ಗ್ಯಾರಂಟಿ ಸರ್ಕಾರದ ಬಜೆಟ್ :
ಭದ್ರಾ ಮೇಲ್ದಂಡೆ ಯೋಜನೆ ಗೆ ಬಿಡುಗಾಸು ನೀಡದ ಕಾಂಗ್ರೆಸ್ ಸರ್ಕಾರ….!
ಭದ್ರಾ ಮೇಲ್ದಂಡೆ ಗೆ ಸಿದ್ದರಾಮಯ್ಯ ನೇತೃತ್ವದ ಗ್ಯಾರಂಟಿ ಸರ್ಕಾರ ಜುಲೈ 7 ರಂದು ಪ್ರಕಟಿಸದ ಬಜೆಟ್ ನಲ್ಲಿ ಬಿಡಿಗಾಸನ್ನು ನೀಡಿಲ್ಲ. ಮಧ್ಯ ಕರ್ನಾಟಕದ ಮಹಾತ್ವಾಕಾಂಕ್ಷೆಯ ಯೋಜನೆ ಗೆ ಎಳ್ಳು – ನೀರು ಬಿಟ್ಟಂತಾಗಿದೆ.
ಸ್ವಾತಂತ್ರ್ಯ ಬಂದು 75 ವರ್ಷ ಕಳೆದರು ನಮ್ಮನ್ನು ಆಳುತ್ತಿರುವ ಸರ್ಕಾರಗಳು ಜನರನ್ನು ಭಿಕ್ಷುಕರ ರೀತಿ ಕಾಣುತ್ತಿವೆ. ಉಚಿತ ಗ್ಯಾರಂಟಿಗಳ ಆಸೆ ತೋರಿಸಿ ಅಧಿಕಾರಕ್ಕೆ ಬಂದ ಸರ್ಕಾರ ದ ಚೊಚ್ಚಲ ಬಜೆಟ್ ನಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಗೆ ಹಣವನ್ನು ನೀಡಿಲ್ಲ. ಕಳೆದ ವರ್ಷದ ಬಿಜೆಪಿ ಸರ್ಕಾರದ , ಬಸವರಾಜ ಬೊಮ್ಮಾಯಿಯವರು 4-೦3-2022 ರಂದು ಮಂಡಿಸಿದ್ದ ಬಜೆಟ್ ನಲ್ಲಿ 3 ಸಾವಿರ ಕೋಟಿ( ಮೂರುಸಾವಿರ ಕೋಟಿ) ಅನುದಾನವನ್ನು ನೀಡಿದ್ದರು.
ಕಾಂಗ್ರೆಸ್ ಚುನಾವಣಾ ಭಾಷಣ:
ಕಾಂಗ್ರೆಸ್ ನವರು ಚುನಾವಣಾ ಸಂದರ್ಭದಲ್ಲಿ ಭದ್ರಾ ಮೇಲ್ದಂಡೆ ಯೋಜನೆ ನಾವೇ ಮಾಡಿದ್ದು ಎನ್ನುತ್ತಾರೆ, ಬಿಟ್ಟಿ ಗ್ಯಾರಂಟಿಗಳನ್ನು ಯಾರಾದರು ಬೇಕು ಎಂದು ಕೇಳಿದ್ದರಾ….? ಅಧಿಕಾರ ಪಡೆಯುವ ಆಸೆಯಿಂದ ಅವರು ನೀಡಿದ ಆಮಿಷ ವಷ್ಠೆ ಎನ್ನುವ ಒಂದು ವರ್ಗವು ಇದೆ.
ಮೂಲಗಳ ಪ್ರಕಾರ ಭದ್ರಾ ಮೇಲ್ದಂಡೆ ಯೋಜನೆ ಗೆ ಇನ್ನು 16 ಸಾವಿರ ಕೋಟಿ ಹಣದ ಅವಶ್ಯಕತೆ ಇದೆ ಎನ್ನಲಾಗುತ್ತಿದೆ. ದಿನಗಳು ಕಳೆದಂತೆ ಯೋಜನೆಯ ವೆಚ್ಚ ಹೆಚ್ಚಾಗುತ್ತಾ ಹೋಗುತ್ತದೆ. ಭದ್ರಾ ಮೇಲ್ದಂಡೆ ಯೋಜನೆ ಗೆ ಅನುದಾನ ನೀಡದೆ ಇರುವುದು ನೋಡಿದರೆ ಮಧ್ಯ ಕರ್ನಾಟಕ ಜನತೆಯ ಸ್ವಾಲಂಭಿ ಬದುಕು ಕಟ್ಟಿ ಕೊಳ್ಳುವುದು ಬೇಡವಾಗಿದೆ ಈ ಉಚಿತ ಗ್ಯಾರಂಟಿ ಸರ್ಕಾರಕ್ಕೆ….!
