20221007 183444

ಕಾಂಗ್ರೆಸ್ :ಸಚಿವ ಶ್ರೀರಾಮುಲು ಅವರ ಮೇಲೆ ಆರೋಪ ಪಟ್ಟಿ ದಾಖಲು…!

POLATICAL STATE

ಬೆಂಗಳೂರು: ಇಂದು ಬಿಜೆಪಿ ಕಾರ್ಯಕಾರಿ ಸಮಿತಿ ಸಭೆ ನಡೆಯುತ್ತಿದೆ. ಅವರ ನಾಯಕರಾದ ಮೋದಿ ಅವರು ನಾಖಾವೂಂಗಾ ನಾ ಖಾನೇದೂಂಗಾ ಎಂದು ಸದಾ ಹೇಳುತ್ತಾರೆ. ಆದರೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ 40% ಕಮಿಷನ್ ಸರ್ಕಾರವಾಗಿದೆ ಎಂದು ಜನ ಮಾತನಾಡುತ್ತಿದ್ದಾರೆ ಎಂದು ಮಾಜಿ ಸಂಸದ ಉಗ್ರಪ್ಪ ಆರೋಪಿಸಿದ್ದಾರೆ

Screenshot 2022 10 07 18 33 26 963 com.twitter.android

ಈ ಬಗ್ಗೆ ಬಿಜೆಪಿ ನಾಯಕರು ಸತ್ಯಹರಿಶ್ಚಂದ್ರರ ರೀತಿ ಮಾತನಾಡುತ್ತಿದ್ದಾರೆ. ಇಂದು ಬೊಮ್ಮಾಯಿ ಅವರ ಸರ್ಕಾರದಲ್ಲಿರುವ ಸಚಿವ ಶ್ರೀರಾಮುಲು ಅವರ ಮೇಲೆ 6 ಸಾವಿರ ಪುಟಗಳ ಆರೋಪಪಟ್ಟಿ ದಾಖಲಾಗಿದೆ. ಸುಪ್ರೀಂ ಕೋರ್ಟ್ ನಲ್ಲಿ ಬಳ್ಳಾರಿ ಲೋಕಾಯುಕ್ತ ಪೊಲೀಸರು ಆರೋಪಪಟ್ಟಿ ಸಲ್ಲಿಸಿದ್ದಾರೆ. ಇದರಲ್ಲಿ ಎ1 ಬಳ್ಳಾರಿ ಹಿಂದಿನ ಡೆಪ್ಯುಟಿ ಕಮಿಷನರ್ ಬಿ.ಶಿವಪ್ಪನರು. ತಹಶಈಲ್ದಾರ್ ಸೇರಿದಂತೆ 11 ಜನರ ಮೇಲೆ ಆರೋಪಪಟ್ಟಿ ಹಾಕಿದ್ದಾರೆ.

ಶ್ರೀರಾಮುಲು ಅವರು ಬೇಲ್ ತೆಗೆದುಕೊಂಡು ಓಡಾಡುತ್ತಿದ್ದಾರೆ. ಕಳೆದ ತಿಂಗಳು 17ರಂದು ವಿಶೇಷ ನ್ಯಾಯಾಲಯದಲ್ಲಿ ಪ್ರಕರಣ ವರ್ಗಾವಣೆಯಾಗಿ ವಿಚಾರಣೆ ನಡೆದಿದೆ. ಈ ಪ್ರಕರಣ ಏನೆಂದರೆ ಬಳ್ಳಾರಿ ಹೃದಯ ಭಾಗದ ಕಾಲುವೆಯಲ್ಲಿ ರುಕ್ಮಿಣಿ ಲೇಔಟ್ ಅನ್ನು ಜನಾರ್ದನ ರೆಡ್ಡಿ ಅವರು ಮತ್ತೊಂದೆಡೆ ರಾಮುಲು ಅವರು 27.25 ಎಕರೆ ಕಾಂಪೌಂಡ್ ಹಾಕಿಕೊಂಡಿದ್ದಾರೆ.

