Philips SenseIQ Hair Dryer scaled

ಫಿಲಿಪ್ಸ್ನಿಂದ ಮಹಿಳೆಯರ ಸೌಂದರ್ಯ ಸಾಧನಗಳ ಬಿಡುಗಡೆ….!

BUSINESS

ಫಿಲಿಪ್ಸ್‍ನಿಂದ ಕೂದಲ ಆರೈಕೆಯ ಹೈಟೆಕ್ ಡಿವೈಸ್ ಮತ್ತು ಡಿಐವೈ ಮಹಿಳೆಯರ ಸೌಂದರ್ಯ ಸಾಧನಗಳ ಬಿಡುಗಡೆ

  • Iಟಿಣeಟಟigeಟಿಣ SeಟಿseIಕಿ ಹೇರ್ ಡ್ರೈಯರ್ ಮತ್ತು ಹೇರ್ ಸ್ಟ್ರೈಟ್‍ನರ್ ಬೆಲೆ ತಲಾ ರೂ.9995/-
  • ಫೇಸಿಯಲ್ ಪೆನ್ ಟ್ರಿಮ್ಮರ್ ರೂ.1595/- ಮನೆಯಲ್ಲಿಯೇ ಅತ್ಯುತ್ತಮ ಸೌಂದರ್ಯ ವರ್ಧನೆಯ ಫಲಿತಾಂಶಗಳನ್ನು ನೀಡುತ್ತದೆ

ನವದೆಹಲಿ; –  ಭಾರತ: ರಾಯಲ್ ಫಿಲಿಪ್ಸ್(ಎನ್‍ವೈಎಸ್‍ಇ: ಪಿಎಚ್‍ಜಿ, ಎಇಎಕ್ಸ್: ಪಿಎಚ್‍ಐಎ) ಕೂದಲ ಆರೈಕೆ ಮತ್ತು ಮುಖದ ಸೌಂದರ್ಯಕ್ಕೆ ಹೊಸ ಶ್ರೇಣಿಯ ಡಿಐವೈ ಮಹಿಳೆಯರ ಸೌಂದರ್ಯ ಉತ್ಪನ್ನಗಳನ್ನು ಅನಾವರಣಗೊಳಿಸಿದೆ. ವೈಯಕ್ತಿಕಗೊಳಿಸಿದ ಆರೈಕೆಯೇ ದೊಡ್ಡ ಕಾರ್ಯಸೂಚಿಯಾಗಿರುವ ಇದು ಇಂಟೆಲಿಜೆಂಟ್ ಮೈಕ್ರೊ ಪ್ರೊಸೆಸರ್ ಸನ್ನದ್ಧ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿದ್ದು ಇದು ರಿಯಲ್ ಟೈಮ್‍ನಲ್ಲಿ ಅಳವಡಿಸಿಕೊಳ್ಳಬಹುದು ಮತ್ತು ವಿಶಿಷ್ಟ ಕೂದಲಿಗೆ ವಿಶಿಷ್ಟ ಆರೈಕೆ ನೀಡುತ್ತದೆ. ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಅನಾವರಣಗೊಳಿಸಿದ ಫಿಲಿಪ್ಸ್ SeಟಿseIಕಿ ಹೇರ್ ಡ್ರೈಯರ್ ಮತ್ತು ಹೇರ್ ಸ್ಟ್ರೈಟ್‍ನರ್ ಕೂದಲ ಉಷ್ಣತೆಯನ್ನು ಅಳೆಯಲು ಸಕ್ರಿಯ ಸೆನ್ಸರ್‍ಗಳನ್ನು ಸ್ಟೈಲಿಂಗ್ ಸೆಷನ್‍ನಲ್ಲಿ ಬಳಸುತ್ತವೆ ಮತ್ತು ವೈಯಕ್ತಿಕಗೊಳಿಸಿದ ಸ್ಟೈಲಿಂಗ್ ಅನುಭವಕ್ಕೆ ಉಷ್ಣತೆಯನ್ನು ಅಳವಡಿಸಿಕೊಳ್ಳುತ್ತದೆ.