ಸಿದ್ದರಾಮಯ್ಯನವರ 2023 ರ ಬಜೆಟ್ ನ ಉಲ್ಲೇಖ : ಭದ್ರಾ ಮೇಲ್ದಂಡೆ ಯೋಜನೆ
ಮಧ್ಯ ಕರ್ನಾಟಕದ ಪ್ರಮುಖ ಯೋಜನೆಯಾದ ಭದ್ರಾ ಮೇಲ್ದಂಡೆ ಯೋಜನೆಯನ್ನು ಡಬಲ್ ಇಂಜಿನ್ ಎಂದು ಹೇಳಿಕೊಳ್ಳುವ ಸರ್ಕಾರವಿದ್ದಾಗ್ಯೂ, ರಾಷ್ಟ್ರೀಯ ಯೋಜನೆಯನ್ನಾಗಿ ಇಲ್ಲಿಯವರೆಗೂ ಅಧಿಕೃತವಾಗಿ ಅನುಮೋದಿಸಿರುವುದಿಲ್ಲ. ಕೇಂದ್ರ ಸರ್ಕಾರವು 2023-24ನೇ ಸಾಲಿನ ತನ್ನ ಆಯವ್ಯಯದಲ್ಲಿ 5,300 ಕೋಟಿ ರೂ.ಗಳ ಅನುದಾನವನ್ನು ಭದ್ರಾ ಯೋಜನೆಗೆ ಘೋಷಿಸಿದ್ದು ಸದರಿ ಅನುದಾನವನ್ನು ಶೀಘ್ರವಾಗಿ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಯೋಜನೆಯ ಅನುಷ್ಠಾನಕ್ಕೆ ಆದ್ಯತೆಯ ಮೇಲೆ ಕ್ರಮವಹಿಸಲಾಗುವುದು.
ಭಧ್ರಾ ಮೇಲ್ದಂಡೆ ಯೋಜನೆ ಬಿ. ಎಸ್ ಯಡಿಯೂರಪ್ಪನವರ ಕೊಡುಗೆ….!
ಮಧ್ಯ ಕರ್ನಾಟಕದ ಬರದ ನಾಡನ್ನು ಹಸಿರಾಗಿಸಲು ಭದ್ರಾ ಮೇಲ್ದಂಡೆ ಯೋಜನೆಯನ್ನು ಬಿ.ಎಸ್. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ವೇಳೆ ಶಂಕುಸ್ಥಾಪನೆ ಮಾಡಲಾಗಿತ್ತು ಆಗ ಬಸವರಾಜ ಬೊಮ್ಮಾಯಿಯವರು ಜಲಸಂಪನ್ಮೂಲ ಸಚಿವನಾಗಿದ್ದರು.
ಭದ್ರಾ ಮೇಲ್ದಂಡೆ ಯೋಜನೆಯ ಜಾರಿಗಾಗಿ ಈ ಭಾಗದ ಜನರು 50 ವರ್ಷಗಳ ಸುದೀರ್ಘ ಹೋರಾಟ ನಡೆಸಿದ್ದರು. 2008ರಲ್ಲಿ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಭದ್ರಾ ಮೇಲ್ದಂಡೆ ಯೋಜನೆ ಜಾರಿಗೆ ಸರ್ಕಾರದಿಂದ ಅನುಮೋದನೆ ನೀಡಿದರು. ಯೋಜನೆ ಜಾರಿಗೆ 543 ದಿನಗಳ ಕಾಲ ಈ ಭಾಗದ ಜನರು ಧರಣಿ ಮಾಡಿದ್ದರು.
