IMG 20210913 WA0027

ಕೊರೊನಾ:ಬಹಳಷ್ಟು ಜನರನ್ನು ಕಳೆದುಕೊಂಡಿದ್ದೇವೆ…!

Genaral STATE

ಕೊರೊನಾ ಸಂಕಷ್ಟದ ನಡುವೆ ಬಹಳಷ್ಟು ಜನರನ್ನು ಕಳೆದುಕೊಂಡಿದ್ದೇವೆ: ಶಾಸಕ ಬಂಡೆಪ್ಪ ಖಾಶೆಂಪುರ್

ಬೆಂಗಳೂರು (ಸೆ.13): ಕೊರೊನಾ ಸಂಕಷ್ಟದ ನಡುವೆ ನಮ್ಮ ನಾಡಿನ ಅನೇಕ ಗಣ್ಯಮಾನ್ಯರನ್ನು ನಾವು ಕಳೆದುಕೊಂಡಿದ್ದೇವೆ. ಹಾಗೆಯೇ ಅತಿವೃಷ್ಟಿ, ಅನಾವೃಷ್ಟಿಯಿಂದ ಬಹಳಷ್ಟು ಜನ ಮೃಪತಟ್ಟಿದ್ದಾರೆ. ಅವರೆಲ್ಲರ ಆತ್ಮಕ್ಕೆ ಶಾಂತಿ ಕೊರುತ್ತೇನೆಂದು ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರಾಗಿರುವ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.

ಬೆಂಗಳೂರಿನ ವಿಧಾನಸೌಧದಲ್ಲಿ ನಡೆದ ಮೊದಲನೇ ದಿನದ ಕಲಾಪದಲ್ಲಿ ಪಾಲ್ಗೊಂಡು, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಸೂಚಿಸಿದ ಸಂತಾಪ ಸೂಚನಾ ನಿರ್ಣಯ ವಿಷಯವಾಗಿ ಮಾತನಾಡಿದ ಅವರು, ಕೊರೊನಾ ಮಹಾಮಾರಿಯ ನಡುವೆಯೇ ರಾಜ್ಯದ ಅನೇಕ ಗಣ್ಯರು ಸಾವನ್ನಪ್ಪಿದ್ದಾರೆ. ಬೀದರ್ ಜಿಲ್ಲೆಯ ಮಾಜಿ ಶಾಸಕರಾದ ಸೈಯದ್ ಝುಲ್ಸೇಖಾ ರಷ್ಮಿ, ಮಹಮ್ಮದ್ ಲೈಕೋಧೀನ್ ರವರನ್ನು ನಾವು ಕಳೆದುಕೊಂಡಿದ್ದೇವೆ.

ಸೈಯದ್ ಝುಲ್ಸೇಖಾ ರಷ್ಮಿ ರವರು ಮೂಲತಃ ನಮ್ಮ ಬೀದರ್ ನವರು. ಹೋರಾಟದಿಂದಲೇ ಅವರು 1994ರಲ್ಲಿ ಮೊದಲನೇ ಬಾರಿಗೆ ಗೆದ್ದು ಬಂದಿದ್ದರು. ಆ ದಿನಗಳಲ್ಲಿ ಅವರು ಬಿಎಸ್ಪಿಯಿಂದ ಸ್ಪರ್ಧಿಸಿ ಶಾಸಕರಾಗಿದ್ದರು. ಇಡಿ ರಾಜ್ಯಕ್ಕೆ ಬಿಎಸ್ಪಿಗೆ ಒಂದೇ ಸಿಟು ಬಂದಿತ್ತು. ಅಹಿಂದ ವರ್ಗದ ಚಳುವಳಿಯಿಂದ ಬಂದಂತ ವ್ಯಕ್ತಿ ಅವರಾಗಿದ್ದರು. ನಾನು ಅವರ ಜೊತೆಗೆ ಕುಳಿತು ಮಾತನಾಡುತ್ತಿದ್ದಾಗಲೂ ಕೂಡ ಅವರು ಅಹಿಂದ ವರ್ಗದ ಬಗ್ಗೆನೇ ಮಾತನಾಡುತ್ತಿದ್ದರು. ಏಪ್ರಿಲ್ ನಲ್ಲಿ ಕೊರೊನಾ ಹಾವಳಿ ಹೆಚ್ಚಾಗಿದ್ದ ಸಂದರ್ಭದಲ್ಲಿ ಅವರು ನಮ್ಮನ್ನಗಲಿದ್ದಾರೆ.
ಇನ್ನೊಬ್ಬ ಮಾಜಿ ಶಾಸಕರಾಗಿದ್ದ ಮಹಮ್ಮದ್ ಲೈಕೋಧೀನ್ ರವರು ಕೂಡ ಬೀದರ್ ಜಿಲ್ಲೆಯ ಚಿಟಗುಪ್ಪಾದವರು. ಅವರು ಶಾಸಕರಾಗುವ ಮೊದಲಿಗೆ ವಕೀಲರಾಗಿದ್ದರು. ಶಾಸಕರಾಗಿ ಅಧಿಕಾರವಧಿ ಪೂರ್ಣಗೊಳಿಸಿದ ಬಳಿಕ ಕೂಡ ಅವರು ವಕೀಲ ವೃತ್ತಿಯಲ್ಲೇ ಮುಂದುವರೆದಿದ್ದರು. ಕೊನೆಯಗಳಿಗೆಯವರೆಗೂ ಕೂಡ ಅವರು ವಕೀಲರಾಗಿದ್ದರು.
ಕೋವಿಡ್ ಮಹಾಮಾರಿ ಕಾರಣದಿಂದಾಗಿ ನಾವು, ನಮ್ಮ ಅಕ್ಕಪ್ಪಕದಲ್ಲೆ ಬಹಳಷ್ಟು ಜನರನ್ನು ಕಳೆದುಕೊಂಡಿದ್ದೇವೆ.

ಅತಿವೃಷ್ಟಿ ಅನಾವೃಷ್ಟಿಯಲ್ಲಿ ಕೂಡ ಅನೇಕರು ಪ್ರಾಣಬಿಟ್ಟಿದ್ದಾರೆ. ಅವರೆಲ್ಲರ ಆತ್ಮಕ್ಕೆ ಭಗವಂತ ಶಾಂತಿ ಕರುಣಿಸಲಿ. ಅವರುಗಳ ಕುಟುಂಬ ವರ್ಗಕ್ಕೆ ದುಃಖ ತಡೆದುಕೊಳ್ಳುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.