* ಪಠ್ಯಕ್ರಮದ ಹೊರತಾದ ಪ್ರಶ್ನೆಗಳನ್ನು ಕೆಸಿಇಟಿ 2024 ರ ಮೌಲ್ಯ ಮಾಪನಕ್ಕೆ ಪರಿಗಣಿಸುವುದಿಲ್ಲ.
* ಕೆಸಿಇಟಿ 2024 ಕ್ಕೆ ಮರು ಪರೀಕ್ಷೆ ನಡೆಸಲಾಗುವುದಿಲ್ಲ.
ಬೆಂಗಳೂರು : ಪಠ್ಯಕ್ರಮದ ಹೊರತಾದ ಪ್ರಶ್ನೆಗಳನ್ನು ಕೆಸಿಇಟಿ 2024 ರ ಮೌಲ್ಯ ಮಾಪನಕ್ಕೆ ಪರಿಗಣಿಸುವುದಿಲ್ಲ.ಕೆಸಿಇಟಿ 2024 ಕ್ಕೆ ಮರು ಪರೀಕ್ಷೆ ನಡೆಸಲಾಗುವುದಿಲ್ಲ. ಎಂಬ ಸ್ಪಷ್ಟಣೆಯನ್ಬು ನೀಡಿದೆ. ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶ್ರೀಕರ್ ಅವರು ಪತ್ರಿಕಾ ಪ್ರಕಟಣೆಯ ಮೂಲಕ ವಿಧ್ಯಾರ್ಥಿ ಗಳ ಪೋಷಕರ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು 2024 ರ ಕೆ ಸಿ ಇ ಟಿ ಪರೀಕ್ಷೆಯನ್ನು ಏಪ್ರಿಲ್ 18 ಮತ್ತು 19 ರಂದು ನಡೆಸಿತ್ತು. ಭೌತಶಾಸ್ತ್ರ, ರಸಾಯನ ಶಾಸ್ತ್ರ , ಗಣಿತ ಮತ್ತು ಜೀವಶಾಸ್ತ್ರ ವಿಷಯಗಳಿಗೆ ಪರೀಕ್ಷೆ ನಡೆಸಲಾಗಿರುತ್ತದೆ .3 ಲಕ್ಷಕಿoತ ಹೆಚ್ಚಿನ ವಿಧ್ಯಾರ್ಥಿಗಳು ರಾಜ್ಯಾಧ್ಯoತ ಪರೀಕ್ಷೆ ಬರೆದಿದ್ದರು
ಪರೀಕ್ಷೆ ನಂತರ, ದಿನ ಪತ್ರಿಕೆಗಳಲ್ಲಿ ಅನೇಕ ಪ್ರಶ್ನೆಗಳು ಪಠ್ಯಕ್ರಮದ ಹೊರತಾಗಿ ಬಂದಿರುವುದಾಗಿ ವರದಿಯಾಗಿರುತ್ತದೆ.
ಪಠ್ಯಕ್ರಮದ ಹೊರತಾಗಿ ಅನೇಕ ಪ್ರಶ್ನೆಗಳಿರುವುದಾಗಿ ಹಾಗೂ ಇದರಿಂದ ವಿಧ್ಯಾರ್ಥಿಗಳು ಬಾಧಿತರಾಗಿರುವಾಗಿ ಮನವಿ ಸ್ವೀಕೃತವಾಗಿರುತದೆ . ಕೃಪಾoಕ/ ಮೌಲ್ಯ ಮಾಪನದಿಂದ ಪ್ರಶ್ನೆಗಳನ್ನು ಹೊರತುಪಡಿಸುವುದು ಅಥವಾ ಮರು ಪರೀಕ್ಷೆ ನಡೆಸುವ ಬಗ್ಗೆ ಬೇಡಿಕೆಗಳನ್ನು ಸಲ್ಲಿಸಲಾಗಿತ್ತು.
ಪಠ್ಯಕ್ರಮದ ಹೊರತಾದ ಪ್ರಶ್ನೆಗಳ ಬಗ್ಗೆ ಪರಿಶೀಲಿಸಲು ಪರಿಣಿತರ ಸಮಿತಿಯನ್ನು ರಚಿಸಲಾಯಿತು. ಪರಿಣಿತರ ಸಮಿತಿಯು ವರದಿಯನ್ನು ಸಲ್ಲಿಸಿದೆ. ಪರಿಣತರ ಸಮಿತಿಯ ನೀಡಿದ ವರದಿಯ ಆಧಾರದ ಮೇಲೆ ಹಾಗೂ 2022-23 ಸಾಲಿನ 1 ನೆ ಪಿ ಯು ಸಿ ಪಠ್ಯಕ್ರಮವನ್ನು ಮತ್ತು 2ನೆ ಪಿಯುಸಿ ಯ ಪಠ್ಯಕ್ರಮವನ್ನು ಪರಿಶೀಲಿಸಿ 2023-24 ರ ಪರಿಷ್ಕೃತ ಪಠ್ಯಕ್ರಮದ ಹೊರತಾದ ಪ್ರಶ್ನೆಗಳು ಹೀಗಿದೆ.
