IMG 20250118 WA0004

ಪಾವಗಡ : ಶಿಕ್ಷಕರು – ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ನಿರ್ಮಾತೃಗಳು….!.

DISTRICT NEWS ತುಮಕೂರು

ಶಿಕ್ಷಕರು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ನಿರ್ಮಾತೃಗಳು.

ಪಾವಗಡ : ವಿದ್ಯಾರ್ಥಿಗಳ ಜೀವನದಲ್ಲಿ ಶಿಕ್ಷಕರು ಪ್ರಮುಖ ಪಾತ್ರ ವಹಿಸುವರೆಂದು ವಿದ್ಯಾರ್ಥಿಗಳನ್ನು ಉನ್ನತ ಮಟ್ಟಕ್ಕೆ
ಕೊಂಡೊಯ್ಯುವಲ್ಲಿ ಶಿಕ್ಷಕರ ಪಾತ್ರ ಶ್ಲಾಘನೀಯವೆಂದು ಸಲೀ ಮುಲ್ಲಾ ಖಾನ್ ತಿಳಿಸಿದರು.

ಪಟ್ಟಣದ ಶ್ರೀ ಶನಿ ಮಹಾತ್ಮ ದೇವಾಲಯದ ಹಿಂಭಾಗದ ಸರ್ಕಾರಿ ಕಿರಿಯ ಪ್ರಾರ್ಥಮಿಕ ಪಾಠಶಾಲೆಗೆ ಶನಿವಾರ ನಿವೃತ್ತ ಶಿಕ್ಷಕ ಖಲೀ ಮುಲ್ಲಾ ಖಾನ್ ಮತ್ತು ಅವರ ಧರ್ಮಪತ್ನಿ ಖುರ್ಶಿದ್ ಉನ್ನಿಸಾ ಸ್ಮರಣಾರ್ಥ ಅವರ ಕುಟುಂಬಸ್ಥರು ಶಾಲೆಗೆ ಡಿಜಿಟಲ್ ಇಂಟ್ರಕ್ಷನ್ ಬೋರ್ಡ್ ಕೊಡುಗೆಯಾಗಿ ನೀಡಿ ಅವರು ಮಾತನಾಡಿದರು.

ತಮ್ಮ ತಂದೆ ಇದೇ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸಿ ಹಲವಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದ್ದರಿಂದ ತಿಳಿಸಿದರು.

ಶಿಕ್ಷಕರು ವಿದ್ಯಾರ್ಥಿಗಳ ಭವಿಷ್ಯವನ್ನು ಸೃಷ್ಟಿಸುವ ನಿರ್ಮಾತೃಗಳು, ರಾಜು ವಿದ್ಯಾರ್ಥಿಗಳನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಶಿಕ್ಷಕರ ಪಾತ್ರ ಪ್ರಶಂಸನೀಯವೆಂದರು.

ಆಧುನಿಕ ಯುಗ ತಂತ್ರಜ್ಞಾನದ ಯುಗವಾಗಿದ್ದು ಮಕ್ಕಳಿಗೆ ತಂತ್ರಜ್ಞಾನದ ಮೂಲಕ ಶಿಕ್ಷಣ ನೀಡುವ ಉದ್ದೇಶದಿಂದ ಈ ಶಾಲೆಗೆ ತಮ್ಮ ಕುಟುಂಬಸ್ಥರ ಒಪ್ಪಿಗೆ ಮೇರೆಗೆ ಡಿಜಿಟಲ್ ಇಂಟರಾಕ್ಷನ್ ಬೋರ್ಡ್ ನೀಡಲಾಗಿದೆ ಎಂದು ತಿಳಿಸಿದರು.