ಹೊಸದಾಗಿ ಬಿಡುಗಡೆಯಾದ ಉತ್ಪನ್ನಗಳಲ್ಲಿ ಸಂಪೂರ್ಣ ಶ್ರೇಣಿ ಒಳಗೊಂಡಿವೆ- ಫೇಸಿಯಲ್ ಪೆನ್ ಟ್ರಿಮ್ಮರ್ ಹಾಗೂ ಸೆನ್ಸ್ ಐಕ್ಯೂ ರೇಂಜ್ ಒಳಗೊಂಡಿದ್ದು ಇದು ಫಿಲಿಪ್ಸ್‍ನ ಮನೆಯಲ್ಲಿ ಸುಲಭ ಬಳಕೆಯ ಕೊಡುಗೆಗಳು ಹಾಗೂ ಮನೆಯಲ್ಲಿ ಸ್ಟೈಲಿಂಗ್ ಎದುರು ನೋಡುತ್ತಿರುವ ಮಹಿಳೆಯರಿಗೆ ಒದಗಿಸಲಾಗುತ್ತಿದೆ.

“ನಾವು ಫಿಲಿಪ್ಸ್‍ನಲ್ಲಿ ಸದಾ ಜೀವನವನ್ನು ಉತ್ತಮಪಡಿಸುವ ದಾರಿ ಇದೆ ಎಂದು ನಂಬುತ್ತೇವೆ, ಅದನ್ನು ನಮ್ಮ ಗ್ರಾಹಕ ತಂತ್ರಜ್ಞಾನಕ್ಕೆ ತರುವ ಮೂಲಕ ಮಾಡುತ್ತೇವೆ. ನಮ್ಮ SeಟಿseIಕಿ ಶ್ರೇಣಿಯು ಈ ಉದ್ದೇಶಕ್ಕೆ ಮುಖ್ಯವಾದ ಉದಾಹರಣೆಯಾಗಿದೆ- ಇದು ವಿನೂತನ ಬಗೆಯ ತಂತ್ರಜ್ಞಾನವಾಗಿದ್ದು ನಿಮ್ಮ ಕೂದಲಿನ ಅಗತ್ಯಗಳಿಗೆ ತಕ್ಕಂತೆ ಗ್ರಹಿಸಿ ಅಳವಡಿಸಿಕೊಳ್ಳುವ ಮೂಲಕ ಕಡಿಮೆ ಹಾನಿಯಿಂದ ಸಾಧ್ಯವಿರುವ ಅತ್ಯುತ್ತಮ ಫಲಿತಾಂಶ ನೀಡುತ್ತದೆ. ಪೆನ್ ಟ್ರಿಮ್ಮರ್ ಬಿಡುಗಡೆಯು ಈ ಪ್ರಯಾಣದಲ್ಲಿ ಮತ್ತೊಂದು ಹೆಜ್ಜೆಯಾಗಿದ್ದು ನಾವು ಗ್ರಾಹಕರ ಧ್ವನಿಗೆ ಪ್ರತಿಕ್ರಿಯಿಸಿದ್ದೇವೆ ಮತ್ತು ಮಹಿಳೆಯರಿಗೆ ಅದರಲ್ಲೂ ಪದೇ ಪದೇ ಸಲೂನ್ ಭೇಟಿ ತಪ್ಪಿಸಲು ಈಗ ಅಗತ್ಯವಾಗಿರುವುದನ್ನು ರೂಪಿಸಿದ್ದೇವೆ. ಕಂಪನಿಯಾಗಿ ನಾವು ಸದಾ ನಮ್ಮ ಗಮನವನ್ನು ಗ್ರಾಹಕರ ಜೀವನಗಳಲ್ಲಿ ನಾವು ಸೃಷ್ಟಿಸುವ ಪರಿಣಾಮದತ್ತ ತೀಕ್ಷ್ಣವಾಗಿ ಗಮನ ಇರಿಸುತ್ತೇವೆ, ನಮ್ಮ ಎಲ್ಲ ಕ್ರಿಯೆಗಳೂ ನಮ್ಮ ಉದ್ದೇಶ ಪೂರೈಸುವಂತಿದ್ದು ಈ ವರ್ಗದಲ್ಲಿ ಅತ್ಯಂತ ಪ್ರೀತಿಯ ಬ್ರಾಂಡ್ ಆಗಿಸಿದೆ” ಎಂದು ಫಿಲಿಪ್ಸ್ ಇಂಡಿಯನ್ ಸಬ್‍ಕಾಂಟಿನೆಂಟ್‍ನ ಪರ್ಸನಲ್ ಹೆಲ್ತ್ ಉಪಾಧ್ಯಕ್ಷ ಗುಲ್‍ಬಹರ್ ತೌರಾನಿ ಹೇಳುತ್ತಾರೆ.