ಈ ಹೋರಾಟದಲ್ಲಿ ಹೆಣ್ಣುಮಕ್ಕಳು ದೊಡ್ಡ ಪ್ರಮಾಣದಲ್ಲಿ ಭಾಗವಹಿಸಿದ್ದರು. ಅಂದಿನ ಸರ್ಕಾರದ ನೀರಾವರಿ ಖಾತೆ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿಅವರು, ಹೋರಾಟಗಾರ ಬಳಿ ಬಂದು ಯೋಜನೆ ಜಾರಿಗೆ ಬಗ್ಗೆ ತಾಂತ್ರಿಕವಾಗಿ ಹೇಗೆ ಭದ್ರಾ ನದಿಯಿಂದ ನೀರು ತರಲಾಗುತ್ತದೆ ಎಂದು ವಿವರಿಸಿದ ಮೇಲೆ ಹೋರಾಟ ಅಂತ್ಯವಾಗಿತ್ತು. ಹೋರಾಟಗಾರರಿಗೆ ಆಶ್ವಾಸನೆ ನೀಡಿದ ಹಾಗೇ ಕೇಂದ್ರ ಸರ್ಕಾರದ ಪರಿಸರ ಹಾಗೂ ಅರಣ್ಯ ಇಲಾಖೆಯ ಅನುಮತಿ ಪಡೆದು 15 ದಿನದಲ್ಲಿ ಯೋಜನೆಯ ಟೆಂಡರ್ ಕರೆದಿದ್ದರು. ಬಿಎಸ್ ವೈ ಅವರು ಕೈಗೊಂಡ ದಿಟ್ಟ ನಿಲುವಿನಿಂದಾಗಿ ಈ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿದ್ದ ಭದ್ರಾ ಮೇಲ್ದಂಡೆ ಯೋಜನೆ ರೂಪಿಸಿ, ಕಾಮಗಾರಿ ಆರಂಭಿಸಿದ್ದರು.
ಮಾಜಿ ಸಂಸದ ಜನಾರ್ಧನ ಸ್ವಾಮಿ ಕೊಡುಗೆ :
ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಮಾಜಿ ಸಂಸದರಾದ ಜನಾರ್ಧನ ಸ್ವಾಮಿ ಯವರು ಭದ್ರಾ ಮೇಲ್ದಂಡೆ ಯೋಜನೆ ಜಾರಿಗೆ ತಮ್ಮದೆ ಆದ ಕೊಡುಗೆ ನೀಡಿದ್ದಾರೆ.ಬರದನಾಡು- ಹಿಂದುಳಿದ ತಾಲ್ಲೂಕು ಪಾವಗಡ ಮತ್ತು ಮೊಳಕಾಲ್ಮೂರು ಸೇರಿದಂತೆ ಕೆಲವು ತಾಲ್ಲೂಕುಗಳು ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಸೇರಿರುವುದಿಲ್ಲ, ಆಗ ಜನಾರ್ಧನ ಸ್ವಾಮಿಯವರು ಪಟ್ಟು ಬಿಡದ ವಿಕ್ರಮಾರ್ಕನಂತೆ ಈ ತಾಲ್ಲೂಕು ಗಳನ್ನು ಸೇರಿಸುತ್ತಾರೆ.
ಮೋದಿ ಸರ್ಕಾರದಿಂದ 5300 ಕೋಟಿ ಅನುದಾನ
ಮಧ್ಯ ಕರ್ನಾಟಕದ ಬಯಲು ಸೀಮೆ ಪ್ರದೇಶಗಳಿಗೆ ನೀರುಣಿಸುವ ಈ ಭದ್ರಾ ಮೇಲ್ಡಂಡೆಗೆ ಕೇಂದ್ರ ಸರ್ಕಾರ 5300 ಕೋಟಿ ರು.ಆರ್ಥಿಕ ನೆರವು ನೀಡಿರುವುದರಿಂದ ಮಧ್ಯ ಕರ್ನಾಟಕದ ಜನರ ಬಹುದಿನಗಳ ಬೇಡಿಕೆಯೊಂದಕ್ಕೆ ಅಧಿಕೃತ ಮುದ್ರೆ ಒತ್ತಿದಂತಾಗಿದೆ
ಏನಿದು ಯೋಜನೆ :
ಈ ಯೋಜನೆಗೆ ಸರ್ಕಾರ ಖರ್ಚು ಮಾಡಬೇಕಾದ ಹಣ ದಿನೇ ದಿನೇ ಏರಿಕೆ ಯಾಗಿದ್ದರಿಂದ, ಆರಂಭದಲ್ಲಿ 6000 ಕೋಟಿ ರು. ಇದ್ದ ಯೋಜನೆಯ ವೆಚ್ಚವನ್ನು ರಾಜ್ಯ ಬಿಜೆಪಿ ಸರ್ಕಾರ 16.12.2020 ರಂದು . 21473.67 ಕೋಟಿಗಳ ಪರಿಷ್ಕೃತ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆಯನ್ನು ನೀಡಲಾಗಿತ್ತು. ಸದರಿ ಯೋಜನೆಯನ್ನು ಎರಡು ಹಂತದಲ್ಲಿ ಕೈಗೊಳ್ಳಲಾಗಿದ್ದು, ಕಾಮಗಾರಿಗಳು ವಿವಿಧ ಹಂತದ ಪ್ರಗತಿಯಲ್ಲಿವೆ.