2002ರಲ್ಲಿ ಆಕುಲ ಲಕ್ಷ್ಮಮ್ಮ ಅವರ 17.25 ಎಕರೆಯನ್ನು 24-10-2002 ಗಾಲಿ ಜನಾರ್ದನ ಅವರ ಮಾವ ಪರಮೇಶ್ವರ ರೆಡ್ಡಿ ಅವರಿಗೆ ಎಕರೆಗೆ 2 ಲಕ್ಷದಂತೆ ಮಾರಾಟ ಮಾಡುತ್ತಾರೆ. ಅದೇ ದಿನ ಆಕುಲ ಲಕ್ಷ್ಮಮ್ಮ ಹಾಗೂ ಕುಟುಂಬದವರು ಶ್ರೀರಾಮುಲು ಅವರಿಗೆ 27.5 ಎಕರೆಯನ್ನು ಮಾರಾಟ ಒಪ್ಪಂದ ಮಾಡಿಕೊಳ್ಳುತ್ತಾರೆ. ಒಂದು ಎಕರೆಗೆ 10 ಸಾವಿರದಂತೆ ಮಾಡಿಕೊಳ್ಳುತ್ತಾರೆ.

ಅಂದು ಪರಮೇಶ್ವರ್ ರೆಡ್ಡಿ ಹಾಗೂ ಶ್ರೀರಾಮುಲು ಅವರಿಗೆ ವರ್ಗಾವಣೆ ಆಗುತ್ತದೆ. ಎಲ್ಲರಿಗೂ ತಿಳಿದಿರುವಂತೆ ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲು ಅವರು ಬಹಳ ಆಪ್ತರಾಗಿದ್ದಾರೆ. ಈ ಜಾಗದಲ್ಲಿ 10 ಎಕರೆ ನದಿ ಕಾಲುವೆ ಕಾಮಾಗಾರಿಗೆ 10 ಎಕರೆ ಜಾಗ ಸ್ವಾದೀನವಾಗಿದೆ ಹಾಗೂ ಜನಾರ್ದನ ರೆಡ್ಡಿ ಅವರ ಮಾವ ಅವರು ಉಳಿದ ಜಮೀನು ಖರೀದಿಸಿದ್ದಾರೆ ಎಂದು ಗೊತ್ತಿದ್ದರೂ ಉದ್ದೇಶಪೂರ್ವಕವಾಗಿ ಸೇಲ್ ಒಪ್ಪಂದ ಮಾಡಿಕೊಂಡಿದ್ದಾರೆ.

ನಂತರ ಅವರು ಅದನ್ನು ಮಾರಾಟ ಮಾಡಿಲ್ಲ ಎಂದು ನೆಪವೊಡ್ಡಿ 2003ರಲ್ಲಿ ಪ್ರಕರಣ ದಾಖಲಿಸುತ್ತಾರೆ. ಆಕುಲ ಲಕ್ಷ್ಮಮ್ಮ ಹಾಗೂ ಅವರ ಕುಟುಂಬದವರು ನ್ಯಾಯಾಲಯಕ್ಕೆ ಹಾಜರಾಗದೇ, ಅರ್ಜಿ ಹಾಕಿದ 39 ದಿನಗಳ ಅಂತರದಲ್ಲಿ ಶ್ರೀರಾಮುಲು ಅವರ ಪರವಾಗಿ ಡಿಕ್ರಿ ಆಗುತ್ತದೆ. ನಂತರ ಪರಮೇಶ್ವರ ರೆಡ್ಡಿ ಅವರು 17.5 ಎಕರೆ ಜಮೀನನ್ನು ಕೃಷಿಯೇತ್ತರ ಜಮೀನಾಗಿ ಪರಿವರ್ತಿಸಿ, ನಂತರ ಅದನ್ನು ಗಿಫ್ಟ್ ಡೀಡ್ ಆಗಿ ಅವರ ಪುತ್ರಿ ಅಂದರೆ ಜನಾರ್ದನ ರೆಡ್ಡಿ ಅವರ ಶ್ರೀಮತಿಗೆ 21-03-2006ರಲ್ಲಿ ನೀಡುತ್ತಾರೆ. ಶ್ರೀರಾಮುಲು ಅವರು ತಮ್ಮ ಪರವಾಗಿ ಆಗಿರುವ ಡಿಕ್ರಿ ಆಧಾರದ ಮೇಲೆ 2009ರಲ್ಲಿ ಅರ್ಜಿ ಹಾಕುತ್ತಾರೆ. ಅದರ ಆಧಾರದ ಮೇಲೆ ಸೇಲ್ ಡೀಡ್ ಅನ್ನು ನ್ಯಾಯಾಲಯದ ಮೂಲಕ ಪಡೆಯುತ್ತಾರೆ.

