IMG 20210917 WA0011

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಜೀವನ, ಸಾಧನೆ- ಪ್ರಚಾರ ವಾಹನಕ್ಕೆ ಚಾಲನೆ….!

Genaral STATE

 

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಜೀವನ, ಸಾಧನೆ- ಪ್ರಚಾರ ವಾಹನಕ್ಕೆ ಚಾಲನೆ

ಬೆಂಗಳೂರು: ಜನಪರ ಕಾರ್ಯಕ್ರಮಗಳ ಮೂಲಕ ವಿಶ್ವವಂದ್ಯ ನಾಯಕರಾಗಿ ಹೊರಹೊಮ್ಮಿರುವ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ 71 ನೇ ಜನ್ಮದಿನದ ಪ್ರಯುಕ್ತ ರಾಜ್ಯ ಯುವ ಮೋರ್ಚಾ ವತಿಯಿಂದ, ರಾಜ್ಯ ಯುವ ಮೋರ್ಚಾ ಅಧ್ಯಕ್ಷರಾದ ಡಾ ಸಂದೀಪ್ ಅವರ ಅಧ್ಯಕ್ಷತೆಯಲ್ಲಿ ಇಂದು ಡಿಜಿಟಲ್ ಎಲ್‍ಇಡಿ ವ್ಯಾನ್‍ಗೆ ನಗರದಲ್ಲಿ ಚಾಲನೆ ನೀಡಲಾಯಿತು.
ಶ್ರೀ ನರೇಂದ್ರ ಮೋದಿ ಅವರ 20 ವರ್ಷಗಳ ರಾಜಕೀಯ, ಸಾಮಾಜಿಕ ಜೀವನದ ತುಣುಕುಗಳನ್ನು ನವ ಭಾರತ್ ಮೇಳದಲ್ಲಿ ಪ್ರದರ್ಶಿಸುವ ಡಿಜಿಟಲ್ ಎಲ್‍ಇಡಿ ವ್ಯಾನ್ ಇದಾಗಿದೆ. ಬಿಜೆಪಿ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಅರುಣ್ ಕುಮಾರ್, ರಾಜ್ಯ ಸಚಿವರಾದ ಶ್ರೀ ಎಸ್.ಟಿ. ಸೋಮಶೇಖರ್, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಸಿದ್ದರಾಜು, ಯುವ ಮೋರ್ಚಾ ರಾಷ್ಟ್ರೀಯ ಉಪಾಧ್ಯಕ್ಷರಾದ ಶ್ರೀ ಮಧುಕೇಶ್ವರ ದೇಸಾಯಿ ಅವರು ಈ ವ್ಯಾನ್‍ಗೆ ಚಾಲನೆ ನೀಡಿದರು.
ಶ್ರೀ ನರೇಂದ್ರ ಮೋದಿ ಅವರು ಜಾರಿಗೊಳಿಸಿದ ಜನಪರ- ಅಭಿವೃದ್ಧಿಗೆ ಪೂರಕವಾದ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಇದು ಉತ್ತಮ ಕಾರ್ಯ ಎಂದು ಅತಿಥಿಗಳು ಅಭಿಪ್ರಾಯಪಟ್ಟರು.

IMG 20210917 WA0012
ಈ ಸಂದರ್ಭದಲ್ಲಿ ರಾಜ್ಯ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಅಜಿತ್ ಹೆಗ್ಡೆ, ಉಪಾಧ್ಯಕ್ಷರಾದ ಶ್ರೀ ವಸಂತ ಗೌಡ, ಕೋಶಾಧ್ಯಕ್ಷರಾದ ಶ್ರೀ ಅನಿಲ್ ಶೆಟ್ಟಿ, ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಶ್ರೀ ಜಗದೀಶ್ ಚಂದ್ರ ಮತ್ತು ಶ್ರೀ ಪ್ರಶಾಂತ್ ಕೆ ವಿ, ಬೆಂಗಳೂರಿನ ಮೂರು ಜಿಲ್ಲೆಗಳ ಅಧ್ಯಕ್ಷರು, ಯುವ ಮೋರ್ಚಾ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಬೆಂಗಳೂರಿನ ವಿವಿಧೆಡೆ ಸ್ವಚ್ಛತಾ ಕಾರ್ಯಕ್ರಮಗಳು, ಜೀವನ ಸಾಧನೆ ಕುರಿತು ಮಾಹಿತಿ ಕೊಡುವ ಕಾರ್ಯವನ್ನು ನಡೆಸಿದ್ದು, ಬಾಗಲಕೋಟೆ, ವಿಜಯಪುರ, ಬೀಳಗಿ ಸೇರಿದಂತೆ ರಾಜ್ಯದ ವಿವಿಧ ಕಡೆಗಳಲ್ಲಿ ಈ ವಾಹನದ ಮೂಲಕ ತೆರಳಿ ಜನೋಪಯೋಗಿ ಕಾರ್ಯಕ್ರಮಗಳನ್ನು ಸಂಘಟಿಸಲಾಗುವುದು.