ಪ್ಯಾಕೇಜ್-I: ತುಂಗಾ ನದಿಯಿಂದ17.40 ಟಿ.ಎಂ.ಸಿ ನೀರನ್ನು ಎರಡು ಹಂತಗಳಲ್ಲಿ ಲಿಫ್ಟ್ ಮಾಡಿ ಭದ್ರಾ ಜಲಾಶಯಕ್ಕೆ ನೀರು ಹರಿಸುವ, ಕಾಮಗಾರಿ ಪ್ರಗತಿಯಲ್ಲಿದೆ.
ಪ್ಯಾಕೇಜ್-II :ಭದ್ರಾ ಜಲಾಶಯದಿಂದ29.90 ಟಿ.ಎಂ.ಸಿ. ನೀರನ್ನು ಎರಡು ಹಂತಗಳಲ್ಲಿ ಲಿಫ್ಟ್ ಮಾಡಿ ಅಜ್ಜಂಪುರ ಸುರಂಗದವರೆಗೆ ಕೊಂಡೊಯ್ಯುವ, ಕಾಮಗಾರಿಗಳು ಭೌತಿಕವಾಗಿ ಪೂರ್ಣಗೊಂಡಿರುತ್ತವೆ.
ಪ್ಯಾಕೇಜ್-III: ಅಜ್ಜ೦ಪುರ ಸುರಂಗ ಮಾರ್ಗದ ಮೂಲಕ ಚಿತ್ರದುರ್ಗ ಶಾಖಾ ಕಾಲುವೆ ಹಾಗೂ ತುಮಕೂರು ಶಾಖಾ ಕಾಲುವೆಗಳಿಗೆ ನೀರು ಹರಿಸುವ, ಕಾಮಗಾರಿಗಳು ಭೌತಿಕವಾಗಿ ಪೂರ್ಣಗೊಂಡಿರುತ್ತವೆ.
ಎರಡನೇ ಹಂತ
ತರೀಕೆರೆ ಏತ ನೀರಾವರಿ: ತರೀಕೆರೆ ತಾಲ್ಲೂಕಿನ 20,150 ಹೇಕ್ಟೇರ್ ಕ್ಷೇತ್ರಕ್ಕೆ ಹನಿ ನೀರಾವರಿ ಮೂಲಕ ನೀರನ್ನು ಒದಗಿಸುವುದು ಹಾಗೂ 79 ಕೆರೆಗಳನ್ನು ತುಂಬಿಸುವುದು. ಪ್ರಸ್ತುತ ಕಾಮಗಾರಿಗಳನ್ನು02 ಪ್ಯಾಕೇಜ್‌ಗಳನ್ನಾಗಿ ಕೈಗೆತ್ತಿಕೊಳ್ಳಲಾಗಿದೆ.
ಚಿತ್ರದುರ್ಗ ಶಾಖಾ ಕಾಲುವೆ:134.597 ಕಿ.ಮೀ ಉದ್ದದ ಕಾಲುವೆ ಮುಖಾಂತರ ಚಿಕ್ಕಮಗಳೂರು ಜಿಲ್ಲೆ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ1,07,265 ಹೆಕ್ಟೇರ್ ಕ್ಷೇತ್ರಕ್ಕೆ ಹನಿ ನೀರಾವರಿ ಕಲ್ಪಿಸಿ157 ಕೆರೆಗಳಿಗೆ ನೀರನ್ನು ತುಂಬಿಸುವುದು. ಪ್ರಸ್ತುತ ಕಾಮಗಾರಿಗಳನ್ನು12 ಪ್ಯಾಕೇಜ್‌ಗಳನ್ನಾಗಿ ಕೈಗೆತ್ತಿಕೊಳ್ಳಲಾಗಿದೆ.