1. (ಜೀವಶಾಸ್ತ್ರ- 11/60 ), 2.(ಭೌತ ಶಾಸ್ತ್ರ – 9/60 ), 3. (ಗಣಿತ- 15/60),4. (ರಸಾಯನ ಶಾಸ್ತ್ರ – 15/60), ಒಟ್ಟು- 50/240.ಎರಡು ಪ್ರಶ್ನೆಗಳಿಗೆ ಕೃಪಾಂಕ ನೀಡಲಾಗುವುದು.
ಸಮಿತಿಯು 2023-24 ರ ಪ್ರಥಮ ಮತ್ತು ದ್ವಿತೀಯ ಪಿ ಯು ಸಿ ಪಠ್ಯಕ್ರಮದಿಂದ ಕೈಬಿಡಲಾಗಿರುವ ಅಧ್ಯಾಯಗಳಿಂದ ಪ್ರಶ್ನೆಗಳನ್ನು ಗುರುತಿಸಿದ್ದು. ಆದರೆ ಕೇಳುವ ಪ್ರಶ್ನೆಗಳು ಪಠ್ಯಕ್ರಮದಲ್ಲಿದ್ದು 2022-23 ರ 1 ಪಿ ಯು ಸಿ ಪಠ್ಯಗಳಲ್ಲಿನ ಪ್ರಶ್ನೆಗಳಾಗಿದ್ದು ವಿದ್ಯಾರ್ಥಿಗಳು ಕಳೆದ ಸಾಲಿನಲ್ಲಿ ಅಧ್ಯಯನ ಮಾಡಿರುವ ಕಾರಣ ಪ್ರಶ್ನೆ ಪತ್ರಿಕಾಯಿಂದ ಕೈ ಬಿಡುವ ಅಗತ್ಯವಿಲ್ಲ .
ಮೇಲಿನ ಅಂಶಗಳ ಹಿನ್ನೆಲೆಯಲ್ಲಿ, ಸರ್ಕಾರವು ಕೆ ಇ ಎ ಗೆ ಪಠ್ಯಕ್ರಮದ ಹೊರತಾದ ಪ್ರಶ್ನೆಗಳ ವಿಷಯವನ್ನು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪರಿಹರಿಸಬೇಕೆಂದು ಹಾಗು ಸಿಇಟಿ ವ್ಯವಸ್ಥೆಯ ವಿಶ್ವಾಸಾರ್ಹತೆ ಹಾಗೂ ಸಮಾನ್ಯತೆಯನ್ನು ಉಳಿಸಲು ನಿರ್ಧರಿಸಿದೆ.
ಸರ್ಕಾರವು ಈ ಕೇಳಗಿನಂತೆ ತೀರ್ಮಾನಿಸಿದೆ.
1. ಪರಿಣೀತ ಸಮಿತಿಯ ವರದಿಯನ್ನು ಗಮನದಲ್ಲಿರಿಸಿಕೊಂಡು ಅಭ್ಯರ್ಥಿಗಳ ಹಿತದೃಷ್ಟಿಯಿಂದ ಕೆ ಇ ಎ ಗೆ 2023-24 ಪಠ್ಯಕ್ರಮದ ಹೊರತಾದ ಪ್ರಶ್ನೆಗಳನ್ನು ಮೌಲ್ಯ ಮಾಪನದಿಂದ ಹೊರತುಪಡಿಸಿ ಉಳಿದ ಪ್ರಶ್ನೆಗಳನ್ನು ಮಾತ್ರ ಮೌಲ್ಯ ಮಾಪನ ಮಾಡುವುದು.
ಮೌಲ್ಯ ಮಾಪನದಿಂದ ಹೊರತುಪಡಿಸಿರುವ ಪ್ರಶ್ನೆಗಳು ಈ ಕೆಳಕಂಡಂತಿವೆ:
ಭೌತ ಶಾಸ್ತ್ರ- 9 ,ರಸಾಯನ ಶಾಸ್ತ್ರ- 15 ,ಗಣಿತ – 15 ,ಜೀವಶಾಸ್ತ್ರ- 11 .