. ಮಕ್ಕಳು ಇದರ ಸದುಪಯೋಗವನ್ನು ಉತ್ತಮವಾಗಿ ಶಿಕ್ಷಣವನ್ನು ಕಲಿಯಬೇಕು ಎಂದರು.
ಕೊಡುಗೆ ನೀಡುವುದು ದೊಡ್ಡದಲ್ಲ ಅದನ್ನು ಸರಿಯಾದ ರೀತಿಯಲ್ಲಿ ಮಕ್ಕಳು ಬಳಸಿಕೊಂಡು ಜ್ಞಾನವನ್ನು ಪಡೆಯುವುದು ಅತಿ ಮುಖ್ಯ ಎಂದರು.
ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂಬಂತೆ.
ಶಿಕ್ಷಕರು ಮಕ್ಕಳಿಗೆ ಯಾವುದು ಸರಿ ಯಾವುದು ತಪ್ಪು ಎಂಬುದರ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿಕೊಡುವುದು ಅತಿ ಮುಖ್ಯವೆಂದರು.
ಉತ್ತಮ ಇತಿಹಾಸ ಹೊಂದಿದ ಈ ಶಾಲೆಗೆ ಹೆಚ್ಚಿನ ಮಕ್ಕಳು ದಾಖಲಾಗಿ ಉನ್ನತ ಗುಣಮಟ್ಟದ ಶಿಕ್ಷಣ ಪಡೆದು ಉತ್ತಮ ಜೀವನ ರೂಪಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಹಾರೈಸಿದರು.

ಕಾರ್ಯಕ್ರಮ ಉದ್ದೇಶಿಸಿ ಬೂನ್ ಆಸ್ಪತ್ರೆಯ ಮುಖ್ಯಸ್ಥರಾದ ಬದ್ರು ಜಮಾ ಖಾನಂ ಮಾತನಾಡಿ.
ಹೆಣ್ಣು ಮಕ್ಕಳಿಗೆ ಶಿಕ್ಷಣ ಅತ್ಯವಶ್ಯಕ, ಒಂದು ಹೆಣ್ಣು ಶಿಕ್ಷಣ ಕಲಿತರೆ ಮನೆಯಲ್ಲಿ ಶಾಲೆಯೊಂದು ತೆರೆದಂತೆ ಎಂದರು.

ಮೂಲತಃ ತಮ್ಮ ತಂದೆ ಶಿಕ್ಷಕರಾಗಿದ್ದು ತಮ್ಮ ಕುಟುಂಬವು ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತದೆ ಎಂದರು.

ಕಾರ್ಯಕ್ರಮ ಉದ್ದೇಶಿಸಿ ಬಿ ಆರ್ ಸಿ ವೆಂಕಟೇಶ್ ಮಾತನಾಡಿ.

ಸರ್ಕಾರಿ ಶಾಲೆಗಳ ಡಿಜಿಟಲೀಕರಣಕ್ಕೆ ಇಂತಹ ದಾನಿಗಳ ಅಗತ್ಯವಿದೆ ಎಂದರು.
ಭವ್ಯ ಭಾರತದಲ್ಲಿ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರ ಹೆಚ್ಚಿರುತ್ತದೆ ಎಂದು.

ಗುಣಮಟ್ಟದ ಶಿಕ್ಷಣ ಪಡೆದ ವಿದ್ಯಾರ್ಥಿ ಉನ್ನತ ಹುದ್ದೆಗೆ ಹೋಗುವವರೆಂಬುದು, ಈ ಶಾಲೆಯಲ್ಲಿ ಕಲಿತ ಐಎಎಸ್ ಅಧಿಕಾರಿ ಎಲ್ ಕೆ ಅತೀಕ್ ಅವರೇ ಉತ್ತಮ ಉದಾಹರಣೆ ಎಂದರು.

ಈ ಶಾಲೆಯಲ್ಲಿ ಓದಿದಂತಹ ಹಲವಾರು ವಿದ್ಯಾರ್ಥಿಗಳು ಇಂದು ಉನ್ನತ ಹುದ್ದೆಯಲ್ಲಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.

ಡಿಜಿಟಲ್ ಇಂಟ್ರಾಕ್ಟಿವ್ ಬೋರ್ಡ್ ಗೆ ಸಂಬಂಧಿಸಿದಂತೆ ಶಾಲೆಗೆ ಮುಖ್ಯೋಪಾಧ್ಯಾಯ ಮಾರುತೇಶ್ ಮಾತನಾಡಿ.

ದಾನಿಗಳು ತಮ್ಮ ಶಾಲೆಗೆ ನೀಡಿರುವ ಡಿಜಿಟಲ್ ಇಂಟ್ರಾಕ್ಟಿವ್ ಬೋರ್ಡ್ ನಲ್ಲಿ ರಾಜ್ಯ ಪಠ್ಯಕ್ರಮದ
ಈ ಪಠ್ಯ ವಿಷಯವಿರುತ್ತದೆ ಎಂದು.

