IMG 20230405 WA0013

ಕ್ರ್ಯಾಶ್ ಸುರಕ್ಷತೆಯಲ್ಲಿ ಪೂರ್ಣ 5 ನಕ್ಷತ್ರಗಳನ್ನು ಗಳಿಸಿದ ಸ್ಕೋಡಾ ಸ್ಲಾವಿಯ(Škoda Slavia)…!

BUSINESS

ಕ್ರ್ಯಾಶ್ ಸುರಕ್ಷತೆಯಲ್ಲಿ ಪೂರ್ಣ 5 ನಕ್ಷತ್ರಗಳನ್ನು ಗಳಿಸಿದ ಸ್ಕೋಡಾ ಸ್ಲಾವಿಯ(Škoda Slavia)

ಜಾಗತಿಕ NCAP ಪರೀಕ್ಷೆಗಳಲ್ಲಿ ಅಗ್ರ ಅಂಕಗಳೊಂದಿಗೆ

ಸ್ಕೋಡಾ 5-ನಕ್ಷತ್ರ ಸುರಕ್ಷಿತ ಫ್ಲೀಟ್ ಪೂರ್ಣಗೊಳಿಸಿದೆ

  • ಮಗು ಹಾಗು ವಯಸ್ಕ ಪ್ರಯಾಣಿಕರಿಬ್ಬರಿಗೂ 5-ನಕ್ಷತ್ರದ ಸ್ಕೋಡಾ ಪರಂಪರೆಯ ವರ್ಧನೆ
  • ಇಂಡಿಯಾ 2.0 ಹಾಗು ಭಾರತಕ್ಕಾಗಿ ತಯಾರಿಸಲಾದ MQB-A0-IN ವೇದಿಕೆಗಾಗಿ ಬೃಹತ್ ಆರ್ಡರ್
  • ವಯಸ್ಕ ಪ್ರಯಾಣಿಕರಿಗಾಗಿ 29.71 ಮತ್ತು ಮಗು ಪ್ರಯಾಣಿಕರಿಗಾಗಿ 42 ಅಂಕ ಗಳಿಕೆ
  • ಭಾರತದಲ್ಲಿ ತಯಾರಿಸಲಾದ ಕಾರುಗಳ ಪೈಕಿ ಅತ್ಯಧಿಕ ಸುರಕ್ಷತಾ ಪ್ರಮಾಣಗಳು
  • ಜಾಗತಿಕ NCAP ಶ್ರೇಯಾಂಕದ ಪ್ರಕಾರ, ಸ್ಲಾವಿಯಾವನ್ನು ಅತ್ಯಂತ ಸುರಕ್ಷಿತ ಕಾರ್ ಆಗಿ ಮಾಡಿದೆ
  • ಸ್ಕೋಡಾ ಆಟೋ ಇಂಡಿಯಾ(ŠKODA AUTO India)ಈಗ ಸಂಪೂರ್ಣವಾಗಿ 5-ನಕ್ಷತ್ರಗಳ ಸುರಕ್ಷಿತ ಕ್ರ್ಯಾಶ್-ಪರೀಕ್ಷಿತ ಫ್ಲೀಟ್ ಹೊಂದಿದೆ