ತುಮಕೂರು ಶಾಖಾ ಕಾಲುವೆ :159.684 ಕಿ.ಮೀ. ಉದ್ದದ ಕಾಲುವೆ ಮುಖಾಂತರ ಚಿಕ್ಕಮಗಳೂರು, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ 84,900 ಹೆಕ್ಟೇರ್ ಕ್ಷೇತ್ರಕ್ಕೆ ಹನಿ ನೀರಾವರಿ ಕಲ್ಪಿಸಿ 131 ಕೆರೆಗಳಿಗೆ ನೀರನ್ನು ತುಂಬಿಸುವುದು. ಪ್ರಸ್ತುತ ಕಾಮಗಾರಿಗಳನ್ನು09 ಪ್ಯಾಕೇಜ್‌ಗಳನ್ನಾಗಿ ಕೈಗೆತ್ತಿಕೊಳ್ಳಲಾಗಿದ್ದು, ಕಾಮಗಾರಿಗಳು ಪ್ರಗತಿಯಲ್ಲಿರುತ್ತವೆ.
ಹನಿ ನೀರಾವರಿ: ಚಿತ್ರದುರ್ಗ ಶಾಖಾ ಕಾಲುವೆಯ40749 ಹೆ. ಪ್ರದೇಶಕ್ಕೆ, ತುಮಕೂರು ಶಾಖಾ ಕಾಲುವೆಯಡಿ 27590 ಹೆ. ಪ್ರದೇಶಕ್ಕೆ ಮತ್ತು ಜಗಳೂರು ಶಾಖಾ ಕಾಲುವೆಯಡಿ 24123 ಹೆ. ಪ್ರದೇಶಕ್ಕೆ ಹನಿ ನೀರವಾರಿ ಸೌಲಭ್ಯ ಕಲ್ಪಿಸುವ ಮತ್ತು ಕೆರೆ ತುಂಬಿಸುವ ಕಾಮಗಾರಿಗಳನ್ನು07 ಪ್ಯಾಕೇಜ್‌ಗಳನ್ನಾಗಿ ಕೈಗೆತ್ತಿಕೊಳ್ಳಲಾಗಿದೆ
ಕೆರೆ ತುಂಬಿಸುವ ಕಾಮಗಾರಿಗಳು: ಚಿತ್ರದುರ್ಗ ಶಾಖಾ ಕಾಲುವೆಯಿಂದ ಕವಲೊಡೆಯುವ ಹೊಳಲ್ಕೆರೆ, ಪಾವಗಡ, ಚಳ್ಳಕೆರೆ ಮತ್ತು ಮೊಳಕಾಲ್ಮೂರು ತಾಲ್ಲೂಕಿನ ಕೆರೆಗಳನ್ನು ತುಂಬಿಸುವ ಹಾಗೂ ತುಮಕೂರು ಶಾಖಾ ಕಾಲುವೆಯಿಂದ ಕವಲೊಡೆಯುವ ಶಿರಾ, ಹಿರಿಯೂರು ಮತ್ತು ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಕೆರೆಗಳನ್ನು ತುಂಬಿಸುವ ಫಿಡರ್ ಕಾಮಗಾರಿಗಳನ್ನು 19 ಪ್ಯಾಕೇಜ್‌ಗಳನ್ನಾಗಿ ಕೈಗೆತ್ತಿಕೊಳ್ಳಲಾಗಿದ್ದು, ಕಾಮಗಾರಿಗಳು ಪ್ರಗತಿಯಲ್ಲಿರುತ್ತವೆ.
ಫಲಾನುಭವಿ ತಾಲೂಕುಗಳು
- ಚಿಕ್ಕಮಗಳೂರು: ತರೀಕೆರೆ, ಕಡೂರು
- ಚಿತ್ರದುರ್ಗ: ಹೊಸದುರ್ಗ, ಹೊಳಲ್ಕೆರೆ, ಹಿರಿಯೂರು, ಚಿತ್ರದುರ್ಗ, ಚಳ್ಳಕೆರೆ, ಮೊಳಕಾಲ್ಮುರು
- ದಾವಣಗೆರೆ: ಶಿರಾ, ಜಗಳೂರು
- ತುಮಕೂರು: ಚಿಕ್ಕನಾಯಕನಹಳ್ಳಿ, ಪಾವಗಡ
ಪ್ರಯೋಜನ ಪಡೆವ ಗ್ರಾಮಗಳು
787 ಹಳ್ಳಿಗಳು: ಭದ್ರಾ ಮೇಲ್ದಂಡೆಯಿಂದ ಪ್ರಯೋಜನ ಪಡೆವ ಗ್ರಾಮಗಳು
74.26 ಲಕ್ಷ: ಯೋಜನೆಯಿಂದ ಮುಕ್ಕಾಲು ಕೋಟಿ ಜನರಿಗೆ ಅನುಕೂಲ
2.25 ಲಕ್ಷ ಹೆಕ್ಟೇರ್: ನೀರಾವರಿಗೊಳಪಡುವ ಒಟ್ಟು ಬರಪೀಡಿತ ಪ್ರದೇಶ
367 ಕೆರೆ: ಯೋಜನೆಯಿಂದ ಅಪಾರ ಕೆರೆಗಳಿಗೆ ಜೀವಜಲ
. ಸರ್ಕಾರ ಹಣ ನೀಡೋದು ಯಾವಾಗ…? ಕಾಮಗಾರಿ ಮುಗಿಯೋದು ಯಾವಾಗ….?
