IMG 20220502 WA0010

ಪಾವಗಡ ತಾಲೂಕು ಇತಿಹಾಸ ದರ್ಶನ ಪುಸ್ತಕ ಬಿಡುಗಡೆ…..

DISTRICT NEWS ತುಮಕೂರು

ಪಾವಗಡ: ಪಟ್ಟಣದ ಹರ್ಷಿತಾ ಸಮುದಾಯ ಭವನದಲ್ಲಿ ಪಾವಗಡ ತಾಲೂಕು ಇತಿಹಾಸ ದರ್ಶನ ಎಂಬ ಪುಸ್ತಕದ ಬಿಡುಗಡೆ ಕಾರ್ಯಕ್ರಮ ವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಡಾ.ಮಂಜುಳ ಉದ್ಘಾಟನೆ ಮಾಡಿ ಮಾತನಾಡುತ್ತಾ, ಇತಿಹಾಸ ತಿಳಿಯದಿದ್ದರೆ ನಮ್ಮ ಮುಂದಿನ ಭವಿಷ್ಯ ಊಹಿಸಲು ಸಾಧ್ಯವಿಲ್ಲ ಇದು ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ಸಂಬಂಧ ಕಲ್ಪಿಸುವ ಆಚರಣೆ ಒಂದು ಭಾಗ. ಇತಿಹಾಸದ ಕುರುಹುಗಳನ್ನು ಸಂರಕ್ಷಣೆ ಮಾಡಿ ಮುಂದಿನ ಪೀಳಿಗೆಗೆ ಅದರ ಮಾಹಿತಿ ನೀಡುವುದು ನಿಮ್ಮ ನಮ್ಮೆಲ್ಲರ ಕರ್ತವ್ಯ ಎಂದರು. ಪ್ರತಿ ಗ್ರಾಮಗಳಲ್ಲಿರುವ ಐತಿಹಾಸಿಕ ಸ್ಮಾರಕಗಳನ್ನು ಸಂರಕ್ಷಣೆ ಮಾಡಿ, ಅವುಗಳನ್ನು ಭದ್ರಪಡಿಸಿ ದಾಗ ಮಾತ್ರ ಮುಂದಿನ ಪೀಳಿಗೆಗೆ ಅದರ ಪ್ರಾಮುಖ್ಯತೆ ತಿಳಿಯುತ್ತದೆ ಎಂದರು.

ನಂತರ ಶಾಸಕ ವೆಂಕಟರವಣಪ್ಪ, ಮಾತನಾಡುತ್ತಾ, ನಮಗೆ ಮೊದಲು ಸ್ಥಳೀಯ ಇತಿಹಾಸದ ಬಗ್ಗೆ ಅರಿವಿರಬೇಕು, ಸ್ಥಳೀಯ ಇತಿಹಾಸ ರಚನೆ ಮಾಡುವ ಇತಿಹಾಸಕಾರರಿಗೆ ಪ್ರೋತ್ಸಾಹ ನೀಡಬೇಕು , ಇತಿಹಾಸ, ಸಾಹಿತ್ಯವನ್ನು ಬೆಳಕಿಗೆ ತರುವವರಿಗೆ ಬೆಂಬಲ ನೀಡುವುದು ಪ್ರತಿಯೊಬ್ಬರ ಕರ್ತವ್ಯ ಎಂದರು.
ಇತಿಹಾಸ ಸಂಶೋದಕ ಲಕ್ಷ್ಮಣ್ ತೆಲಗಾವಿ ಮಾತನಾಡುತ್ತಾ, ತಾಲ್ಲೂಕಿನ ಇತಿಹಾಸ ತಿಳಿಸುವಲ್ಲಿ ತಾಲ್ಲೂಕು ಇತಿಹಾಸ ದರ್ಶನ ಪುಸ್ತಕ ತುಂಬಾ ಅನುಕೂಲಕರವಾಗಿದೆ ಎಂದರು. ಸ್ಥಳೀಯ ಇತಿಹಾಸದ ಜೊತೆಗೆ ಸ್ಥಳೀಯಸಂಸ್ಕೃತಿ , ಆಚಾರ ವಿಚಾರಗಳು, ಸಾಂಸ್ಕೃತಿಕ ಪರಂಪರೆ, ವೈಶಿಷ್ಟ್ಯತೆಗಳನ್ನು ತಿಳಿಸಿಕೊಡುತ್ತದೆ. ಎಂದರು. ಈ ಕೃತಿ ರಚಿಸುವಲ್ಲಿ ಚೆಲುವರಾಜನ್ ಅವರ ಶ್ರಮ ಹಲ ಡಾಕ್ಟರೇಟ್ ಪದವಿಗಳ ಶ್ರಮಕ್ಕೆ ಸರಿ ಸಮನಾಗಿದೆ ಎಂದರು.
ಪಾವಗಡ ದರ್ಶನ ಕೃತಿ ಲೇಖಕ ವಿ.ಆರ್. ಚೆಲುವರಾಜನ್ ಮಾತನಾಡುತ್ತಾ, ಪಾವಗಡದ ಇತಿಹಾಸದಲ್ಲಿ ತನ್ನದೇ ಆದಂತಹ ಪ್ರಾಮುಖ್ಯತೆ ಪಡೆದಿತ್ತು, ಈ ಪ್ರದೇಶವು ಹಿಂದಿನ ಕಾಲದಲ್ಲಿ ಅತ್ಯಂತ ಶ್ರೀಮಂತಿಕೆಯಿಂದ ಕೂಡಿದ ಪ್ರದೇಶವಾಗಿತ್ತು ಎಂಬುದನ್ನು ಇತಿಹಾಸ ಓದಿದಾಗ ಮಾತ್ರ ನಮಗೆ ಅರ್ಥವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ಕುಲಸಚಿವ ಡಾ. ಎಂ. ಕೊಟ್ರೇಶ್, ವಿ.ಸಿ.ರಘುನಂದನ್,
ಇತಿಹಾಸ ಸಂಶೋಧಕ ಡಾ. ಯೋಗೀಶ್ವರಪ್ಪ, ಡಾ. ನಂಜುಂಡಸ್ವಾಮಿ, ಡಾ. ನಂದೀಶ್ವರ್, ಇತಿಹಾಸ ಲೇಖಕ ಹೊ.ಮಾ.ನಾಗರಾಜು, ಸಾಹಿತಿ ಸಣ್ಣನಾಗಪ್ಪ, ಎಸ್ ಎಸ್ ಕೆ ಸಂಘದ ಅಧ್ಯಕ್ಷ ಕೆ.ವಿ.ಶ್ರೀನಿವಾಸ್, ಉಪಾಧ್ಯಕ್ಷ ಆನಂದರಾವ್, ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಕಟ್ಟಾ ನರಸಿಹ ಮೂರ್ತಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಐ.ಎ ನಾರಾಯಣಪ್ಪ, ಬ್ಯಾಡನೂರು ನಾಗಬೂಷಣ್, ಚನ್ನಬಸಪ್ಪ, ಆರ್ ಟಿ ಖಾನ್ ಉಪಸ್ಥಿತರಿದ್ದರು.

ವರದಿ: ಶ್ರೀನಿವಸಲು ಎ