ಪಾಠದ ಜೊತೆಗೆ ಪಾಠಕ್ಕೆ ಸಂಬಂಧಿಸಿದ ವಿಡಿಯೊ ಹಾಗೂ ಸಣ್ಣ ಕಥೆಗಳು, ಪದ್ಯಗಳ ವಿಡಿಯೊಗಳನ್ನು ತೋರಿಸಲು ಅನುಕೂಲವಾಗುತ್ತದೆ ಎಂದರು.

ಸ್ಮಾರ್ಟ್‌ ಬೋರ್ಡ್‌ ಮೇಲೆ ಬರೆಯಲು, ಪಠ್ಯವನ್ನು ಮೇಲೆ ಕೆಳಗೆ ಚಲಿಸುವಂತೆ ಮಾಡಲು ಸ್ಟೈಲಸ್ ಪೆನ್ ಬಳಸಲಾಗುತ್ತದೆ. ಸ್ಟೈಲಸ್ ಸಹಾಯದಿಂದ ಕಪ್ಪು ಹಲಗೆಯ ಮೇಲೆ ಬರೆಯುವಂತೆ ಸ್ಮಾರ್ಟ್‌ ಬೋರ್ಡ್‌ ಮೇಲೆಯೂ ಬರೆದು, ದೃಶ್ಯಗಳನ್ನು ವಿವರಿಸುವ ಅವಕಾಶ ಕಲ್ಪಿಸಲಾಗಿದೆ.ಶಿಕ್ಷಕರು ಕಪ್ಪು ಹಲಗೆಯ ಮೇಲೆ ನಕ್ಷೆ, ಚಿತ್ರಗಳನ್ನು ಬಿಡಿಸಲು ಸಾಕಷ್ಟು ಸಮಯ ವ್ಯರ್ಥ ಮಾಡುತ್ತಿದ್ದರು. ಈಗ ಕಣ್ಣ ಮುಂದೆಯೇ ಎಲ್ಲ ಚಿತ್ರಗಳು ಬರುವ ಕಾರಣ ಖಚಿತ ಕಲಿಕೆ ಸಾಧ್ಯವಾಗಿದೆ.ಎಲ್ಲ ಶಾಲೆಗಳಲ್ಲೂ ‘ಸ್ಮಾರ್ಟ್‌ ಕ್ಲಾಸ್‌’ ಸೌಲಭ್ಯ ಕಲ್ಪಿಸುವ ಮೂಲಕ ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವಷ್ಟು ಸಮರ್ಥವಾಗಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಅಂಗವಿಕಲರ,ರೋಗಿಗಳ ಪಾಲಿಗೆ ಮದರ್ ತೆರೇಸಾ ರೀತಿ ಕಾರ್ಯನಿರ್ವಹಿಸಿದ ಬೆಂಗಳೂರಿನ ಸಮಾಜ ಸೇವೆಕಿ ವಿಮಲಮ್ಮನವರಿಗೆ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಎಡಿಎಂಎಂ ಶಂಕರಪ್ಪ, ಇಸಿಓಗಳಾದ ವೇಣುಗೋಪಾಲ ರೆಡ್ಡಿ, ಶಿವಕುಮಾರ್, ಖಾಜಾ ಹುಸೇನ್
ಮುಖ್ಯ ಶಿಕ್ಷಕರಾದ ಮಾರುತೇಶ್, ಶಿಕ್ಷಕರಾದ ಶಾಂತಕುಮಾರಿ, ಆದಿಲಕ್ಷ್ಮಿ, ದುರ್ಗಮ್ಮ, ಆನಂದಪ್ಪ, ಪಾಂಡುರಂಗಯ್ಯ ಗಂಗಾಧರ ರಾಜುನಾಯ್ಕ ಮುತ್ಯಾಲಶೆಟ್ಟಿ, ಲಿಂಗಣ್ಣ, ಸರೋಜಾದೇವಿ, ಹನುಂತರಾಯಪ್ಪ ರಾಮಕೃಷ್ಣ,
ಸಮಾಜ ಸೇವಕ ರಿಜ್ವಾನುಲ್ಲಾ, ಪೋಷಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.

ವರದಿ : ಶ್ರೀನಿವಾಸಲು ಎ

Leave a Reply

Your email address will not be published. Required fields are marked *