IMG 20240228 WA0019

ಪಾವಗಡ: ಆಕರ್ಷಣಿ ಪ್ರೌಢಶಾಲೆ ಗೆ ಲೋಕಾಯುಕ್ತ ರ ಭೇಟಿ…… ಸಪ್ತಸ್ವರ ವರದಿ ಫಲಶೃತಿ

DISTRICT NEWS Genaral STATE ತುಮಕೂರು

ವೈ ಎನ್ ಹೊಸಕೋಟೆ ಹೋಬಳಿ ತಿಪ್ಪಯ್ಯನದುರ್ಗದ ಆಕರ್ಷಣಿ ಪ್ರೌಢಶಾಲೆ ಗೆ ಲೋಕಾಯುಕ್ತ ಪೋಲೀಸರ ಭೇಟಿ ಪರಿಶೀಲನೆ

ಪಾವಗಡ : ತಾಲ್ಲೂಕಿನ y. n ಹೊಸಕೋಟೆ ಹೋಬಳಿಯ ತಿಪ್ಪಯ್ಯನದುರ್ಗ ದ ಸರ್ಕಾರಿ ಅನುದಾನಿತ ಆಕರ್ಷಣಿ ಪ್ರೌಢಶಾಲೆ ಮೇಲೆ ಬುಧುವಾರ ಲೋಕಾಯುಕ್ತ ಇನ್ಸ್ಪೆಕ್ಟರ್ ಸಲೀಂ ಮತ್ತು ತಂಡ ಭೇಟಿ ನೀಡಿ ಪರಿಶೀಲಿಸಿದರು.

ತಿಪ್ಪಯ್ಯನ ದುರ್ಗದ ಆಕರ್ಷಣಿ ಪ್ರೌಢಶಾಲೆಯಗೆ ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಸುಮಾರು 30 ರಿಂದ 40 ಮಕ್ಕಳನ್ನು ಶಾಲೆಗೆ ಕರೆ ತಂದು ಆ ಮಕ್ಕಳಿಗೆ ಯಾವುದೇ ರೀತಿಯ ಹಾಸ್ಟೆಲ್ ವ್ಯವಸ್ಥೆಯನ್ನು ಮಾಡದೆ ಶಾಲೆಯ ರೂಮಿನಲ್ಲಿ ಇರಲು ವ್ಯವಸ್ಥೆ ಮಾಡಲಾಗಿದ್ದು, ಯಾವುದೇ ಮೂಲಭೂತ ಸೌಕರ್ಯಗಳು ವಿದ್ಯಾರ್ಥಿಗಳಿಗೆ ನೀಡಿರುವುದಿಲ್ಲ.

ಶೌಚಾಲಯವಿಲ್ಲ ರೂಮ್ ಗಳಲ್ಲಿ ಫ್ಯಾನ್ ಗಳು ಇಲ್ಲ, ಮಳೆ ಬಂದರೆ ತೋಟ್ಟಿಕ್ಕುವ ರೂಮ್ ಗಳು.

ಈ ಅವ್ಯವಸ್ಥೆ ಯ ಬಗ್ಗೆ ಸಪ್ತಸ್ವರ ಪತ್ರಿಕೆ ಫೆಬ್ರವರಿ ವಿಶೇಷ ಸಂಚಿಕೆಯಲ್ಲಿ ದೂರದೂರಿನ ಮಕ್ಕಳ ಗೋಳು ಕೇಳೋದ್ಯಾರು…! ಎಂಬ ಶೀರ್ಷಿಕೆ ಯಡಿ ವರದಿ ಪ್ರಕಟವಾಗಿತ್ತು .ಮಕ್ಕಳ ಗೋಳು ಕೇಳಲು ಇಂದು ಲೋಕಾಯುಕ್ತ ಪೋಲೀಸರು ಆಗಮಿಸಿ ವಾಸ್ತವ ಸ್ಥಿತಿಯನ್ನು ಕಣ್ಣಾರೆ ನೋಡಿದರು.

IMG 20240228 224146

ಹಿನ್ನೆಲೆ

ಆಕರ್ಷಣಿ ಪ್ರೌಡಶಾಲೆಯ ಅವ್ಯವಸ್ಥೆ ಬಗ್ಗೆ ಮಂಜುನಾಥ್ ಉಪ ನಿರ್ದೇಶಕರು, ಶಿಕ್ಷಣ ಇಲಾಖೆ ಇವರಿಗೆ 28-7-2023 ರಂದು ಪಾವಗಡ ಕ್ಕೆ ಬಂದಾಗ ಸಪ್ತಸ್ವರ ಮಾದ್ಯಮದಿಂದ ಅವರ ಗಮನಕ್ಕೆ ತರಲಾಗಿತ್ತು ಆಗ ಅವರು ಪರಿಶೀಲಿಸುತ್ತೇನೆ ಎಂಬ ಮಾತನ್ನೂ ಹೇಳಿದ್ದರು.

6 ತಿಂಗಳಾದರು.ಶಾಲೆಯತ್ತ ಸುಳಿಯದ ಡಿ.ಡಿ.ಪಿ.ಐ

ಮಂಜುನಾಥ್ ಉಪನಿರ್ದೇಶಕರು ಶಿಕ್ಷಣ ಇಲಾಖೆ ಇವರ ಗಮನಕ್ಕೆ ತಂದು ಆರು ತಿಂಗಳು ಕಳೆದರು‌ ಆಕರ್ಶಣಿ ಪ್ರೌಢಶಾಲೆ ಭೇಟಿ ನೀಡುವುದಿಲ್ಲ. ಪರಿಶೀಲಿಸುವುದಿಲ್ಲ ಇನ್ನು ಪಾವಗಡ ಬಿ.ಇ.ಒ ಇಂದ್ರಾಣಿ ಮೇಡಮ್ ಸಹ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಅವರು ತುಂಬಾ ಬ್ಯೂಸಿ..