ಮುಂಬೈ, ಏಪ್ರಿಲ್ 5, 2023 – ಇತ್ತೀಚೆಗೆ ನಡೆಸಲಾದ ಜಾಗತಿಕ ಹೊಸ ಕಾರು ಮೌಲ್ಯಮಾಪನ ಪ್ರೊಗ್ರಾಮ್ ಜಾಗತಿಕ(NCAP)ಕ್ರ್ಯಾಶ್ ಪರೀಕ್ಷೆಗಳಲ್ಲಿ ಸ್ಲಾವಿಯಾ ಸೆಡಾನ್ ಗಳಿಸಿದ ಪೂರ್ಣ 5-ನಕ್ಷತ್ರಗಳ ಅಂಕಗಳಿಂದಾಗಿ  ŠKODA AUTO ಇಂಡಿಯಾದ ಸುರಕ್ಷತೆ ಮತ್ತು ಕ್ರ್ಯಾಶ್-ಸಮರ್ಥ ಸಾಮರ್ಥ್ಯವು ಇನ್ನಷ್ಟು ಬೆಳೆದಿದೆ. ಇದು ಸ್ಲಾವಿಯಾವನ್ನು, ಜಾಗತಿಕ NCAP ನಡೆಸಿದ ಪರೀಕ್ಷೆಗಳಲ್ಲಿ, ಹಿಂದೆಂದೂ ಕಂಡಿರದ ಅತ್ಯಂತ ಸುರಕ್ಷಿತ ಕಾರನ್ನಾಗಿ ಮಾಡಿರುವುದಲ್ಲದೆ, ಭಾರತಕ್ಕಾಗಿ ಸುರಕ್ಷಿತ ಕಾರುಗಳನ್ನು ಇನ್ನಷ್ಟು ವರ್ಧಿಸಿ  ŠKODA AUTO ಇಂಡಿಯಾವನ್ನು ವಯಸ್ಕ ಮತ್ತು ಮಗು ಪ್ರಯಾಣಿಕರಿಬ್ಬರಿಗೂ 5-ನಕ್ಷತ್ರಗಳಿರುವ ಪೂರ್ಣವಾಗಿ ಕ್ರ್ಯಾಶ್-ಪರೀಕ್ಷೆ ಮಾಡಲಾದ ಕಾರುಗಳ ಫ್ಲೀಟ್ ಹೊಂದಿರುವ ಏಕೈಕ ಉತ್ಪಾದಕ ಸಂಸ್ಥೆಯನ್ನಾಗಿಸಿದೆ. 

IMG 20230405 WA0012

ಸ್ಲಾವಿಯಾ ನಿರ್ದಿಷ್ಟಗೊಳಿಸಿರುವ ಸುರಕ್ಷತಾ ಮಾನದಂಡಗಳ ಬಗ್ಗೆ ಮಾತನಾಡುತ್ತಾ, ŠKODA AUTO ಇಂಡಿಯಾದ ಬ್ರ್ಯಾಂಡ್ ನಿರ್ದೇಶಕ ಶ್ರೀ Petr Šolc, “ŠKODAದಲ್ಲಿರುವ ನಮ್ಮ ಕಾರ್ಯತಂತ್ರದ ಭಾಗವಾಗಿ, ನಮ್ಮ ಗ್ರಾಹಕರ ಸುರಕ್ಷತೆಯೊಂದಿಗೆ ರಾಜಿ ಮಾಡಿಕೊಳ್ಳುವ ಪ್ರಮೇಯವೇ ಇಲ್ಲ. ನಮ್ಮ ಎರಡನೇ ಇಂಡಿಯಾ 2.0 ಕಾರ್ ಆದ ಸ್ಲಾವಿಯ ಜಾಗತಿಕ NCAP ಸುರಕ್ಷತಾ ಪರೀಕ್ಷೆಗಳಲ್ಲಿ 5-ನಕ್ಷತ್ರಗಳ ಶ್ರೇಯಾಂಕ ಪಡೆದುಕೊಂಡಿದೆ ಎಂಬ ವಿಷಯವನ್ನು ಹಂಚಿಕೊಳ್ಳುವುದಕ್ಕೆ ನನಗ್ ಬಹಳ ಸಂತೋಷವಾಗುತ್ತಿದೆ. ಇದು, ಸುರಕ್ಷತ, ಕುಟುಂಬ ಮಾನವ ಸ್ಪರ್ಶದ ನಮ್ಮ ಬ್ರ್ಯಾಂಡ್ ಮೌಲ್ಯಗಳಿಗೆ ನಿಖರವಾಗಿ ಹೊಂದುತ್ತದೆ. ŠKODA ಉತ್ಪನ್ನಗಳನ್ನು ಖರೀದಿಸಲು ನಿರ್ಧರಿಸಿದ ನಮ್ಮ ಗ್ರಾಹಕರಿಗೆ ಹೃತ್ಪೂರ್ವಕ ಮೆಚ್ಚುಗೆ ತಿಳಿಸಲು ಬಯಸುತ್ತೇವೆ ಮತ್ತು ಮಾರುಕಟ್ಟೆಯಲ್ಲೇ ಅತ್ಯಂತ ಸುರಕ್ಷಿತವಾದ ಕಾರುಗಳನ್ನು ಅವರಿಗೆ ಒದಗಿಸುತ್ತಿರುವುದಕ್ಕಾಗಿ ನಮಗೆ ಅತ್ಯಂತ ಹರ್ಷವಾಗುತ್ತಿದೆ. ಸುರಕ್ಷಿತತೆಗೆ ಸಮಗ್ರವಾದ ದೃಷ್ಟಿಕೋನವನ್ನು ಹೊಂದಿ ನಾವು ಪೂರ್ಣವಾಗಿ-ಪರೀಕ್ಷಿಸಲಾದ 5-ನಕ್ಷತ್ರಗಳ ಸುರಕ್ಷಿತ ಕಾರುಗಳ ಶ್ರೇಣಿಯನ್ನು ತರುತ್ತಿದ್ದೇವೆ.ನಾವು ಯಾವಾಗಲೂ ನಮ್ಮ  ಕಾರುಗಳ ಗುಣಮಟ್ಟ, ಬೆಲೆಬಾಳುವಿಕೆ ಮತ್ತು ಸುರಕ್ಷಿತತೆಯ ಮೇಲೆ ಗಮನ ಕೇಂದ್ರೀಕರಿಸಿರುತ್ತೇವೆ ಎನ್ನುವುದಕ್ಕೆ ಇದು ಪುರಾವೆಯಾಗಿದೆ. ಸುರಕ್ಷಿತತೆಯು ನಮ್ಮ ಕಾರ್ಯತಂತ್ರದ ಮೂಲದಲ್ಲಿದ್ದು, ಇದೇ ಸಿದ್ಧಾಂತದೊಂದಿಗೆ ನಾವು ಕಾರುಗಳ ನಿರ್ಮಾಣವನ್ನು ಮುಂದುವರಿಸಲಿದ್ದೇವೆ.”ಎಂದು ಹೇಳಿದರು.

