IMG 20210108 WA0002

ಪಾವಗಡ: ರೈತರ ಪ್ರತಿಭಟನೆ….!

DISTRICT NEWS ತುಮಕೂರು

ಪಾವಗಡ : ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರ ಸುಸ್ಥಿಯಾಗಿರುವ ಸಾಲದ ವಿಚಾರವಾಗಿ ತಾರತಮ್ಯ ನೀತಿಯನ್ನು ಅನುಸರಿಸುತ್ತಿವೆ ಎಂದು ಪೂಜಾರಪ್ಪ ಆರೋಪಿಸಿದರು.

ತಾಲೂಕಿನ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕು ಘಟಕದ ಅಧ್ಯಕ್ಷರಾದ ಪೂಜಾರಪ್ಪನವರ ನೇತೃತ್ವದಲ್ಲಿ  ಪಟ್ಟಣದ ಕರ್ನಾಟಕ ಗ್ರಾಮೀಣ ಬ್ಯಾಂಕ್ ನ ಮುಂದೆ ನೂರಾರು ರೈತರು ಪ್ರತಿಭಟಿಸಿ ಬ್ಯಾಂಕ್ ನ ವ್ಯವಸ್ಥಾಪಕರಾದ ದಯನಂದ್ ರವರಿಗೆ ಮನವಿ ಪತ್ರ ನೀಡಿ ನಂತರ ಮಾತನಾಡುತ್ತಾ ,

ಎಸ್ ಬಿ ಐ ಬ್ಯಾಂಕ್ ನ ನಿಯಮದಂತೆ ತಾಲ್ಲೂಕಿನ ಎಲ್ಲಾ ಬ್ಯಾಂಕುಗಳು  ಒಂದೇ ತರಹದ  ಕಾನೂನನ್ನು ರೂಪಿಸಿ ರೈತರ ನೆರವಿಗೆ ಧಾವಿಸಲಿ.
ಈ  ಹಿಂದೆ ರೈತರಿಗೆ  ಬ್ಯಾಂಕುಗಳು ತಿಳಿಸಿದಂತೆ 1 ಲಕ್ಷ ರೂಪಾಯಿ ಸುಸ್ಥಿ ಸಾಲಿ ಇದ್ದರೆ ಶೇಕಡಾ 10 ರಷ್ಟು ಅಂದರೆ 10 ಸಾವಿರ ಮರುಪಾವತಿಸ ಬೇಕು ಹಾಗೂ 6 ವರ್ಷದ ಕೆಳಗೆ ಇರುವ ಸಾಲಗಳಿಗೆ 1 ಲಕ್ಷಕ್ಕೆ 15,000 ಮರುಪಾವತಿ ಮಾಡಿದರೆ ಒನ್ ಟೈಮ್ ಸೆಟಲ್ಮೆಂಟ್ ನ ನಿಯಮದಡಿಯಲ್ಲಿ ರೈತರು ಋಣ ಮುಕ್ತರಾಗಬಹುದೆಂದು ತಿಳಿಸಲಾಗಿತ್ತು.ಆದರೆ ಕೆಲವು ಬ್ಯಾಂಕ್ ಗಳು ಈ ನಿಯಮವನ್ನು ಗಾಳಿ ತೂರಿ ರೈತರ ಬದುಕಿನಲ್ಲಿ ಚಲ್ಲಾಟವಾಡುತ್ತಿವೆ.

ತಾಲ್ಲೂಕಿನ ಜನತೆ ಈಗಾಗಲೆ ಭೀಕರ ಕೊರೋನದಿಂದ ತತ್ತರಿಸಿದ್ದಾರೆ ಇನ್ನೂ ಬ್ಯಾಂಕ್ ಗಳ ದ್ವಂದ್ವ ನೀತಿಗಳ ವಿರುದ್ಧವಾಗಿ ರೈತರು ಬೀದಿಗಿಳಿಯುವ ಮುಂಚಿತವಾಗಿ ಬ್ಯಾಂಕ್ ಗಳು ರೈತರ ನೆರವಿಗೆ ಧಾವಿಸ ಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ತಾಲೂಕಿನ ಎಲ್ಲಾ ಬ್ಯಾಂಕುಗಳ ಮುಂದೆ ಧರಣಿ ಆರಂಭಿಸಲಾಗುವುದು. ಇದಕ್ಕೂ ಮನ್ನಣೆ ಕೊಡದಿದ್ದಲ್ಲಿ ಅಂತ ಅಂಗತವಾಗಿ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಕರ್ನಾಟಕ ಗ್ರಾಮೀಣ ಬ್ಯಾಂಕಿನ ಮ್ಯಾನೇಜರ್
ದಯಾನಂದ್ ಅವರು ಮಾತನಾಡುತ್ತಾ , ರೈತರು ನೀಡಿರುವ ಮನವಿ ಪತ್ರವನ್ನು ನಮ್ಮ ಮೇಲಧಿಕಾರಿಗಳ ಗಮನಕ್ಕೆ ತಂದು ಅವರು ಸೂಚಿಸುವ ಮಾರ್ಗದರ್ಶನದಂತೆ ರೈತರಿಗೆ ಅನುಕೂಲವಾಗುವಂತಹ ನಿಯಮವನ್ನು ರೂಪಿಸುವ ಪ್ರಮಾಣಿಕ ಪ್ರಯತ್ನವನ್ನು ಮಾಡಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಹಸಿರು ಸೇನೆಯ ತಾಲೂಕು ಘಟಕದ ಕಾರ್ಯದರ್ಶಿಯಾದ ಕೆ ಶಿವರಾಜು, ಯುವ ಘಟಕದ ಅನಿಲ್, ಉಪಾಧ್ಯಕ್ಷರಾದ ಅಶ್ವತಪ್ಪ ,ಚಿತ್ತಯ್ಯ ,ಎಂಎನ್ ವಿಜಯನರಸಿ

ವರದಿ:  ಬುಲೆಟ್ ವೀರಸೇನ ಯಾದವ್