2-2-2011ರಲ್ಲಿ ಶ್ರೀರಾಮುಲು ಅವರು 27.25 ಎಕರೆ ಜಮೀನನ್ನು ಪರಿವರ್ತಿಸಿಕೊಳ್ಳುತ್ತಾರೆ. ಇಲ್ಲಿ ರೆವೆನ್ಯೂ ಇನ್ಸ್ಪೆಕ್ಟರ್ ತಹಶೀಲ್ದಾರ್, ಎಸಿ, ಡಿಸಿ ಅಧಿಕಾರಿಗಳನ್ನು ಬಳಸಿ ಪರಿವರ್ತನೆ ಪ್ರಕ್ರಿಯೆ ಮಾಡಿಸಿಕೊಳ್ಳುತ್ತಾರೆ. ಸರ್ಕಾರಿ ಜಮೀನು ಆಕುಲ ಲಕ್ಷ್ಮಮ್ಮ ಅವರ ಜಮೀನು ಎಂದು ತಮ್ಮ ಹೆಸರಿಗೆ ಮಾಡಿಸಿಕೊಳ್ಳುತ್ತಾರೆ. ಅಲ್ಲಿ ನಿರ್ಮಾಣವಾಗಿದ್ದ ಮನೆಗಳನ್ನು ಒಡೆದು ಹಾಕಿ ತಮ್ಮ ಆಸ್ತಿ ಎಂದು ಕಾಂಪೌಂಡ್ ಹಾಕಿಕೊಂಡಿದ್ದಾರೆ. ಅತ್ತ ಕಾಲುವೆಯ ಒಂದು ಭಾಗದಲ್ಲಿ ಆಕುಲ ಲಕ್ಷ್ಮಮ್ಮ ಅವರಿಗೆ ಸೇರಿದ್ದ 17.5 ಎಕರೆಯನ್ನು ಜನಾರ್ದನ ರೆಡ್ಡಿ ಅವರ ಪತ್ನಿ ಅವರು ರುಕ್ಮಿಣಿ ಲೇಔಟ್ ಮಾಡಿಕೊಂಡಿದ್ದರೆ, ಕಾಲುವೆಯ ಮತ್ತೊಂದು ಭಾಗದಲ್ಲಿ ಆಕುಲ ಲಕ್ಷ್ಮಮ್ಮ ಅವರ ಹೆಸರಿನಲ್ಲಿ ಸರ್ಕಾರಿ ಜಮೀನನ್ನು ಕಬಳಿಸಿರುತ್ತಾರೆ.

20221007 183423

ಕಬಳಿಕೆಯಾದ ಜಾಗದಲ್ಲಿ ಇದ್ದ ಮಾಲೀಕರು ದೂರು ನೀಡಿದಾಗ ಪೊಲೀಸ್ ಠೀಣೆಯಲ್ಲಿ ದೂರು ದಾಖಲಾಗುವುದಿಲ್ಲ. 14-6-2013ರಲ್ಲಿ ಖಾಸಗಿ ದೂರು ದಾಖಲಾಗುತ್ತದೆ. ನಂತರ ನ್ಯಾಯಾಲಯವು ಬಳ್ಳಾರಿ ಲೋಕಾಯುಕ್ತದಿಂದ ತನಿಖೆಗೆ ಆದೇಶಿಸುತ್ತದೆ. 120ಡಿ, 406, 409, 420, 447, 465, 468, 471, ಸೆಕ್ಷನ್ 73, ಸೇರಿದಂತೆ ಹಲವು ಸೆಕ್ಷಅನ್ ಗಳಲ್ಲಿ ಪ್ರಕರಣ ದಾಖಲಾಗುತ್ತದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 31-03-2022ರಲ್ಲಿ ಪೊಲೀಸರು ಆರೋಪ ಪಟ್ಟಿ ಸಲ್ಲಿಸಿದ್ದು, ಶ್ರೀರಾಮುಲು ಅವರು ಶಾಸಕರಿದ್ದಾರೆ ಎಂದು ನ್ಯಾಯಾಲಯಕ್ಕೆ ಹೋದಾಗ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ನವರು ಆರೋಪಪಟ್ಟಿ ಆಧಾರದ ಮೇಲೆ ವಿಚಾರಣೆ ಮಾಡಲು ಅನುಮತಿ ನೀಡಲಾಗುತ್ತದೆ.