ಇತ್ತೀಚೆಗೆ ಮಕ್ಕಳ ಆಹಾರ ದಲ್ಲಿ‌ ವ್ಯತ್ಯಯ ವಾಗಿ ( Food poisoning) ವೈ ಎನ್ ಹೊಸಕೋಟೆ ಸರ್ಕಾರಿ ಆಸ್ಪತ್ರೆ ಗೆ ದಾಖಲಾಗಿದ್ದರು‌ ಎಂಬ ಮಾಹಿತಿ ಲಭ್ಯವಾಗಿದೆ. ಈ ಶಾಲೆ‌ ತಿಪ್ಪಯ್ಯನದುರ್ಗ ಗ್ರಾಮ ದಲ್ಲಿ ಇಲ್ಲ ಬೆಟ್ಟದ ತಪ್ಪಲಲ್ಲಿ ಇದೆ.ಇಲ್ಲಿ ಕರಡಿ ಗಳ ಹಾವಳಿ ಇದೆ ಮಕ್ಕಳಿಗೆ ಏನಾದರು ಅನಾಹುತ ವಾದರೆ ಯಾರು ಜವಬ್ದಾರಿ. ಬಡವರ ಮಕ್ಕಳು ಎಂದರೆ ಅಷ್ಟೋಂದು ತಾತ್ಸಾರವ .

ಲೋಕಾಯುಕ್ತರಿಗೆ ಮಧುಗಿರಿ ಡಿ.ಡಿ ಪಿ ಐ ಮಂಜುನಾಥ್ ಮತ್ತು ಪಾವಗಡ ಬಿ.ಇ.ಒ ಇಂದ್ರಾಣಿ ಯವರ ಮೇಲೆ ದೂರು ದಾಖಲಾಗಿದೆ. ಶಾಲೆಯ ಮೇಲೆ ದೂರು ದಾಖಲು ಮಾಡಲಾಗಿಲ್ಲ ಕಾರಣ ಅಧಿಕಾರಿಗಳು‌ ತಾವು‌ ತೆಗೆದುಕೊಳ್ಳುವ ಸಂಬಳ ಕ್ಕೆ ಅವರ ವ್ಯಾಪ್ತಿಯಲ್ಲಿ ಸರಿಯಾಗ ಕರ್ತವ್ಯ ನಿರ್ವಹಿಸಿದರೆ. ಈ ರೀತಿ ನಡೆಯುವ ಶಾಲೆಗಳು‌ ಇರುವುದಿಲ್ಲ. ವಸತಿ ಶಾಲೆಯ‌ ಅನುಮತಿ ಇಲ್ಲದ – ಮೂಲಭೂತ ಸೌಕರ್ಯಗಳು ಕಾಣದ ಶಾಲೆಯಲ್ಲಿ ದೂರದ ಊರಿನಿಂದ ಮಕ್ಕಳು ಬಂದು ನರಕ ಸದೃಷ್ಯ ಜೀವನ ಸಾಗಿಸುತ್ತಿದ್ದರೆ. ಅವರ ಗಮನಕ್ಕೆ ತಂದರು‌ ಕಣ್ಣು‌ಮುಚ್ಚಿ ಕುಳಿತಿರುವ ಇಂತಹ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಅಲ್ಲವಾ…? ದೂರು ದಾಖಲು‌ ಆಗ ಬೇಕು ಅಲ್ಲವೆ….?

ಆ ಶಾಲೆಯ ಮೇಲೆ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆ ಡಿ ಡಿ ಪಿ ಐ ಮತ್ತು ಬಿಇಒ ಅವರ ಮೇಲೆ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿದೆ.

IMG 20240228 130149 1

ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಬುಧವಾರ ಲೋಕಾಯುಕ್ತ ಪೋಲೀಸರು ಬೆಳಿಗ್ಗೆ 11 ಗಂಟೆಗೆ ಆಕರ್ಷಣಿ ಪ್ರೌಢಶಾಲೆಗೆ ಭೇಟಿ ನೀಡಿ.
ಸುಮಾರು 03 ಗಂಟೆಗೂ ಹೆಚ್ಚಿನ ಕಾಲ ಶಾಲೆಯ ದಾಖಲೆಗಳನ್ನು ಪರಿಶೀಲಿಸಿದ್ದಾರೆ.ಅನುದಾನಿತ ಶಾಲೆಯಾಗಿದ್ದು, ವಸತಿ ಶಾಲೆ ನಡೆಸಲು ಇಲಾಖೆಯಿಂದ ಯಾವುದೇ ಪರವಾನಿಗೆ ತೆಗೆದುಕೊಂಡಿರುವುದಿಲ್ಲ ಎಂಬ ಮಾಹಿತಿಯನ್ನು ತಿಳಿದು ಗರಂ ಆದರು.

ಸೋಮವಾರ ಲೋಕಾಯುಕ್ತ ಕಚೇರಿಗೆ ಶಾಲೆಯ ಆಡಳಿತ ಮಂಡಳಿಯವರು ಬರುವಂತೆ ತಾಕಿದ್ದು ಮಾಡಿದ್ದಾರೆ.