ನಕಾಶೆ ರಸ್ತೆ ಉಳಿಸಿಕೊಡುವಂತೆ ರೈತರ ಮನವಿ.
ಪಾವಗಡ : ತಾಲೂಕಿನ ಕಡಪಲಕೆರೆ ಗ್ರಾಮದ
ಪೂರ್ವ ಮತ್ತು ಪಶ್ಚಿಮ ಭಾಗಕ್ಕೆ ಖಾಸಗಿ ಕಂಪನಿಯ ಸೋಲಾರ್ ಪಾರ್ಕ್ ನಿರ್ಮಾಣ ವಾಗುತಿದ್ದು ಸುತ್ತಮುತ್ತಲಿನ ರೈತರು ಮತ್ತು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.
ಕಡಪಲಕೆರೆಯಿಂದ ಕೋಮರ್ಲ ಹಳ್ಳಿ ಮತ್ತು ಸಿಂಗಾರೆಡ್ಡಿ ಹಳ್ಳಿ ಗೆ ಸಂಪರ್ಕ ಕಲ್ಪಿಸುವ ಸುಮಾರು 3 ಕಿಲೋಮೀಟರ್ ಉದ್ದದ ನಕಾಶೆ ರಸ್ತೆ ಹಲವು ದಶಕಗಳಿಂದ ಇದ್ದು.
ಈಗ ಸೋಲಾರ್ ಪಾರ್ಕ್ ನಿರ್ಮಾಣ ಕಾಮಗಾರಿಯಿಂದಾಗಿ ಬಂದ್ ಆಗುವ ಆತಂಕದಲ್ಲಿ ಸುತ್ತಮುತ್ತಲಿನ ರೈತರಿದ್ದಾರೆ.
ಸೋಲಾರ್ ಪಾರ್ಕ್ ಕಾಮಗಾರಿ ಚಾಲ್ತಿಯಲ್ಲಿದ್ದು ಈಗಾಗಲೇ ನಕಾಶೆಯನ್ನು ನೆಲಸಮ ಮಾಡಿದ್ದಾರೆಂದು ರೈತರು ಆರೋಪಿಸಿದ್ದಾರೆ.
ನಕಾಶೆ ರಸ್ತೆ ಬಂದ್ ಆದರೆ ಕೋಮರ್ಲ ಹಳ್ಳಿ ಮತ್ತು ಸಿಂಗ ರೆಡ್ಡಿ ಹಳ್ಳಿಗೆ ಸಂಪರ್ಕ ಕಡಿತವಾಗಿ ಈ ಭಾಗದ ರೈತರಿಗೆ ,ಸಾರ್ವಜನಿಕರಿಗೆ, ಕುರಿಗಾಹಿಗಳಿಗೆ, ಧನಗಾಹಿಗಳಿಗೆ ತೊಂದರೆ ಉಂಟಾಗುತ್ತದೆ ಎಂದು ಕೋಮಾರ್ಲಹಳ್ಳಿ ರೈತರಾದ ಸುಬ್ಬ ರಾಯಪ್ಪ, ಶಾಂತ ರಾಜು, ಕಡಪಲ ಕೆರೆಯ ರವಿ, ಶ್ರೀನಿವಾಸ್ , ಸಿಂಗಾರೆಡ್ಡಿ ಹಳ್ಳಿಯ ತಿಪ್ಪೇಸ್ವಾಮಿ, ವರದರಾಜು, ಗೌರಿಶಪ್ಪ ಆತಂಕ ವ್ಯಕ್ತಪಡಿಸಿದರು.
ಒಂದು ವೇಳೆ ನಕಾಶೆ ರಸ್ತೆ ಬಂದಾದರೆ ತಾವು ಕಡಪಲ ಕೆರೆಯಿಂದ ಅರೆ ಕ್ಯಾತನಹಳ್ಳಿ ಮೂಲಕ ಕೋಮರ್ಲ ಹಳ್ಳಿಗೆ ಹೋಗಲು ಸುಮಾರು 5 km ದೂರ ಪ್ರಯಾಣಿಸ ಬೇಕಾಗುತ್ತದೆ ಎಂದರು.ಆದ್ದರಿಂದ ಕೂಡಲೆ ಸಂಬಂಧಪಟ್ಟಂತ ಪಟ್ಟ ಅಧಿಕಾರಗಳು ತಮ್ಮ ಸಮಸ್ಯೆಗೆ ಪರಿಹಾರ ಹುಡುಕಿ ಕೊಡಬೇಕೆಂದು ಗ್ರಾಮಸ್ಥರು ಮನವಿ ಮಾಡಿದರು.
ವರದಿ. ಶ್ರೀನಿವಾಸಲು.ಎ