ್ಮ ಮಕ್ಕಳ ವಿದ್ಯಾಭ್ಯಾಸ ಮಾಡುತ್ತಿದ್ದಾರೆಯೇ ಕಾಲೇಜುಗಳಿಗೆ ಹೋಗುತ್ತಿದ್ದಾರೆಯ ಬಗ್ಗೆ ಆಗಾಗ್ಗೆ ಗಮನಹರಿಸಿದರೆ ತುಂಬಾ ಅನುಕೂಲ ಎಂದು ತಿಳಿಸಿದರು. ಕುಟುಂಬದಲ್ಲಿ ಮಕ್ಕಳಿಗೆ ಸಂಸ್ಕಾರ ಕಲಿಸಿರಬೇಕು ತಮ್ಮ ಮಕ್ಕಳನ್ನು ತಾವೇ ಪ್ರಶ್ನೆ ಮಾಡಬೇಕು ಬೇರೆಯವರನ್ನು ಪ್ರಶ್ನೆ ಮಾಡುವುದು ಬೇಡ ಸಮಾಜದಲ್ಲಿ ಇತ್ತೀಚೆಗೆ ಮಾನ ಮರ್ಯಾದೆಗೆ ಅಂಜಿ ಹತ್ಯೆ ಪ್ರಕರಣಗಳು ಸಾಕಷ್ಟು ಆಗುತ್ತಿವೆ. ಇದರ ಜೊತೆಯಲ್ಲಿ ಬಾಲ್ಯ ವಿವಾಹ ಗಳು ಆಗುವುದನ್ನು ತಡೆಗಟ್ಟಲು ಪೋಷಕರೇ ಸಹಕರಿಸಬೇಕೆಂದು ಸಭೆಯಲ್ಲಿ ತಿಳಿಸಿದರು. .

ಪೊಲೀಸ್ ಜನಸಂಪರ್ಕ ಸಭೆಯಲ್ಲಿ7 ಮಧುಗಿರಿ.ಸಿಪಿಐ ಎಂ. ಎಸ್. ಸರ್ದಾರ್, ಬಡವನಹಳ್ಳಿ ಪಿಐ ಹನುಮಂತರಾಯಪ್ಪ, ಪಿಎಸ್ ಐಗಳಾದ ಕೆ.ಟಿ.ರಮೇಶ್, ಮಿಡಿಗೇಶಿ ಪಿಎಸ್ಐ ತಾರಾಸಿಂಗ್, ಕೊಡಿಗೇನಹಳ್ಳಿ ಪಿಎಸ್ ಐ ನಾಗರಾಜು, ಕೃಷಿ ಇಲಾಖೆ ಸಹಾಯಕ ನಿರ್ದೇಶಕರಾದ ಹನುಮಂತರಾಯಪ್ಪ, ಎಆರ್ ಟಿಒ ದೇವಿಕಾ, ಅಬಕಾರಿ ಇಲಾಖೆ ಸಬ್ ಇನ್ಸ್ ಪೆಕ್ಟರ್ ರಾಮಮೂರ್ತಿ ಮತ್ತು ಮಧುಗಿರಿ ತಾಲ್ಲೂಕಿನ ನಾಗರಿಕರು ಮತ್ತು ಸಾರ್ವಜನಿಕರು ಜನಸಂಪರ್ಕ ಸಭೆಯಲ್ಲಿ ಭಾಗವಹಿಸಿದ್ದರು.

ವರದಿ. ಲಕ್ಷ್ಮಿಪತಿ ದೊಡ್ಡ ಎಲ್ಕೂರು