ಕೆ ಇ ಎ ಸರಿಯಾದ ಉತ್ತರಗಳೊಡನೆ ಪಠ್ಯಕ್ರಮದ ಹೊರತಾದ ಪ್ರಶ್ನೆಗಳನ್ನು ತನ್ನ ವೆಬ್ಸೈಟ್ನಲ್ಲಿ ಬಿಡುಗಡೆ ಮಾಡುವುದು. ಸಿ ಇ ಟಿ ಪರೀಕ್ಷೆಯಲ್ಲಿ ಅಭ್ಯರ್ಥಿಗಳ ಅಂಕಗಳನ್ನು ಉಳಿಕೆ ಪ್ರಶ್ನೆಗಳ ಆಧಾರದ ಮೇಲೆ ಮೌಲ್ಯ ಮಾಪನ ನಡೆಸಲಾಗುವುದು. ಇದರಿಂದಾಗಿ ಅಭ್ಯರ್ಥಿಗಳ ಹಿತವನ್ನು ಕಾಪಾಡುವುದಲ್ಲದೆ ಸಮಾನತೆಯನ್ನು ಕಾಪಾಡಲಾಗುವುದು..
2. ಸರ್ಕಾರವು ಕೆ ಸಿ ಇ ಟಿ 2024 ಕ್ಕೆ ಯಾವುದೇ ಮರೂಪರೀಕ್ಷೆ ಇರುವುದಿಲ್ಲವೆಂದು ತೀರ್ಮಾನಿಸಲಾಗಿದೆ. ಮೇ ಮತ್ತು ಜೂನ್ ಮಾಹೇಯಲ್ಲಿ ಕಾಮೆಡ್ ಕೆ , ಜೆ ಈ ಈ ಮುಖ್ಯ ಪರೀಕ್ಷೆ, ನೀಟ್, ನಾಟಾ, ಮತ್ತು 2ನೇ ಪಿ ಯು ಸಿ ಯ ಎರಡನೇ ಮತ್ತು ಮೂರನೇ ಪರೀಕ್ಷೆಗಳು ನಡೆಯುತ್ತವೆ.
ಸರ್ಕಾರವು ಈ ಹಂತದಲ್ಲಿ ಮರು ಪರೀಕ್ಷೆ ನಡೆಸುವುದು ಸೂಕ್ತವೆಲ್ಲವೆಂದು ಹಾಗೂ ವಿಧ್ಯಾಯಾರ್ಥಿಗಳಿಗೆ ಹೊರೆಯಾಗುವುದನ್ನು ಗಮನಿಸಿದೆ. ವಿದ್ಯಾರ್ಥಿಗಳು ಇನ್ನೂ ಅನೇಕ ಪರೀಕ್ಷೆಗಳನ್ನು ಬರೆಯಬೇಕಿರುವ ಕಾರಣ ಸಿ ಇ ಟಿ ಮರೂಪರೀಕ್ಷೆ ಅನಾವಶ್ಯಕ ಗೊಂದಲ ಮತ್ತು ತೊಂದರೆಗಳನ್ನು ಉಂಟು ಮಾಡುವುದು. ಅಲ್ಲದೆ ಅಭ್ಯರ್ಥಿಗಳಿಗೆ ಕಾರಣವಿಲ್ಲದೆ ತೊಂದರೆ ಉಂಟಾಗುವುದು.ಮರೂಪರೀಕ್ಷೆ ನಡೆದಲ್ಲಿ ವೃತ್ತಿಪರ ಕೋರ್ಸುಗಳ ಶೈಕ್ಷಣಿಕ ವೇಳಾ ಪಟ್ಟಿ ವಿಳಂಬವಾಗುವುದು.
3. ಇಂತಹ ಘಟನೆಗಳು ಭವಿಷ್ಯದಲ್ಲಿ ಮರುಕಳಿಸದಂತೆ ಕೆ ಇ ಎ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧ ಪಡಿಸಲು ನಿಗದಿತ ಮಾನ ದಂಡಗಳನ್ನು ಸಿದ್ಧ ಪಡಿಸ ಬೇಕು.
4. ಮೇಲಿನ ಅಂಶಗಳ ಹಿನ್ನೆಲೆಯಲ್ಲಿ, ಕೆ ಇ ಎ ಪಠ್ಯಕ್ರಮದ ಹೊರತಾದ ಪ್ರಶ್ನೆಗಳನ್ನು ಹೊರತುಪಡಿಸಿ ಉಳಿಕೆ ಪ್ರಶ್ನೆಗಳ ಆಧಾರದ ಮೇಲೆ ಮೌಲ್ಯ ಮಾಪನ ನಡೆಸಬೇಕು. ವಿದ್ಯಾರ್ಥಿಗಳ ಹಾಗೂ ಪರೀಕ್ಷ ವ್ಯವಸ್ಥೆಯ ಹಿತವನ್ನು ಗಮನದಲ್ಲಿರಿಸಿಕೊಂಡು ತೀರ್ಮಾನಿಸಲಾಗಿದೆ. ಸಿ ಇ ಟಿ ಫಲಿತಾಂಶವು ಈಗಾಗಲೇ ನಿಗದಿ ಪಡಿಸಿರುವಂತೆ ಮೇ ತಿಂಗಳ ಅಂತ್ಯದಲ್ಲಿ ಬಿಡುಗಡೆ ಮಾಡಲಾಗುವುದು.