ಇಂದು ಗ್ರಾಹಕರು ಹೊರಗಡೆ ಹೋಗವ ಬದಲಿಗೆ ಮನೆಯಲ್ಲಿ ಸೌಂದರ್ಯ ಪರಿಹಾರಗಳನ್ನು ಬಯಸುತ್ತಾರೆ, ಇದು `ಸ್ವಾವಲಂಬನೆ’ ಚಳವಳಿಯನ್ನು ಮುನ್ನಡೆಸುತ್ತಿದೆ. ಅವರು ಬರೀ ಡಿಐವೈ ಸೌಂದರ್ಯ ಸಾಧನಗಳಿಗೆ ಗಮನ ನೀಡುತ್ತಿಲ್ಲ ಬದಲಿಗೆ ಅವರ ನಿರ್ದಿಷ್ಟ ವೈಯಕ್ತಿಕ ಸೌಂದರ್ಯದ ಅಗತ್ಯಗಳನ್ನು ಪೂರೈಸುವುದನ್ನು ಎದುರು ನೋಡುತ್ತಿದ್ದಾರೆ. ಕೂದಲ ಆರೈಕೆಯಲ್ಲಿ ಮುಖ್ಯವಾಗಿ ಅವರು ತಮ್ಮ ನಿರ್ದಿಷ್ಟ ಕೂದಲ ವಿಧಕ್ಕೆ ಪರಿಹಾರಗಳನ್ನು ಮತ್ತು ಅಸಾಧಾರಣ ಫಲಿತಾಂಶಗಳನ್ನು ನಿರೀಕ್ಷಿಸುತ್ತಾರೆ. ಫಿಲಿಪ್ಸ್ ಈ ಉತ್ಪನ್ನಗಳೊಂದಿಗೆ ವೈಯಕ್ತಿಕಗೊಳಿಸಿದ ಉತ್ಪನ್ನಗಳಲ್ಲಿ ದೊಡ್ಡ ಪ್ರಮಾಣದಲ್ಲಿದ್ದು ಮನೆಯಲ್ಲಿ ದೈನಂದಿನ ವಿಶೇಷವಾಗಿ ರೂಪಿಸಿದ ಸೌಂದರ್ಯ ವರ್ಧನೆಯ ಅಗತ್ಯಗಳಿಗೆ ಪರಿಪೂರ್ಣ ಉತ್ತರವಾಗಿದೆ.

ಫಿಲಿಪ್ಸ್ SeಟಿseIಕಿ ಹೇರ್ ಸ್ಟ್ರೈಟ್‍ನರ್

ಫಿಲಿಪ್ಸ್ SeಟಿseIಕಿ ಹೇರ್ ಸ್ಟ್ರೈಟ್‍ನರ್‍ನ ಸೆನ್ಸರ್ ಕೂದಲ ಉಷ್ಣತೆಯನ್ನು ಪ್ರತಿ ಸ್ಟೈಲಿಂಗ್ ಸೆಷನ್‍ನಲ್ಲಿ 20,000*ಕ್ಕೂ ಹೆಚ್ಚು ಬಾರಿ ಅಳೆಯುವ ಮೂಲಕ ಶೇ.70ರಷ್ಟು ನೈಸರ್ಗಿಕ ತೇವಾಂಶಕ್ಕೆ ತಕ್ಷಣವೇ ಉಷ್ಣತೆಯನ್ನು ಬದಲಾಯಿಸುತ್ತದೆ. ಇದು ಕೂದಲಿನ ಅಗತ್ಯವಾದ ಸಾಮಥ್ರ್ಯ ಕಾಪಾಡಲು ಹೊರಗಡೆ ಉಜ್ವಲ ಹೊಳಪು ಮತ್ತು ಒಳಗಡೆ ಆರೋಗ್ಯಕರ ಸದೃಢ ಕೂದಲನ್ನು ನೀಡುತ್ತದೆ.

