IMG 20201005 WA0018

ಪಾವಗಡ: ಆಗ್ನೇಯ ಕ್ಷೇತ್ರದ ಪಧವೀದರರ ಚುನಾವಣೆ ತಯಾರಿ…!

DISTRICT NEWS ತುಮಕೂರು

ಪಾವಗಡ: ತಾಲ್ಲೂಕು ಬಿಜೆಪಿ ಪಕ್ಷದ ಮಂಡಳಿ ವತಿಯಿಂದ ಆಗ್ನೇಯ ಕ್ಷೇತ್ರದ ಪಧವೀದರರ ಚುನಾವಣೆಯ ಪೂರ್ವಭಾವಿ ಸಭೆಯ ಪತ್ರಿಕಾಗೋಷ್ಟಿಯನ್ನು ಪಾವಗಡ ಪಟ್ಟಣದ ಆಂಧ್ರಗಿರಿ ಭವನದಲ್ಲಿ ನಡೆಸಲಾಯಿತು.

ಇದೇ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಎಂ ಎಲ್ ಸಿ ನಾರಾಯಣ ಸ್ವಾಮಿಯವರು
ಇವತ್ತು ರಾಜ್ಯದಲ್ಲಿ ಉತ್ತಮ ಆಡಳಿತ ನಡೆಸುತ್ತಿರುವ ಪಕ್ಷ ಎಂದರೆ ಅದು ಬಿಜೆಪಿ ಸರ್ಕಾರ ಮಾತ್ರ.ಮುಂದಿನ ದಿನಮಾನಗಳಲ್ಲಿ ಯುವಕರಿಗೆ ಉದ್ಯೋಗ, ಶಿಕ್ಷಕರಿಗೆ ಉತ್ತಮ ಸ್ಥಾನ ಮಾನ ಹೀಗೆ ನಾನಾ ರೀತಿಯ ಯೋಜನೆಗಳನ್ನು ನೀಡಲು ಸಿದ್ದವಾಗಿದೆ.ಆ ಹಿನ್ನೆಲೆಯಲ್ಲಿಯೇ ಬಿಜೆಪಿ ಪಕ್ಷ ಅಧಿಕೃತವಾಗಿ ಚಿದಾನಂದ ಗೌಡ ಅವರನ್ನ ಇದೇ ಅಕ್ಟೋಬರ್ 28 ರಂದು ನಡೆಲಿರುವ ಆಗ್ನೇಯ ಪಧವೀದರ ಶಿಕ್ಷಕರ ಚುನಾವಣೆಗೆ ಸ್ಪರ್ಧಿಸಲು ಸಮರ್ಥ ಆಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಗಿದೆ. ಇವರು ಅದ್ಬುತ ನಾಯಕತ್ವ ಗುಣವುಳ್ಳವರು ಹಾಗೂ ಸ್ವಯಂ ಕೃಷಿಯಿಂದ ಮೇಲೆ ಬಂದ ಶ್ರಮಿಕ ಜೀವಿ ಆಗಾಗಿ ಇವರ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ದೇಶ ಹಾಗೂ ರಾಜ್ಯದಲ್ಲಿ ಸುಭದ್ರವಾಗಿ ಆಡಳಿತ ನಡೆಸುತ್ತಿರುವ ಮೋದಿಜಿ ಮತ್ತು ಯಡಿಯೂರಪ್ಪನವರು ಪ್ರಶಂಸೆಗೆ ಪಾತ್ರವಾಗಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಶಿಕ್ಷಕರ ನೌಕರ ರ ವೇತನದಲ್ಲಿ ಕಡಿತ ಮಾಡದೆ ಕೊಟ್ಟಂತ ನಾಯಕರು.ಅಷ್ಟೇ ಅಲ್ಲದೇ ಕಳೆದ 55 ವರ್ಷದಲ್ಲಿ ಕಾಂಗ್ರೆಸ್ ಸರ್ಕಾರ ಮಾಡದ ಕಾರ್ಯವನ್ನು ರೈತರಿಗೆ ಪ್ರೋತ್ಸಾಹವಾಗಿ 6 ಸಾವಿರ ಹಣವನ್ನು ಅವರ ಖಾತೆ ಜಮಾ ಮಾಡಿದ ಕೀರ್ತಿ ಅವರದ್ದು.ಸುಮಾರು 12.5 ಕೋಟಿ ಕುಟುಂಬಗಳಿಗೆ ಎಪ್ಪತ್ತು ಸಾವಿರ ಕೋಟಿ ಹಣ ನೀಡಿತು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಆಗ್ನೇಯ ಪಧವೀದರ ಶಿಕ್ಷಕರ ಬಿಜೆಪಿ ಅಭ್ಯರ್ಥಿ ಚಿದಾನಂದ ಎಂ. ಗೌಡ ಅವರು ಮಾತನಾಡುತ್ತ ನಾನು ಚುನಾವಣೆಯಲ್ಲಿ ಗೆದ್ದಕೂಡಲೇ ನಿಸ್ವಾರ್ಥವಾಗಿ ಆಡಳಿತ ನೀಡ್ತೇನೆ …ಯುವಕರಿಗೆ ಉದ್ಯೋಗ, ಶಿಕ್ಷಕರು, ಉಪನ್ಯಾಸಕರಿಗೆ ಧ್ವನಿಯಾಗ್ತೇನೆ ಆಗಾಗಿ ನನ್ನ ನ್ನು ಗೆಲ್ಲಿಸಿ ಎಂದು ಭರವಸೆಯಿಂದ ಕೇಳಿದರು.

ಪತ್ರಿಕಾಗೋಷ್ಟಿಯಲ್ಲಿ ತಾಲ್ಲೂಕು ಬಿಜೆಪಿ ಅಧ್ಯಕ್ಷ ರವಿ ಶಂಕರ್ ನಾಯ್ಕ್, ಜಿಲ್ಲಾ ಉಪಾಧ್ಯಕ್ಷ ರವಿ,

ಮುಖಂಡರಾದ ಡಾ.ವೆಂಕಟರಾಮಯ್ಯ, ಶಿವಕುಮಾರ್ ಸಾಕೇಲ್, ಪಾಲಯ್ಯ, ಜಿ.ಟಿ ಗಿರೀಶ್. ಕೃಷ್ಣ ನಾಯ್ಕ, ವಕೀಲ ಕೃಷ್ಣಮೂರ್ತಿ, ಕಡಪಲಕೆರೆ ನವೀನ್ ಇನ್ನೀತರರು ಇದ್ದರು

ವರದಿ: ನವೀನ್