ಈ ಆರೋಪಪಟ್ಟಿ ದಾಖಲಾದ ನಂತರ ಬೆಂಗಳೂರಿನ ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯ ಅದಕ್ಕೆ 30-03-2022ರಂದು ವರ್ಗಾವಣೆಯಾಗಿದೆ. ಕಳೆದ ತಿಂಗಳು 17ರಂದು ವಿಚಾರಣೆ ಇತ್ತು.

ಈ ಪ್ರಕರಣದಲ್ಲಿ ಶ್ರೀರಾಮುಲು ಅವರು ಯಾವ ರೀತಿ ಅಧಿಕಾರ ಹಾಗೂ ಅಧಿಕಾರಿಗಳ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ನ್ಯಾಯಾಲಯದಲ್ಲಿ ಪ್ರಸ್ತಾಪವಾಗಿದೆ.

ಇನ್ನು ಈ ಪ್ರಕರಣದಲ್ಲಿ ನಾವು ಶ್ರೀರಾಮುಲು ಅವರಿಗೆ ಸೇಲ್ ಒಪ್ಪಂದ ಮಾಡಿಕೊಟ್ಟಿಲ್ಲ. ನಮ್ಮ ಸಹಿಯನ್ನು ನಕಲು ಮಾಡಲಾಗಿದೆ ಎಂದು ಹೇಳುತ್ತಿದ್ದಾರೆ.

ಈಗ ಆ ಜಮೀನಿನ ಬೆಲೆ 1 ಎಕರೆಗೆ 1 ಕೋಟಿಯಷ್ಟಾಗಿದ್ದು ಸುಮಾರು 300 ಕೋಟಿಯಷ್ಟು ಅವ್ಯವಹಾರ ನಡೆದಿದೆ. ಸರ್ಕಾರ ಹಾಗೂ ಸಾರ್ವಜನಿಕ ಸ್ವತ್ತು ಲಪಟಾಯಿಸಲಾಗಿದೆ.

ಪ್ರಕರಣ ಈಗ ಸಾಕ್ಷಿಗಳ ವಿಚಾರಣೆ ನಡೆಯುತ್ತಿದ್ದು, ಆರೋಪಿಯು ಮಂತ್ರಿಯಾಗಿರುವ ಹಿನ್ನೆಲೆಯಲ್ಲಿ ಅಧಿಕಾರ ಪ್ರಭಾವ ಬಳಿಸಿ ಸಾಕ್ಷಿ ತಿರುಚುವ ಸಾಧ್ಯತೆ ಇದೆ. ಹೀಗಾಗಿ ಲೋಕಾಯುಕ್ತ ಪೊಲೀಸರು ಬೇಲ್ ರದ್ದತಿಗೆ ಅರ್ಜಿ ಹಾಕಬೇಕು.

ಬಿಜೆಪಿ ಮುಖಂಡರು ಮಾತೆತ್ತಿದರೆ ನಾ ಖಾವೂಂಗಾ ನಾ ಖಾನೇದೂಂಗಾ ಎಂದು ಹೇಳುತ್ತಾರೆ. ಸದ್ಯ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರು ಬೆಂಗಳೂರಿನಲ್ಲಿದ್ದಾರೆ. ಅವರು ಆರೋಪಪಟ್ಟಿ ದಾಖಲಾಗಿರುವ ಆರೋಪ ಹೊತ್ತಿರುವವರನ್ನು ಮಂತ್ರಿ ಮಂಡಲದಲ್ಲಿ ಹೇಗೆ ಮುಂದುವರಿಸುತ್ತೀರಿ? ಹೀಗಾಗಿ ಅವರನ್ನು ಕೂಡಲೇ ವಜಾ ಮಾಡಬೇಕು ಎಂದು ಪಕ್ಷದಿಂದ ಒತ್ತಾಯ ಮಾಡುತ್ತೇವೆ. ಮಾಡದಿದ್ದರೆ ಬಳ್ಳಾರಿ ಹಂತದಲ್ಲಿ ನಮ್ಮ ನಾಯಕರು ಹೋರಾಟ ಮಾಡಲಿದ್ದಾರೆ. ಸದನದ ಒಳಗೆ ಹಾಗೂ ಹೊರಗೆ ಹೋರಾಟ ಮಾಡುತ್ತೇವೆ.