ŠKODAದ ಕ್ರಿಯಾಶೀಲ ಚಲನಸಾಮರ್ಥ್ಯ ಗುಣಗಳು ಮತ್ತು ಸುರಕ್ಷಿತತೆಯ ಮೇಲೆ ಶೂನ್ಯ ರಾಜಿಯನ್ನು ಕಾಪಾಡಿಕೊಳ್ಳುವ ಸಂದರ್ಭದಲ್ಲೇ, ಸ್ಥಳೀಕರಣದ ಮೇಲೆ, ಮಾಲೀಕತ್ವ ಹಾಗು ನಿರ್ವಹಣೆಯ ಕಡಿಮೆ ವೆಚ್ಚಗಳ ಮೇಲೆ ಹೆಚ್ಚಿನ ಗಮನಕೇಂದ್ರೀಕರಣದೊಂದಿಗೆ SLAVIAವನ್ನು ವಿನ್ಯಾಸಗೊಳಿಸಲಾಗಿತ್ತು. ವಿವಿಧ ರೀತಿಯ ಪ್ರಭಾವಗಳಿಗಾಗಿ ಅದನ್ನು ಆಂತರಿಕವಾಗಿ ಪರೀಕ್ಷಿಸಲಾಗಿತ್ತು. ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡೇ ಸ್ಲಾವಿಯಾವನ್ನು ಅಡಿಪಾಯದಿಂದ ವಿನ್ಯಾಸಗೊಳಿಸಲಾಗಿತ್ತು. ಇದರ ಸ್ಕೆಲಿಟಲ್ ರಚನೆಯನ್ನು ಲೇಸರ್ ವೆಲ್ಡ್ ಮಾಡಲಾಗಿತ್ತು. ಈ ರಚನೆಯು ಅಧಿಕ ಶಕ್ತಿಯ ಉಕ್ಕನ್ನು ಒಳಗೊಂಡಿದ್ದು, ಒಳಗಿನ ಕ್ಯಾಬಿನ್‌ಗಿಂತ ಕಾರಿನ ಹೊರಗಿನ ಶೆಲ್‌ನ ಉದ್ದಕ್ಕೂ ಕ್ರ್ಯಾಶ್‌ನ ಪ್ರಭಾವವನ್ನು ನಿವಾರಿಸಿ ಹೀರಿಕೊಳ್ಳುವುದಕ್ಕಾಗಿ ನಿರ್ಮಾಣ ಮಾಡಲಾಗಿದೆ. ಈ ಕಠಿಣವಾದ ಮತ್ತು ಪ್ರಭಾವ-ಹೀರಿಕೊಳ್ಳುವ ಬಾಡಿ ರಚನೆಯು ಪ್ರತ್ಯಕ್ಷ ಮತ್ತು ಪರೋಕ್ಷ  ಸುರಕ್ಷತಾ ತಂತ್ರಜ್ಞಾನಗಳಿಗೆ ಪೂರಕವಾಗಿದ್ದು ಸ್ಲಾವಿಯಾವನ್ನು ಒಳಗೂ ಹೊರಗೂ ಸಂಪೂರ್ಣವಾಗಿ ಸುರಕ್ಷಿತವಾದ ಕಾರನ್ನಾಗಿ ಮಾಡಿದೆ. 

