ಕಾಡುಗೊಲ್ಲ ಸಮುದಾಯದ ಬೇಡಿಕೆಗಳು.
*ಕಾಡುಗೊಲ್ಲ ಜನಾಂಗಕ್ಕೆ ಪ್ರೊ.ಎಂ.ಅನ್ನಪೂರ್ಣ ಅವರ ಕುಲಶಾಸ್ತ್ರೀಯ ಅಧ್ಯಯನ ವರದಿಯ ಆಧಾರದ ಮೇಲೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಹಾಗೂ ಸಿಂಧುತ್ವ ಪ್ರಮಾಣ ಪತ್ರವನ್ನು ನೀಡಲು ಸುತ್ತೋಲೆ ಹೊರಡಿಸಬೇಕು.
*ಕರ್ನಾಟಕ ರಾಜ್ಯ ಕಾಡುಗೊಲ್ಲ ಅಭಿವೃದ್ಧಿ ನಿಗಮವನ್ನು ವ್ಯವಸ್ಥಿತವಾಗಿ, ವೈಜ್ಞಾನಿಕವಾಗಿ ಪುನರ್ ರೂಪಿಸಿ, ನಿಗಮಕ್ಕೆ ಅಧ್ಯಕ್ಷರು ಮತ್ತು ಸದಸ್ಯರಾಗಿ ಕಾಡುಗೊಲ್ಲರನ್ನೇ ನೇಮಿಸಬೇಕು. ನಿಗಮಕ್ಕೆ ವಾರ್ಷಿಕ 200 ಕೋಟಿ ರೂ ಅನುದಾನ ಹಂಚಿಕೆ ಮಾಡಬೇಕು.
*ಕಾಡುಗೊಲ್ಲ ಜನಾಂಗವನ್ನು ಅಲೆಮಾರಿ/ಅರೆ ಅಲೆಮಾರಿ ಜಾತಿ ಪಟ್ಟಿಗೆ ಸೇರಿಸಿ ಆದೇಶ ಹೊರಡಿಸಬೇಕು.
*ಕಾಡುಗೊಲ್ಲ ಸಮುದಾಯವನ್ನು ಕೇಂದ್ರ ಓಬಿಸಿ ಜಾತಿ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು.
*ಕಾಡುಗೊಲ್ಲ/ಹಟ್ಟಿಗೊಲ್ಲ ಜಾತಿಗಳನ್ನು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸ್ಪರ್ಧಿಸಲು ಅನುವಾಗುವಂತೆ ಚುನಾವಣಾ ಗೆಜೆಟ್ ನಲ್ಲಿ ಹಿಂದುಳಿದ ವರ್ಗ, ಪ್ರವರ್ಗ, ಎ – ಬಿ (ಬಿಸಿಎಂ-ಎ) ಚುನಾವಣಾ ಜಾತಿ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲು ಸಂಬಂಧಿಸಿದವರಿಗೆ ಸೂಕ್ತ ನಿರ್ದೇಶನ ನೀಡಬೇಕು.
ಕಾಡುಗೊಲ್ಲ ಸಂಘದ ರಾಜ್ಯಾಧ್ಯಕ್ಷರಾದ ರಾಜಣ್ಣ, ಮಹಾಲಿಂಗಪ್ಪ ಗೌರವಾಧ್ಯಕ್ಷರು, ಸಂಘಟನಾ ಕಾರ್ಯದರ್ಶಿ ಪ್ರಭುದೇವ್ ಸೇರಿ ಸಮುದಾಯದ ನೂರಕ್ಕೂ ಅಧಿಕ ಪದಾಧಿಕಾರಿಗಳು ನಿಯೋಗದಲ್ಲಿದ್ದರು.
ಸಚಿವರಾದ ಡಿ.ಸುಧಾಕರ್, ಶಿವರಾಜ್ ತಂಗಡಗಿ ಹಾಗೂ ರಾಜ್ಯ ಸರ್ಕಾರದ ದೆಹಲಿ ಪ್ರತಿನಿಧಿಯವರಾದ ಟಿ.ಬಿ.ಜಯಚಂದ್ರ ಮತ್ತು ಚಿತ್ರದುರ್ಗ ಜಿಲ್ಲೆಯ ಶಾಸಕರಾದ ವೀರೇಂದ್ರ ಪಪ್ಪಿ, ವೆಂಕಟೇಶ್ ಪಾವಗಡ, ರಘುಮೂರ್ತಿ, ಶ್ರೀನಿವಾಸ್ ಗುಬ್ಬಿ, ಕುಣಿಗಲ್ ರಂಗನಾಥ್, ಬಿ.ಜಿ.ಗೋವಿಂದಪ್ಪ , ಅರಸೀಕೆರೆ ಶಿವಲಿಂಗೇಗೌಡರ ನೇತೃತ್ವದಲ್ಲಿ ಕಾಡುಗೊಲ್ಲ ಸಮುದಾಯದ ಮುಖಂಡರುಗಳು ಇಂದು ಸುವರ್ಣಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ತಮ್ಮ ಹಲವು ಬೇಡಿಕೆಗಳ ಒತ್ತಾಯಿಸಿ ಮನವಿ ಅರ್ಪಿಸಿದರು.