ಫಿಲಿಪ್ಸ್ SeಟಿseIಕಿ ಹೇರ್ ಡ್ರೈಯರ್

ಅತ್ಯಂತ ಪರಿಣಾಮಕಾರಿ ಹಾಗೂ ರಕ್ಷಣಾತ್ಮಕ ಹೇರ್ ಡ್ರೈಯಿಂಗ್ ಒದಗಿಸಲು ಫಿಲಿಪ್ಸ್ ಸೆನ್ಸ್ ಐಕ್ಯೂ ಹೇರ್ ಡ್ರೈಯರ್‍ನ ಸೆನ್ಸರ್‍ಗಳು ಕೂದಲ ಉಷ್ಣತೆಯನ್ನು ಪ್ರತಿ ಸ್ಟೈಲಿಂಗ್ ಸೆಷನ್‍ಗೆ 4,000 ಪಟ್ಟು ಹೆಚ್ಚು ಬಾರಿ ಅಳೆಯುವ ಮೂಲಕ ಶೇ.90ರಷ್ಟು ನೈಸರ್ಗಿಕ ತೇವಾಂಶಕ್ಕೆ ಉಷ್ಣತೆಯನ್ನು ತಕ್ಷಣ ಹೊಂದಿಸುತ್ತದೆ. ಇದರಿಂದ ಕೂದಲು ಶುಷ್ಕವಾದರೂ ನೈಸರ್ಗಿಕ ತೇವಾಂಶ ಉಳಿಸಿಕೊಳ್ಳುತ್ತದೆ.

ಫಿಲಿಪ್ಸ್ ಫೇಸಿಯಲ್ ಪೆನ್ ಟ್ರಿಮ್ಮರ್

ಡಿಐವೈ ಫೇಸಿಯಲ್ ಹೇರ್ ರಿಮೂವರ್ ಮಹಿಳೆಯರ ಕಾಳಜಿಯಾಗಿದೆ. ಆದಾಗ್ಯೂ, ಫಿಲಿಪ್ಸ್ ಫೇಸಿಯಲ್ ಪೆನ್ ಟ್ರಿಮ್ಮರ್ ಹುಬ್ಬುಗಳು, ತುಟಿಯ ಮೇಲ್ಭಾಗ ಮತ್ತು ಹಣೆಯ ಮೇಲೆ ಕೂದಲ ನಿವಾರಣೆಗೆ ಪರಿಪೂರ್ಣ ಪರಿಹಾರವಾಗಿದೆ. ಕಿರಿದಾದ ಮತ್ತು ಕೊಂಡೊಯ್ಯಬಹುದಾದ ವಿನ್ಯಾಸ ಹೊಂದಿದೆ ಮತ್ತು ನೋವಿಲ್ಲದ ಅನುಭವ ನೀಡುವ ಫೇಸಿಯಲ್ ಪೆನ್ ಟ್ರಿಮ್ಮರ್ ಕೂಂಬ್ ಮತ್ತು ಕ್ಲೀನಿಂಗ್ ಬ್ರಷ್ ಮೇಲೆ ಕ್ಲಿಕ್ ಮಾಡುವುದರೊಂದಿಗೆ ಬಂದಿದೆ.

ಈ ಉತ್ಪನ್ನ ಶ್ರೇಣಿಯು ನಿಮ್ಮ ಹತ್ತಿರದ ರೀಟೇಲ್ ಮಳಿಗೆ ಹಾಗೂ ಆನ್‍ಲೈನ್ ಕೊಳ್ಳುವಿಕೆಗೆ ಆಗಸ್ಟ್ 5, 2020ರಿಂದ ಲಭ್ಯ.