ಸ್ಲಾವಿಯಾ, 6 ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಮಲ್ಟಿ-ಕೊಲಿಶನ್ ಬ್ರೇಕಿಂಗ್, ಟ್ರ್ಯಾಕ್ಷನ್ ಕಂಟ್ರೋಲ್, ಆಂಟಿ-ಲಾಕ್ ಬ್ರೇಕ್ಸ್, ಮಕ್ಕಳ ಆಸನಕ್ಕಾಗಿ ISOFIX ಅಳವಡಿಕೆಗಳು, ಟಾಪ್ ಟೆದರ್ ಆಂಕರ್ ಪಾಯಿಂಟ್ಸ್, ರೈನ್-ಸೆನ್ಸಿಂಗ್ ವೈಪರ್ಸ್, ಆಟೋಮ್ಯಾಟಿಕ್ ಹೆಡ್‌ಲೈಟ್ಸ್ ಹಾಗು ಟೈರ್ ಪ್ರೆಶರ್ ಮೇಲುಸ್ತುವಾರಿ ಮುಂತಾದವುಗಳಿಂದ ಸಜ್ಜುಗೊಂಡಿದೆ.

ಗರಿಷ್ಟ 34 ಅಂಶಗಳ ಪೈಕಿ ಸ್ಲಾವಿಯಾ, ವಯಸ್ಕ ಪ್ರಯಾಣಿಕರಿಗಾಗಿ 29.71 ಅಂಕಗಳನ್ನು ಗಳಿಸಿ ವಯಸ್ಕ ಪ್ರಯಾಣಿಕರಿಗಾಗಿ ಪ್ರತ್ಯೇಕ 5-ನಕ್ಷತ್ರ ಗಳಿಸಿತು. ಮಗು ಪ್ರಯಾಣಿಕರ ಸಂದರ್ಭದಲ್ಲಿ ಮಗು ಸುರಕ್ಷತೆಯಲ್ಲಿ 5-ನಕ್ಷತ್ರಗಳನ್ನು ಪಡೆದುಕೊಳ್ಳಲು ಅದು 49 ಪಾಯಿಂಟ್‌ಗಳ ಪೈಕಿ 42 ಪಾಯಿಂಟ್ಸ್ ಪಡೆದುಕೊಂಡಿತು. ಇದು ಸ್ಲಾವಿಯಾವನ್ನು, ಇನ್ನೂ ಹೊಸದಾದ, ಇನ್ನೂ ಕಠಿಣವಾದ ಪರೀಕ್ಷಾ ಪ್ರೊಟೊಕಾಲ್‌ಗಳ ಪ್ರಕಾರ, ಜಾಗತಿಕ NCAP ಪರೀಕ್ಷೆ ಮಾಡಿದ ಅತ್ಯಂತ ಸುರಕ್ಷಿತ ಕಾರನ್ನಾಗಿ ಮಾಡಿದೆ.