ಈ ಯೋಜನೆಗೆ ಸರ್ಕಾರ ಖರ್ಚು ಮಾಡಬೇಕಾದ ಹಣ ದಿನೇ ದಿನೇ ಏರಿಕೆ ಯಾಗುತ್ತಲೆ ಇದೆ. ಸದ್ಯ ಈ ಯೋಜನೆಗೆ 23 ಸಾವಿರ ಕೋಟಿ ಬೇಕು ಎಂದು ಹೇಳಲಾಗುತ್ತಿದೆ. ಈ ಪೈಕಿ ಸದ್ಯ 16 ಸಾವಿರ ಕೋಟಿ ರೂಪಾಯಿ ಮೊತ್ತದ ಕೆಲಸಗಳು ಇನ್ನೂ ಬಾಕಿ ಉಳಿದಿವೆ ಎನ್ನಲಾಗುತ್ತಿದೆ.
ಇದೀಗ ಕೇಂದ್ರ ಸರ್ಕಾರ ಬಜೆಟ್ ನಲ್ಲಿ ಪ್ರಕಟಿಸಿರುವ ಸುಮಾರು 5 ಸಾವಿರದ ಮುನ್ನೂರು ಕೋಟಿ.( 5300 ಕೋಟಿ ). ಹಾಗಾದ್ರೆ ಬಾಕಿ ಹಣ ಲಭಿಸುವುದು ಯಾವಾಗ? ಕಾಮಗಾರಿ ಪೂರ್ಣ ಗೊಳ್ಳುವುದು ಯಾವಾಗ ? ಕೆರಗಳಿಗೆ ನೀರು ಬರುವುದು ಎಂದು…? ಇದು ಸದ್ಯದ ಪ್ರಶ್ನೆ….!
ಕಾಂಗ್ರೆಸ್ : ಉಚಿತ ಗ್ಯಾರಂಟಿ ಪಿತಾಮಹರು ಉತ್ತರಿಸಬೇಕು….?
ಇಂತಹ ಯೋಜನೆಗೆ ಸಿದ್ದರಾಮಯ್ಯ ನೇತೃತ್ವದ ಗ್ಯಾರಂಟಿ ಸರ್ಕಾರ ಬಜೆಟ್ ನಲ್ಲಿ ಅನದಾನ ಕೊಡದೆ ಇರುವುದರಿಂದ ಈ ಯೋಜನೆ ಯಾವಗ ಪೂರ್ಣಗೊಳ್ಳಲಿದೆ, ಮಧ್ಯ ಕರ್ನಾಟಕದ – ಬರದ ನಾಡಿನ ರೈತರ ಬದಕು ಹಸನಾಗುವುದು ಯಾವಾಗ….? ಉಚಿತ ಗ್ಯಾರಂಟಿ ಪಿತಾಮಹರೆ ಉತ್ತರಿಸಬೇಕು….? ಭಧ್ರಾ ಮೇಲ್ದಂಡೆ ಯೋಜನೆ ಗೆ ಕಾಂಗ್ರೆಸ್‌ಪಕ್ಷದ ಕೊಡುಗೆ ಇದೆಯಾ….?
ಉಚಿತ ಗ್ಯಾರೆಂಟಿಗಳು ಮುಖ್ಯನಾ…? ಭದ್ರಾ ಮೇಲ್ದಂಡೆ ಯೋಜನೆ ಮುಖ್ಯನಾ….?
ಈ ಲೇಖನ ಓದಿದ ನಿಮ್ಮ ಅವಗಾಹನೆ ಗೆ ಬಿಡುತ್ತಿದ್ದೇವೆ…….!